Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ಜುಲೈ 21ಕ್ಕೆ ವಿನಾಯಕ ಚತುರ್ಥಿ: ಜ್ಯೋತಿಷ್ಯ ಪ್ರಕಾರ ಈ ಪರಿಹಾರ ಮಾಡಿದರೆ ನಿಮ್ಮೆಲ್ಲಾ ಸಮಸ್ಯೆ ದೂರಾಗುವುದು
ಜುಲೈ 21ಕ್ಕೆ ವಿನಾಯಕ ಚತುರ್ಥಿ. ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಆಚರಿಸುತ್ತಿರುವ ಮೊದಲ ವಿನಾಯ ಚತುರ್ಥಿ. ಈ ದಿ ವಿಘ್ನ ನಿವಾರಕನ ಪೂಜೆ ಮಾಡುವುದರಿಂದ ಅವನ ಕೃಪೆ ನಮ್ಮ ಮೇಲಿರಲಿದೆ ಎಂಬುವುದು ಭಕ್ತರ ಬಲವಾದ ನಂಬಿಕೆ.
ವಿನಾಯ ಚತುರ್ಥಿಯಂದು ಉಪವಾಸವಿದ್ದು ಸಿದ್ಧಿ ವಿನಾಯಕನ ಆರಾಧನೆ ಮಾಡಲಾಗುವುದು. ಗಣಪನ ಆಶೀರ್ವಾದ ಪಡೆಯಲು ಪೂಜೆಯಲ್ಲಿ ಗರಿಕೆಯನ್ನು ಕಡ್ಡಾಯವಾಗಿ ಬಳಸಿ. ನೀವು ಏನೇ ಅರ್ಪಿಸಿದರೂ ಗಣೇಶನಿಗೆ ಪ್ರಿಯವಾದ ಗರಿಕೆ ಅರ್ಪಿಸಲಿಲ್ಲವೆಂದರೆ ಗಣೇಶನ ಪೂಜೆ ಪೂರ್ಣವಾಗುವುದಿಲ್ಲ ಎಂಬ ನಂಬಿಕೆ.

ಒಬ್ಬೊಬ್ಬರ ಜೀವನದಲ್ಲಿ ಒಂದೊಂದು ಸಮಸ್ಯೆ ಇರುತ್ತದೆ, ನಿಮ್ಮ ಜೀವನದಲ್ಲಿ ಏನೇ ಸಮಸ್ಯೆವಿರಲಿ ಆ ಎಲ್ಲಾ ಸಮಸ್ಯೆಯನ್ನು ಶ್ರೀ ಗಣೇಶ ನಿವಾರಿಸುತ್ತಾನೆ ಎಂದು ಅವನಲ್ಲಿ ನಂಬಿಕೆಯಿಟ್ಟ ಭಕ್ತರು ಬಲವಾಗಿ ನಂಬುತ್ತಾರೆ. ಈ ದಿನ ನಿಮ್ಮ ಸಮಸ್ಯೆ ನಿವಾರಣೆಗೆ ಜ್ಯೋತಿಷ್ಯ ಪ್ರಕಾರ ಯಾರು ಯಾವ ಪರಿಹಾರ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:
ವೃತ್ತಿ ಬದುಕಿನಲ್ಲಿ ಸ್ಥಿರತೆ ಇಲ್ಲದಿದ್ದರೆ:
ಕೆಲಸದಲ್ಲಿ ಅಭದ್ರತೆ ಕಾಡುತ್ತಿದೆ, ಯಾವ ಕೆಲಸ ಮಾಡಿದರೂ ಪ್ರಗತಿ ಕಂಡು ಬರುತ್ತಿಲ್ಲ, ವೃತ್ತಿ ಬದುಕಿನಲ್ಲಿ ತುಂಬಾ ಅಡೆತಡೆಗಳನ್ನು ಎದುರುರಿಸುತ್ತಿದ್ದೀರಿ ಎಂದಾದರೆ ವಿನಾಯ ಚತುರ್ಥಿ ದಿನ ಗಣೇಶ ಸಹಸ್ರನಾಮ ಪಠಿಸಿ.
ಉದ್ಯಮದಲ್ಲಿ ನಷ್ಟ ಉಂಟಾದರೆ
ನೀವು ಮಾಡುತ್ತಿರುವ ಬ್ಯುಸ್‌ನೆಸ್ ನಷ್ಟದಲ್ಲಿ ಇದೆ, ಬಯಸಿದ ಪ್ರಗತಿ ಕಂಡು ಬರುತ್ತಿಲ್ಲ ಎಂದಾದರೆ 12 ಗರಿಕೆಗೆ ಅರಿಶಿಣ ಹಚ್ಚಿ ಶ್ರೀ ಗಣೇಶನಿಗೆ ಅರ್ಪಿಸುವುದರಿಂದ ಉದ್ಯಮದಲ್ಲಿ ಏಳಿಗೆ ಕಂಡು ಬರುವುದು.
ಯಾವುದೇ ಕೆಲಸದಲ್ಲಿ ಏಳಿಗೆಗೆ
ನೀವು ಯಾವುದೇ ಕೆಲಸ ಮಾಡುತ್ತಿರಿ ಅದರಲ್ಲಿ ಏಳಿಗೆ ಕಂಡು ಬರಬೇಕೆಂದರೆ ನಿಮ್ಮ ಕೆಲಸದ ಬಗ್ಗೆ ಒಂದು ಹಾಳೆಯಲ್ಲಿ ಬರೆದು, ಅದನ್ನು ಮಡಚಿ, ವೀಳ್ಯೆದೆಲೆಯಲ್ಲಿ ಇಟ್ಟು ಗಣೇಶನಿಗೆ ಅರ್ಪಿಸಿ.
'ಓಂ ವರ ವರದಾಯ ವಿಜಯ ಗಣಪತೆಯೇ ನಮಃ' ಮಂತ್ರ ಪಠಿಸಿ.
ಸಾಲಭಾದೆಯಿಂದ ಹೊರಬರಲು
ತುಂಬಾ ಸಾಲ, ಏನು ಮಾಡಿದರೂ ಸಾಲದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎನ್ನುವವರು ಶ್ರೀಗಣೇಶನ ಕೃಪೆಗೆ ಪಾತ್ರರಾಗುವುದರಿಂದ ಈ ಸಮಸ್ಯೆಯಿಂದ ಹೊರಬರಬಹುದು. ನಿಮ್ಮ ಕೆಲಸದಲ್ಲಿ ಪ್ರಗತಿ ಕಂಡು ಬರುವುದು, ಸಾಲ ತೀರಿಸಲು ಸುಲಭವಾಗುವುದು.
ವೈವಾಹಿಕ ಸಮಸ್ಯೆ
ದಾಂಪತ್ಯ ಜೀವನದಲ್ಲಿ ನೆಮ್ಮದಿಯೇ ಇಲ್ಲ, ಸದಾ ಜಗಳ, ತುಂಬಾ ಮಾನಸಿಕ ಒತ್ತಡ ಇರುವವರು ವೈವಾಹಿಕ ಜೀವನ ಚೆನ್ನಾಗಿ ನಡೆಯಲು 21 ಗರಿಕೆ, 5 ವೀಳ್ಯೆದೆಲೆಯನ್ನು ಗಣಪತಿಗೆ ಅರ್ಪಿಸಿ ಪೂಜಿಸಿ.
ಶಿಕ್ಷಣ
ಶಿಕ್ಷಣ ಜೀವನದಲ್ಲಿ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳು ' ಓಂ ವಿಘ್ನೇಶ್ವರಾಯೇ ನಮಃ" ಮಂತ್ರವನ್ನು 108 ಬಾರಿ ಪಠಿಸಿ. ಪ್ರತಿದಿನ ಅಥವಾ 21 ದಿನ ಹೀಗೆ ಮಂತ್ರ ಪಠಣೆ ಮಾಡಿದರೆ ಏಕಾಗ್ರತೆ ಹೆಚ್ಚಾಗಲಿದೆ.
ಕೇತು ದೋಷಕ್ಕೆ ಪರಿಹಾರ
ಕೇತು ದೋಷ ಅಥವಾ ಕೇತು ಮಹಾದಶ ಸಮಸ್ಯೆ ಇದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂಥವರು ಶ್ವೇತಾರಕ ಗಣಪತಿಗೆ ಅರಿಶಿಣ ಹಚ್ಚಿ ಅದನ್ನು ಪೂಜಾ ಕೋಣೆಯಲ್ಲಿ ಇಟ್ಟು ಪ್ರತಿದಿನ ಗನೇಶ ಮಂತ್ರಗಳನ್ನು ಹೇಳುತ್ತಾ ಪೂಜಿಸುವುದರಿಂದ ಕಷ್ಟಗಳು ದೂರಾಗಲಿದೆ.
ಕಾಳ ಸರ್ಪ ದೋಷ
ಕಾಳ ಸರ್ಪ ದೋಷದ ಪರಿಹಾರಕ್ಕೆ ವಿನಾಯಕ ಚತುರ್ಥಿಯಂದು ಲಡ್ಡುಗಳನ್ನು ಅರ್ಪಿಸಿ, ಶ್ರೀ ಗಣೇಶನ ಮಂತ್ರಗಳನ್ನು ಪಠಿಸಿ.
ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೆ
ವ್ಯಕ್ತಿ ತುಂಬಾ ಸಮಯದಿಮದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೆ ವಿನಾಯಕ ಚತುರ್ಥಿ ದಿನದಂದು ಬಿಳಿ ದಾರವನ್ನು ಇಟ್ಟು ಪೂಜಿಸಿ, ಮಾರನೇಯ ದಿನ ಆ ದಾರವನ್ನು ಆ ವ್ಯಕ್ತಿಗೆ ಕಟ್ಟಿ.
ಶತ್ರುದೋಷ ನಿವಾರಣೆ, ಕೋಪ ನಿಯಂತ್ರಣಕ್ಕೆ
ಶತ್ರುಗಳ ಕಾಟದಿಂದ ತುಂಬಾ ತೊಂದರೆ ಅನುಭವಿಸುತ್ತಿದ್ದರೆ ನೀವು ಈ ದಿನ ಗನೇಶನನ್ನು ಆರಾಧಿಸಿ, ಗಣೇಶ ಮಂತ್ರಗಳನ್ನು ಪಠಿಸಿ. ಕೋಪ ನಿಯಂತ್ರಣಕ್ಕೆ ಶ್ರೀ ಗಣೇಶನಿಗೆ ಕೆಂಪು ಹೂಗಳನ್ನು ಅರ್ಪಿಸಿ.
ಈ ಮಂತ್ರಗಳನ್ನು ಪಠಿಸಿ
ಓಂ ಗಮ್ ಗಣಪತಯೇ ನಮಃ
ಓಂ ಶ್ರೀ ಗಣೇಶಾಯ ನಮಃ
ಓಂ ಏಕದಂತಾಯ ನಮಃ
ಓಂ ಸುಮುಖಾಯ ನಮಃ
ಓಂ ಕ್ಷಿಪ್ರ ಪ್ರಸಾದಾಯ ನಮಃ
ಓಂ ಬಾಲಚಂದ್ರಾಯ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ವಿನಾಯಕಾಯ ನಮಃ
ಓಂ ವಿಘ್ನನಾಶಾಯ ನಮಃ
ಓಂ ಲಂಬೋಧರಾಯ ನಮಃ
ಓಂ ಗಜಕರ್ಣಿಕಾಯ ನಮಃ
ಓಂ ಕಪಿಲಾಯ ನಮಃ
ಓಂ ವಿಕ್‌ತ್ರಾಯ ನಮಃ



Click it and Unblock the Notifications











