Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ವಿನಾಯಕ ಚತುರ್ಥಿ 2023 : ಪೂಜಾ ಸಮಯ, ಮಹತ್ವ ಹಾಗೂ ಆಚರಣಾ ವಿಧಾನವೇನು?
ಯಾವುದೇ ಶುಭ ಕಾರ್ಯಕ್ರಮಗಳು ನಡೆಯಬೇಕಾದರೂ ಮೊದಲಿಗೆ ವಿಘ್ನ ನಿವಾರಕನ ನೆನೆಯಲೇಬೇಕು. ವಿನಾಯಕನ ಪೂಜೆಯ ಬಳಿಕ ಮುಂದಿನ ಕಾರ್ಯಗಳನ್ನು ನಡೆಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಚತುರ್ಥಿ ಆಚರಣೆಗೆ ತುಂಬಾನೇ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.
ಆ ದಿನ ಸಂಕಷ್ಟ ಹರನನ್ನು ಭಕ್ತಿಯಿಂದ ನೆನೆದರೆ ಕಷ್ಟಗಳೆಲ್ಲಾ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿದೆ. ಈ ತಿಂಗಳು ಆಷಾಡ ಮಾಸದ ಶುಕ್ಲ ಪಕ್ಷದ ದಿನ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತಿದೆ. ಅಷ್ಟಕ್ಕು ವಿನಾಯಕ ಚತುರ್ಥಿಯನ್ನು ಯಾವ ದಿನ ಆಚರಣೆ ಮಾಡಲಾಗುತ್ತದೆ? ಶುಭ ಮುಹೂರ್ತ ಯಾವುದು? ಆಚರಣೆ ಹೇಗಿರಬೇಕು ಅನ್ನೋದನ್ನು ತಿಳಿಯೋಣ.

ವಿನಾಯಕ ಚತುರ್ಥಿ 2023 : ದಿನಾಂಕ ಮತ್ತು ಸಮಯ :
ವಿನಾಯಕ ಚತುರ್ಥಿ : ಜೂನ್ 21, 2023, ಮಧ್ಯಾಹ್ನ 03:09ಕ್ಕೆ ಆರಂಭ
ವಿನಾಯಕ ಚತುರ್ಥಿ ತಿಥಿ ಮುಕ್ತಾಯ : ಜೂನ್ 22, 2023 ಸಂಜೆ 05:27ಕ್ಕೆ
ವಿನಾಯಕ ಚತುರ್ಥಿಯ ಮಹತ್ವವೇನು?
ಹಿಂದೂ ನಂಬಿಕೆ ಹಾಗೂ ಪದ್ಧತಿಯ ಪ್ರಕಾರ ಪ್ರಥಮ ಪೂಜೆಯನ್ನು ಗಣೇಶನಿಗೆ ಅರ್ಪಿಸಬೇಕು. ವಿನಾಯಕನ ಪೂಜಿಸದ ಹೊರತಾಗಿ ಯಾವುದೇ ಶುಭ ಕಾರ್ಯಗಳನ್ನು ಮಾಡೋದಕ್ಕೆ ಮುಂದಡಿ ಇಡುವಂತಿಲ್ಲ. ಇದಿಷ್ಟೇ ಅಲ್ಲದೇ, ವಿಘ್ನ ನಿವಾರಕನನ್ನು ಪೂಜೆ ಮಾಡೋದ್ರಿಂದ ಸಂತೋಷ ಹಾಗೂ ಸಮೃದ್ಧಿ ಕೂಡ ಹೆಚ್ಚಾಗಲಿದೆ.
ಗಣೇಶನನ್ನೂ ಮಂಗಳ ಮೂರ್ತಿ, ಗೌರಿ ನಂದನ, ಗಣಪತಿ, ವಿನಾಯಕ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ದಂಪತಿಗಳು ಗಂಡು ಸಂತಾನಕ್ಕಾಗಿ ಬಯಸುತ್ತಿದ್ದರೆ ಅವರು ಗಣೇಶನನ್ನು ಭಕ್ತಿಯಿಂದ ನೆನೆದರೆ ಅವರ ಇಷ್ಟಾರ್ಥಗಳೆಲ್ಲಾ ನೆರವೇರುತ್ತಂತೆ.
ವಿನಾಯಕ ಚತುರ್ಥಿಯ ಪೂಜಾ ವಿಧಾನ ಹೇಗಿರಬೇಕು?
ವಿನಾಯಕ ಚತುರ್ಥಿಯ ದಿನ ಬೆಳಗ್ಗೆ ಬೇಗನೆ ಎದ್ದು ಪುಣ್ಯ ಸ್ನಾನ ಮಾಡಬೇಕು. ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮೊದಲು ಹಳದಿ ಬಟ್ಟೆಯನ್ನು ಕೆಳಗಡೆ ಹಾಕಿ ನಂತರ ಅದರ ಮೇಲೆ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕು.
ಇನ್ನೂ ದೀಪ ಹಚ್ಚಿ, ಹಣ್ಣು-ಹಂಪಲು ಹಾಗೂ ಸಿಹಿ ತಿಂಡಿಗಳನ್ನು ಇಟ್ಟು ಗಣೇಶನನ್ನು ಪೂಜಿಸಬೇಕು. ಇನ್ನೂ ಚತುರ್ಥಿ ಮುಗಿದ ದಿನ ಸಂಜೆಯ ಸಮಯದಲ್ಲಿ ಚಂದ್ರನಿಗೆ ಆರ್ಘ್ಯವನ್ನು ಅರ್ಪಿಸಿ, ನಂತರ ಸಾತ್ವಿಕ ಆಹಾರಗಳನ್ನು ಸೇವಿಸಿ ಉಪವಾಸವನ್ನು ಮುರಿಯಬೇಕು.
ಮಂತ್ರಗಳು :
1. ವಕ್ರತುಂಡ ಗಣೇಶ ಮಂತ್ರ
ಶ್ರೀ ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಂಮಪ್ರಭ.
ನಿರ್ವಿಘ್ನಂ ಕುರು ಮೇ ದೇವ್ ಸರ್ವ-ಕಾರ್ಯೇಷು ಸರ್ವದಾ ।
2. ಗಣೇಶ ಶುಭ ಲಾಭ ಮಂತ್ರ
ಓಂ ಶ್ರೀಂ ಗಂ ಸೌಭಾಗ್ಯ ಗಣಪತಯೇ ।
ವರದಾ ಸರ್ವಜನ್ಮ ಮೇ ವಷಮಯ ನಮಃ
3. ಗಣೇಶ ಗಾಯತ್ರಿ ಮಂತ್ರ
ಓಂ ಏಕದಂತಾಯ ವಿದ್ಧಾಮಹೇ, ವಕ್ರತುಂಡಯ ಧೀಮಹಿ,
ತನ್ನೋ ದಾನ್ತಿ ಪ್ರಚೋದಯಾತ್.
ವಿನಾಯಕ ಚತುರ್ಥಿಯ ದಿನ ಭಕ್ತರು ಅತೀವ ಭಕ್ತಿಯಿಂದ ಗಣೇಶನನ್ನು ಬೇಡಿಕೊಂಡರೆ ಖಂಡಿತ ನಿಮ್ಮ ಅತೀವ ಭಕ್ತಿಗೆ ಗಣೇಶ ಒಲಿಯದೇ ಇರೋದಿಲ್ಲ.



Click it and Unblock the Notifications

