Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಗಸ್ಟ್ 4ಕ್ಕೆ ಸಂಕಷ್ಠಿ: ಬದುಕಿನ ಎಲ್ಲಾ ವಿಘ್ನ ನಿವಾರಣೆಗೆ ಈ ಪರಿಹಾರ ಮಾಡಿ
ಯಾವುದೇ ಪೂಜೆ ಇರಲಿ ಮೊದಲಿಗೆ ವಿಘ್ನ ನಿವಾರಕ ಗಣೇಶನ ಊಜೆ ಮಾಡಿದ ಬಳಿಕವಷ್ಟೇ ಪೂಜೆ ಮಾಡಲಾಗುವುದು, ಅದರಲ್ಲೂ ಸಂಕಷ್ಠಿಯಂದು ಶ್ರೀ ಗಣೇಶನ ಆರಾಧಿಸುವುದರಿಂದ ಗಣೇಶನ ಕೃಪೆಗೆ ಬೇಗನೆ ಪಾತ್ರರಾಗುತ್ತೇವೆ, ನಮ್ಮೆಲ್ಲಾ ಸಮಸ್ಯೆಗಳಿಗೂ ಆ ಗಣೇಶ ಪರಿಹಾರ ನೀಡೇ ನೀಡುತ್ತಾನೆ ಎಂಬುವುದು ಶ್ರೀ ಗಣಪನ ನಂಬಿದ ಭಕ್ತರ ಅಚಲ ನಂಬಿಕೆ. ಆಗಸ್ಟ್ 4ರಂದು ಸಂಕಷ್ಠಿ, ಈ ದಿನ ನಿಮ್ಮ ಸಮಸ್ಯೆಗಳಿಗೆ ಈ ಪರಿಹಾರ ಮಾಡಿದರೆ ಒಳ್ಳೆಯದಾಗುವುದು...
ಸಂಕಷ್ಠಿಯಂದು ಉಪವಾಸವಿದ್ದು ಶ್ರೀಗಣೇಶನ ಆರಾಧನೆ ಮಾಡಿದರೆ ತುಂಬಾ ಒಳ್ಳೆಯದು. ಈ ದಿನ ನೀವು ಗಣೇಶನನ್ನು ಭಕ್ತಿಯಿಂದ ಪೂಜಿಸಿ 'ಓಂ ಗಣಪತೆಯೇ ಮಂತ್ರವನ್ನು' 108 ಬಾರಿ ಪಠಿಸಿ.

ವೃತ್ತಿ ಜೀವನದಲ್ಲಿ ಯಶಸ್ಸಿಗೆ
ವಿಭುವನ ಸಂಕಷ್ಟ ಚತುರ್ಥಿಯ ದಿನ ಗಣಪತಿಗೆ ಹೂವು, ಬೆಲ್ಲ, ಮೋದಕ , ಗರಿಕೆ ಇವುಗಳನ್ನು ಅರ್ಪಿಸಿ , ಓಂ ಗಣ ಗಣಪತಯೇ ನಮಃ ಎಂದು ಜಪಿಸಿ. ಇದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿರುವ ಎಲ್ಲಾ ಅಡೆತಡೆಗಳು ದೂರಾಗಿ ಪ್ರಗತಿ ಕಾಣುವಿರಿ.
ಸಂಪತ್ತು ಮತ್ತು ಸಂತೋಷಕ್ಕಾಗಿ
ವಿಭುವನ ಸಂಕಷ್ಟ ಚತುರ್ಥಿಯಂದು ಪೂಜೆ ಮಾಡಿ ಗಣೇಶ ಸ್ತೋತ್ರ ಪಠಿಸಿದರೆ ಒಳ್ಳೆಯದು. ನೀವು ಗಣೇಶ ಸ್ತೋತ್ರವನ್ನು 11 ಬಾರಿ ಪಠಿಸಿ.
ವಾಸ್ತುದೋಷ ಪರಿಹಾರಕ್ಕೆ
ನಿಮ್ಮ ಮನೆಯಲ್ಲಿ ವಾಸ್ತು ದೋಷವಿದ್ದರೆ ನೀವು ಕುಳಿತಿರುವ ಗಣೇಶನ ಮೂರ್ತಿಯನ್ನು ಮನೆಯಲ್ಲಿರಿಸಿ, ಆದರೆ ಗಣೇಶ ಬೆನ್ನು ಯಾರಿಗೆ ಕಾಣುವಂತೆ ಇರಬಾರದು. ಕೂತಿರುವ ಗಣೇಶನ ಮೂರ್ತಿಯ ಮನೆಯಲ್ಲಿದ್ದರೆ ವಾಸ್ತುದೋಷ ನಿವಾರಣೆಗೆ ಉತ್ತಮ ಪರಿಹಾರ ಎಂದು ಹೇಳಲಾಗುವುದು.
ಮದುವೆಯಾಗಲು ಅಡೆತಡೆಯಿದ್ದರೆ
ಮದುವೆಯಾಗಲು ಅಡೆತಡೆ ಇದ್ದರೆ ಈ ಸಂಕಷ್ಠಿಯಂದು ನೀವು 21 ಲಡ್ಡುಗಳನ್ನು ಅರ್ಪಿಸಿ ಪೂಜಿಸಿ.
ವ್ಯಾಪಾರದಲ್ಲಿ ಪ್ರಗತಿಗಾಗಿ
ವಿಭುವನ ಸಂಕಷ್ಠಿ ಚತುರ್ಥಿಯಂದು ಗಣೇಶನ ವಿಗ್ರಹವನ್ನು ಮನೆಗೆ ತಂದು ಆರಾಧಿಸಿ. ಅರಿಶಿಣದಿಂದ 5 ಲಡ್ಡು ಮಾಡಿ ಲಂಬೋದರನಿಗೆ ಅರ್ಪಿಸಿ.
ಮನೆಯಲ್ಲಿ ಹಣದ ಸಮಸ್ಯೆ ಹೋಗಲಾಡಿಸಲು
ಮನೆಯಲ್ಲಿ ಆರ್ಥಿಕ ಸಮಸ್ಯೆಯಿದ್ದರೆ ಈ ದಿನದಂದು ಮನೆಗೆ ಗಣೇಶ ಯಂತ್ರವನ್ನು ತಂದು ಸ್ಥಾಪಿಸಿ. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು.
ಈ ಮಂತ್ರಗಳನ್ನು ಪಠಿಸಿ
ಓಂ ಶ್ರೀ ಗಣೇಶಾಯ ನಮಃ
ಓಂ ಏಕದಂತಾಯ ನಮಃ
ಓಂ ಸುಮುಖಾಯ ನಮಃ
ಓಂ ಕ್ಷಿಪ್ರ ಪ್ರಸಾದಾಯ ನಮಃ
ಓಂ ಬಾಲಚಂದ್ರಾಯ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ವಿನಾಯಕಾಯ ನಮಃ
ಓಂ ವಿಘ್ನನಾಶಾಯ ನಮಃ
ಓಂ ಲಂಬೋಧರಾಯ ನಮಃ
ಓಂ ಗಜಕರ್ಣಿಕಾಯ ನಮಃ
ಓಂ ಕಪಿಲಾಯ ನಮಃ
ಓಂ ವಿಕ್‌ತ್ರಾಯ ನಮಃ



Click it and Unblock the Notifications
