Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
ಆಗಸ್ಟ್ 25ಕ್ಕೆ ವರಲಕ್ಷ್ಮಿ ವ್ರತ: ಲಕ್ಷ್ಮಿ ಪೂಜೆಯಲ್ಲಿ ಈ ಮಂತ್ರಗಳನ್ನು ತಪ್ಪದೆ ಪಠಿಸಿ
ವರಲಕ್ಷ್ಮಿ ವ್ರತದಂದು ಲಕ್ಷ್ಮಿಗೆ ಅಲಂಕರಿಸಿ ಪೂಜೆಯನ್ನು ಮಾಡಿ ಹಬ್ಬವನ್ನು ತುಂಬಾನೇ ಸಂಭ್ರಮದಿಂದ ಆಚರಿಸಲಾಗುವುದು. ಈ ದಿನ ಲಕ್ಷ್ಮಿಯನ್ನು ಆರಾಧನೆ ಮಾಡುವುದರಿಂದ ಲಕ್ಷ್ಮಿ ಕೃಪೆ ದೊರೆಯಲಿದೆ, ಲಕ್ಷ್ಮಿ ಕೃಪೆ ನಮ್ಮ ಮೇಲಿದ್ದರೆ ಸಂಪತ್ತು, ಐಶ್ವರ್ಯ ವೃದ್ಧಿಸುವುದು. ನಮ್ಮ ಆರ್ಥಿಕ ಸಂಕಷ್ಟವೆಲ್ಲಾ ದೂರ ಮಾಡಿ ಸಂಪತ್ತು, ಸಮದ್ದಿ ಹೆಚ್ಚಿಸು ತಾಯಿಯೇ ಎಂದು ಪ್ರಾರ್ಥಿಸಿ ಲಕ್ಷ್ಮಿಯನ್ನು ಆರಾಧಿಸಲಾಗುವುದು. ಈ ದಿನ ಲಕ್ಷ್ಮಿಯ ಆರಾಧನೆ ಮಾಡುವಾಗ ಅಷ್ಟಲಕ್ಷ್ಮಿ ಸ್ತೋತ್ರ ಪಠಿಸುವುದರಿಮದ ಅಷ್ಟಲಕ್ಷ್ಮಿಯರನ್ನು ಆರಾಧಿಸಿದ ಫಲ ದೊರೆಯಲಿದೆ ನೋಡಿ:

ಅಷ್ಟಲಕ್ಷ್ಮಿ ಸ್ತೋತ್ರಗಳು
1. ಆದಿಲಕ್ಷ್ಮೀ - ಸುಮನಸ ವ೦ದಿತ ಸು೦ದರಿ ಮಾಧವಿ ಚ೦ದ್ರ ಸಹೋದರಿ ಹೇಮಮಯೇ|
ಮುನಿಗಣ ಮ೦ಡಿತ ಮೋಕ್ಷಪ್ರದಾಯಿನಿ ಮ೦ಜುಳ ಭಾಷಿಣಿ ವೇದನುತೇ|
ಪ೦ಕಜವಾಸಿನಿ ದೇವಸುಪೂಜಿತೆ ಸದ್ಗುಣವರ್ಷಿಣಿ ಶಾ೦ತಿಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಆದಿಲಕ್ಷ್ಮೀ ಸದಾ ಪಾಲಯಮಾ೦||೧||
ಆದಿ ಲಕ್ಷ್ಮಿಯೇ, ನಿನ್ನನ್ನು ದೇವಾನು ದೇವತೆಗಳೇ ಆರಾಧಿಸುತ್ತಾರೆ, ಚಂದ್ರನ ಸಹೋದರಿ ನೀನು, ಚಿನ್ನದ ಆಭರಣದಿಂದ ಅಲಂಕೃತಳಾಗಿರುವ ದೇವತೆ, ಮುನಿಗಳು ಹೂಗಳನ್ನು ಹಾಕಿ ಆರಾಧಿಸುತ್ತಾಳೆ, ಕಮಲದಲ್ಲಿ ಕುಳಿತಿರುವ ದೇವತೆ, ಓ ಆದಿ ದೇವತೆಯೇ ನಿನ್ನ ಕೃಪೆ ನನ್ನ ಮೇಲಿರಲಿ.
2. ಧಾನ್ಯಲಕ್ಷ್ಮೀ - ಅಯಿಕಲಿ ಕಲ್ಮಷನಾಶಿನಿ ಕಾಮಿನಿ ವೈದಿಕರೂಪಿಣಿ ವೇದಮಯೇ|
ಕ್ಷೀರ ಸಮುದ್ಭವ ಮ೦ಗಳರೂಪಿಣಿ ಮ೦ತ್ರನಿವಾಸಿನಿ ಮ೦ತ್ರನುತೇ|
ಮಗಳದಾಯಿನಿ ಅ೦ಬುಜವಾಸಿನಿ ದೇವಗಣಾಶ್ರಿತ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಧಾನ್ಯಲಕ್ಷ್ಮೀ ಸದಾ ಪಾಲಯಮಾ೦||೨|
ಧಾನ್ಯ ಲಕ್ಷ್ಮಿ ಕಲಿಯುಗದ ಎಲ್ಲಾ ದೋಷಗಳನ್ನು ನಿವಾರಣೆ ಮಾಡುತ್ತಾಳೆ, ಹಾಲಿನ ಸಮುದ್ರದಲ್ಲಿ ಜನಿಸಿದವಳು, ಧಾನ್ಯ ಲಕ್ಷ್ಮಿ ಕೃಪೆಯಿದ್ದರೆ ಆಹಾರ ಧಾನ್ಯಗಳಿಗೆ ಕೊರತೆಯೇ ಉಂಟಾಗುವುದಿಲ್ಲ.
3. ಐಶ್ವರ್ಯಲಕ್ಷ್ಮೀ - ಧಿಮಿ ಧಿಮಿ ಧಿ೦ಧಿಮಿ ಧಿ೦ಧಿಮಿ ಧಿ೦ಧಿಮಿ ದು೦ದುಭಿನಾದ ಸ೦ಪೂರ್ಣಮಯೇ|
ಘಮಘಮ ಘ೦ಘಮ ಘ೦ಘಮ ಘ೦ಘಮ ಶ೦ಖನಿನಾದ ಸುವಾದ್ಯನುತೇ|
ವೇದಪುರಾಣೇತಿಹಾಸ ಸುಪೂಜಿತೆ ವೈದಿಕಮಾರ್ಗ ಪ್ರದರ್ಶಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಧನಲಕ್ಷ್ಮೀ ಸದಾ ಪಾಲಯಮಾ೦||೩||
ಐಶ್ವರ್ಯ ಲಕ್ಷ್ಮಿಯ ಕೃಪೆಯಿಂದಾಗಿ ಮನೆಯಲ್ಲಿ ಸಂಪತ್ತು, ಸಮೃದ್ಧಿ ಹೆಚ್ಚಾಗುವುದು
4. ವಿದ್ಯಾಲಕ್ಷ್ಮೀ - ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ ಶೋಕವಿನಾಶಿನಿ ರತ್ನಮಯೇ|
ಮಣಿಮಯಭೂಷಿತ ಕರ್ಣವಿಭೂಷಿಣಿ ಶಾ೦ತಿ ಸಮಾವೃತೆ ಹಾಸ್ಯಮುಖೇ|
ನವನಿಧಿ ದಾಯಿನಿ ಕಲಿಮಲಹಾರಿಣಿ ಕಾಮಿತಫಲಪ್ರದ ಹಸ್ತಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ವಿದ್ಯಾಲಕ್ಷ್ಮೀ ಸದಾ ಪಾಲಯಮಾ೦||೪||
ವಿದ್ಯಾ ಲಕ್ಷ್ಮಿಯ ಕೃಪೆಯಿದ್ದರೆ ಜ್ಞಾನ ಹೆಚ್ಚಾಗುವುದು, ಮನಸ್ಸಿನ ಎಲ್ಲಾ ಒತ್ತಡ, ದುಗುಡಗಳಯ ದೂರಾಗುವುದು.
5. ವೀರಲಕ್ಷ್ಮೀ(ಧೈರ್ಯಲಕ್ಷ್ಮೀ) - ಜಯವರವರ್ಷಿಣಿ ವೈಷ್ಣವಿ ಭಾರ್ಗವಿ ಮ೦ತ್ರಸ್ವರೂಪಿಣಿ ಮ೦ತ್ರಮಯೇ|
ಸುರಗಣಪೂಜಿತೆ ಶೀಘ್ರಫಲಪ್ರದೆ ಜ್ಜಾನವಿಕಾಸಿನಿ ಶಾಸ್ತ್ರನುತೇ|
ಭವಭಯಹಾರಿಣಿ ಪಾಪವಿಮೋಚಿನಿ ಸಾಧುಜನಾಶ್ರಿತ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಧೈರ್ಯಲಕ್ಷ್ಮೀ ಸದಾ ಪಾಲಯಮಾ೦||೫||
ವೀರ ಲಕ್ಷ್ಮಿಯು ಎಲ್ಲಾ ಸಮಸ್ಯೆಗಳನ್ನು ಎದುರಿಸುವ ದೈರ್ಯವನ್ನು ನೀಡುತ್ತಾಳೆ, ಅವಳ ಕೃಪೆಯಿದ್ದರೆ ನಮ್ಮೆಲ್ಲಾ ಕಾರ್ಯಗಳು ಸುಗಮವಾಗಿ ನಡೆಯುವುದು. ಧೈರ್ಯ ಲಕ್ಷ್ಮಿ ಕೃಪೆಯಿದ್ದರೆ ಎಲ್ಲದರಲ್ಲೂ ನಮಗೆ ಜಯಸಿಗುವುದು.
6. ವಿಜಯ ಲಕ್ಷ್ಮೀ - ಜಯ ಕಮಲಾಸಿನಿ ಸದ್ಗತಿದಾಯಿನಿ ಜ್ಜಾನವಿಕಾಸಿನಿ ಗಾನಮಯೇ|
ಅನುದಿನಮರ್ಚಿತ ಕು೦ಕುಮನೂಪುರ ಭೂಷಿತವಾಸಿತ ವಾದ್ಯನುತೇ|
ಕನಕಧಾರಾಸ್ತುತಿ ವೈಭವ ವ೦ದಿತೆ ಶ೦ಕರ ದೇಶಿಕ ಮಾನ್ಯಪದೇ|
ಜಯ ಜಯ ಹೇ ಮಧುಸೂದನ ಕಾಮಿನಿ ವಿಜಯಲಕ್ಷ್ಮೀ ಸದಾ ಪಾಲಯಮಾ೦||೬||
ವಿಜಯ ಲಕ್ಷ್ಮಿ ಕೃಪೆಯಿಂದಾಗಿ ಸರ್ವ ಕಾರ್ಯಗಳಲ್ಲಿ ವಿಜಯ ನಮ್ಮದಾಗುವುದು, ನಮ್ಮ ಬದುಕಿನಲ್ಲಿ ಪ್ರಗತಿ ಉಂಟಾಗುವುದು.
7. ಗಜಲಕ್ಷ್ಮೀ - ಜಯ ಜಯ ದುರ್ಗತಿನಾಶಿನಿ ಕಾಮಿನಿ ಸರ್ವಫಲಪ್ರದ ಶಾಸ್ತ್ರಮಯೇ|
ರಥಗಜತುರಗಪಾದಾತಿ ಸಮಾವೃತ ಪರಿಜನ ಮ೦ಡಿತ ಲೋಕನುತೇ|
ಹರಿಹರಬ್ರಹ್ಮ ಸುಪೂಜಿತೆ ಸೇವಿತೆ ತಾಪನಿವಾರಿಣಿ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಗಜಲಕ್ಷ್ಮೀ ಸದಾ ಪಾಲಯಮಾ೦||೭||
ಗಜ ಲಕ್ಷ್ಮಿ ಆಶೀರ್ವಾದದಿಂದ ಮನೆಯಲ್ಲಿ ಸಂಪತ್ತು, ಸಂತೋಷ ತುಂಬಿ ತುಳುಕುವುದು.
8. ಸ೦ತಾನಲಕ್ಷ್ಮೀ - ಅಯಿಖಗವಾಹಿನಿ ಮೋಹಿನಿ ಚಕ್ರಿಣಿ ರಾಗವಿವರ್ಧಿನಿ ಜ್ಜಾನಮಯೇ|
ಗುಣಗಣವಾರಿಧಿ ಲೋಕಹಿತೈಷಿಣಿ ಶಬ್ದವಿಭೂಷಿಣಿ ಗಾನನುತೇ|
ಸಕಲ ಸುರಾಸುರ ದೇವಮುನೀಶ್ವರ ಮಾನಸ ವ೦ದಿತ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಸ೦ತಾನಲಕ್ಷ್ಮೀ ಸದಾ ಪಾಲಯಮಾ೦||೮||
ಸಂತಾನ ಲಕ್ಷ್ಮಿಯ ಕೃಪೆಯಿಂದಾಗಿ ಉತ್ತಮ ಸಂತಾನ ಭಾಗ್ಯ ದೊರೆಯುವುದು.



Click it and Unblock the Notifications