Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ನ. 17ಕ್ಕೆ ವೈಕುಂಠ ಚತುರ್ದಶಿ: ಪೂಜೆಗೆ ಶುಭ ಮುಹೂರ್ತ, ಪೂಜಾವಿಧಿ ಹಾಗೂ ಮಹತ್ವ
ಪ್ರತಿ ವರ್ಷ ಕಾರ್ತಿಕ ಮಾಸದ ಶುಕ್ಲ ಪಕ್ಷದ ಚತುರ್ದಶಿ ತಿಥಿಯಂದು ವೈಕುಂಠ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಈ ವರ್ಷ ನವೆಂಬರ್ 17 ರಂದು ವೈಕುಂಠ ಚತುರ್ದಶಿಯ ಹಬ್ಬವನ್ನು ಆಚರಿಸಲಾಗುವುದು. ಈ ದಿನ ಶಿವ ಮತ್ತು ವಿಷ್ಣುವನ್ನು ಪೂಜಿಸಲಾಗುವುದು. ದೇಶದ ವಿವಿಧ ಭಾಗಗಳಲ್ಲಿ ಈ ದಿನದಂದು ಸಾಮೂಹಿಕ ಪೂಜೆಯನ್ನು ಸಲ್ಲಿಸಲಾಗುವುದು.
ವೈಕುಂಠ ಚತುರ್ದಶಿಯ ದಿನದಂದು ಉಪವಾಸವಿದ್ದುಪೂರ್ಣ ವಿಧಿವಿಧಾನಗಳೊಂದಿಗೆ ಪೂಜಿಸಿದರೆ ಮರಣಾನಂತರ ವೈಕುಂಠಧಾಮದಲ್ಲಿರುವ ಭಗವಾನ್ ವಿಷ್ಣುವಿನ ಬಳಿಗೆ ಹೋಗುತ್ತಾನೆ ಎಂದು ಹೇಳಲಾಗುತ್ತದೆ.

ವೈಕುಂಠ ಚತುರ್ದಶಿ ಮಹತ್ವ
ಪೌರಾಣಿಕ ಕತೆಯ ಪ್ರಕಾರ ಈ ದಿನದಂದು ಮಹಾದೇವ ಮತ್ತು ಶ್ರೀ ಹರಿವಿಷ್ಣುವಿನ ಆರಾಧನೆ ಮಾಡಿದರೆ ಮಾನವನ ಎಲ್ಲಾ ಪಾಪಗಳು ದೂರವಾಗುತ್ತವೆ, ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಭಗವಂತ ನಿದ್ರೆಗೆ ಹೋಗುವ ನಾಲ್ಕು ತಿಂಗಳುಗಳಲ್ಲಿ, ಶಿವನು ಬ್ರಹ್ಮಾಂಡವನ್ನು ಆಳುತ್ತಾನೆ. ನಾಲ್ಕು ತಿಂಗಳ ಕಾಲ ಮಲಗಿದ ನಂತರ ದೇವುತಣಿ ಏಕಾದಶಿಯ ದಿನದಂದು ಭಗವಾನ್ ವಿಷ್ಣುವು ಎಚ್ಚರಗೊಳ್ಳುತ್ತಾನೆ. ಅದರ ನಂತರ ವೈಕುಂಠ ಚತುರ್ದಶಿಯ ದಿನದಂದು ಶಿವನು ಮತ್ತೆ ವಿಷ್ಣುವಿಗೆ ಸೃಷ್ಟಿಯ ಭಾರವನ್ನು ಹಸ್ತಾಂತರಿಸುತ್ತಾನೆ. ಈ ದಿನ ವೈಕುಂಠ ಲೋಕದ ದ್ವಾರಗಳೂ ತೆರೆದಿರುತ್ತವೆ ಎಂದು ನಂಬಲಾಗಿದೆ.

ವೈಕುಂಠ ಚತುರ್ದಶಿ ದಿನಾಂಕ:
ದಿನಾಂಕ: ನವೆಂಬರ್ 17, ಬುಧವಾರ
ಚತುರ್ದಶಿ ತಿಥಿ ಪ್ರಾರಂಭ: ಬೆಳಗ್ಗೆ 09:50 ರಿಂದ ಪ್ರಾರಂಭ
ಚತುರ್ದಶಿ ತಿಥಿ ಮುಕ್ತಾಯ: ನವೆಂಬರ್ 18, ಗುರುವಾರ ಮಧ್ಯಾಹ್ನ 12 ಗಂಟೆಗೆ ಕೊನೆಗೊಳ್ಳುತ್ತದೆ.

ಪೂಜೆ
ವೈಕುಂಠ ಚತುರ್ದಶಿಯ ದಿನ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಉಪವಾಸ ವ್ರತ ಮಾಡಬೇಕು. ನಂತರ ರಾತ್ರಿ ವಿಷ್ಣುವಿಗೆ 108 ಕಮಲದ ಹೂವುಗಳಿಂದ ಪೂಜೆ ಮಾಡಬೇಕು. ಇದರ ನಂತರ ಶಿವನನ್ನು ಆರಾಧಿಸಿ. ಪೂಜೆಯ ಸಮಯದಲ್ಲಿ 'ಶಿವ ಹಾಗೂ ವಿಷ್ಣು ಮಂತ್ರಗಳನ್ನು ಪಠಿಸಬೇಕು.

ವೈಕುಂಠ ಚತುರ್ದಶಿಯಂದು ಶುಭ ಫಲಕ್ಕಾಗಿ ಹೀಗೆ ಮಾಡಿ
* ವಿಷ್ಣು ಸಹಸ್ರನಾಮ ಪಠಿಸಿ: ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ತುಪ್ಪದ ದೀಪ ಹಚ್ಚಿ ವಿಷ್ಣು ಸಹಸ್ರನಾಮ ಪಠಿಸಬೇಕು.
* ಅರಿಶಿಣ ಕೊಂಬಿನಿಂದ ಮಾಲೆ ಮಾಡಿ, ಅದನ್ನು ಜಪ ಮಾಡುತ್ತಾ ವಿಷ್ಣು ಮಂತ್ರ ಪಠಿಸಿ.
* ವಿಷ್ಣುವಿನ ಪೂಜೆಗೆ ಹಳದಿ ಬಟ್ಟೆ, ಹಳದಿ ಹೂ ಬಳಸಿ.
* ದಾಂಪತ್ಯ ಜೀವನದಲ್ಲಿ ಒಳಿತಾಗಲು ಶ್ರೀಹರಿ ಜೊತೆಗೆ ಲಕ್ಷ್ಮಿಯ ವಿಗ್ರಹ ಇಟ್ಟು ಪೂಜೆ ಮಾಡಿ.
ಮಹಾಭಾರತದ ಯುದ್ಧದ ನಂತರ ಈ ದಿನದಂದು ಶ್ರೀಕೃಷ್ಣನು ಅದರಲ್ಲಿ ಕೊಲ್ಲಲ್ಪಟ್ಟವರಿಗೆ ಶ್ರಾದ್ಧವನ್ನು ಮಾಡಿದನೆಂದು ನಂಬಲಾಗಿದೆ. ಆದುದರಿಂದ ಈ ದಿನದಂದು ಶ್ರಾದ್ಧ ತರ್ಪಣ ಕಾರ್ಯವನ್ನು ಮಾಡುವುದಕ್ಕೂ ವಿಶೇಷ ಮಹತ್ವವಿದೆ.



Click it and Unblock the Notifications
