Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ತಿರುಪತಿಯಲ್ಲಿ ಮುಡಿ ದಾನ ಮಾಡುವುದರ ಹಿಂದಿರುವ ಮಹತ್ವವೇನು ಗೊತ್ತೇ?
ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲೊಂದು ತಿರುಪತಿ. ತಿರುಪತಿ ಬಾಲಾಜಿಯ ದರ್ಶನ ಪಡೆಯಲು ಪ್ರತಿನಿತ್ಯ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಈ ಯಾರು ಈ ಪವಿತ್ರ ಕ್ಷೇತ್ರಕ್ಕೆ ಬಂದು ಬಾಲಾಜಿ ದೇವರ ದರ್ಶನ ಪಡೆಯುತ್ತಾರೋ ಅವರಿಗೆ ಎಲ್ಲಾ ಪಾಪಗಳಿಂದ ಮೋಕ್ಷ ಸಿಗುವುದು ಎಂಬ ನಂಬಿಕೆ.

ತಿರುಪತಿ ದೇವಾಲಯಕ್ಕೆ ಬಂದ ಭಕ್ತರು ಇಲ್ಲಿ ಮುಡಿಯನ್ನು ಹರಿಕೆ ರೂಪದಲ್ಲಿ ಸಲ್ಲಿಸುತ್ತಾರೆ. ತಮ್ಮ ಯಾವುದೋ ಒಂದು ಕಾರ್ಯಸಿದ್ಧಿಗಾಗಿ ಭಗವಂತ ತಿರುಪತಿ ಬಾಲಾಜಿಯಲ್ಲಿ ಪ್ರಾರ್ಥನೆ ಮಾಡಿರುತ್ತಾರೆ. ಆ ಕಾರ್ಯ ನೆರವೇರಿದಾಗ ಆ ಬಾಲಾಜಿಗೆ ತಮ್ಮ ಮುಡಿಯನ್ನು ಹರಿಕೆ ರೂಪದಲ್ಲಿ ಅರ್ಪಿಸುತ್ತಾರೆ. ಏಕೆ ಬಾಲಾಜಿಗೆ ಮುಡಿಯನ್ನು ಅರ್ಪಿಸುತ್ತಾರೆ, ಇದರ ಹಿಂದಿರುವ ಪೌರಾಣಿಕ ಕತೆಯ ಹಿನ್ನೆಲೆಯೇನು ಎಂದು ನೋಡೋಣ ಬನ್ನಿ:
ನಂಬಿಕೆ
ವೆಂಕಟೇಶ್ವರ ಕುಬೇರನಿಂದ ಪಡೆದ ಸಂಪತ್ತನ್ನು ಕೂದಲಿನ ರೂಪದಲ್ಲಿ ಮರಳಿಸುತ್ತಾನೆ ಎಂಬುವುದಾಗಿ ಪೌರಾಣಿಕ ಕತೆಯಿದೆ. ಭಕ್ತರು ವೆಂಕಟೇಶ್ವರನಿಗೆ ಮುಡಿಯನ್ನು ಹರಿಕೆ ರೂಪದಲ್ಲಿ ಅರ್ಪಿಸಿದರೆ ತಿರುಪತಿ ಅವರಿಗೆ 10 ಪಟ್ಟು ಅಧಿಕ ಸಂಪತ್ತು ಮರಳಿಸುತ್ತಾನೆ ಎಂಬ ನಂಬಿಕೆಯಿದೆ. ಯಾರು ವೆಂಕಟೇಶ್ವರನಿಗೆ ಕೂದಲನ್ನು ಹರಿಕೆ ರೂಪದಲ್ಲಿ ಅರ್ಪಿಸುತ್ತಾರೋ ಅವರಿಗೆ ಲಕ್ಷ್ಮಿ ಕೃಪೆ ಇರಲಿದೆ. ಇಲ್ಲಿ ಪುರುಷರು ಹಾಗೂ ಮಹಿಳೆಯರು ವೆಂಟೇಶ್ವರನಿಗೆ ಕೂದಲನ್ನು ಅರ್ಪಿಸುತ್ತಾರೆ.
ಪೌರಾಣಿಕ ಕತೆ
ಪೌರಾಣಿಕ ಕತೆಯ ಪ್ರಕಾರ ಬೆಟ್ಟದಲ್ಲಿ ಇರುವೆಗಳ ಗುಂಪುವೊಂದು ವೆಂಕಟೇಶ್ವರ ಪ್ರಾರ್ಥಿಸುತ್ತವೆ,ಹಸುವೊಂದು ಬೆಟ್ಟಕ್ಕೆ ಹೋಗಿ ಆ ಇರುವೆಗಳಿಗೆ ಹಾಲು ನೀಡುತ್ತದೆ. ಇದನ್ನು ನೋಡಿದ ಹಸುವಿನ ಮಾಲಿಕ ಕೋಪದಿಂದ ಕೊಡಲಿಯಿಂದ ಹಸುವಿನ ತಲೆಗೆ ಪೆಟ್ಟು ನೀಡುತ್ತಾನೆ. ಇದರಿಂದ ಬಾಲಾಜಿ ತಲೆಗೆ ಪೆಟ್ಟಾಗಿ ಕೂದಲು ಕೆಳಗೆ ಬೀಳುತ್ತದೆ. ಆಗ ನೀಲಾ ದೇವಿ ತನ್ನ ಕೂದಲನ್ನು ಕತ್ತರಿಸಿ, ಬಾಲಾಜಿ ತಲೆಗೆ ಅಂಟಿಸುತ್ತಾಳೆ, ಇದರಿಂದ ಬಾಲಾಜಿ ಗಾಯ ವಾಸಿಯಾಗುವುದು. ಕೂದಲು ಸೌಂದರ್ಯದ ಪ್ರತೀಕ. ತನ್ನ ಸೌಂದರ್ಯ ಲೆಕ್ಕಿಸದೆ ನೀಲಾ ದೇವಿ ತನ್ನ ಕೂದಲನ್ನು ಬಾಲಾಜಿಗೆ ಅರ್ಪಿಸುತ್ತಾಳೆ. ಆದ್ದರಿಂದ ಯಾರು ವೆಂಕಟೇಶ್ವರನಿಗೆ ಕೂದಲು ಅರ್ಪಿಸುತ್ತಾರೋ ಅವರ ಬಯಕೆ ಈಡೇರುವುದು ಎಂಬ ನಂಬಿಕೆ ಇದೆ.
ಇಲ್ಲಿ ದಾನ ಮಾಡಿದ ಕೂದಲು ಏನಾಗುತ್ತದೆ?
ತಿರುಪತಿಯಲ್ಲಿ ದಾನ ಮಾಡಲಾಗುವ ಕೂದಲನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಮಾರಲಾಗುವುದು. ಯುರೋಪ್, ಅಮೆರಿಕ, ಚೀನಾ, ಆಫ್ರಿಕಾ ದೇಶಗಳಲ್ಲಿ ಕೂದಲಿಗೆ ತುಂಬಾ ಡಿಮ್ಯಾಂಡ್ ಇದೆ.
ಒಂದು ದಿನದಲ್ಲಿ ಸುಮಾರು 20, 000ಕ್ಕೂ ಅಧಿಕ ಭಕ್ತರು ಇಲ್ಲಿ ಕೂದಲನ್ನು ದಾನ ಮಾಡುತ್ತಾರೆ.



Click it and Unblock the Notifications
