Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗುರುವಾರ ಉಪವಾಸ ಮಾಡಿದ್ರೆ ಆರೋಗ್ಯ ಈ ಸಮಸ್ಯೆಗಳಿಂದ ಮುಕ್ತಿ!
ಗುರುವಾರದ ದಿನ ಹೆಚ್ಚಿನ ಜನ ಉಪವಾಸವನ್ನು ಕೈಗೊಳ್ಳುತ್ತಾರೆ. ವಾರದ ಬೇರೆ ದಿನಗಳಲ್ಲಿ ಉಪವಾಸ ಮಾಡೋದಕ್ಕೂ ಗುರುವಾರ ಉಪವಾಸ ಮಾಡೋದಕ್ಕೂ ತುಂಬಾನೇ ಮಹತ್ವವಿದೆ. ಗುರುವಾರ ಉಪವಾಸ ಮಾಡೋದ್ರಿಂದ ದೈವಿಕವಾಗಿ ಮಾತ್ರವಲ್ಲದೇ ಆರೋಗ್ಯದ ದೃಷ್ಟಿಯಿಂದಲೂ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಅಂತ ಹೇಳಲಾಗುತ್ತದೆ. ಅಷ್ಟಕ್ಕೂ ಗುರುವಾರ ಉಪವಾಸ ಮಾಡೋದ್ರಿಂದ ಯಾವ ರೀತಿ ಪ್ರಯೋಜನಗಳನ್ನು ಪಡ್ಕೊಳ್ಳಬಹುದು ಅನ್ನೋದನ್ನು ತಿಳಿಯೋಣ.

ಗುರುವಾರ ಉಪವಾಸ ಮಾಡೋದ್ರ ಪ್ರಾಮುಖ್ಯತೆಯೇನು?
ಗುರುವಾರದಂದು ಉಪವಾಸವನ್ನು ಮಾಡುವುದು ಹಲವಾರು ಧಾರ್ಮಿಕ ಸಂಪ್ರದಾಯಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಹಿಂದೂ ಧರ್ಮದಲ್ಲಿ ಗುರುವಾರವನ್ನು ಬ್ರಹ್ಮಾಂಡದ ರಕ್ಷಕನಾದ ವಿಷ್ಣುವಿಗೆ ಸಮರ್ಪಿಸಲಾಗಿದೆ. ಆತನ ಆಶೀರ್ವಾದ ಮತ್ತು ರಕ್ಷಣೆಯನ್ನು ಪಡೆಯಲು ಈ ದಿನದಂದು ಭಕ್ತರು ಸಾಮಾನ್ಯವಾಗಿ ಉಪವಾಸವನ್ನು ಆಚರಿಸುತ್ತಾರೆ.
ಗುರುವಾರ ಉಪವಾಸ ಮಾಡೋದ್ರಿಂದಾಗುವ ಆರೋಗ್ಯಕರ ಪ್ರಯೋಜನಗಳೇನು?
1. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ!
ಗುರುವಾರ ಉಪವಾಸ ಮಾಡೋದ್ರಿಂದ ನಿಮ್ಮ ದೇಹಕ್ಕೆ ನಿಯಮಿತ ನಿರ್ವಿಶೀಕರಣ (Detoxification)ಪ್ರಕ್ರಿಯೆಯನ್ನು ಒದಗಿಸುತ್ತದೆ. ಒಂದು ದಿನದ ಆಹಾರದಿಂದ ದೂರವಿರುವುದರಿಂದ, ನಿಮ್ಮ ಜೀರ್ಣಾಂಗ ವ್ಯವಸ್ಥೆಯು ವಿಶ್ರಾಂತಿ ಪಡೆಯಲು ಮತ್ತು ಸಂಗ್ರಹವಾದ ಜೀವಾಣುಗಳನ್ನು ತೆರವುಗೊಳಿಸಲು ಅನುವು ಮಾಡಿಕೊಡುತ್ತದೆ. ಇದು ಸುಧಾರಿತ ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯಕ್ಕೆ ಕಾರಣವಾಗುತ್ತದೆ.
2. ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ!
ತೂಕ ನಿರ್ವಹಣೆಗೆ ಉಪವಾಸವು ಪರಿಣಾಮಕಾರಿ ಸಾಧನವಾಗಿದೆ. ದಿನಕ್ಕೆ ಇಂತಿಷ್ಟು ಎಂಬಂತೆ ನಿಮ್ಮ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುವ ಮೂಲಕ ನೀವು ತೂಕ ನಿಯಂತ್ರಣ ಮಾಡಿಕೊಳ್ಳಬಹುದು. ಅದು ಕಾಲಾನಂತರದಲ್ಲಿ ಹೆಚ್ಚುವರಿ ಪೌಂಡ್ ಕ್ಯಾಲೋರಿಗಳನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ. ಇನ್ನೂ ನೀವು ಉಪವಾಸ ಮಾಡದ ದಿನಗಳಲ್ಲಿ ಸಮತೋಲಿತ ಆಹಾರವನ್ನು ಸೇವಿಸುವುದನ್ನು ಮರೆಯದರಿ.
3. ರಕ್ತದಲ್ಲಿ ಸಕ್ಕರೆಯ ನಿಯಂತ್ರಣ ಮಾಡುತ್ತದೆ!
ಗುರುವಾರ ನಿಯಮಿತವಾಗಿ ಉಪವಾಸ ಮಾಡೋದ್ರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನೀವು ಉಪವಾಸ ಮಾಡುವಾಗ ನಿಮ್ಮ ದೇಹವು ಶಕ್ತಿಗಾಗಿ ಸಂಗ್ರಹಿಸಿದ ಗ್ಲೈಕೋಜೆನ್ ಅನ್ನು ಬಳಸುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸಲು ಮತ್ತು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
4. ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ!
ಗುರುವಾರ ಉಪವಾಸ ಮಾಡೋದ್ರಿಂದ ಇದು ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಉರಿಯೂತದಂತಹ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೇ ಇದು ಹೃದಯ ಕಾಯಿಲೆ ಬಾರದಂತೆ ತಡೆಯುತ್ತದೆ.
5. ಆಯುಷ್ಯ ಹೆಚ್ಚಾಗುತ್ತದೆ!
ವಾರದಲ್ಲಿ ಒಂದು ಸಾರಿ ಉಪವಾಸ ಮಾಡಿದ್ರೆ ತುಂಬಾನೇ ಒಳ್ಳೆಯದು. ಅದ್ರಲ್ಲೂ ಗುರುವಾರ ವಾರದ ಮಧ್ಯೆ ಬರೋದ್ರಿಂದ ಈ ದಿನ ಉಪವಾಸ ಮಾಡುವುದು ಸೂಕ್ತ ಅಂತ ಹೇಳಲಾಗುತ್ತದೆ. ಇದು ಸೆಲ್ಯುಲಾರ್ ದುರಸ್ತಿ ಪ್ರಕ್ರಿಯೆಗಳನ್ನು ಸಕ್ರಿಯಗೊಳಿಸುವ ಮೂಲಕ ಮತ್ತು ಉತ್ಕರ್ಷಣ ನಿರೋಧಕಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದ ದೀರ್ಘಾಯುಷ್ಯ ಪಡೆಯಲು ಸಾಧ್ಯವಾಗುತ್ತದೆ.
ಹೀಗೆ ಗುರುವಾರ ಉಪವಾಸ ಮಾಡೋದ್ರಿಂದ ಇಷ್ಟೆಲ್ಲಾಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.



Click it and Unblock the Notifications
