Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಗರುಡ ಪುರಾಣವು ಈ 5 ಕೆಲಸವನ್ನು ಮಹಾಪಾಪ ಎಂದಿದೆ
ಹಿಂದೂಗಳ 18 ಮಹಾಪುರಣಗಳಲ್ಲಿ ಗರುಡ ಪುರಾಣ ಕೂಡ. ಗರುಡ ಪುರಾಣದಲ್ಲಿ ಮನುಷ್ಯ ಹೇಗೆ ಜೀವಿಸಬೇಕು? ಸನ್ಮಾರ್ಗದಲ್ಲಿ ನಡೆದರೆ ಏನು ಪ್ರಯೋಜನ, ಕೆಟ್ಟ ಮಾರ್ಗದಲ್ಲಿ ನಡೆದರೆ ಯಾವ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಇದರಲ್ಲಿ ವ್ಯಕ್ತಿ ಹುಟ್ಟಿದಾಗಿನಿಂದ ಹಿಡಿದು ಸಾಯುವವರೆಗಿನ ಮನುಷ್ಯನ ಜೀವನದ ಬಗ್ಗೆ ಹೇಳಲಾಗಿದೆ. ಸ್ವರ್ಗ, ನರಕದ ಕಲ್ಪನೆ ಇದರಲ್ಲಿದೆ.
ಮನುಷ್ಯ ಸರಿಯಾದ ಮಾರ್ಗದಲ್ಲಿ ನಡೆಯಬೇಕೆಂಬ ಉದ್ದೇಶ ಗರುಡ ಪುರಾಣದಲ್ಲಿ ಏನು ಮಾಡಬಾರದು, ಯಶಸ್ವಿ ಬದುಕಿಗೆ ಏನು ಮಾಡಬೇಕು, ಬದುಕಿನ ನಂತರ ಮೋಕ್ಷವನ್ನು ಪಡೆಯುವುದು ಹೇಗೆ ಎಂಬುವುದರ ಬಗ್ಗೆ ಹೇಳಲಾಗಿದೆ.

* ಭ್ರೂಣದಲ್ಲಿರುವ ಮಗುವನ್ನು ಕೊಲ್ಲುವುದು, ನವಜಾತ ಶಿಶುವನ್ನು ಕೊಲ್ಲುವುದು, ಗರ್ಭಿಣಿ ಮಹಿಳೆಯನ್ನು ಕೊಲ್ಲುವುದು ಮಹಾ ಪಾಪವೆಂದು ಹೇಳಲಾಗಿದೆ. ಈ ರೀತಿ ಮಾಡಿದರೆ ಮಹಾಪಾಪ ಸುತ್ತಿಕೊಳ್ಳುತ್ತದೆ ಎಂದು ಹೇಳಿದೆ.
* ಯಾರು ಮಹಿಳೆಯರನ್ನು ಅವಮಾನಿಸುತ್ತಾರೋ, ಅವರಿಗೆ ಕಿರುಕುಳ ನೀಡುತ್ತಾರೋ, ಅತ್ಯಾಚಾರ ಮಾಡುತ್ತಾರೋ ಅವರಿಗೆ ನರಕದಲ್ಲಿ ದೊಡ್ಡ ಶಿಕ್ಷೆಯನ್ನು ನೀಡಲಾಗುವುದು ಎಂದು ಹೇಳಲಾಗುತ್ತದೆ.
* ಸ್ನೇಹಿತೆ ಅಥವಾ ಪರಸ್ತ್ರೀ ಜೊತೆ ತಪ್ಪಾಗಿ ವರ್ತಿಸಿದರೆ ಅಂಥ ವ್ಯಕ್ತಿ ಮಹಾಪಾಪ ತಗುಲುತ್ತದೆ, ಅವನಿಗೆ ನರಕದಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಲಾಗಿದೆ.
* ಯಾರು ದೇವಾಲಯ, ಧಾರ್ಮಿಕ ಆಚರಣೆಗಳನ್ನು ನಿಂದಿಸುತ್ತಾರೋ ಅವರು ಬದುಕಿನಲ್ಲಿ ತುಂಬಾ ಕಷ್ಟ ಅನುಭವಿಸುತ್ತಾರೆ. ಅವರ ವೈವಾಹಿಕ ಬದುಕು ಚೆನ್ನಾಗಿರುವುದಿಲ್ಲ, ತುಂಬಾನೇ ಕಷ್ಟಗಳನ್ನು ಅನುಭವಿಸುತ್ತಾರೆ ಎಂದು ಹೇಳಲಾಗುವುದು.
* ಯಾರು ಹಿರಿಯರ ಜೊತೆ ಅಗೌರವದಿಂದ ವರ್ತಿಸುತ್ತಾರೋ, ಯಾರು ದುರ್ಬಲರಿಗೆ ಸಹಾಯ ಮಾಡುವುದಿಲ್ಲ, ಪೋಷಕರನ್ನು ನೋಡಿಕೊಳ್ಳುವುದಿಲ್ಲವೂ ಅವರಿಗೆ ಮಹಾಪಾಪ ಸುತ್ತಿಕೊಳ್ಳುತ್ತದೆ. ಇವರು ಬದುಕಿನಲ್ಲಿ ತುಂಬಾನೇ ಕಷ್ಟಗಳನ್ನು ಅನುಭವಿಸುತ್ತರೆ ಎಂದು ಹೇಳಲಾಗಿದೆ. ಇಂಥ ವ್ಯಕ್ತಿಗಳು ಸಾವಿನ ಬಳಿಕ ನರಕವನ್ನು ಕಾಣುತ್ತಾರೆ ಎಂದು ಹೇಳಲಾಗುವುದು.
ಸ್ವರ್ಗ-ನರಕದ ಕಲ್ಪನೆ ಮೂಲಕ ಗರುಡ ಪುರಾಣವು ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ. ಸಾವಿನ ನಂತರ ನರಕವಿದೆಯೀ ಎಂಬುವುದು ಗೊತ್ತಿಲ್ಲ ಆದರೆ ಗರುಡ ಪುರಾಣದಲ್ಲಿ ಯಾವ ಕಾರ್ಯ ಮಾಡಬಾರದು, ಯಾವುದನ್ನು ಮಾಡಬೇಕು ಎಂದು ಹೇಳಿರುವುದನ್ನು ಪಾಲಸಿಇದರೆ ಮನುಷ್ಯ ಜೀವನ ಸುಂದರವಾಗಿರುತ್ತದೆ, ನೆಮ್ಮದಿಯಿಂದ ಕೂಡಿರುತ್ತದೆ.



Click it and Unblock the Notifications
