Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಶಬರಿಮಲೆಗೆ ಮಹಿಳೆಯರು ಹೋದರೆ ಅವರ ಗರ್ಭಕೋಶಕ್ಕೆ ಹಾನಿಯಾಗುವುದೇ? ಏಕೆ?
ಶಬರಿಮಲೆ ಹತ್ತಿ ಹೋಗಿ ಅಯ್ಯಪ್ಪನ ದರ್ಶನ ಪಡೆಯಬೇಕೆಂಬ ಆಸೆ ಪ್ರತಿಯೊಬ್ಬ ಅಯ್ಯಪ್ಪ ಭಕ್ತರಲ್ಲಿ ಇರುತ್ತದೆ. ಆದರೆ ಮಹಿಳೆಯರು ಅಯ್ಯಪ್ಪನ ದೇವಾಲಯಕ್ಕೆ ಹೋಗುವಂತಿಲ್ಲ ಎಂಬ ನಿಯಮವಿದೆ.
ಮಹಿಳೆಯರು ಶಬರಿಮಲೆಗೆ ಹೋಗುವುದು ಧಾರ್ಮಿಕ ಆಚರಣೆಗಳಿಗೆ ವಿರುದ್ಧವಾದದ್ದು, ಅಲ್ಲಿಗೆ ಋತು ಚಕ್ರ ಪ್ರಾರಂಭವಾದ ಮೇಲೆ ಹೋಗುವಂತೆಯೇ ಇಲ್ಲ ಎಂದು ಹೇಳಲಾಗುವುದು. ಆದರೆ ಕೆ. ಉನ್ನಿಕೃಷ್ಣನ್ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಏಕೆ ಮಹಿಳೆಯರು ಹೋಗುವಂತಿಲ್ಲ? ಅದರ ಹಿಂದಿರುವ ವೈಜ್ಙಾನಿಕ ಕಾರಣಗಳು ಏನಿರಬಹುದು ಎಂಬುವುದಾಗಿ ಹೇಳಿದ್ದಾರೆ, ಅದರ ಬಗ್ಗೆ ನೋಡೋಣ ಬನ್ನಿ:
spiritual_and__temple_wing ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿರುವ ವೀಡಿಯೋದಲ್ಲಿ ಶಬರಿಮಲೆಗೆ ಮಹಿಳೆಯರು ಏಕೆ ಹೋಗಬಾರದು ಎಂಬುವುದನ್ನು ವೈಜ್ಞಾನಿಕವಾಗಿ ವಿವರಿಸಿದ್ದಾರೆ.

ಶಬರಿಮಲೆ ಎಂಬುವುದು ಎತ್ತರದ ಬೆಟ್ಟ, ಆ ಬೆಟ್ಟದಲ್ಲಿ ಅಯ್ಯಪ್ಪಸ್ವಾಮಿ ನೆಲೆ ನಿಂತಿದ್ದಾರೆ. ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಾತ್ರವಲ್ಲ ಗ್ರೀಸ್‌ನಲ್ಲಿರುವ ಮೌಂಟ್ ಅಥೋಸ್, ಜಪಾನ್‌ನಲ್ಇರುವ ಮೌಂಟ್ ಉಮೀನ್‌ಗೆ ಯಾವುದೇ ವಯಸ್ಸಿನ ಸ್ತ್ರೀಯರೂ ಇಲ್ಲಿಗೆ ಹೋಗುವಂತಿಲ್ಲ. ಪ್ರಾಣಿಗಳಲ್ಲಿಯೂ ಬರೀ ಗಂಡು ಪ್ರಾಣಿಗಳಷ್ಟೇ ಈ ಬೆಟ್ಟಕ್ಕೆ ಹೋಗಬಹುದು. ಏಕೆಂದರೆ ಇದೆರಡು ತುಂಬಾ ಎತ್ತರದ ಬೆಟ್ಟ, ಆದ್ದರಿಂದ ಈ ಬೆಟ್ಟ ಹತ್ತಿದರೆಸ್ತ್ರೀ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಮಹಿಳೆಯರಿಗೆ ಹೋಗಲು ಅವಕಾಶವಿಲ್ಲ. ಶಬರಿಮಲೆ ಅಷ್ಟು ದೊಡ್ಡ ಬೆಟ್ಟವಲ್ಲ 1 ಸಾವಿರ ಅಡಿ ಎತ್ತರದ ಬೆಟ್ಟ, ಆದರೆ ಶಬರಿಮಲೆ ತಲುಪುವ ಮುನ್ನ 18 ಮಲೆ ಅಂದರೆ ಬೆಟ್ಟಗಳನ್ನು ಹತ್ತಬೇಕು. ಅದರಲ್ಲೂ ಕರಿಮಲೆ 4,721 ಅಡಿ ಎತ್ತರದ ಬೆಟ್ಟ, ಆದ್ದರಿಂದ ಮಹಿಳೆಯರು ಶಬರಿಮಲೆಗೆ ಹೋದರೆ ಬೇಗನೆ ಮೆನೋಪಾಸ್ ಬರುವ ಸಾಧ್ಯತೆ ಇದೆ ಎಂಬುವುದಾಗಿ ಕೆ, ಉನ್ನಿಕೃಷ್ಣನ್ ಹೇಳಿದ್ದಾರೆ.
ಶಬರಿಮಲೆಯಲ್ಲಿ 9 ವರ್ಷದೊಳಗಿನ (ಹೆಣ್ಮಕ್ಕಳು ಪ್ರಾಯಕ್ಕೆ ಬರುವ ಮುನ್ನ) ನಂತರ ಮೆನೋಪಾಸ್ ಬಂದ ಮೇಲೆ (ಮುಟ್ಟಿನ ಚಕ್ರ ಸಂಪೂರ್ಣ ನಿಂತ ಮೇಲೆ) ಶಬರಿಮಲೆಗೆ ಮಾಲೆ ಹಾಕಿ ಅಯ್ಯಪ್ಪಸ್ವಾಮಿಯ ದರ್ಶನ ಪಡೆದು ಬರಬಹುದು.
ಮಹಿಳೆಯರು ಏಕೆ ಶಬರಿಮಲೆಗೆ ಹೋಗಬಾರದು?
ಶಬರಿಮಲೆ ಎಂಬುವುದು ಎತ್ತರದ ಬೆಟ್ಟ, ಆ ಬೆಟ್ಟವನ್ನು ಹತ್ತಿಕೊಂಡು ಹೋಗುವುದು ಮಹಿಳೆಯರು ಆರೋಗ್ಯಕ್ಕೆ ಒಳ್ಳೆಯದಲ್ಲ. ಮಹಿಳೆಯರು ಅಂಥ ಎತ್ತರದ ಬೆಟ್ಟಗಳನ್ನು ಹತ್ತಿಕೊಂಡು ಹೋಗುವುದರಿಂದ ಅದು ಅವರ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ, ಅವರ ಗರ್ಭಕೋಶದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮಹಿಳೆಯರು ಮಹಿಳೆಯರು ಶಬರಿಮಲೆ ಬೆಟ್ಟ ಹತ್ತಬಾರದು.
ಈ ದೃಷ್ಟಿಯಿಂದಲೇ ಹಿಂದೆ ಹಿರಿಯರು ಮಹಿಳೆಯರು ಶಬರಿಮಲೆಗೆ ಬರುವಂತಿಲ್ಲ ಎಂಬುವುದಾಗಿ ಹೇಳಿರಬಹುದು. ನಮ್ಮ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಆಚರಣೆಯ ಹಿಂದೆಯೂ ಒಂದು ಕಾರಣವಿತ್ತು... ಅದನ್ನು ನಂಬಿಕೆ, ಆಚರಣೆಯ ಮೂಲಕ ಜನರಿಗೆ ತಿಳಿಸಲು ಪ್ರಯತ್ನಿಸುತ್ತಿದ್ದರು, ಅಂಥ ಆಚರಣೆಗಳು ಮುಂದೆ ನಿಯಮವಾಗಿ ಬದಲಾಗಿರಬಹುದು. ಇಲ್ಲಿಯೂ ಅಷ್ಟೇ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಶಬರಿಮಲೆಗೆ ಮಹಿಳೆಯರು ಬರುವಂತಿಲ್ಲ ಎಂದು ಹೇಳಿರಬಹುದು.
ಶಬರಿಮಲೆಗೆ ಮಹಿಳೆಯರು ಯಾಕೆ ಹೋಗಬಾರದು ಎಂದು 2019ರಲ್ಲಿ 39 ವರ್ಷದ ಕನಕ ದುರ್ಗಾ, 40 ವರ್ಷದ ಬಿಂದು ಅಮ್ಮಿಣಿ ಶಬರಿಮಲೆಗೆ ಹೋಗಲು ಪ್ರಯತ್ನಿಸಿದ್ದು ತುಂಬಾನೇ ದೊಡ್ಡ ಸುದ್ದಿ ಮಾಡಿತ್ತು. ಈ ಬಗ್ಗೆ ದೊಡ್ಡ ಪ್ರತಿಭಟನೆಯ ನಡೆದಿತ್ತು. ಮಹಿಳೆಯರು ಕೂಡ ಈ ಇಬ್ಬರು ನಡೆಯನ್ನು ವಿರೋಧಿಸಿದ್ದರು.
ಅಯ್ಯಪ್ಪನ ಸ್ವಾಮಿಯ ಮೇಲೆ ಭಕ್ತರಿಗಿದೆ ಅಚಲ ನಂಬಿಕೆ
ಅಯ್ಯಪ್ಪನ ಸ್ವಾಮಿಯನ್ನು ಯಾರು ಭಕ್ತಿಯಿಂದ ಆರಾಧಿಸುತ್ತಾರೋ ಅವರ ಎಲ್ಲಾ ಕಷ್ಟಗಳನ್ನು ಅಯ್ಯಪ್ಪಸ್ವಾಮಿ ನೀಗಿಸುತ್ತಾನೆ ಎಂಬುವುದು ಅಚಲ ನಂಬಿಕೆ. ಅದರಂತೆ ಹಲವರ ಬದುಕಿನಲ್ಲಿ ಹಲವು ಪವಾಡಗಳು ನಡೆದಿವೆ. ನಡೆಯುತ್ತಲೂ ಇದೆ. ಕಷ್ಟದ ಅಯ್ಯಪ್ಪನ ಕರೆದಾಗ ಆ ಭಕ್ತನ ಕರೆಗೆ ಅಯ್ಯಪ್ಪ ಸ್ಪಂದಿಸಿದ್ದಾನೆ ಎಂಬುವುದನ್ನು ತುಂಬಾ ಜನ ಅಯ್ಯಪ್ಪ ಭಕ್ತರು ಹೇಳುತ್ತಿದ್ದಾರೆ.
ಪ್ರತಿಯೊಂದು ಆಚರಣೆ, ನಂಬಿಕೆ ಹಿಂದೆ ಕಾರಣವಿರುತ್ತದೆ, ಅದನ್ನು ಗೌರವಿಸಬೇಕು .... ಸ್ವಾಮಿಯೇ ಶರಣಂ ಅಯ್ಯಪ್ಪ....



Click it and Unblock the Notifications