Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ರೈಲು ಅಪಘಾತದಲ್ಲಿ ಕೈ-ಕಾಲು ಕಳೆದುಕೊಂಡ, ಯುಪಿಎಸ್‌ಸಿ ಪಾಸ್ ಮಾಡಿದ..! ಬದುಕು ಗೆದ್ದವನ ಕಥೆ
ಜೀವನದಲ್ಲಿ ಅಂದುಕೊಂಡ ಗುರಿ ಸಾಧಿಸೋಕೆ ಎಷ್ಟೆಲ್ಲಾ ಸೌಲಭ್ಯ, ಸಂಪತ್ತು, ಸೌಕರ್ಯಗಳಿದ್ದರೂ ಹಲವರಿಗೆ ಇದು ಸಾಧ್ಯವಾಗಲ್ಲ. ಗುರಿ ತಲುಪುವುದು ಎಂದರೆ ಅದೊಂದು ತಪಸ್ಸಿದ್ದಂತೆ. ಎಲ್ಲರಿಗೂ ಗುರಿ ಎಂಬುದು ಒಲಿಯುವುದು ಸುಲಭದ ಮಾತಲ್ಲ. ಇದಕ್ಕಾಗಿ ಹಗಲು ರಾತ್ರಿ ಶ್ರಮ ಹಾಕಬೇಕು. ಶ್ರದ್ಧೆ ಇರಬೇಕು, ನಿದ್ರೆಗೆಡಬೇಕು, ಆಸೆ ಆಕಾಂಕ್ಷೆಗಳ ಕಟ್ಟಿ ಬದಿಯಲ್ಲಿಡಬೇಕು. ಇದಕ್ಕೆ ಗುರಿ ತಲುಪುವುದು ತಪಸ್ಸು ಎನ್ನುವುದು.
ಪ್ರತಿಯೊಬ್ಬರಿಗೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೇಶ ಸೇವೆಗೆ ತೆರಳಬೇಕು ಎಂಬ ಆಸೆಯಂತು ಇರುತ್ತೆ. ಆದ್ರೆ ಅದರಲ್ಲಿ ಸಫಲರಾಗುವವರ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು ಮಾತ್ರ. ಯಾಕಂದ್ರೆ ಯುಪಿಎಸ್‌ಸಿ ಪರೀಕ್ಷೆ ಬರಿಯೋದು ಅಂದ್ರೆ ಅಷ್ಟು ಸುಲಭವಲ್ಲ. ಇದಕ್ಕೆ ಕಠಿಣ ಅಭ್ಯಾಸ, ಶ್ರಮ ಇರಲೇಬೇಕು.
ಆದ್ರೆ ಇಲ್ಲೊಬ್ಬನ ಕಥೆ ಮಾತ್ರ ಅವರ ಹೋರಾಟದ ಹಾದಿ ಎಲ್ಲವೂ ನಿಮಗೆ ಅಚ್ಚರಿ ಹುಟ್ಟಿಸುತ್ತೆ. ಉತ್ತರ ಪ್ರದೇಶದ ಸೂರಜ್ ತಿವಾರಿ ಎಂಬ ಯುವಕ ಎರಡೂ ಕಾಲು ಒಂದು ಕೈ ಇಲ್ಲದಿದ್ದರೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಕೈ ಕಾಲು ಇಲ್ಲದವರು ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡುವುದು ಅಚ್ಚರಿ ಅಲ್ಲ ಎನ್ನುವುದು ನಿಮ್ಮ ವಾದವಾಗಿದ್ದರೆ ಇದರ ಹಿಂದೆ ನಡೆದ ಆತನ ದುರಂತ ಕಥೆ ನೀವು ನಂಬಲಸಾಧ್ಯವಾಗಿದೆ.

ರೈಲು ಅಪಘಾತದಲ್ಲಿ ಕೈ-ಕಾಲು ಕಳೆದುಕೊಂಡ
ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ನಿವಾಸಿ ಸೂರಜ್ ತಿವಾರಿ ಅವರು 2017ರಲ್ಲಿ ಗಾಜಿಯಾಬಾದ್‌ನಲ್ಲಿ ಚಲಿಸುವ ರೈಲಿನಿಂದ ಬಿದ್ದು ತನ್ನ ಎರಡೂ ಕಾಲುಗಳು, ಬಲಗೈ ಮತ್ತು ಎಡಗೈಯ ಎರಡು ಬೆರಳುಗಳನ್ನು ಕಳೆದುಕೊಂಡಿದ್ದ. ರೈಲು ಅಪಘಾತದ ನಂತರ ಸೂರಜ್ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಅವರ ಸಹೋದರ ಮೇ 2017ರಲ್ಲಿ ಆತ್ಮಹತ್ಯೆ ಮಾಡಿಕೊಂಡ.
ಸೂರಜ್‌ಗೆ ಜೀವನದಲ್ಲಿ ಎಲ್ಲವೂ ನಿಗೂಢವಾಗಿತ್ತು. ಮೊದಲು ಕಾಲು ಕಳೆದುಕೊಂಡ ಜೀವನ ಸಹೋದರನ ಆತ್ಮಹತ್ಯೆ ಎಲ್ಲವೂ ಜೀವನ ಸಾಕು ಎನಿಸುವಷ್ಟು ಕಾಡುತ್ತಿತ್ತು. ಆದರೆ ಆತ ನಿಶ್ಚಯಿಸಿದ್ದ, ಯುಪಿಎಸ್‌ಸಿಗೆ ತಯಾರಿ ನಡೆಸಿದ್ದ. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ರಷ್ಯನ್ ಭಾಷೆಯಲ್ಲಿ ಎಂಎ ಮಾಡುತ್ತಿದ್ದ 29ರ ಹರೆಯದ ಸೂರಜ್ ತನ್ನ ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅಖಿಲ ಭಾರತ 917ನೇ ರ್ಯಾಂಕ್ ಗಳಿಸಿದ್ದಾನೆ.
ವೀಲ್ ಚೇರ್ ಮೇಲೆ ಕುಳಿತು ಓದಿದ
ಕಾಲು ಕಳೆದುಕೊಂಡ ಬಳಿಕ ಎದ್ದು ಓಡಾಡಲು ಮತ್ತೊಬ್ಬರ ಮೇಲೆ ಅವಲಂಬಿತನಾದ. ಹೀಗಾಗಿ ಕುಳಿತಲ್ಲೇ ಓದಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಆದರೆ ಚಲ ಬಿಡದ ಆತ ವೀಲ್ ಚೇರ್‌ನಲ್ಲೇ ಲೈಬ್ರೆರಿ ಸುತ್ತಾಡಿದ್ದ. ಗಂಟೆಗಳ ಕಾಲ ಕುಳಿತಲ್ಲೇ ಪುಸ್ತಕಗಳ ಓದಲು ಆರಂಭಿಸಿದ್ದ, ನಿತ್ಯ 15 ಗಂಟೆಗೂ ಹೆಚ್ಚು ಕಾಲ ಓದುತ್ತಿದ್ದ.
ಮೂರು ಬೆರಳಲ್ಲಿ ಪರೀಕ್ಷೆ ಬರೆದ
ಹೌದು ನಿಮಗೆ ಅಚ್ಚರಿ ಎನಿಸಿದರು ಇದು ಸತ್ಯ. ಯುಪಿಎಸ್‌ಸಿಯಲ್ಲಿ ಮೂರು ಬೆರಳ ಮೂಲಕ ಪರೀಕ್ಷೆ ಹಾಜರಾಗಿದ್ದ, ಯುಪಿಎಸ್‌ಸಿಯಲ್ಲಿ ಪ್ರತಿ ಸೆಕೆಂಡುಗಳು ಸಹ ಜೀವನ ರೂಪಿಸುತ್ತೆ. ಆದ್ರೆ ಚಲ ಬಿಡದ ಸೂರಜ್ ನಿಗದಿತ ಸಮಯದಲ್ಲೇ ಪರೀಕ್ಷೆಗೆ ಕಠಿಣ ಅಭ್ಯಾಸ ನಡೆಸಿದ್ದ.



Click it and Unblock the Notifications