Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ವೈಶಾಖ ಪೂರ್ಣಿಮಾ: ಈ ಪರಿಹಾರದಿಂದ ಕಷ್ಟಗಳು ದೂರಾಗುವುದು, ಶನಿದೋಷ ಕಡಿಮೆಯಾಗುವುದು
ಹಿಂದೂ ಧರ್ಮದಲ್ಲಿ ಹುಣ್ಣಿಮೆಗೆ ತುಂಬಾನೇ ಮಹತ್ವ ನೀಡಲಾಗಿದೆ. ತುಂಬಾ ಜನ ಈ ದಿನ ಉಪವಾಸವಿದ್ದು ರಾತ್ರಿ ಚಂದ್ರನ ಕಂಡ ಮೇಲೆ ಚಂದ್ರನಿಗೆ ಆರ್ಘ್ಯ ಅರ್ಪಿಸಿ ನಂತರ ಆಹಾರ ಸೇವಿಸುತ್ತಾರೆ. ಈ ಮೇ ತಿಂಗಳಿನಲ್ಲಿ ವೈಶಾಖ ಪೂರ್ಣಿಮೆ ಬಂದಿದೆ. ವೈಶಾಖ ಮಾಸದ ಈ ಹುಣ್ಣಿಮೆ ಧಾರ್ಮಿಕ ದೃಷ್ಟಿಯಿಂದ ತುಂಬಾನೇ ಮಹತ್ವ ಹೊಂದಿದೆ. ಈ ದಿನ ಗೌತಮ ಬುದ್ಧ ಜನಿಸಿದ ದಿನ.

ಈ ದಿನ ಬುದ್ಧ ಜಯಂತಿ ಆಚರಿಸಲಾಗುವುದು. ಬುದ್ಧನನ್ನು ವಿಷ್ಣುವಿನ ಅವತಾರ ಎಂದು ಹೇಳಲಾಗುವುದು, ಆದ್ದರಿಂದ ಈ ದಿನಕ್ಕೆ ತುಂಬಾನೇ ಮಹತ್ವವಿದೆ. ಈ ಹುಣ್ಣಿಮೆಯ ಮಹತ್ವವೇನು? ಸಂತೋಷ ಮತ್ತು ಸಮೃದ್ಧಿಯನ್ನು ತರಲು ಮತ್ತು ಬಡತನವನ್ನು ತೊಡೆದುಹಾಕಲು ಈ ದಿನ ಏನು ಮಾಡಿದರೆ ಒಳ್ಳೆಯದು ಎಂದು ಧಾರ್ಮಿಕ ನಂಬಿಕೆಗಳಲ್ಲಿ ಹೇಳಲಾಗಿದೆ ಎಂದು ನೋಡೋಣ ಬನ್ನಿ:
ವೈಶಾಖ ಪೂರ್ಣಿಮಾ ದಿನಾಂಕ - 5 ಮೇ 2023
ವೈಶಾಖ ಹುಣ್ಣಿಮೆಯ ತಿಥಿ ಪ್ರಾರಂಭ - ಮೇ 4, ಬೆಳಗ್ಗೆ 11:44 ರಿಂದ
ಹುಣ್ಣಿಮೆಯ ತಿಥಿ ಅಂತ್ಯ - ಮೇ 5, ಬೆಳಗ್ಗೆ 11:04 ಕ್ಕೆ.
ಈ ದಿನ ಏನು ಮಾಡಬೇಕು?
* ಈ ಹುಣ್ಣಿಮೆಯಂದು ಮುಂಜಾನೆ ಎದ್ದು ಸ್ನಾನ ಮಾಡಬೇಕು. ಪುಣ್ಯ ನದಿಯಲ್ಲಿ ಸ್ನಾನ ಮಾಡಿದರೆ ಒಳ್ಳೆಯದು, ಇಲ್ಲದಿದ್ದರೆ ಸ್ನಾನದ ನೀರಿಗೆ ಗಂಗಾಜಲ ಬೆರೆಸಿ ಸ್ನಾನ ಮಾಡಬಹುದು.
* ಸ್ನಾನದ ನಂತರ, ವಿಷ್ಣುವನ್ನು ಪೂಜಿಸಿ ಮತ್ತು ಸಂಕಲ್ಪ ಮಾಡಿ
* ಈ ದಿನ ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡುತ್ತಾರೆ. ಉಪವಾಸವಿರಲು ಸಾಧ್ಯವಾಗದವರು ಸಾತ್ವಿಕ ಆಹಾರಗಳನ್ನಷ್ಟೇ ಸೇವಿಸಬೇಕು.
* ಈ ದಿನ ಸತ್ಯನಾರಾಯಣನ ಕತೆ ಹೇಳಿದರೆ ಒಳ್ಳೆಯದು.
* ವಿಷ್ಣುವಿನ ಆರಾಧನೆಯಲ್ಲಿ ತುಳಸಿ ಇರಲೇಬೇಕು.
* ಸಂಜೆ ಹೊತ್ತು ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಆರಾಧಿಸಿ.
ವೈಶಾಖ ಪೂರ್ಣಿಮೆಂದು ಚಂದ್ರನ ಆರಾಧನೆ
ವೈಶಾಖ ಪೂರ್ಣಿಮೆಯ ದಿನದಂದು ಚಂದ್ರನನ್ನು ಪೂಜಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು
* ಚಂದ್ರೋದಯದ ನಂತರ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಅನೇಕ ದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇರಲಿದೆ.
ಧರ್ಮಗ್ರಂಥಗಳಲ್ಲಿ ವೈಶಾಖ ಪೂರ್ಣಿಮೆಯ ಮಹತ್ವವೇನು?
ಈ ದಿನ ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡಿದರೆ ತುಂಬಾ ಒಳ್ಳೆಯದು ಎಂದು ಹೇಳಲಾಗುವುದು.
* ಈ ದಿನ ಏಕಾಗ್ರತೆಯಿಂದ ಶ್ರೀ ವಿಷ್ಣು, ಲಕ್ಷ್ಮಿಯನ್ನು ಆರಾಧನೆ ಮಾಡುವುದರಿಂದ ವ್ಯಕ್ತಿಯ ಸಂಪತ್ತು, ಸಂತೋಷ ವೃದ್ಧಿಸುವುದು ಎಂಬ ನಂಬಿಕೆ ಇದೆ.
* ಈ ದಿನ ಪೂಜೆಯನ್ನು ಮಾಡುವುದರಿಂದ ಅಕಾಲಿಕ ಮೃತ್ಯು ಭಯ ದೂರಾಗುವುದು.
ಅಕಾಲಿಕ ಮರಣದ ಭಯವನ್ನು ತೊಡೆದುಹಾಕಲು
ವೈಶಾಖ ಪೂರ್ಣಿಮೆಯ ಸಂದರ್ಭದಲ್ಲಿ ಸಾವಿನ ದೇವರು ಯಮರಾಜನನ್ನು ಪೂಜಿಸಲಾಗುತ್ತದೆ. ಯಮರಾಜನನ್ನು ನಿಸ್ವಾರ್ಥದಿಂದ ಪೂಜಿಸುವ ವ್ಯಕ್ತಿ ಎಂದು ನಂಬಲಾಗಿದೆ. ಅಕಾಲಿಕ ಮರಣದ ಭಯವು ಅವನನ್ನು ಎಂದಿಗೂ ಕಾಡುವುದಿಲ್ಲ. ಏಕೆಂದರೆ ಯಮರಾಜನ ಆಶೀರ್ವಾದ ಸದಾ ಅವರ ಮೇಲಿರುತ್ತದೆ.
* ಭಕ್ತಿಯಿಂದ ಈ ದಿನ ಪೂಜೆ ಮಾಡಿದರೆ ಸಂತಾನ ಪ್ರಾಪ್ತಿ ಭಾಗ್ಯ ದೊರೆಯಲಿದೆ ಎಂದು ಹೇಳಲಾಗುವುದು.
* ಜ್ಞಾನ ಪ್ರಾಪ್ತಿಯಾಗುತ್ತದೆ: ಭಗವಾನ್ ಬುದ್ಧ ಆದರ್ಶಗಳನ್ನು ಅನುಸರಿಸುವುದರಿಂದ, ಮನುಷ್ಯನು ಜ್ಞಾನ, ಬುದ್ಧಿವಂತಿಕೆ, ತಪಸ್ಸು ಇತ್ಯಾದಿಗಳ ಮೌಲ್ಯವನ್ನು ಅರ್ಥಮಾಡಿಕೊಳ್ಳುತ್ತಾನೆ.
* ಆರ್ಥಿಕ ಸಮಸ್ಯೆಯಿಂದ ಪರಿಹಾರ ದೊರೆಯಲಿದೆ. ವೈಶಾಖ ಪೂರ್ಣಿಮಾ ಉಪವಾಸದ ದಿನದಂದು ಭಗವಾನ್ ವಿಷ್ಣುವಿನ ಜೊತೆಗೆ ಚಂದ್ರನನ್ನು ಪೂಜಿಸುವುದರಿಂದ ವ್ಯಕ್ತಿಯು ಅನೇಕ ತೊಂದರೆಗಳನ್ನು ತೊಡೆದುಹಾಕುತ್ತಾನೆ ಎಂದು ಅನೇಕ ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ.
* ಮಾನಸಿಕ ಅಸ್ವಸ್ಥತೆಗಳು ಮತ್ತು ದೈಹಿಕ ಸಮಸ್ಯೆ ದೂರಾಗಿ ಆರೋಗ್ಯ ಪ್ರಾಪ್ತಿಯಾಗುವುದು ಎಂದು ಹೇಳಲಾಗುವುದು.
ಈ ದಿನ ಯಾವ ಪರಿಹಾರ ಮಾಡಿದರೆ ಒಳ್ಳೆಯದು?
ಆಲದ ಮರಕ್ಕೆ ಪೂಜೆಯನ್ನು ಮಾಡಿ
ಹಿಂದೂ ನಂಬಿಕೆಗಳ ಪ್ರಕಾರ, ತ್ರಿಮೂರ್ತಿಗಳು ಆಲದ ಮರದಲ್ಲಿ ವಾಸಿಸುತ್ತಾರೆ ಎಂದು ನಂಬಲಾಗಿದೆ. ಈ ದಿನ ಆಲದ ಮರಕ್ಕೆ ನೀರು ಹಾಕಿ ಪ್ರದಕ್ಷಣೆ ಬಂದರೆ ಒಳ್ಳೆಯದಾಗುವುದು.
ಶನಿದೋಷವಿದ್ದರೆ
* ಶನಿ ದೋಷದಿಂದ ಬಳಲುತ್ತಿರುವ ವ್ಯಕ್ತಿಯು ವೈಶಾಖ ಪೂರ್ಣಿಮೆಯ ದಿನದಂದು ಆಲದ ಮರದ ಬುಡದಲ್ಲಿ ಸಾಸಿವೆ ಎಣ್ಣೆಯ ದೀಪ ಬೆಳಗುವುದರಿಂದ ಶನಿದೋಷ ಕಡಿಮೆಯಾಗುವುದು.
* ಈ ದಿನ ಹನುಮಾನ್ ಚಾಲೀಸ ಪಠಿಸಿ
* ಕಪ್ಪು ನಾಯಿಗೆ ಆಹಾರವನ್ನು ಹಾಕಿ
* ನಿಮ್ಮ ಶಕ್ತಿಗೆ ತಕ್ಕಂತೆ ದಾನ ಧರ್ಮ ಮಾಡಿ
* ಈ ದಿನ ಮಾಂಸ, ಮದ್ಯ ಸೇವನೆ ಮಾಡಬಾರದು
ಹೀಗೆ ಮಾಡಿದರೆ ಶನಿಯ ಕೃಪೆಗೆ ಪಾತ್ರರಾಗಬಹುದು.



Click it and Unblock the Notifications

