Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗಣೇಶನ ರೂಪ ಈ ಒಳಾರ್ಥಗಳನ್ನು ಹೊಂದಿದೆ ಗೊತ್ತಾ?
ಯಾವುದೇ ಪೂಜೆ ಮಾಡುವ ಮುನ್ನ ಗಣಪನ ಪೂಜೆ ಮಾಡುತ್ತೇವೆ. ಗಣಪತಿ ಎಂದ ತಕ್ಷಣ ನಮ್ಮ ಕಣ್ಮುಂದೆ ಕಂಡು ಬರುವ ಮೂರ್ತಿಯೆಂದರೆ ಆನೆಯ ಸೊಂಡಲಿನ, ಡೊಳ್ಳು ಹೊಟ್ಟೆಯ ಮುದ್ದಾದ, ದೈವಿಕವಾದ ರೂಪ. ಗಣೇಶನಿಗೆ ಏಕೆ ಆನೆಯ ರೂಪವಿದೆ ಎಂಬುವುದಕ್ಕೆ ಶಿವ ಪುರಾಣದಲ್ಲಿ ಕತೆಯಿದೆ. ಗಣೇಶನ ರೂಪಕ್ಕೆ ತುಂಬಾನೇ ಅರ್ಥ ಇದೆ. ಗಣೇಶನ ರೂಪ ಒಂದೊಂದು ಬದುಕಿನ ಅರ್ಥವನ್ನು ಹೇಳುತ್ತದೆ, ಅದರ ಬಗ್ಗೆ ನೋಡುವುದಾದರೆ.....

* ದೊಡ್ಡ ತಲೆ: ಗಣೇಶ ದೊಡ್ಡ ತಲೆಯನ್ನು ಹೊಂದಿದ್ದಾನೆ. ದೊಡ್ಡ ತಲೆಯೆಂದರೆ ದೊಡ್ಡದಾಗಿ ಚಿಂತೆ ಮಾಡು ಎಂಬುವುದಾಗಿದೆ. ದೊಡ್ಡ ಚಿಂತನೆ ಬದುಕನ್ನು ತುಂಬಾ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ.
* ದೊಡ್ಡ ಕಿವಿ: ಗಣೇಶ ದೊಡ್ಡ ಕಿವಿಗಳನ್ನು ಹೊಂದಿದ್ದಾನೆ. ದೊಡ್ಡ ಕಿವಿ ಚೆನ್ನಾಗಿ ಕೇಳಿಸಿಕೊಳ್ಳಬೇಕು ಎಂಬ ಅರ್ಥವನ್ನು ಸೂಚಿಸುತ್ತದೆ. ಯಾರು ಏನೇ ಹೇಳಲಿ ಚೆನ್ನಾಗಿ ಕೇಳಿಸಿಕೊಳ್ಳಬೇಕು. ಅರ್ಧಂಬರ್ಧ ಕೇಳಿಸಿಕೊಂಡರೆ ತಪ್ಪು ಕಲ್ಪನೆ ಹೆಚ್ಚಾಗುತ್ತದೆ. ಆದ್ದರಿಂದ ಯಾರು ಏನೇ ಹೇಳಲಿ ಪೂರ್ಣವಾಗಿ ಕೇಳಿಸಿಕೊಳ್ಳುವ ಗುಣವನ್ನು ಹೊಂದಿರಬೇಕು.
* ಚಿಕ್ಕ ಕಣ್ಣುಗಳು: ದೊಡ್ಡ ತಲೆಗೆ ಚಿಕ್ಕ ಕಣ್ಣುಗಳು. ಈ ಚಿಕ್ಕ ಕಣ್ಣುಗಳು ಏಕಾಗ್ರತೆಯನ್ನು ಸೂಚಿಸುತ್ತದೆ. ನಾವು ನಮ್ಮ ಕೆಲಸವನ್ನು ಏಕಾಗ್ರತೆಯಿಂದ ಮಾಡಿದರೆ ಅದರಿಂದ ಉತ್ತಮ ಪ್ರಯೋಜನ ಪಡೆಯಬಹುದು.
* ಚಿಕ್ಕ ಬಾಯಿ: ಚಿಕ್ಕ ಬಾಯಿ ಸ್ವಲ್ಪ ಮಾತನಾಡಿ ಎಂಬುವುದನ್ನು ಸೂಚಿಸುತ್ತದೆ.
* ದಂತಗಳು: ಗಣೇಶನಿಗೆ ಎರಡು ದಂತಗಳು, ಒಂದು ದಂತ ಒಳ್ಳೆಯದನ್ನು ಸೂಚಿಸುತ್ತದೆ. ಅದು ಒಳ್ಳೆಯದನ್ನು ಸೂಚಿಸುತ್ತದೆ. ಮತ್ತೊಂದು ದಂತ ಮುರಿದಿರುತ್ತದೆ, ಅದು ನಮ್ಮಲ್ಲಿರುವ ಅಹಂ ಮುರಿದಿರಬೇಕು ಎಂಬುವುದನ್ನು ಸೂಚಿಸುತ್ತದೆ. ಒಳ್ಳೆಯ ಗುಣಗಳನ್ನು ಹೊಂದಬೇಕು, ಕೆಟ್ಟ ಗುಣವನ್ನು ಮುರಿಯಬೇಕು ಎಂಬುವುದನ್ನು ಸೂಚಿಸುತ್ತದೆ.
ಉದ್ದ ಸೊಂಡಿಲು: ಉದ್ದದ ಸೊಂಡಿಲು ಸ್ವೀಕರಿಸುವ ಗುಣವನ್ನು ಹೊಂದು ಸೂಚಿಸುತ್ತದೆ.
ದೊಡ್ಡ ಹೊಟ್ಟೆ: ಒಳ್ಳೆಯದು, ಕೆಟ್ಟದು ಎರಡನ್ನೂ ಜೀರ್ಣಸುವ ಶಕ್ತಿ ಹೊಂದಬೇಕು ಎಂಬುವುದನ್ನು ಸೂಚಿಸುತ್ತದೆ
ನಾಲ್ಕು ಕೈಗಳು: ನಾಲ್ಕು ಗುಣಗಳನ್ನು ಸೂಚಿಸುತ್ತದೆ: ಬುದ್ಧಿವಂತಿಕೆ, ಒಳ್ಳೆಯ ಆಲೋಚನೆ, ನಿಸ್ವಾರ್ಥ, ಆತ್ಮಸಾಕ್ಷಿಯನ್ನು ಪ್ರತಿನಿಧಿಸುತ್ತದೆ.
ಗಣೇಶ ಒಂದು ಕಾಲನ್ನು ಮತ್ತೊಂದು ಕಾಲಿನ ಮೇಲೆ ಹಾಕಿ ಕೂತಿರುವ ಭಂಗಿಯಲ್ಲಿ ಇರುತ್ತಾನೆ. ಇದು ಲೌಕಿಕ ಹಾಗೂ ಅಲೌಕಿಕ ಬದುಕು ಎರಡೂ ಮುಖ್ಯ ಎಂದು ಹೇಳಲಾಗುವುದು.
ಮನೆಯಲ್ಲಿ ಎಷ್ಟು ಗಣೇಶನ ಮೂರ್ತಿಯನ್ನು ಇಡಬಹುದು
ಮನೆಯಲ್ಲಿ ಒಂದು ಗಣೇಶನ ಮೂರ್ತಿ ಇದ್ದರೆ ಒಳ್ಳೆಯದು, ಒಂದಕ್ಕಿಂತ ಹೆಚ್ಚಿನ ಗಣೇಶನ ಮೂರ್ತಿಗಳನ್ನು ಇಟ್ಟರೆ ಪಾಸಿಟಿವ್ ಎನರ್ಜಿ ಹಂಚಿಹೋಗುವುದು, ಆದ್ದರಿಂದ ಒಂದೇ ಗಣೇಶನ ಕೂರಿಸಬೇಕು ಎಂದು ಹೇಳಲಾಗುವುದು.



Click it and Unblock the Notifications
