Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಾಲದಿಂದ ಮುಕ್ತರಾಗಲು ಶ್ರಾವಣ ಶುಕ್ರವಾರ ಲಕ್ಷ್ಮಿ ಪೂಜೆ ಮಾಡುವಾಗ ಈ ಪರಿಹಾರ ಮಾಡಿದರೆ ಒಳ್ಳೆಯದು
ಶುಕ್ರವಾರ ಲಕ್ಷ್ಮಿ ಪೂಜೆಗೆ ವಿಶೇಷವಾದ ದಿನ, ಅದರಲ್ಲೂ ಶ್ರಾವಣ ಶುಕ್ರವಾರ ಲಕ್ಷ್ಮಿ ಪೂಜೆ ಮತ್ತಷ್ಟು ವಿಶೇಷವಾಗಿರುತ್ತದೆ. ಈ ದಿನ ಲಕ್ಷ್ಮಿಯನ್ನು ಆರಾಧನೆ ಮಾಡುವಾಗ ನಿಮ್ಮ ಜೀವನದಲ್ಲಿ ಏನು ಸಮಸ್ಯೆಯಿದೆಯೋ ಅದಕ್ಕೆ ತಕ್ಕಂತೆ ಪರಿಹಾರ ಮಾಡಿದರೆ ಆ ಸಮಸ್ಯೆ ಬೇಗನೆ ದೂರಾಗಲಿದೆ. ನಾವಿಲ್ಲಿ ಶ್ರಾವಣ ಶುಕ್ರವಾರ ಲಕ್ಷ್ಮಿ ಆರಾಧನೆ ಮಾಡುವಾಗ ಹಣದ ಸಮಸ್ಯೆ, ವೈವಾಹಿಕ ಜೀವನದ ಸಮಸ್ಯೆ, ವಿವಾಹ ತಡವಾಗುವುದು ಮುಂತಾದ ಸಮಸ್ಯೆಗೆ ಏನು ಪರಿಹಾರ ಮಾಡಿದರೆ ಒಳ್ಳೆಯದು ಎಂದು ಹೇಳಲಾಗಿದೆ ನೋಡಿ:

ಹಣದ ಸಮಸ್ಯೆಗೆ ಪರಿಹಾರ
ಲಕ್ಷ್ಮಿ ಕೃಪೆ ಇದ್ದರೆ ಸಾಲದಿಂದ ಮುಕ್ತರಾಗಿ ಒಳ್ಳೆಯ ಬದುಕು ನಡೆಸಬಹುದು, ಸಾಲದಿಂದ ಮುಕ್ತರಾಗಲು ಲಕ್ಷ್ಮಿಗೆ ಈ ಪರಿಹಾರ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು:
* ಶ್ರಾವಣ ಶುಕ್ರವಾರದಂದು ಸಂಜೆ ಪೂಜೆ ಮಾಡುವಾಗ ಕೆಂಪು ಬಟ್ಟೆಯಲ್ಲಿ ಹಸಿರು ಏಲಕ್ಕಿ ಕಟ್ಟಿ ಲಕ್ಷ್ಮಿಯ ಮೂರ್ತಿಯ ಮುಂದಿಟ್ಟು ಪೂಜಿಸಬೇಕು, ನಂತರ ಆರತಿ ಬೆಳಗಿದ ನಂತರ ಅದನ್ನು ಪರ್ಸ್ ಅಥವಾ ನಮ್ಮ ಕಪಾಟಿನಲ್ಲಿಟ್ಟರೆ ಒಳ್ಳೆಯದು ಎಂದು ಹೇಳಲಾಗುವುದು. ಹೀಗೆ ಮಾಡುವುದರಿಂದ ಹಣಕ್ಕೆ ಸಂಬಂಧಿಸಿದ ದೋಷ ನಿವಾರಣೆಯಾಗಲಿದೆ ಎಂಬ ನಂಬಿಕೆ ಇದೆ.
ಶ್ರಾವಣ ಶುಕ್ರವಾರ ಶಿವಲಿಂಗಕ್ಕೆ ಅಭಿಷೇಕ ಮಾಡಿಸಿ
* ಶ್ರಾವಣ ಮಾಸ ಶಿವನಿಗೆ ಮೀಸಲಾದ ತಿಂಗಳು. ನೀವು ಶ್ರಾವಣ ಶುಕ್ರವಾರ 'ಓಂ ನಮಃ ಶಿವಾಯ' ಮಂತ್ರ ಪಠಿಸುತ್ತಾ ಜಲಾಭಿಷೇಕ ಮಾಡಿ.
* ಲಕ್ಷ್ಮಿ ಮಂತ್ರ ಪಠಿಸಿ
ಮದುವೆಗೆ ಅಡೆತಡೆ ಇದ್ದರೆ
ಈ ದಿನ ನೀವು ಶಿವನಿಗೆ ಪಂಚಾಮೃತ ಅರ್ಪಿಸಿ ಅದರ ಜೊತೆಗೆ ಒಂದು ರೂಪಾಯಿ ನಾಣ್ಯವನ್ನು ಇಡಿ. ನಂತರ ಆ ನಾಣ್ಯವನ್ನು ನಿಮ್ಮ ಬಳಿ ಇರಿಸಿ,ಹೀಗೆ ಮಾಡುವುದರಿಂದ ವಿವಾಹದಲ್ಲಿರುವ ಅಡೆತಡೆ ದೂರಾಗಿ ಮನೆಯಲ್ಲಿ ಶುಭಕಾರ್ಯ ನಡೆಯುವುದು.
ಸಂಪತ್ತು ವೃದ್ಧಿಗೆ
ಶ್ರಾವಣ ಶುಕ್ರವಾರದಂದು ಅಕ್ಕಿ ಪಾಯಸವನ್ನು ಲಕ್ಷ್ಮಿಗೆ ನೈವೇದ್ಯವನ್ನಾಗಿ ಅರ್ಪಿಸಿ.
* ಶ್ರಾವಣ ಶುಕ್ರವಾರ 8 ಚಿಕ್ಕ ಹೆಣ್ಮಕ್ಕಳನ್ನು ಮನೆಗೆ ಕರೆದು ಅವರನ್ನು ಪೂಜಿಸಿ ಅವರಿಗೆ ಹೂವುಗಳು , ಸಿಹಿ ತಿಂಡಿಗಳು, ಬಟ್ಟೆಗಳನ್ನು ದಾನ ಮಾಡಿ.
ಇದರಿಂದ ಲಕ್ಷ್ಮಿ ಕೃಪೆ ಸಿಗುವುದು ಎಂಬ ನಂಬಿಕೆ ಇದೆ.
ಶುಕ್ರವಾರ ಉಪವಾಸ
ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನದ ಉಪವಾಸವು ಸಹ ಪ್ರಯೋಜನಕಾರಿಯಾಗಿದೆ. ಸಾಧ್ಯವಾದರೆ ಈ ದಿನ ಕಠಿಣ ಉಪವಾಸ ನಿಯಮ ಆಚರಿಸಿ. ಇದರಿಂದ ಲಕ್ಷ್ಮಿ ಕೃಪೆಗೆ ಪಾತ್ರರಾಗಬಹುದು.
ಅನ್ನವನ್ನು ವ್ಯರ್ಥ ಮಾಡಬೇಡಿ
ಧಾರ್ಮಿಕ ನಂಬಿಕೆಗಳ ಪ್ರಕಾರ ಆಹಾರವು ಲಕ್ಷ್ಮಿಯಾಗಿದೆ, ಆದ್ದರಿಂದ ಅನ್ನವನ್ನು ವ್ಯರ್ಥ ಮಾಡಬಾರದು. ಅಲ್ಲದೆ ಶುಕ್ರವಾರ ನಿರ್ಗತಿಕರಿಗೆ ಆಹಾರ ದಾನ ಮಾಡಿ.
ಶುಕ್ರವಾರ ಈ ಪರಿಹಾರ ಕೂಡ ಮಾಡಿದರೆ ಒಳ್ಳೆಯದು:
* ಶುಕ್ರವಾರ ದೀಪವನ್ನು ಹಚ್ಚಿ 11 ದಿನಗಳ ಕಾಲ ಅಖಂಡ ಜ್ಯೋತಿಯನ್ನು ಬೆಳಗಿಸಿ. 11ನೇ ದಿನ 11 ಹೆಣ್ಣು ಮಕ್ಕಳಿಗೆ ತಾಯಿಯ ಹೆಸರಿನಲ್ಲಿ ಊಟ ಹಾಕಬೇಕು. ಇದರಿಂದ ಹಣದ ಸಮಸ್ಯೆ ದೂರಾಗಲಿದೆ
* ಪ್ರತಿ ಶುಕ್ರವಾರದಂದು ದಕ್ಷಿಣಾವರ್ತಿ ಶಂಖದಲ್ಲಿ ನೀರು ತುಂಬಿ ವಿಷ್ಣುವಿಗೆ ಅಭಿಷೇಕ ಮಾಡುವುದರಿಂದ ತಾಯಿ ಲಕ್ಷ್ಮಿ ಶೀಘ್ರವಾಗಿ ಪ್ರಸನ್ನಳಾಗುತ್ತಾಳೆ.



Click it and Unblock the Notifications
