Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಜುಲೈ 21ಕ್ಕೆ ಶ್ರಾವಣ ಮಾಸದ ಮೊದಲ ವಿನಾಯಕ ಚತುರ್ಥಿ: ಹೀಗೆ ಆರಾಧಿಸಿದರೆ ವಿಘ್ನೆಗಳೆಲ್ಲಾ ದೂರ
ಶ್ರಾವಣ ಮಾಸದ ಮೊದಲ ವಿನಾಯಕ ಚತುರ್ಥಿಯನ್ನು ಜುಲೈ 21ರಂದು ಆಚರಿಸಲಾಗುವುದು. ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಈ ವಿನಾಯಕ ಚತುರ್ಥಿ ಬಂದಿದ್ದು ಈ ದಿನ ಸಿದ್ಧಿ ವಿನಾಯಕನನ್ನು ಶಾಸ್ತ್ರೋಕ್ತವಾಗಿ ಪೂಜಿಸಲಾಗುವುದು. ಶ್ರಾವಣದಲ್ಲಿ ಆಚರಿಸುವ ವಿನಾಯಕ ಚತುರ್ಥಿಯ ಮಹತ್ವ ಹಾಗೂ ಪೂಜಾ ಸಮಯ, ಪೂಜಾ ವಿಧಿಗಳ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ:

ಶ್ರಾವಣ ವಿನಾಯಕ ಚತುರ್ಥಿ
ಹಿಂದೂ ಪಂಚಾಂಗದ ಪ್ರಕಾರ ಚತುರ್ಥಿ ತಿಥಿಯು ಜುಲೈ 21 ರಂದು ಬೆಳಗ್ಗೆ 06.58 ರಿಂದ ಪ್ರಾರಂಭವಾಗಲಿದೆ, ಉದಯತಿಥಿಯ ಆಧಾರದ ಮೇಲೆ ಜುಲೈ 21 ರ ಶುಕ್ರವಾರದಂದು ಶ್ರಾವಣದ ದಿನದಂದು ಮೊದಲ ವಿನಾಯಕ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ದಿನ ಉಪವಾಸವಿದ್ದು ವಿನಾಯಕನ್ನು ಆರಾಧಿಸುವುದರಿಂದ ಬಯಸಿದ್ದು ನೆರವೇರಲಿದೆ ಎಂಬ ನಂಬಿಕೆ.
ವಿನಾಯಕ ಚತುರ್ಥಿಯ ಆರಾಧನೆಗೆ ಮಂಗಳಕರ ಸಮಯ
ಜುಲೈ 21,ಈ ದಿನ ಗಣೇಶನ ಪೂಜೆಗೆ ಶುಭ ಮುಹೂರ್ತವು ಬೆಳಗ್ಗೆ 11.05 ರಿಂದ ಮಧ್ಯಾಹ್ನ 01.50 ರವರೆಗೆ ಇರುತ್ತದೆ.
ಪೂಜೆಗೆ ಎರಡು ಗಂಟೆ 45 ನಿಮಿಷಗಳಿವೆ.
ವಿನಾಯಕ ಚತುರ್ಥಿಯಂದು ರವಿಯೋಗ
ಶ್ರಾವಣದಲ್ಲಿ ಮೊದಲ ವಿನಾಯಕ ಚತುರ್ಥಿಯಂದು ಮಧ್ಯಾಹ್ನ 01.58 ರಿಂದ ರವಿ ಯೋಗವು ಪ್ರಾರಂಭವಾಗಲಿದ್ದು, ಜುಲೈ 22 ರ ಭಾನುವಾರದಂದು 05.37 ರವರೆಗೆ ಈ ಯೋಗವು ಮುಂದುವರಿಯುತ್ತದೆ. ರವಿ ಯೋಗವು ಎಲ್ಲಾ ಶುಭ ಕಾರ್ಯಗಳಿಗೆ ಶುಭ ಯೋಗವಾಗಿದೆ.
ಶುಭ ಕಾರ್ಯಗಳಿಗೆ ಈ ದಿನ ಅನೇಕ ಶುಭ ಯೋಗ ಏರ್ಪಟ್ಟಿದೆ
ಈ ದಿನ, ಲಾಭ-ಪ್ರಗತಿಗಾಗಿ ನೀವು ಈ ಶುಭಯೋಗದಲ್ಲಿ ಏನಾದರೂ ಹೊಸ ಕಾರ್ಯಕ್ಕೆ ಕೈ ಹಾಕಿದರೆ ಒಳ್ಳೆಯದು. ಬೆಳಗ್ಗೆ 10.44ರಿಂದ ಮಧ್ಯಾಹ್ನ 12.27ರವರೆಗೆ ಲಾಭ-ಪ್ರಗತಿ ಮುಹೂರ್ತವಿದೆ. ಇದರ ನಂತರ ಅಮೃತ-ಅತ್ಯುತ್ತಮ ಮುಹೂರ್ತವು ಮಧ್ಯಾಹ್ನ 12:27 ರಿಂದ 02:10 ರವರೆಗೆ ಇರಲಿದೆ. ಮತ್ತೊಂದೆಡೆ ರವಿ ಯೋಗದ ಬಗ್ಗೆ ಹೇಳುವುದಾದರೆ ಜುಲೈ 21 ರಂದು ಮಧ್ಯಾಹ್ನ 1.58 ರಿಂದ ಜುಲೈ 22 ರ ಬೆಳಗ್ಗೆ 5.37 ರವರೆಗೆ ರವಿ ಯೋಗ ಇರುತ್ತದೆ. ಈ ಸಮಯದಲ್ಲಿ ಯಾವುದೇ ರೀತಿಯ ಶುಭ ಕಾರ್ಯವನ್ನು ಮಾಡುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ವಿನಾಯಕ ಚತುರ್ಥಿ ಪೂಜಾ ವಿಧಾನ
ವಿನಾಯಕ ಚತುರ್ಥಿಯ ದಿನದಂದು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಗಣೇಶನನ್ನು ಪ್ರಾರ್ಥಿಸಿ, ಸಂಕಲ್ಪ ತೆಗೆದುಕೊಳ್ಳಿ.
* ನಂತರ ವಿಧಿ ವಿಧಾನಗಳ ಮೂಲಕ ಗಣಪತಿಯನ್ನು ಆರಾಧಿಸಿ. ಗನೇಶನಿಗೆ ಗರಿಕೆಯನ್ನು ಕಡ್ಡಾಯವಾಗಿ ಅರ್ಪಿಸಿ.
* ಲಡ್ಡುಗಳನ್ನು ನೈವೇದ್ಯವನ್ನಾಗಿ ಅರ್ಪಿಸಿ.



Click it and Unblock the Notifications
