Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಆಗಸ್ಟ್ 17ರಿಂದ ನಿಜ ಶ್ರಾವಣ ಶುರು: ಶಿವಕೃಪೆಗಾಗಿ ಮಾಡಬೇಕಾದ 5 ಕಾರ್ಯಗಳು
ಈ ವರ್ಷ ಶ್ರಾವಣ ಬರೋಬರಿ ಎರಡು ತಿಂಗಳು ಬಂದಿದೆ, ಆದರೆ ಈ ಮೊದಲು ಬಂದಿರುವುದು ಶ್ರಾವಣ ಅಧಿಕ ಮಾಸ, ಆಗಸ್ಟ್ 17ರಿಂದ ಶ್ರಾವಣ ಶುರು. 3 ವರ್ಷಕ್ಕೊಮ್ಮೆ ಅಧಿಕ ಮಾಸ ಇರುತ್ತದೆ. ಈ ವರ್ಷ ಶ್ರಾವಣ ಅಧಿಕ ಮಾಸ ಬಂದಿದೆ. ಯಾವ ಮಾಸದ ಮೊದಲು ಅಧಿಕ ಮಾಸ ಬರುವುದೋ ಆ ಹೆಸರನ್ನು ನೀಡಲಾಗುವುದು, ಶ್ರಾವಣ ಅಧಿಕ ಮಾಸ ಜುಲೈ 18ರಿಂದ ಆಗಸ್ಟ್ 16ರವರೆಗೆ ಇತ್ತು. ಇದೀಗ ನಿಜ ಶ್ರಾವಣ ಮಾಸ ಆಗಸ್ಟ್ 17ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 15ರವರೆಗೆ ಇರಲಿದೆ.

ಅಧಿಕ ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವುದಿಲ್ಲ
ಸಾಮಾನ್ಯವಾಗಿ ಅಧಿಕ ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವುದಿಲ್ಲ, ಆದರೆ ಪೂಜಾ ಕಾರ್ಯಗಳನ್ನು ಮಾಡಲಾಗುವುದು. ಅಧಿಕ ಮಾಸದಲ್ಲಿ ಪ್ರತಿನಿತ್ಯ ಶ್ರೀವಿಷ್ಣುವಿನ ನಾಮಸ್ಮರಣೆ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ದೇವರ ಪೂಜೆಗಳನ್ನು ಮಾಡಲಾಗುವುದು, ಆದರೆ ಇದುವರೆಗೆ ಹೋಗದೇ ಇರುವ ದೇವಾಲಯಕ್ಕೆ ಈ ಅವಧಿಯಲ್ಲಿ ಹೋಗಬಾರದು. ಗೃಹ ಪ್ರವೇಶ, ಸಂನ್ಯಾಸಗ್ರಹಣ, ಗ್ರಹಣದೀಕ್ಷೆ, ವಿವಾಹ, ಉಪನಯನ , ನಾಮಕರಣ ಈ ರೀತಿಯ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ.
ಶ್ರಾವಣದಲ್ಲಿ ಪೂಜಾ ಕಾರ್ಯಗಳನ್ನು ಮಾತ್ರವಲ್ಲ ಶುಭ ಕಾರ್ಯಗಳನ್ನು ಮಾಡಲಾಗುವುದು.
ಶ್ರಾವಣದಲ್ಲಿ ಈ ದಿನಾಂಕಗಳು ತುಂಬಾನೇ ಮುಖ್ಯವಾಗಿದೆ
ಶ್ರಾವಣ ಸೋಮವಾರ
ಆಗಸ್ಟ್ 21
ಆಗಸ್ಟ್ 28
ಸೆಪ್ಟೆಂಬರ್ 4
ಸೆಪ್ಟೆಂಬರ್ 11
ಮಂಗಳಗೌರಿ ವ್ರತ
ಆಗಸ್ಟ್ 22
ಆಗಸ್ಟ್ 29
ಸೆಪ್ಟೆಂಬರ್ 5
ಸೆಪ್ಟೆಂಬರ್ 12
ಶ್ರಾವಣದಲ್ಲಿ ಈ 5 ಕಾರ್ಯಗಳನ್ನು ಮಾಡಿದರೆ ಒಳ್ಳೆಯದು
* ಪ್ರತಿ ಶ್ರಾವಣ ಸೋಮವಾರ ಉಪವಾಸವಿದ್ದು ವ್ರತ ಮಾಡಿದರೆ ಒಳಿತಾಗುವುದು
* ಶ್ರಾವಣ ಸೋಮವಾರ ಶಿವನ ದೇವಾಲಯಕ್ಕೆ ಭೇಟಿ ನೀಡಿ ಅಭಿಷೇಕ ಮಾಡಿಸಿ
* ಶಿವನಿಗೆ ಬಿಲ್ವೆ ಪತ್ರೆ ಅರ್ಪಿಸಬೇಕು
* ಈ ಸಮಯದಲ್ಲಿ ಮಹಾ ಮೃತ್ಯುಂಜಯ ಮಂತ್ರ, ಲಿಂಗಾಷ್ಟಕಂ, ಶಿವನಾಮಸ್ಮರಣೆ ಮಾಡಬೇಕು
* ಸಾಧ್ಯವಾದರೆ ಇಡೀ ತಿಂಗಳು ಒಂದು ಹೊತ್ತು ಮಾತ್ರ ಆಹಾರ ಸೇವಿಸಿ ಉಳಿದ ಸಮಯದಲ್ಲಿ ಹಣ್ಣುಗಳನ್ನು ಸೇವಿಸಿ ಉಪವಾಸ ಮಾಡಿದರೆ ಒಳ್ಳೆಯದು
ಶ್ರಾವಣ ಮಾಸ ಆಚರಣೆ ಮಾಡುವುದರಿಂದ ಶಿವಕೃಪೆಯಿಂದ ಕಷ್ಟಗಳು ದೂರಾಗುವುದು, ವೈವಾಹಿಕ ಜೀವನದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅವೆಲ್ಲಾ ದೂರಾಗುವುದು ಎಂಬುವುದು ಶಿವನ ಭಕ್ತರ ನಂಬಿಕೆಯಾಗಿದೆ.



Click it and Unblock the Notifications