Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಂಗಳ ಗೌರಿ ವ್ರತ: ಸಂಜೆ ಪೂಜೆಗೆ ಸಿದ್ಧತೆ ಮಾಡುವಾಗ ಈ ವಿಚಾರಗಳ ಬಗ್ಗೆ ಗಮನವಿರಲಿ
ಶ್ರಾವಣ ಮಾಸದ ಪ್ರತಿಮಂಗಳವಾರ ನವ ವಿವಾಹಿತ ಹೆಣ್ಮಕ್ಕಳು ಅಥವಾ ಮದುವೆಯಾಗಿ ಇನ್ನೂ ಐದು ವರ್ಷ ಪೂರ್ಣವಾಗದ ಹೆಣ್ಮಕ್ಕಳು ಮಂಗಳ ಗೌರಿ ವ್ರತ ಆಚರಿಸುತ್ತಾರೆ.
ಗಂಡನ ಆರೋಗ್ಯ, ಶ್ರೇಯಸ್ಸು, ಮನೆಯಲ್ಲಿ ಸಂಪತ್ತು ಹೆಚ್ಚಲು ಮಂಗಳ ಗೌರಿ ವ್ರತವನ್ನು ಮಾಡುತ್ತಾರೆ. ಅವಿವಾಹಿತ ಹುಡುಗಿಯರು ಸಹ ಒಳ್ಳೆಯ ಗಂಡನನ್ನು ಪಡೆಯಲು ಈ ಉಪವಾಸವನ್ನು ಆಚರಿಸುತ್ತಾರೆ. ಈ ವ್ರತವನ್ನು ಆಚರಿಸುವುದರಿಂದ ಪತಿ-ಪತ್ನಿ ಬಾಂಧವ್ಯ ಚೆನ್ನಾಗಿರುತ್ತದೆ. ಅಲ್ಲದೆ ಮಕ್ಕಳಿಲ್ಲದವರು ಮಂಗಳಗೌರಿ ವ್ರತವನ್ನು ಆಚರಿಸಿದರೆ ಸಂತಾನ ಭಾಗ್ಯ ಸಿಗುತ್ತದೆ ನಂಬಿಕೆ ಇದೆ.

ಗೌರಿ ಪೂಜೆಗೆ ಸಿದ್ಧತೆ ಮಾಡುವಾಗ ಈ 7 ವಿಚಾರಗಳನ್ನು ಮರೆಯಬೇಡಿ:
1. ಮೊದಲು ಮಂಟಪ ಮಾಡಬೇಕು
2. ಮಾವಿನ ಎಲೆಗಳಿಂದ ತೋರಣ ಕಟ್ಟಿ ಅಲಂಕರಿಸಬೇಕು
3. ಬೆಳ್ಳಿ ಅಥವಾ ತಾಮ್ರದ ತಟ್ಟೆಯಲ್ಲಿ ಅಕ್ಕಿ ಹಾಕಿ.
4. ಅದರ ಮೇಲೆ ಚಿನ್ನ, ಬೆಳ್ಳಿ ಅಥವಾ ತಾಮ್ರದ ಕೋಟ್ ಇರುವ ಮಂಗಳ ಗೌರಿ ಮುಖವನ್ನು ಪ್ರತಿಷ್ಠಾಪಿಸಿ
5. ಈ ರೀತಿಯ ಪ್ರತಿಮೆ ನಿಮ್ಮ ಬಳಿ ಇರದಿದ್ದರೆ ನೀವು ಅರಿಶಿಣದಿಂದಾದರೂ ಮಂಗಳಗೌರಿ ಮುಖ ಮಾಡಿ ಪ್ರತಿಷ್ಠಾಪಿಸಬಹುದು.
6. ದೇವಿಗೆ ಎಣ್ಣೆ ಸ್ನಾನ ಮಾಡಿ
7. ಅಕ್ಕಿ ಹಿಟ್ಟಿನಿಂದ ಮಾಡಿದ ಹಣತೆಯಲ್ಲಿ ತುಪ್ಪ ಹಾಕಿ ದೀಪ ಹಚ್ಚಬೇಕು.
ಮಂಗಳ ಗೌರಿ ವ್ರತ ಪೂಜೆ ವಿಧಾನ
- ಶ್ರಾವಣ ಮಂಗಳವಾರ ಹೆಣ್ಮಕ್ಕಳು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಸಾಂಪ್ರದಾಯಕ ಉಡುಗೆ ತೊಟ್ಟು ಅಲಂಕಾರ ಮಾಡಿ ಲಕ್ಷ್ಮಿ ಕಳೆಯಿಂದ ಕಂಗೊಳಿಸುತ್ತಾರೆ.
- ಇದರ ನಂತರ, ಉಪವಾಸದ ಪ್ರತಿಜ್ಞೆ ಮಾಡಿ ಮತ್ತು ಪೂಜೆಗಾಗಿ ಪೀಠದ ಮೇಲೆ ಕೆಂಪು ಬಣ್ಣದ ಬಟ್ಟೆಯನ್ನು ಹರಡಬೇಕು.
- ನಂತರ ಮಂಗಳ ಗೌರಿ ಮುಖವನ್ನು ಪ್ರತಿಷ್ಠಾಪಿಸಿ, ಸೀರೆಯನ್ನು ಉಡಿಸಿ.
- ಪಾರ್ವತಿಯನ್ನು ಹೂ, ಆಭರಣಗಳಿಂದ ಅಲಂಕರಿಸಿ.
- ನಂತರ ತುಪ್ಪದ ದೀಪವನ್ನು ಹಚ್ಚಿ ಆರತಿ ಮಾಡಿ.
- ಪೂಜೆಗೆ ಇಡುವ ಅಡಿಕೆ , ವೀಳ್ಯದೆಲೆ, ಲವಂಗ, ಏಲಕ್ಕಿ, ಹಣ್ಣು,ಲಡ್ಡು ಹಣ್ಣುಗಳು, ಸಿಹಿ ಪದಾರ್ಥಗಳು ಮತ್ತು ಬಳೆಗಳು ಹೀಗೆ ಎಲ್ಲಾ ಪದಾರ್ಥಗಳ ಸಂಖ್ಯೆಯು16 ಆಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.
- ಪೂಜೆ ಸಾಮಾಗ್ರಿಗಳನ್ನು ಅರ್ಪಿಸಿದ ನಂತರ ಮಂಗಳ ಗೌರಿ ಮಂತ್ರಗಳನ್ನು ಪಠಿಸಿ, ದೇವಿಗೆ ಆರತಿ ಎತ್ತಿ ಮಂತ್ರಗಳನ್ನು ಪಠಿಸಿ.
ಈ ಮಂತ್ರಗಳನ್ನು ಪಠಿಸಿ
ವಿಷ್ಣುಸ್ಮುತಿ ವಿಹೀನಾಂ ತು ಪೂಜಾ ಸ್ಯಾದಾಸುರೀ ಮತಾ |
ಗೃಹ್ಣಂತಿ ದೇವತಾ ನೈತಾಂ ತತ: ಸ್ಯಾದ್ ದೇಶ ವಿಪ್ಲವ: |
ಸಂಸ್ಕೃತೋ ಭಗವಾನ್ ವಿಷ್ಣು: ಸರ್ವಮಂಗಲಮಂಗಲ: |
ಸಮಸ್ತಾಭೀಷ್ಟದಾಯೀ ಸ್ಯಾತ್ ತೇನ ಧ್ಯೇಯೋ ಅಖಿಲೈ:ಜನೈ: |
ಆಗಮಾರ್ಥಂತು ದೇವಾನಾಂ ಗಮನಾರ್ಥಂ ತು ರಕ್ಷಸಾಂ |
ಕುರು ಘಂಟಾರವಂ ತತ್ರ ದೇವತಾಹ್ವಾನಲಾಂಛನಂ
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ |
ವಿದ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ |
ಸಂಗ್ರಾಮೇ ಸರ್ವಕಾರ್ಯೇಷು ವಿಘ್ನಸ್ತಸ್ಯ ನ ಜಾಯತೇ | ಗಣಪತಿ ಅನುಗ್ರಹಸಿದ್ಧಿರಸ್ತು|
ಕೊನೆಗೆ ದೇವಿಗೆ ಆರತಿ ಎತ್ತಿ ಮನೆಗೆ ಕರೆದು ಮುತ್ತೈದೆಯರಿಗೆ ತಾಂಬೂಲ ನೀಡಿ ಅವರ ಆಶೀರ್ವಾದ ಪಡೆಯಿರಿ.



Click it and Unblock the Notifications
