Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಶ್ರಾವಣ ಮಾಸ: ಕರ್ನಾಟಕದಲ್ಲಿರುವ ಟಾಪ್ 10 ಪ್ರಸಿದ್ಧ ಶಿವ ಕ್ಷೇತ್ರಗಳು
ಶ್ರಾವಣ ಮಾಸ ಎಂಬುವುದು ಶಿವನ ಆರಾಧನೆಗೆ ಮೀಸಲಾದ ತಿಂಗಳು. ಈ ವರ್ಷ ಶ್ರಾವಣ ಮಾಸ ಜುಲೈ 18ರಿಂದ ಪ್ರಾರಂಭವಾಗಲಿದೆ. ಈ ವರ್ಷ ಅಧಿಕ ಮಾಸ ಇರುವುದರಿಂದ ಸೆಪ್ಟೆಂಬರ್ 15ರವರೆಗೆ ಇರಲಿದೆ. ಈ ಸಮಯದಲ್ಲಿ ಶಿವನ ಕ್ಷೇತ್ರಗಳಿಗೆ ಭೇಟಿ ನೀಡಿದರೆ, ಶಿವನ ಆರಾಧನೆ ಮಾಡಿದರೆ ಪುಣ್ಯ ಫಲ ಸಿಗಲಿದೆ. ಈ ವರ್ಷ ಶ್ರಾವಣ ಮಾಸದಲ್ಲಿ ನೀವು ಕರ್ನಾಟಕದಲ್ಲಿರುವ ಪ್ರಸಿದ್ಧ ಶಿವ ದೇವಾಲಯಗಳಿಗೆ ಭೇಟಿ ನೀಡಲು ಬಯಸಿದರೆ ನಿಮಗಾಗಿ ಪ್ರಸಿದ್ಧ ಶಿವ ದೇವಾಲಯಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ:
ಪಟ್ಟದ ಕಲ್ಲಿನಲ್ಲಿರುವ ಮಲ್ಲಿಕಾರ್ಜುನ ದೇವಾಲಯ
ನೀವು ಈ ದೇವಾಲಯಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೋಗಬಹುದು, ರೈಲಿನಲ್ಲಿ ಹೋಗುವುದಾದರೆ ಬಾದಾಮಿ ರೈಲು ನಿದ್ದಾಣಕ್ಕೆ ಹೋಗಿ ಹೋಗಬಹುದು. ಈ ದೇವಾಲಯಕ್ಕೆ ಭೇಟಿ ನೀಡಿದರೆ ಮೋಕ್ಷ ಸಿಗುತ್ತದೆ, ಇಷ್ಟಾರ್ಥಗಳು ನೆರವೇರಲಿದೆ.

ಬನವಾಸಿಯಲ್ಲಿರುವ ಮಧುಕೇಶ್ವರಾ ದೇವಾಲಯ
ಕರ್ನಾಟಕದಲ್ಲಿರುವ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಮಹಾಶಿವರಾತ್ರಿ ಸಮಯದಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಶ್ರಾವಣ ಮಾಸದಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸುವುದರಿಂದ ಶ್ರಾವಣ ಮಾಸದಲ್ಲಿ ನೀವು ಇಲ್ಲಿಗೆ ಭೇಟಿ ನೀಡಬಹುದು. ಇಲ್ಲಿರುವ ನಂದಿಯ ಬಲಗಣ್ಣು ಶಿವನ ಮೂರ್ತಿಯನ್ನು ನೋಡಿದಂತೆ ಎಡಗಣ್ಣು ಪಾರ್ವತಿ ದೇವಿಯ ಮೂರ್ತಿಯನ್ನು ನೋಡಿದಂತಿದೆ. ಇಲ್ಲಿ ಅರ್ಧ ಕೆತ್ತಿದ ಗಣೇಶನ ಮೂರ್ತಿ ಕೂಡ ಇದೆ, ಇದರರ್ಧ ಭಾಗ ವಾರಾಣಸಿಯಲ್ಲಿದೆ ಎಂದು ನಂಬಲಾಗಿದೆ. ನೀವು ಶಿವಮೊಗ್ಗಕ್ಕೆ ಹೋಗಿ ಹೋಗಬಹುದು.
ಗದಗದ ಲಕ್ಕುಂಡಿಯಲ್ಲಿರುವ ನನ್ನೇಶ್ವರ ದೇವಾಲಯ
ಕರ್ನಾಟಕದ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಇದು ಒಂದಾಗಿದೆ. ಲಕ್ಕುಂಡಿ ಗ್ರಾಮದಲ್ಲಿದೆ. ಈ ದೇವಾಲಯಕ್ಕೆ ನೀವು ಕೆಎಸ್‌ಆರ್‌ಟಿಸಿ ಬಸ್ ಹಾಗೂ ರೈಲು ಮೂಲಕ ಹೋಗಬಹುದು. ಕರ್ನಾಟಕದಲ್ಲಿರುವ 7 ಮುಕ್ತಿ ಸ್ಥಳಗಳಲ್ಲಿ ಇದು ಕೂಡ ಒಂದಾಗಿದೆ. ಕರ್ನಾಟಕದಲ್ಲಿರುವ ಶಿವನ ಪಂಚ ಕ್ಷೇತ್ರಗಳಲ್ಲಿ ಈ ದೇವಾಲಯವೂ ಒಂದಾಗಿದೆ.
ಉಡುಪಿಯಲ್ಲಿರುವ ತುಳುವೇಶ್ವರಾ ದೇವಾಲಯ
ಉಡುಪಿಯ ಕುಂದಾಪುರದ ಬಸ್ರುರುನಲ್ಲಿ ಈ ತುಳುವೇಶ್ವರ ದೇವಾಲಯವಿದೆ. ಈ ದೇವಾಲಯದ ವಿಶೇಷವೆಂದರೆ ಇಲ್ಲಿ ಶಿವನ ದೇವಾಲಯ ಶಿಥಿಲವಾಗಿ ಹೋಗಿದ್ದರೂ, ಆಲದ ಮರವೇ ಶಿವಲಿಂಗದ ಸುತ್ತ ಆವರಿಸಿದೆ. ಈ ಆಲದ ಮರವೇ ಶಿವಲಿಂಗಕ್ಕೆ ಆಲಯದಂತಿದೆ. ಇಲ್ಲಿರುವ ನಂದಿ ವಿಗ್ರಹ ಕೂಡ ಅಪರೂಪದ ಕೆತ್ತನೆಯಿಂದ ಕೂಡಿದೆ.
ಶೃಂಗೇರಿಯಲ್ಲಿರುವ ವಿದ್ಯಾಶಂಕರ ದೇವಾಲಯ
ಶೃಂಗೇರಿಯಲ್ಲಿರುವ ಈ ದೇವಾಲಯ ಕೂಡ ಅತ್ಯಂತ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಒಂದಾಗಿದ್ದು, ನೀವು ಶೃಂಗೇರಿಗೆ ಹೋದಾಗ ಈ ಶಿವ ದೇವಾಲಯಕ್ಕೆ ಭೇಟಿ ಕೊಡಲು ಮಿಸ್ ಮಾಡದಿರಿ. ಅಲ್ಲದೆ ಶ್ರಾವಣ ಮಾಸದಲ್ಲಿ ಶಿವನ ಈ ದೇವಾಲಯಕ್ಕೆ ಭೇಟಿ ಕೊಟ್ಟರೆ ಒಳ್ಳೆಯದು.
ಭಟ್ಕಳದ ಮುರುಡೇಶ್ವರ ದೇವಾಲಯ
ಇದು ವಿಶ್ವ ಪ್ರಸಿದ್ಧವಾಗಿದೆ. ಇಲ್ಲಿಗೆ ಭಕ್ತರು, ಪ್ರವಾಸಿಗರು ಬೇಟಿ ನೀಡುತ್ತಾರೆ. ವಿಶ್ವದಲ್ಲಿ ಅತೀ ಎತ್ತರದ ಶಿವನ ಮೂರ್ತಿ ಹೊಂದಿರುವ ಎರಡನೇ ದೇವಾಲಯ ಇದಾಗಿದೆ. ಅದರಲ್ಲೂ ಇಲ್ಲಿರುವ ಪ್ರಕೃತಿ ರಮಣೀಯ ದೃಶ್ಯ ಕೂಡ ಇಲ್ಲಿ ಪ್ರಮುಖ ಆಕರ್ಷಣೆಯಾಗಿದೆ.
ಗೋಕರ್ಣದ ಮಹಾಬಲೇಶ್ವರ ದೇವಾಲಯ
ರಾಮಾಯಣ, ಮಹಾಭಾರತದಲ್ಲಿ ಈ ದೇವಾಲಯದ ಬಗ್ಗೆ ಉಲ್ಲೇಖವಿದೆ. ಗೋಕರ್ಣದ ಮಹಾಬಲೇಶ್ವರ ದೇವಾಲಯ ಕಾಶಿಯಷ್ಟೇ ಪ್ರಾಮುಖ್ಯತೆ ಪಡೆದಿರುವ ದೇವಾಲಯವಾಗಿದೆ. ಆದ್ದರಿಂದ ಈ ದೇವಾಲಯವನ್ನು ದಕ್ಷಿಣದ ಕಾಶಿ ಎಂದು ಕರೆಯಲಾಗುವುದು.
ಬೇಲೂರಿನ ಚೆನ್ನಕೇಶವ ದೇವಾಲಯ
ಬೇಲೂರಿನಲ್ಲಿ ಈ ಚೆನ್ನಕೇಶವ ದೇವಾಲಯಕ್ಕೆ ಪ್ರತಿನಿತ್ಯ ಭಕ್ತರು ಭೇಟಿ ನೀಡುತ್ತಾರೆ. ಶ್ರಾವಣ ಮಾಸದಲ್ಲಿ ನೀವು ಶಿವ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ, ಪ್ರಸಿದ್ಧ ಈ ಶಿವ ಕ್ಷೇತ್ರಕ್ಕೂ ಭೇಟಿ ನೀಡಿ, ಪುಣ್ಯಫಲ ಪಡೆಯಿರಿ.
ಕೋಲಾರದ ಕೋಟಿ ಲಿಂಗೇಶ್ವರ ದೇವಾಲಯ
ಕರ್ನಾಟಕದಲ್ಲಿರುವ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಕೋಟಿಲಿಂಗೇಶ್ವರ ದೇವಾಲಯ ಕೂಡ ಒಂದಾಗಿದೆ. ಮಹಾಶಿವರಾತ್ರಿ ಸಮಯದಲ್ಲಂತೂ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಸಾವಿರಾರು ಸಂಖ್ಯೆಯಲ್ಲಿರುತ್ತದೆ.
ಶಿವಮೊಗ್ಗದ ಕೇದರೇಶ್ವರ ದೇವಾಲಯ
ಇದು ವಿಷ್ಣು ಹಾಗೂ ಶಿವನಿಗೆ ಸಂಬಂಧಿಸಿದ ದೇವಾಲಯವಾಗಿದೆ. ಈ ದೇವಾಲಯ ಶಿವಮೊಗ್ಗದಲ್ಲಿದೆ.



Click it and Unblock the Notifications
