Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಶ್ರಾವಣದಲ್ಲಿ ವಿಶೇಷ ಪೂಜೆ ಸಲ್ಲಿಸಲು ಬೆಂಗಳೂರಿನಲ್ಲಿರುವ ಈ 6 ಪ್ರಸಿದ್ಧ ಶಿವ ದೇಗುಲಕ್ಕೆ ಭೇಟಿ ನೀಡಿ
ಶ್ರಾವಣ ಮಾಸ, ಶಿವ ಭಕ್ತರ ಅಚ್ಚು ಮೆಚ್ಚಿನ ಮಾಸ. ಈ ಸಮಯದಲ್ಲಿ ಶಿವನ ಧ್ಯಾನ ಮಾಡಿದಷ್ಟೂ ಒಳ್ಳೆಯದು. ಶ್ರಾವಣ ಮಾಸದಲ್ಲಿ ಶಿವ ಕ್ಷೇತ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಅಧಿಕವಿರಲಿದೆ . ನಮ್ಮ ಬೆಂಗಳೂರಿನಲ್ಲಿ ಕೂಡ ಅನೇಕ ಪ್ರಾಚೀನ ಶಿವ ದೇವಾಲಯಗಳಿವೆ. ಇದುವರೆಗೆ ಆ ದೇವಾಲಯಕ್ಕೆ ಹೋಗಿರದಿದ್ದರೆ ಈ ಶ್ರಾವಣ ಮಾಸದಲ್ಲಿ ಭೇಟಿ ನೀಡಿ ಶಿವನ ಆಶೀರ್ವಾದಕ್ಕೆ ಪಾತ್ರರಾಗಬಹುದು.
1. ಪಂಚ ಲಿಂಗ ನಾಗೇಶ್ವರ ದೇವಾಲಯ
ಇದು ಬೆಂಗಳೂರಿನಲ್ಲಿರುವ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದ್ದು ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ಶ್ರಾವಣ ಸೋಮವಾರದ ದಿನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಇಲ್ಲಿರುವ ನಾಗಲಿಂಗೇಶ್ವರ ಲಿಂಗವು ಪಂಚ ಲಿಂಗಳಲ್ಲಿಯೇ ಅತಿ ಎತ್ತರದ ಲಿಂಗವಾಗಿದೆ.

ಇಷ್ಟಾರ್ಥ ನೆರವೇರಲು ಜನರು ಹರಿಕೆ ಹೊತ್ತು ಬರುತ್ತಾರೆ
ವೃತ್ತಿ ಜೀವನದಲ್ಲಿ ಅಡೆತಡೆಗಳು ಉಂಟಾದಾಗ, ಉತ್ತಮ ಉದ್ಯೋಗ ಸಿಗಬೇಕು, ಏನಾದರೂ ಆರೋಗ್ಯ ಸಮಸ್ಯೆಯಿದ್ದಾಗ ಜನರು ಹರಿಕೆ ಹೊತ್ತು ಈ ದೇವಾಯಕ್ಕೆ ಬಂದು ಹರಿಕೆ ತೀರಿಸಿ ಹೋಗುತ್ತಾರೆ.
2. ಗವಿ ಗಂಗೇಶ್ವರ ದೇವಾಲಯ
ಇಲ್ಲಿ ಮಕರ ಸಂಕ್ರಾಂತಿ ಸಮಯದಲ್ಲಿ ವಿಶೇಷ ಪೂಜೆಯನ್ನು ಮಾಡುತ್ತಾರೆ. ಇದು ಬೆಂಗಳೂರಿನ ಬಸವನಗುಡಿ ಪಕ್ಕದಲ್ಲಿಯೇ ಇದೆ. ಇಲ್ಲಿರುವ ಶುವಲಿಂಗದ ವಿಶೇಷತೆಯೆಂದರೆ ಅದು ದಕ್ಷಿಣಾಭಿಮುಖವಾಗಿದೆ, ಬೇರೆ ಕಡೆ ನಿಮಗೆ ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿ ಇರಲಿದೆ. ಅಲ್ಲದೆ ಇಲ್ಲಿ ಪಾರ್ವತಿ ದೇವಿ ಶಿವನ ಬಲಭಾಗದಲ್ಲಿ ಆಸೀನಳಾಗಿದ್ದಾಳೆ. ಪುರಾಣ ಕತೆಗಳಲ್ಲಿ ಬರುವ ಸಪ್ತ ಋಷಿಗಳಲ್ಲಿ ಒಬ್ಬರಾದ ಗೌತಮ ಮಹರ್ಷಿ ಇಲ್ಲಿ ತಪಸ್ಸು ಮಾಡಿದ್ದರು ಎಂಬ ಪೌರಾಣಿಕ ಕತೆಗಳಿವೆ. ಮಕರ ಸಂಕ್ರಾಂತಿಯಂದು ಶಿವಲಿಂಗಕ್ಕೆ ಸೂರ್ಯರಶ್ಮಿಗಳ ಅಭಿಷೇಕ ಆಗುವುದು ಕೂಡ ಇಲ್ಲಿಯ ಹಲವಾರು ಚಮತ್ಕಾರಗಳಲ್ಲಿ ಒಂದಾಗಿದೆ.
3. ಕಾಡು ಮಲ್ಲೇಶ್ವರ ದೇವಾಲಯ
ಕಾಡು ಮಲ್ಲೇಶ್ವರ ದೇವಾಲಯ ಮಲ್ಲೇಶ್ವರಂನಲ್ಲಿದೆ. ಇಲ್ಲಿಯ ಪ್ರಧಾನ ಗರ್ಭಗುಡಿಯಲ್ಲಿ ಅರ್ಧ ಅಡಿ ಎತ್ತರದ
ಶಿವಲಿಂಗವಿದೆ. ಮಹಾಶಿವರಾತ್ರಿಗೆ ಇಲ್ಲಿ ಗಿರಿಜಾ ಕಲ್ಯಾಣ ನಡೆಯುತ್ತದೆ. ಇಲ್ಲಿ ಪ್ರತಿನಿತ್ಯ ಪೂಜೆ ನಡೆಯುತ್ತಿದ್ದು ಶ್ರಾವಣದಲ್ಲಿ ಈ ದೇವಾಲಯಕ್ಕೆ ಭೇಟಿ ನೀಡಿದರೆ ಒಳ್ಳೆಯದು.
4. ಹಲಸೂರು ಸೋಮೇಶ್ವರ ದೇವಾಲಯ
ಇದು ಪುರಾತನ ಶಿವ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿ ಪರಶಿವ ಸೋಮೇಶ್ವರ ರೂಪದಲ್ಲಿ ಲಿಂಗರೂಪಿಯಾಗಿ ನೆಲೆಸಿದ್ದಾನೆ. ಈ ದೇವಾಲಯದಲ್ಲಿ ತ್ರಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರನಿಗೆ ಪೂಜೆ ಸಲ್ಲಿಸುವುದು ಇಲ್ಲಿಯ ವಿಶೇಷಗಳಲ್ಲಿ ಒಂದಾಗಿದೆ. ನೀವು ಈ ದೇವಾಲಯಕ್ಕೆ ಹೋಗಿ ರುದ್ರಾಭಿಷೇಕ ಮಾಡಿಸಿ ಬರಬಹುದು.
5. ಶ್ರೀ ಜಲ ಕಂಟೇಶ್ವರ ದೇವಾಲಯ
ಈ ಶಿವ ದೇವಾಲಯ ಬೆಂಗಳೂರಿನ ಕಲಾಸಿಪಾಳ್ಯದಲ್ಲಿದೆ. ಈ ದೇವಾಲಯ ಕೂಡ ತುಂಬಾ ಪ್ರಶಾಂತವಾಗಿದ್ದು ಶಿವ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಿದಾಗ ಅತಿಯಾದ ಮಾನಸಿಕ ನೆಮ್ಮದಿ ಪಡೆಯುತ್ತಾರೆ.
6. ಮಲ್ಲಿಕಾರ್ಜುನ ಸ್ವಾಮಿ ದೇವಾಲಯ
ಈ ದೇವಾಲಯ ಕೂಡ ಬೆಂಗಳೂರಿನ ಬಸವನಗುಡಿಯಲ್ಲಿದೆ. ತಮ್ಮ ಕಷ್ಟಗಳ ನಿವಾರಣೆ ಮಾಡು ತಂದೆ ಎಂದು ಪ್ರತಿನಿತ್ಯ ಭಕ್ತರು ಇಲ್ಲಿಗೆ ಬರುತ್ತಾರೆ. ಇಲ್ಲಿಗೆ ಆಗಮಿಸಿದರೆ ಎಲ್ಲಾ ಕಷ್ಟಗಳು ದೂರಾಗಲಿದೆ ಎಂಬುವುದು ಶಿವ ಭಕ್ತರ ಅಚಲ ನಂಬಿಕೆ.



Click it and Unblock the Notifications
