Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಶ್ರಾವಣ ಮಂಗಳವಾರ ಹನುಮಂತನನ್ನು ಈ ರೀತಿ ಪೂಜಿಸಿದರೆ ಸಂಕಷ್ಟಗಳು ದೂರಾಗುವುದು
ಶ್ರಾವಣ ಮಾಸ, ಶಿವನ ಪೂಜೆಗೆ ಮೀಸಲಾದ ತಿಂಗಳು, ಈ ತಿಂಗಳ ಪೂರ್ತಿ ಶಿವನ ಆರಾಧನೆ ಮಾಡಿದರೆ ಶಿವಕೃಪೆಗೆ ಪಾತ್ರರಾಗಬಹುದು, ಅದರಲ್ಲೂ ಶಿವ ಪೂಜೆಗೆ ಶ್ರಾವಣ ಸೋಮವಾರ ತುಂಬಾನೇ ಶ್ರೇಷ್ಠವಾದ ದಿನವಾಗಿದೆ.
ಅಲ್ಲದೆ ಶ್ರಾವಣ ಮಂಗಳವಾರ ಗೌರಿ ಪೂಜೆಗೆ, ಹನುಮಂತನ ಪೂಜೆಗೆ ತುಂಬಾ ಶ್ರೇಷ್ಠವಾದ ದಿನವಾಗಿದೆ. ಶ್ರಾವಣ ಮಂಗಳವಾರದಂದು ಹನುಮಂತನ ಆರಾಧನೆ ಹೇಗೆ ಮಾಡಬೇಕು? ಸಂಕಷ್ಟ ನಿವಾರಣೆಗೆ ಯಾವೆಲ್ಲಾ ಪರಿಹಾರ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಶ್ರಾವಣ ಮಂಗಳವಾರ ಈ ಪೂಜಾ ವಿಧಿಗಳನ್ನು ಪಾಲಿಸಿ
- ಮಂಗಳವಾರ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ
- ಈ ದಿನ ಉಪವಾಸವಿದ್ದರೆ ಒಳ್ಳೆಯದು
- ಸಮೀಪದ ಹನುಮಂತನ ದೇವಾಲಯಕ್ಕೆ ಭೇಟಿ ನೀಡಿ.
- ಶ್ರೀರಾಮನಿಗೆ ಸಿಂಧೂರ, ಹೂ-ಹಣ್ಣುಗಳನ್ನು ಅರ್ಪಿಸಿ.
- ಆಲದ ಮರದ ಎಲೆಗಳನ್ನು ತಂದು ಅದರ ಮೇಲೆ ಶ್ರೀರಾಮ ಅಂತ ಬರೆದು ಹನುಮಂತನ ಮೂರ್ತಿ ಮುಂದೆ ಇಡಿ.
- ಆಲದ ಮರದ ಕೆಳಗಡೆ ಕೂತು ಹನುಮಾನ್ ಚಾಲೀಸ ಪಠಿಸಿ.
ನಿಮ್ಮ ಸಮಸ್ಯೆ ನಿವಾರಣೆಗೆ ಈ ಸಮಸ್ಯೆ ಈ ಪರಿಹಾರ ಮಾಡಿ:
* ಹನುಮಂತನಿಗೆ ಸಿಂಧೂರ ಅರ್ಪಿಸಿ
ಮಂಗಳವಾರ ಬೆಳಗ್ಗೆ ಹನುಮಂತನ ದೇವಾಲಯಕ್ಕೆ ಹೋಗಿ ಸಿಂಧೂರ ಹಾಗೂ ಕೆಂಪು ಹೂಗಳನ್ನು ಅರ್ಪಿಸಿ ಹನುಮಾನ್ ಮಂತ್ರಗಳನ್ನು ಪಠಿಸಿ.
ಮಂತ್ರ: ಓಂ ಹಂ ಹನುಮತೇ ನಮಃ
* ರುದ್ರಾಕ್ಷಿ ಮಾಲೆ ಹಿಡಿದು ಹನುಮಂತ್ರನ ಮಂತ್ರ ಪಠಿಸಿ
ನೀವು ರುದ್ರಾಕ್ಷಿ ಮಾಲೆ ಹಿಡಿದು 108 ಬಾರಿ ಹನುಮಂತನ
ಮರ್ಕಟೇಶ ಮಹೋತ್ಸಹಃ ನವಗ್ರಹ ದೋಷ ನಿವಾರಣಃ |
ಶತ್ರೂನ್ ಸಂಹಾರ ಮಾಂ ರಕ್ಷ ಶ್ರಿಯಂ ದಾಪಯಾ ದೇಹಿಮೇ ಪ್ರಭೋ ||
ಹಣದ ಸಮಸ್ಯೆ ಕಾಡದಿರಲು ಈ ಮಂತ್ರ ಪಠಿಸಿ
ತುಂಬಾ ಆರ್ಥಿಕ ಸಮಸ್ಯೆ ಇದ್ದರೆ ಹನುಮಂತನಿಗೆ ಮಂಗಳವಾರ ಪೂಜೆ ಮಾಡುವಾಗ ಆಲದ ಮರದ ಎಲೆಯನ್ನು ತಂದು ಅದರಲ್ಲಿ ಶ್ರೀರಾಮ ಎಂದು ಬರೆದು ಹನುಮಂತನ ಮೂರ್ತಿ ಮುಂದೆ ಇಟ್ಟು ಪೂಜಿಸಿ, ನಂತರ ಆ ಎಲೆಯನ್ನು ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಿ.
* ಈ ದಿನ ರಾಮ ರಕ್ಷಾ ಸ್ತೋತ್ರ ಪಠಿಸಿ, ಹೀಗೆ ಮಾಡುವುದರಿಂದ ಶ್ರೀರಾಮ ಹಾಗೂ ಹನುಮಂತನ ಕೃಪೆ ನಿಮ್ಮ ಮೇಲಿರಲಿದೆ.



Click it and Unblock the Notifications
