Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ಶ್ರಾವಣ ಮೊದಲ ಶುಕ್ರವಾರ: ಸಂಜೆ ಲಕ್ಷ್ಮಿ ಪೂಜೆ ಮಾಡುವಾಗ ಈ ಅಂಶಗಳ ಕಡೆ ಗಮನವಿರಲಿ
ಶ್ರಾವಣ ಮಾಸದ ಒಂದೊಂದು ದಿನವೂ ಪೂಜಾ ಕಾರ್ಯಗಳಿಗೆ ಶ್ರೇಷ್ಠವಾಗಿದೆ. ಅದರಲ್ಲೂ ಶ್ರಾವಣ ಸೋಮವಾರ, ಮಂಗಳವಾರ, ಶುಕ್ರವಾರ ತುಂಬಾನೇ ವಿಶೇಷವಾಗಿರುತ್ತದೆ. ಅದರಲ್ಲೂ ಶ್ರಾವಣ ಶುಕ್ರವಾರ ಎಂದರೆ ಮುತ್ತೈದೆಯರಿಗೆ ಬಹಳ ವಿಶೇಷವಾದ ದಿನ. ಈ ದಿನ ಮಹಿಳೆಯರು ಲಕ್ಷ್ಮಿ ವ್ರತವನ್ನು ಮಾಡುತ್ತಾರೆ. ಇನ್ನು ಮಂಗಳಗೌರಿ ವ್ರತ ಮಂಗಳವಾರ ಮಾಡಲು ಸಾಧ್ಯವಾಗದವರು ಶುಕ್ರವಾರ ಮಂಗಳಗೌರಿ ವ್ರತವನ್ನು ಮಾಡಲಾಗುವುದು.

ಶುಕ್ರವಾರ ಪೂಜೆಯ ಮಹತ್ವ
ಶ್ರಾವಣ ಶುಕ್ರವಾರ ಲಕ್ಷ್ಮಿಯನ್ನು , ಗೌರಿಯನ್ನು ಆರಾಧಿಸುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಸುವುದು. ಆರ್ಥಿಕ ಸಂಕಷ್ಟ ಇರುವವರು ಈ ದಿನ ಲಕ್ಷ್ಮಿಯನ್ನು ಉಪವಾಸವಿದ್ದು ಪೂಜಿಸಿದರೆ ದಾರಿದ್ರ್ಯ ದೂರಾಗಿ, ಲಕ್ಷ್ಮಿ ಕೃಪೆಯಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಪ್ರಗತಿಯಾಗಿ ಸಂಪತ್ತು ವೃದ್ಧಿಸುವುದು.
ಶ್ರಾವಣ ಶುಕ್ರವಾರ ಲಕ್ಷ್ಮಿ ಪೂಜೆ ಮಾಡುವಾಗ ಸಂಪತ್ತು ಗರಡಿ ಬಳಸಲಾಗುವುದು
ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ, ಮಹಿಳೆಯರು ಲಕ್ಷಣವಾಗಿ ಅಲಂಕರಿಸಿಕೊಂಡು ನಂತರ ದೇವರ ಕೋಣೆಯನ್ನು ಶುದ್ಧ ಮಾಡಿ, ಪೀಠದಲ್ಲಿ ಲಕ್ಷ್ಮಿಯ ಫೋಟೋ ಅಥವಾ ಮೂರ್ತಿಯನ್ನು ಇಟ್ಟು ಹೂ ಹಾಗೂ ಆಭರಣಗಳಿಂದ ಅಲಂಕರಿಸುತ್ತಾರೆ. ಪೂಜೆಗೆ 5 ಗಡಿಗೆಯನ್ನು ಸಿದ್ಧ ಮಾಡುತ್ತಾರೆ, ಅವುಗಳ ಮೇಲೆ ಶಂಖ ಚಕ್ರ, ಎರಡು ಲಕ್ಷ್ಮಿಯ ಚಿತ್ರ, ಹಸು, ಕರುವಿನ ಚಿತ್ರ, ಆನೆಯ ಚಿತ್ರ ಬಿಡಿಸಿ ನಂತರ ಗಡಿಗೆಯನ್ನು ಮುಚ್ಚಿ ಅದರ ಮೇಲೆ ಕಮಲದ ಹೂವಿನ ಚಿತ್ರ ಬಿಡಿಸಲಾಗುವುದು. ಇದನ್ನು ಸಂಪತ್ತು ಗೌರಿ ಗಡಿಗೆಯಂದು ಕರೆಯಲಾಗುವುದು. ಈ ಗಡಿಗೆಗಳಲ್ಲಿ ಅಕ್ಕಿ, ನಾಣ್ಯ, ಅರಿಶಿಣಕೊಂಬು, ವೀಳ್ಯೆದೆಲೆ, ಅಡಿಕೆ ಇಟ್ಟು, ನಂತರ ಹಿಟ್ಟಿನಿಂದ ಮಾಡಿದ ಹಣತೆಗೆ ತುಪ್ಪ ಹಾಕಿ ದೀಪ ಹಚ್ಚಿ ಲಕ್ಷ್ಮಿಯನ್ನು ಪೂಜಿಸಲಾಗುವುದು. ಪೂಜೆ ಮಾಡುವಾಗ ಲಕ್ಷ್ಮಿ ಮಂತ್ರವನ್ನು ಹೇಳಿ, ಧೂಪ ಹಚ್ಚಿ, ನೈವೇದ್ಯಅರ್ಪಿಸಿ, ನಂತರ ಪೂಜೆಗೆ ಆಗಮಿಸಿದ ಸುಮಂಗಲಿಯರಿಗೆ ತಾಂಬೂಲ ಕೊಟ್ಟು ಅವರ ಆಶೀರ್ವಾದ ಪಡೆಯಬೇಕು.
ತಾಂಬೂಲದಲ್ಲಿ ಯಾವೆಲ್ಲಾ ವಸ್ತುಗಳನ್ನು ಇಟ್ಟು ನೀಡಬೇಕು?
ನೀವು ಮುತ್ತೈದೆಯರಿಗೆ ತಾಂಬೂಲ ನೀಡುವಾಗ ಅದರಲ್ಲಿ ಅರಿಶಿಣ, ಕುಂಕುಮ, ಹಣ್ಣು, ಹೂ, ವೀಳ್ಯೆದೆಲೆ, ಅಡಿಕೆ, ಕಡ್ಲೆಕಾಳು, ಬ್ಲೌಸ್ ಪೀಸ್ ಇಟ್ಟು ನೀಡಿ.
ತಾಂಬೂಲ ನೀಡುವುದರ ಮಹತ್ವವೇನು?
ನೀವು ಈ ತಾಂಬೂಲ ನೀಡುವುದರಿಂದ ಕುಜದೋಷ, ಚಂದ್ರದೋಷ ನಿವಾರಣೆಯಾಗುವುದು, ಇದರಿಂದ ಲಕ್ಷ್ಮಿ ಕೃಪೆಗೆ ಪಾತ್ರರಾಗುತ್ತೀರಿ ಎಂಬ ನಂಬಿಕೆ ಇದೆ.
ತಾಂಬೂಲ ನೀಡುವಾಗ ಈ ಅಂಶಗಳತ್ತ ಗಮನಹರಿಸಿ
ನೀವು ಯಾರಿಗಾದರೂ ತಾಂಬೂಲ ನೀಡುವಾಗ ವೀಳ್ಯೆದೆಲೆ ತುದಿ ಹಾಗೂ ಬಾಳೆಹಣ್ಣಿನ ತುದಿ ನೀವು ತಾಂಬೂಲ ನೀಡುವವರ ಕಡೆ ಇರಬೇಕು. ತಾಂಬೂಲ ಪಡೆಯುವವರು ಮೊದಲಿಗೆ ಲಕ್ಷ್ಮಿಗೆ ನಮಸ್ಕರಿಸಿ, ನಂತರ ತಾಂಬೂಲ ತಂದು ಆ ತಾಂಬೂಲವನ್ನು ತಮ್ಮ ಮನೆಯ ದೇವರ ಮುಂದೆ ಇಟ್ಟು ನಂತರ ಬಳಸುತ್ತಾರೆ.



Click it and Unblock the Notifications











