Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಆ. 16ಕ್ಕೆ ಶ್ರಾವಣ ಅಮವಾಸ್ಯೆ: ಈ ದಿನ ಏನು ಮಾಡಿದರೆ ಒಳ್ಳೆಯದು?
ಆಗಸ್ಟ್ 16ರಂದು ಶ್ರಾವಣ ಅಮವಾಸ್ಯೆ, ಇಂದಿಗೆ ಅಧಿಕ ಮಾಸದ ಶ್ರಾವಣ ಕೂಡ ಮುಕ್ತಾಯವಾಗಲಿದೆ, ನಾಳೆಯಿಂದ ನಿಜ ಶ್ರಾವಣ ಶುರುವಾಗಲಿದೆ. ಶಾಸ್ತ್ರಗಳ ಪ್ರಕಾರ ಈ ದಿನಕ್ಕೆ ತುಂಬಾನೇ ಮಹತ್ವವಿದೆ. ಈ ದಿನ ತರ್ಪಣ ಅಥವಾ ಪಿಂಡದಾನಕ್ಕೆ ತುಂಬಾನೇ ಮಹತ್ವವಾದ ದಿನವಾಗಿದೆ.

ಶ್ರಾವಣ ಅಮವಾಸ್ಯೆಯಂದು ಪಿತೃಷದೋಷಕ್ಕೆ ಪರಿಹಾರ
ಪಿತೃದೋಷವಿದ್ದರೆ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುವುದು. ಯಾವುದೇ ಕೆಲಸ ಕೈ ಹಿಡಿಯಲ್ಲ, ಮನೆಯಲ್ಲಿ ನೆಮ್ಮದಿ ಇರಲ್ಲ, ವ್ಯವಹಾರದಲ್ಲಿ ಯಾವುದೇ ಪ್ರಗತಿ ಕಂಡು ಬರುವುದಿಲ್ಲ, ಸಂತಾನ ಭಾಗ್ಯ ಇರುವುದಿಲ್ಲ ಈ ರೀತಿ ಅನೇಕ ಬಗೆಯ ಸಮಸ್ಯೆ ಕಂಡು ಬರುವುದು, ಪಿತೃದೋಷ ನಿವಾರಣೆ ಮಾಡಿದರೆ ಜೀವನದಲ್ಲಿ ಒಳಿತಾಗುವುದು.
ಶ್ರಾವಣ ಅಮವಾಸ್ಯೆಯಂದು ಪಿತೃದೋಷಕ್ಕೆ ಪರಿಹಾರ ಮಾಡಿಕೊಳ್ಳಬಹುದು. ಈ ದಿನ ಪೂರ್ವಜರಿಗೆ ಪಿಂಡದಾನ ಅಥವಾ ತರ್ಪಣ ಮಾಡಿದರೆ ಪಿತೃದೋಷದಿಂದ ಮುಕ್ತರಾಗಬಹುದು. ಹೀಗೆ ಮಾಡುವುದರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲಿದೆ, ಎಲ್ಲಾ ರೀತಿಯ ಕಂಟಕಗಳು ದೂರಾಗಲಿದೆ.
ಶ್ರಾವಣ ಅಮವಾಸ್ಯೆಯಂದು ಈ ಕಾರ್ಯಗಳನ್ನು ಮಾಡಿದರೆ ಒಳ್ಳೆಯದು:
ದಾನ ಮಾಡಿ
ಈ ದಿನ ನಿಮ್ಮ ಶಕ್ತಿಗೆ ತಕ್ಕಂತೆ ಬಡವರಿಗೆ ದಾನ ಮಾಡಿ, ಹೀಗೆ ದಾನ ಮಾಡುವುದರಿಂದ ಪುಣ್ಯಫಲ ಸಿಗುವುದು, ಹೀಗೆ ಮಾಡುವುದರಿಂದ ನಿಮ್ಮ ನೆಮ್ಮದಿ, ಸಂಪತ್ತು ಹೆಚ್ಚಲಿದೆ ಎಂದು ಹೇಳಲಾಗುವುದು.
ಚಂದ್ರದೋಷವಿದ್ದರೆ
ಚಂದ್ರದೋಷವಿದ್ದರೆ ಮನಸ್ಸಿಗೆ ನೆಮ್ಮದಿ ಇರಲ್ಲ, ಚಂದ್ರ ನಿಮ್ಮ ರಾಶಿಯಲ್ಲಿ ದುರ್ಬಲ ಸ್ಥಾನದಲ್ಲಿದ್ದರೆ ಹಸುವಿಗೆ ಹಿಟ್ಟನ್ನು ದಾನ ಮಾಡಿ.
ತುಳಸಿ ಪೂಜೆ ಮಾಡಿ
ಈ ದಿನ ತುಳಸಿ ಪೂಜೆ ಮಾಡಿ, ಇದರಿಂದ ಶ್ರೀ ವಿಷ್ಣು ಹಾಗೂ ಲಕ್ಷ್ಮಿಯ ಕೃಪೆಗೆ ಪಾತ್ರರಾಗಬಹುದು.ಅಲ್ಲದೆ ಈ ದಿನ ಅರಳಿ ಮರದ ಕೆಳಗಡೆ ತುಪ್ಪದ ದೀಪ ಹಚ್ಚಿ, ಹೀಗೆ ಮಾಡುವುದರಿಂದ ಅದೃಷ್ಟ ಒಲಿಯಲಿದೆ ಎಂದು ಹೇಳಲಾಗುವುದು.
ನೀವು ಅರಳಿ ಮರಕ್ಕೆ ಸುತ್ತು ಹಾಕಿ ಬಡವರಿಗೆ ಆಹಾರವನ್ನು ದಾನ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು.
ಶಿವ-ಪಾರ್ವತಿಯನ್ನು ಪೂಜಿಸಿ
ಈ ದಿನ ನೀವು ಶಿವ ಪಾರ್ವತಿಯನ್ನು ಪೂಜಿಸುವುದರಿಮದ ಒಳಿತಾಗುವುದು ಎಂದು ಹೇಳಲಾಗುವುದು. ಈ ದಿನ ಶಿವ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಮಾಡಿಸಿದರೆ ಒಳ್ಳೆಯದು.



Click it and Unblock the Notifications
