Latest Updates
-
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್ -
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ! -
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್! -
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ
ಸೊಳ್ಳೆಯ ಜೊತೆ ಆನೆ ಸಂಭೋಗ ನಡೆಸಿದಂತೆ!

ಒಬ್ಬ ವಿದ್ಯಾರ್ಥಿಯು ಗುರುವಿನ ಎದುರು ಬಂದು ಅವರಿಂದ ಸ್ವಲ್ಪ ದೂರದಲ್ಲಿ ಕುಳಿತುಕೊಂಡ. "ಝೆನ್ ಎಂದರೇನು?" ಎಂದು ವಿದ್ಯಾರ್ಥಿ ಕೇಳಿದ.
ರೋಶಿಯು ಒಂದು ಬಾಳೆಹಣ್ಣನ್ನು ಸುಲಿದು ತಿನ್ನಲು ಆರಂಭಿಸಿದ. "ಇಷ್ಟೇನಾ? ಇದಕ್ಕಿಂತ ಬೇರೆ ಏನನ್ನೂ ನೀವು ಹೇಳಲು ಸಾಧ್ಯವಿಲ್ಲವೇ?" ಎಂದು ವಿದ್ಯಾರ್ಥಿ ಕೇಳಿದ. "ದಯವಿಟ್ಟು, ಇನ್ನೂ ಹತ್ತಿರ ಬಾ" ಎಂದು ಗುರುವು ಕೇಳಿದ.
ವಿದ್ಯಾರ್ಥಿ ಹತ್ತಿರ ಹೋದ ಕೂಡಲೆ ಬಾಳೆಹಣ್ಣಿನ ಉಳಿದ ಭಾಗವನ್ನು ವಿದ್ಯಾರ್ಥಿಯ ಮುಖದ ಎದುರು ಹಿಡಿದ. ವಿದ್ಯಾರ್ಥಿಯು ಪ್ರತಿಭಟಿಸಿ ಹೊರಟುಹೋದ.
ಎರಡನೇ ವಿದ್ಯಾರ್ಥಿಯು ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಲು ತೊಡಗಿದ. "ನಿಮಗೆಲ್ಲಾ ಅರ್ಥವಾಯಿತೇ?" ಪ್ರೇಕ್ಷಕರು ಯಾರೂ ಮಾತನಾಡದಿದ್ದಾಗ ವಿದ್ಯಾರ್ಥಿಯು ಮುಂದುವರಿದು ಹೇಳಿದ, "ನೀವು ಝೆನ್ ಮೊದಲ ಮಾದರಿಯನ್ನು ನೋಡಿದಿರಿ. ಇನ್ನೇನಾದರೂ ಪ್ರಶ್ನೆ ಇದೆಯೇ?"
ಒಂದು ದೀರ್ಘ ಮೌನದ ನಂತರ ಯಾರೋ ಎದ್ದರು. "ರೋಶಿ, ನಾನು ನಿಮ್ಮ ಪ್ರದರ್ಶನದಿಂದ ತೃಪ್ತನಾಗಿಲ್ಲ. ನೀವು ತೋರಿಸಿದ್ದು ನನಗೆ ಸ್ಪಷ್ಟವಾಗಿ ಅರ್ಥವಾಗಿಲ್ಲ. ಝೆನ್ ಏನು ಎಂಬುದನ್ನು ನಮಗೆ ನೀವು ಹೇಳಲು ಸಾಧ್ಯವಿದೆ. ನೀವು ಝೆನ್ ಬಗ್ಗೆ ಶಬ್ದಗಳಲ್ಲಿ ಸರಳವಾಗಿ ವಿವರಿಸಬೇಕು".
ರೋಶಿ ನಂತರ ಪ್ರತಿಕ್ರಿಯಿಸಿದರು, "ಝೆನ್ ಎಂದರೆ ಸೊಳ್ಳೆಯ ಜೊತೆ ಆನೆ ಸಂಭೋಗ ನಡೆಸಿದಂತೆ."



Click it and Unblock the Notifications
