Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಐಶ್ವರ್ಯ, ಆರೋಗ್ಯಕ್ಕಾಗಿ ಯೋಗಿನಿ ಏಕಾದಶಿ ವ್ರತ ಪಾಲನೆ ಹೇಗಿರಬೇಕು?
ಜೂನ್ ತಿಂಗಳಿನಲ್ಲಿ ಎರಡು ಏಕಾದಶಿಗಳು ಬಂದಿವೆ. ಜೂನ್ 2ರಂದು ನಿರ್ಜಲ ಏಕಾದಶಿ ಬಂದಿತ್ತು. ಇದೀಗ ಜೂನ್ 17ರಂದು ಯೋಗಿನಿ ಏಕಾದಶಿ ಆಚರಿಸಲಾಗುವುದು.
ಯೋಗಿನಿ ಏಕಾದಶಿಯನ್ನು ಆಷಾಢ ಮಾಸದ ಕೃಷ್ಣ ಪಕ್ಷದಲ್ಲಿ ಆಚರಿಸಲಾಗುವುದು. ಇದನ್ನು ಶಯನಿ ಏಕಾದಶಿ ಎಂದು ಕೂಡ ಕರೆಯಲಾಗುತ್ತದೆ.

ಈ ಏಕಾದಶಿ ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದು ಇದನ್ನು ಆಚರಿಸುವುದರಿಂದ ಎಲ್ಲಾ ರೀತಿಯ ಪಾಪ - ಕರ್ಮಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ಈ ಏಕಾದಶಿ ವ್ರತಕ್ಕೆ ಯಾವುದೇ ಭಂಗವಾಗದಂತೆ ನೋಡಿಕೊಂಡು ಉಪವಾಸ ಮಾಡಿದರೆ ಪಾಪಗಳು, ಕಷ್ಟಗಳು ದೂರವಾಗುತ್ತದೆ. ಮಾರ್ಕಡಂಯ್ಯ ಋಷಿಗಳು ಹೇಳಿದ ಯೋಗಿನಿ ಏಕಾದಶಿ ವ್ರತದಿಂದ ಜನ್ಮ ಜನ್ಮಾತರದ ಪಾಪಗಳನ್ನು ಹೋಗಲಾಡಿಸುವ ಶಕ್ತಿ ಈ ಏಕಾದಶಿಗೆ ಇದೆ.

ಯೋಗಿನಿ ಏಕಾದಶಿಯ ಮಹತ್ವವೇನು?
ಪದ್ಮ ಪುರಾಣದಲ್ಲಿ ಯೋಗಿನಿ ಏಕಾದಶಿಯ ಮಹತ್ವದ ಕುರಿತು ಹೇಳಲಾಗಿದೆ.
- ಯೋಗಿನಿ ಏಕಾದಶಿ ಮಾಡುವುದರಿಂದ ಪೂರ್ವ ಜನ್ಮದ ಪಾಪಗಳು ಕೂಡ ಪರಿಹಾರವಾಗುತ್ತದೆ.
- ಅನೇಕ ಕಾಯಿಲೆಗಳು ಇಲ್ಲವಾಗುವುದು, ಆರೋಗ್ಯ ವೃದ್ಧಿಯಾಗುವುದು.
- ಶ್ರೀ ವಿಷ್ಣುವಿನ ಆರ್ಶೀವಾದದಿಂದ ಆಯುಸ್ಸು ಹೆಚ್ಚಾಗುವುದು.
- ಮೋಕ್ಷ ದೊರೆಯುವುದು
- ಯೋಗಿನಿ ವ್ರತ ಪಾಲಿಸುವುದರಿಂದ ಐಶ್ವರ್ಯ, ಉತ್ತಮ ಆರೋಗ್ಯ, ಯಶಸ್ಸು ದೊರೆಯುವುದು
- ಯೋಗಿನಿ ಏಕಾದಶಿಯಂದು ಸೂರ್ಯ ಏಳುವ ಮುನ್ನವೇ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಬೇಕು.
- ಶ್ರೀ ವಿಷ್ಣುವನ್ನು ಏಕಾಗ್ರತೆಯಿಂದ ಪೂಜಿಸಬೇಕು.
- ಈ ದಿನ ಉಪವಾಸ ಮಾಡಬೇಕು.
- ಹೂ, ಹಣ್ಣುಗಳು, ಗಂಧದ ಕಟ್ಟಿ ಹಚ್ಚಿ , ತುಳಸಿ ಎಸಳುಗಳನ್ನು ಅರ್ಪಿಸಿ ಪೂಜೆ ಸಲ[್ಲಿಸಬೇಕು.
- ಯೋಗಿನಿ ಏಕಾದಶಿಯ ಪೌರಾಣಿಕ ಕತೆಯನ್ನು ಹೇಳಬೇಕು.
- ಪೂಜೆಯ ನಂತರ ದೇವರಿಗೆ ಅರ್ಪಿಸಿದ ನೈವೇದ್ಯವನ್ನು ಮನೆಯವರಿಗೆ ಪ್ರಸಾದವಾಗಿ ಹಂಚಬೇಕು.
- ಶ್ರೀವಿಷ್ಣುವಿನ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಬೇಕು.
- ಯೋಗಿನಿ ಏಕಾದಶಿ ವ್ರತ ಮಾಡವವರು ದಶಮಿ ದಿನದಿಂದಲೇ ಉಪವಾಸ ಮಾಡಬೇಕು.
- ಯೋಗಿನಿ ಏಕಾದಶಿಯಂದು ಒಂದು ಹೊತ್ತು ಸಾತ್ವಿಕ ಆಹಾರ ಸೇವಿಸಬಹುದು, ಅದು ಸೂರ್ಯಾಸ್ತಮಕ್ಕಿಂತ ಮೊದಲೇ ಸೇವಿಸಬೇಕು.
- ಏಕಾದಶಿ ತಿಥಿ ಮುಕ್ತಾಯವಾಗುವವರೆಗೆ ವ್ರತ ಪಾಲಿಸಬೇಕು
- ರಾತ್ರಿ ನಿದ್ದೆ ಮಾಡದೆ ಎಚ್ಚರವಾಗಿದ್ದು ಮಹಾವಿಷ್ಣುವಿನ ಮಂತ್ರ ಹೇಳುತ್ತಾ ದೇವರ ಕೃಪೆಯನ್ನು ಗಳಿಸಬೇಕು.
- ವಿಷ್ಣು ಸಹಸ್ರನಾಮ ಹೇಳಿದರೆ ಉತ್ತಮ ಫಲ ಸಿಗುವುದು.
- ಅತಿಯಾದ ಶ್ರದ್ಧೆ, ಭಕ್ತಿಯಿಂದ ವಿಷ್ಣುವಿಗೆ ಪೂಜೆ ಸಲ್ಲಿಸಬೇಕು.
- ಏಕಾದಶಿ ವ್ರತ ಪಾಲಿಸುವವರು ಬ್ರಾಹ್ಮಣರಿಗೆ ಆಹಾರ, ಬಟ್ಟೆ, ಹಣ ದಾನ ನೀಡಬೇಕು.

ಯೋಗಿನಿ ಏಕಾದಶಿ ಮಾಡುವುದು ಹೇಗೆ?

ಏಕಾದಶಿಯಂದು ಹೇಳಬೇಕಾದ ಮಂತ್ರ
ಜೇಷ್ಠ ಪಕ್ಷದಲ್ಲಿ ಬರುವ ಯೋಗಿನಿ ಏಕಾದಶಿಗೆ ಮಹತ್ವದ ಶಕ್ತಿಯನ್ನು ಹೊಂದಿದೆ. ಭಕ್ತಿ ಶ್ರದ್ಧೆಯಿಂದ ಯೋಗಿನಿ ಏಕಾದಶಿ ದಿನದಂದು ಮಹಾವಿಷ್ಣು ಮತ್ತು ಶಿವನ ಜಪ ಮಾಡಿದವರು ಸಕಲ ಸಂಪತ್ತುಗಳ ಒಡೆಯರಾಗುತ್ತಾರೆ. ಯೋಗಿನಿ ಏಕಾದಶಿ ದಿನದಂದು ಮಾಡಬೇಕಾದ ಮಂತ್ರಜಪಗಳಂದರೇ.. ಮಹಾವಿಷ್ಣು ಜಪಿಸಿ.. ಓಂ ನಮೋ ನಾರಾಯಣ ಎಂದು ಪ್ರಾರ್ಥಿಸಿ.. ಇನ್ನು ಶಿವನನ್ನು ಸ್ಮರಿಸಿ ಒಂ ನಮಃ ಶಿವಾಯ ಎಂದು ಜಪಿಸಿ ಇದರಿಂದ ನಿಮ್ಮ ಜನ್ಮ ಜನ್ಮದ ಪಾಪಗಳನ್ನು ನಿವಾರಿಸಿಕೊಳ್ಳಬಹುದು. ಅಲ್ಲದೇ ಹಣಕಾಸಿನ ಸಮಸ್ಯೆಯಿಂದ ಪಾರಾಗಬಹುದು.

ಯೋಗಿನಿ ಏಕಾದಶಿ ಪೂಜಾ ಸಮಯ
ಯೋಗಿನಿ ಏಕಾದಶಿ ತಿಥಿ ಪ್ರಾರಂಭ ಸಂಜೆ 5:40, ಜೂನ್ 16, 2020
ಯೋಗಿನಿ ಏಕಾದಶಿ ಮುಕ್ತಾಯ ಬೆಳಗ್ಗೆ 7:50, ಜೂನ್ 17, 2020

ಪಾರಣೆ (ಉಪವಾಸ ಮುರಿಯುವುದು)
ಸೂರ್ಯಾಸ್ತದ ಬಳಿಕ ಉಪವಾಸ ಮುರಿಯಬೇಕು. ಪಾರಣೆಯನ್ನು ದ್ವಾದಶ ತಿಥಿ ಒಳಗೆ ಮಾಡಬೇಕು, ಇದರೊಳಗೆ ಮಾಡದಿದ್ದರೆ ವ್ರತದ ಫಲ ಸಿಗುವುದಿಲ್ಲ. ಹರಿ ವಸರ ಸಮಯದಲ್ಲಿ ಪಾರಣೆ ಮಾಡಬಾರದು. ಪಾರಣೆ ಮಾಡುವ ಹರಿ ವಸರ ಮುಗೊಯುವವರೆಗೆ ಕಾಯಬೇಕು. ಉಪವಾಸವನ್ನು ಮಧ್ಯಾಹ್ನ ಹೊತ್ತಿನಲ್ಲೂ ಮುರಿಯಬಾರದು. ಉಪವಾಸ ಮುರಿಯಲು ಸಂಜೆಯವರೆಗೆ ಕಾಯಬೇಕು.
ಉಪವಾಸ ಮಾಡುವುದರಿಂದ ಭಗವಂತನ ಕೃಪೆ ಜೊತೆಗೆ ಆರೋಗ್ಯ ವೃದ್ಧಿಯಾಗುವುದು.



Click it and Unblock the Notifications