Latest Updates
-
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ!
ಸುಖ ನಿದ್ರೆಗೆ ಮಾಡಬೇಕಾದ ಯೋಗಾಸನಗಳು
ನಿಮಗೆ ರಾತ್ರಿ ನಿದ್ದೆ ಬರುತ್ತಿಲ್ಲವೆ? ಇಡೀ ದಿನ ಕೆಲಸ ಮಾಡಿ ನೀವು ನಿಶ್ಶಕ್ತರಾಗಿದ್ದೀರಾ? ಬಹುಶಃ ಒತ್ತಡ ಅಥವಾ ಇನ್ನಿತರ ಅಂಶಗಳು ನಿಮ್ಮ ಅಸೌಖ್ಯಕ್ಕೆ ಕಾರಣವಾಗಿರಬಹುದು. ಆದರೆ ಒಂದು ವಿಚಾರ ನೆನಪಿನಲ್ಲಿಡಿ, ರಾತ್ರಿಯ ಹೊತ್ತು ನಿದ್ದೆ ಬಾರದಿರುವುದು ನಿದ್ರಾಹೀನತೆ ಅಥವಾ ಇನ್ಸೋಮ್ನಿಯಾದ ಸೂಚನೆಗಳಿರಬಹುದು. ಇನ್ಸೋಮ್ನಿಯಾವು ಇಡೀ ದಿನದ ಬಳಲಿಕೆ ಅಥವಾ ದೈನಂದಿನ ಜಂಜಡಗಳ ಕಾರಣದಿಂದ ಕಾಡಬಹುದು.
ಹಾಗಾಗಿ ಈ ಇನ್ಸೋಮ್ನಿಯಾದ ಜೊತೆಗೆ ಹೋರಾಡಲು ನಾವು ನಿಮಗಾಗಿ ಕೆಲವೊಂದು ಯೋಗಾಸನಗಳನ್ನು ಸೂಚಿಸಿದ್ದೇವೆ. ಇವುಗಳು ನಿಮಗೆ ರಾತ್ರಿಯ ವೇಳೆಯಲ್ಲಿ ಒಳ್ಳೆಯ ಮತ್ತು ಅಡೆತಡೆಗಳಿಲ್ಲದ ನಿದ್ದೆಯನ್ನು ನೀಡಲು ಸಹಕರಿಸುತ್ತವೆ.

ಸುಪ್ತ ಬದ್ಧ ಕೋನಾಸನ
ಇದು ಒರಗು ಚಿಟ್ಟೆಯ ಆಸನ. ಬೆನ್ನನ್ನು ನೆಲಕ್ಕೊರಗಿಸಿ ಮಲಗಿ ಮತ್ತು ಕಾಲುಗಳನ್ನು ಜತೆಯಾಗಿರಿಸಿ. ಕಾಲುಗಳನ್ನು ನಿಮ್ಮ ಕೈಗಳಿಂದ ಹಿಡಿಯಿರಿ ಮತ್ತು ಇದೇ ರೀತಿ ಒಂದು ನಿಮಿಷ ಹಾಗೆ ಇರಿ.

ಹಾಲಾಸನ
ಬೆನ್ನನ್ನು ನೆಲಕ್ಕೊರಗಿಸಿ ಮಲಗಿ, ಎರಡು ಕಾಲುಗಳನ್ನು ನಿಮ್ಮ ತಲೆಯ ಮೇಲೆ ಎತ್ತಿ ಮತ್ತು ನೆಲವನ್ನು ಕಾಲಿನಿಂದ ಮುಟ್ಟಲು ಪ್ರಯತ್ನಿಸಿ. ಕೈಗಳು ನಿಮ್ಮ ಬೆನ್ನಿನ ನೆರವಿಗಿರಲಿ ಅಥವಾ ನೆಲದ ಮೇಲಿರಲಿ.

ವಿಪ್ರಿತಾ ಕರಣಿ
ಗೋಡೆಯ ವಿರುದ್ಧವಾಗಿ ಮಾಡಬೇಕಾದ ಆಸನವಿದು. ಗೋಡೆಯ ಮೇಲೆ ಕಾಲುಗಳನ್ನಿಟ್ಟು ಸುಮಾರು 5-6ರಿಂದ ಹಾಗೆ ಇರಲಿ. ಇದು ವಿಶ್ರಾಂತಿ ಪಡೆಯಲು ಮತ್ತು ಒತ್ತಡ ಕಡಿಮೆ ಮಾಡಲು ಒಳ್ಳೆಯ ಆಸನ.

ಅರ್ಧ ಮತ್ಸೇಂದ್ರಾಸನ
ಕುಳಿತುಕೊಳ್ಳಿ ಮತ್ತು ನಿಮ್ಮ ಬಲಮೊಣಕಾಲನ್ನು ಎಡ ತೊಡೆಯ ಕಡೆ ಬಗ್ಗಿಸಿ. ಅದೇ ರೀತಿ ಎಡಮೊಣಕಾಲನ್ನು ಬಲ ತೊಡೆಯ ಕಡೆ ಬಗ್ಗಿಸಿ ಮತ್ತು ಎಡಭಾಗಕ್ಕೆ ದೃಷ್ಟಿಯಿಟ್ಟು ನೋಡಿ.

ಸೂರ್ಯ ಭೇದನ
ಅಡ್ಡಕಾಲಿನಲ್ಲಿ ಕುಳಿತುಕೊಂಡು ನಿಮ್ಮ ಬಲ ಮೂಗನ್ನು ಹೆಬ್ಬೆರಳಿನಿಂದ ಹಿಡಿಯಿರಿ ಮತ್ತು ಬೆರಳುಗಳನ್ನು ವಿಸ್ತರಿಸಿ. ಬಲದ ಮೂಗಿನಿಂದ 5-10 ಸಲ ದೀರ್ಘವಾಗಿ ಉಸಿರಾಡಿ.



Click it and Unblock the Notifications
