Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಯಮ ದೀಪ 2021: ದಿನಾಂಕ, ಸಮಯ ಹಾಗೂ ಇದರ ಮಹತ್ವವೇನು?
ದೀಪಾವಳಿ ಸಮಯದಲ್ಲಿ ಯಮದೀಪ ಹಚ್ಚಿಡಲಾಗುವುದು. ಮನೆ ಮುಂದೆ ಹಚ್ಚಿಡುವ ಈ ದೀಪಕ್ಕೆ ತುಂಬಾನೇ ಮಹತ್ವವಿದೆ. ಧನತ್ರಯೋದಶಿಯಂದು ಯಮ ದೀಪ ಹಚ್ಚಿಡಲಾಗುವುದು.
ಈ ದಿನ ಯಮನನ್ನು ಪೂಜಿಸಿದರ ಅಕಾಲಿಕ ಮರಣಭಯ ದೂರವಾಗುವುದು, ಯಮನ ಅನುಗ್ರಹ ದೊರೆಯುವುದು ಎಂದು ನಂಬಲಾಗಿದೆ. ಹಿಂದೂ ಪುರಾಣದ ಪ್ರಕಾರ ಮೃತ್ಯುವಿನ ಅಧಿಪತಿ ಯಮ. ಯಮ ವ್ಯಕ್ತಿಯ ಪ್ರಾಣ ಕೊಂಡೊಯ್ಯಲು ಬಂದರೆ ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಅಷ್ಟ ದಿಕ್ಪಾಲಕರಲ್ಲಿ ದಕ್ಷಿಣ ದಿಕ್ಕಿನ ಅಧಿಪತಿ, ಸೂರ್ಯನ ಮಗ, ಕರ್ಮಕ್ಕೆ ತಕ್ಕಂತೆ ಶಿಕ್ಷೆ ನೀಡುವ ಶನೇಶ್ವರನ ತಮ್ಮ. ಈ ಯಮನಿಗೆ ಧನ ತ್ರಯೋದಶಿಯಂದು ದಕ್ಷಿಣ ದಿಕ್ಕಿನಲ್ಲಿ ಹಚ್ಚಿಟ್ಟರೆ ಯಮನ ಅನುಗ್ರಹವಿರುತ್ತದೆ. ಹಾಗಾಗಿ ಅಪಮೃತ್ಯು ಬರುವುದಿಲ್ಲ ಎಂದು ಹೇಳಲಾಗುವುದು.
ಯಮ ದೀಪ ಯಾವ ದಿನ, ಯಾವ ಸಮಯಕ್ಕೆ ಹಚ್ಚಬೇಕು? ಯಮನಿಗೆ ಹಚ್ಚುವ ದಿಪ ಹೇಗಿರಬೇಕು ಎಂದು ತಿಳಿಯೋಣ ಬನ್ನಿ:

ಯಮ ದೀಪ ಹಚ್ಚುವುದರ ಹಿಂದಿನ ದಾರ್ಮಿಕ ಪ್ರಾಮುಖ್ಯತೆ
* ಯಮ ದೀಪ ಹಚ್ಚುವುದರಿಂದ ವ್ಯಕ್ತಿಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುವುದು.
* ಧನ ತ್ರಯೋಧಶಿಯಂದು ಯಮ ಧರ್ಮ ತುಂಬಾ ಚಟುವಟಿಕೆಯಿಂದ ಇರುತ್ತಾನೆ ಎನ್ನಲಾಗಿದೆ, ಆದ್ದರಿಂದ ಈ ದಿನ ಅವನನ್ನು ಪೂಜಿಸಿದರೆ ಇತರ ಸಮಯದಲ್ಲಿ ಪೂಜಿಸಿದ್ದಕ್ಕಿಂತ ಅಧಿಕ ಫಲ ಸಿಗುವುದು. ಯಮನ ಅನುಗ್ರಹ ಬೇಗನೆ ಸಿಗುವುದು.
* ಅಪಮೃತ್ಯು ನೀಡಬೇಡ ಎಂದು ಯಮನಲ್ಲಿ ಪ್ರಾರ್ಥಿಸಿ ಅವನ ಅನುಗ್ರಹ ಪಡೆಯಲಾಗುವುದು.

ಗೋಧಿ ಹಿಟ್ಟಿನಿಂದ ದೀಪ ತಯಾರಿಸಿ ಹಚ್ಚಬೇಕು
ಈ ದಿನ ಯಮ ದೀಪವನ್ನು ದಕ್ಷಿಣ ದಿಕ್ಕಿನಲ್ಲಿ ಹಚ್ಚಿಡಬೇಕು. ಅದರಲ್ಲೂ ಗೋಧಿ ಹಿಟ್ಟಿನಿಂದ ತಯಾರಿಸಿದ ದೀಪವನ್ನು ಹಚ್ಚಿಡಬೇಕು.

ಯಮ ದೀಪ ಸಮಯ
ದಿನಾಂಕ: ನವೆಂಬರ್ 2, ಧನ ತ್ರಯೋದಶಿ
ತ್ರಯೋದಶಿ ತಿಥಿ ಪ್ರಾರಂಭ: ನವೆಂಬರ್ 2, ಬೆಳಗ್ಗೆ 11:31ಕ್ಕೆ
ತ್ರಯೋದಶಿ ತಿಥಿ ಮುಕ್ತಾಯ: ನವೆಂಬರ್ 3, ಬೆಳಗ್ಗೆ 09:02ಕ್ಕೆ
ಮನೆಯ ಹೊರಗಡೆ ದಕ್ಷಿನ ದಿಕ್ಕಿನಲ್ಲಿ ಯಮ ದೀಪವನ್ನು ಹಚ್ಚಿಡಲಾಗುವುದು. ಧನತ್ರಯೋಧಶಿಯಂದು ಈ ದೀಪವನ್ನು ಹಚ್ಚಿ ಯಮನನ್ನು ಪ್ರಾರ್ಥಿಸಿದರೆ ಅವರಿಗೆ ಅಕಾಲಿಕ ಮೃತ್ಯ ಸಂಭವಿಸುವುದಿಲ್ಲ ಎಂದು ವೈದಿಕ ಶಾಸ್ತ್ರ ಹೇಳುತ್ತದೆ.

ಯಮ ದೀಪ ಹಚ್ಚುವಾಗ ಈ ಮಂತ್ರಗಳನ್ನು ಹೇಳಿ
ಮಮ ಆಪ್ಮೃತ್ಯು ವಿನಾಶಾರ್ಥಂ ಯಮದೀಪ್ದಾನಂ ಕರಿಷ್ಯೇ
ಅರ್ಥ: ನನ್ನ ಅಕಾಲಿನ ಮೃತ್ಯ ತಡೆಯಲು ಈ ಯಮ ದೀಪವನ್ನು ಹಚ್ಚುತ್ತಿದ್ದೇನೆ.
ಮೃತ್ಯುನಾ ಪಾಷಾದನ್ ದಾಭ್ಯಾಂ ಕಾಲೇನ ಶ್ಯಾಮಯಾಯುತಃ |
ತ್ರಯೋದಶ್ಯಾಮ್ ದೀಪದಾನಾತ್ ಸೂರ್ಯಜಃ ಪ್ರಿಯತಾಂ ಮಮ |
ಅರ್ಥ: ಧನತ್ರಯೋಧಶಿಯಂದು ಸುರ್ಯನ ಪುತ್ರನಾದ ಯಮ ದೇವನಿಗೆ ಈ ದೀಪ ಹಚ್ಚುತ್ತಿದ್ದೇನೆ. ಯಮರಾಯನು ನನ್ನ ಅಕಾಲಿಕ ಮೃತ್ಯು ತಡೆದು ನನಗೆ ಒಳಿತು ಮಾಡಲಿ ಎಂದು ಪ್ರಾರ್ಥಿಸಬೇಕು.
ನಂತರ ಸ್ವಲ್ಪ ನೀರನ್ನು ತೆಗೆದು ದೀಪದ ಮುಂದೆ ಅರ್ಪಿಸಬೇಕು.



Click it and Unblock the Notifications