Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಸುಂದರ ತರುಣಿ, ಮಗು ಮತ್ತು ಝೆನ್ ಗುರು ಹಾಕುನ್

ತುಂಬಾ ಹೆದರಿಕೆ ಹಾಗೂ ಮುಜುಗರದಿಂದ ಆಕೆ ಮೊದಲು ಗುಟ್ಟು ಬಿಟ್ಟುಕೊಡಲು ಒಪ್ಪದಿದ್ದರೂ, ತುಂಬಾ ಒತ್ತಾಯಿಸಿದಾಗ, ಎಲ್ಲರಿಂದಲೂ ಪೂಜಿತರಾದ ಮತ್ತು ಅತ್ಯಂತ ಶುದ್ಧ ಹಸ್ತರೆಂದು ಹೆಸರಾದ ಝೆನ್ ಗುರು ಹಾಕುನ್ ಇದರ ಕಾರಣಕರ್ತರೆಂದು ಬಾಂಬ್ ಸಿಡಿಸಿಬಿಟ್ಟಳು. ಎಲ್ಲರಿಗೂ ಈ ಸುದ್ದಿ ತಿಳಿದು ಆಶ್ಚರ್ಯ ಮತ್ತು ಆಘಾತ.
ಮೊದಲು ಇಂಥ ಆಘಾತಕಾರಿ ಸುದ್ದಿಯನ್ನು ಒಪ್ಪಲು ಯುವತಿಯ ಪಾಲಕರು ಹಿಂದೇಟು ಹಾಕಿದರೂ, ಒಂದು ಬಾರಿ ಕೇಳೇಬಿಡೋಣ ಎಂದು ಹಾಕುನ್ ಬಳಿ ಸಾಗಿದರು. ಕೋಪಗೊಂಡ ಆಕೆಯ ತಂದೆ-ತಾಯಿ ಹಾಕುನ್‍ರ ಬಳಿ ಹೋಗಿ ಮಗಳ ಆಪಾದನೆಯ ಬಗ್ಗೆ ಕೂಗಾಡಲು ಆರಂಭಿಸಿದರು. ಎಲ್ಲ ಆರೋಪಗಳನ್ನು ಶಾಂತಚಿತ್ತರಾಗಿ ಕೇಳಿ ಹಾಕುನ್‍ರು "ಹೌದೇನು...?" ಎಂದು ಸ್ಥಿತಪ್ರಜ್ಞರಂತೆ ನುಡಿದರು.
ಕೆಲ ಕಾಲ ಕಳೆಯಿತು. ತರುಣಿ ತುಂಬು ಗರ್ಭಿಣಿಯಾದಳು. ಆ ತರುಣಿಗೆ ಮಗುವಾದಾಗ, ಆಕೆಯ ಪೋಷಕರು, ಇಡೀ ಊರಿನ ಯಾರಿಗೂ ಬೇಡವಾದ ಆ ಮಗುವನ್ನು ಹಾಕುನ್‍ರ ಬಳಿಗೆ ತಂದರು. ಮಗು ಹಾಕುನ್‍ರದೇ ಆಗಿದ್ದು, ಅವರೇ ಅದರ ಜವಾಬ್ದಾರಿ ಹೊರಬೇಕೆಂದು ಹಾಕುನ್ ಮುಂದೆ ತಂದಿಟ್ಟರು.
ಈ ಬೆಳವಣಿಗೆಯಿಂದ ಹಾಕುನ್‌ರು ಹೌಹಾರಲಿಲ್ಲ. ಶಾಂತಚಿತ್ತರಾಗಿ, "ಹೌದೇನು...?" ಎಂದಷ್ಟೇ ಹೇಳಿದ ಹಾಕುನ್‍ರು ಮರುಮಾತನಾಡದೇ ಆ ಮಗುವನ್ನು ಸ್ವೀಕರಿಸಿದರು. ಆ ತರುಣಿ ತನ್ನ ಸುಳ್ಳನ್ನು ತಡೆಯಲಾಗದೆ ನಿಜ ಹೇಳಲೇಬೇಕೆನಿಸುವ ತನಕ ಅನೇಕ ತಿಂಗಳುಗಳು ಹಾಕುನ್ ಆ ಮಗುವಿನ ಆರೈಕೆ ಮಾಡಿದರು. ಆದರೆ, ತರುಣಿಗೆ ತಪ್ಪಿತಸ್ಥ ಭಾವನೆ ಕಾಡಲು ಪ್ರಾರಂಭಿಸಿತು. ಕೊನೆಗೆ ತಪ್ಪೊಪ್ಪಿಕೊಂಡ ಆ ತರುಣಿ, ತಾನು ರಕ್ಷಿಸಲು ಯತ್ನಿಸಿದ, ನಿಜವಾದ ತಂದೆಯಾದ ಆ ಊರಿನ ತರುಣನ ಹೆಸರನ್ನು ಬಹಿರಂಗಗೊಳಿಸಿದಳು.
ಆ ಪೋಷಕರು ತಕ್ಷಣವೇ ಹಾಕುನ್‍ರ ಬಳಿ ಹೋಗಿ ಆ ಮಗುವನ್ನು ವಾಪಸ್ ನೀಡಬೇಕೆಂದು ಕೇಳಿಕೊಂಡರು. ತಮ್ಮ ತಪ್ಪಿಗೆ ಅತೀವ ಕ್ಷಮೆ ಯಾಚಿಸಿದ ಅವರು ನಿಜವಾಗಿ ನಡೆದ ವಿಷಯವನ್ನು ವಿವರಿಸಿದರು.
ಹಾಕುನ್ ಹೆಚ್ಚೇನೂ ಮಾತನಾಡದೆ "ಹೌದೇನು...?" ಎಂದಷ್ಟೇ ಹೇಳಿ, ಆ ಮಗುವನ್ನು ಯುವತಿಗೆ ಹಿಂದಿರುಗಿಸಿದರು.



Click it and Unblock the Notifications
