Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ವಾಸ್ತು ಪ್ರಕಾರ ಮನೆಯನ್ನು ಈ ರೀತಿ ಇಟ್ಟರೆ ಹಣದ ಕೊರತೆಯೇ ಇರಲ್ಲ
ನಾವು ಒಂದು ಮನೆಯಲ್ಲಿ ವಾಸಿಸುವಾಗ ಆ ಮನೆ ಕುಬೇರ ಮನೆಯಾಗಿರಬೇಕೆಂದು ಬಯಸುತ್ತೇವೆ. ಕುಬೇರನ ಒಲಿಸಿಕೊಂಡರೆ ಆ ಮನೆಯಲ್ಲಿ ಹಣಕ್ಕೆ ಕೊರತ ಇರಲ್ಲ ಎಂದು ಹೇಳಲಾಗುವುದು.

ಕುಬೇರನ ಸಂತೋಷಕ್ಕಾಗಿ ಮನೆಯಲ್ಲಿ ಕೆಲವೊಂದು ವಾಸ್ತು ನಿಮಯಗಳನ್ನು ಅನುಸರಿಸಬೇಕು ಎಂದು ವಾಸ್ತು ನಿಯಮ ಹೇಳುತ್ತದೆ. ವಾಸ್ತು ಶಾಸ್ತ್ರವು ನೀವು ಹಣವನ್ನು ಅಂದ್ರೆ ಕುಬೇರನನ್ನು ಆಕರ್ಷಿಸಲು ಏನು ಮಾಡಬೇಕೆಂದು ಹೇಳಿದೆ.
ನೀವು ವಾಸ್ತು ನಂಬುವುದಾದರೆ ಮನೆಯಲ್ಲಿ ಹಣ ಕೊರತೆ ಉಂಟಾಗದಿರಲು ಈ ವಾಸ್ತು ಟಿಪ್ಸ್ ಅನುಸರಿಸುವುದು ಒಳ್ಳೆಯದು:

ಮನೆಯ ಮುಂಬಾಗಲು
ಹಣವು ಅಂದ್ರೆ ಅದೃಷ್ಟ ಮನೆಯ ಮುಂಬಾಗಿಲಿನಿಂದ ಬರುತ್ತದೆ, ಆದ್ದರಿಂದ ಮನೆಯ ಮುಂಬಾಗಲು ಸ್ವಚ್ಛವಾಗಿರಬೇಕು. ಮನೆಯ ಒಳಗಡೆ ಬರುವಾಗ ಗಂಟೆಯ ನಿನಾದವಿರಲಿ. ಆ ಶಬ್ದ ಹಣವನ್ನು ಆಕರ್ಷಿಸುತ್ತದೆ. ಮನೆಯ ಮುಂದುಗಡೆ ಸುಂದರವಾದ ಅಲಂಕಆರ ಇರಲಿ, ದೀಪವಿರಲಿ.

ಮನೆಯ ಬಣ್ಣ
ವಾಸ್ತು ಪ್ರಕಾರ ಕೆಂಪು, ನೀಲಿ ಮತ್ತು ಹಸಿರು ಹಣವನ್ನು ಆಕರ್ಷಿಸುತ್ತದೆ. ಈ ಬಣ್ಣಗಳನನ್ನು ನಿಮ್ಮ ಮನೆಯ ಗೋಡೆಗಳಿಗೆ ಬಳಸಿ. ಅಲ್ಲದೆ ಫರ್ನೀಚರ್, ಮತ್ತಿತರ ಸಾಧನಗಳ ಬಣ್ಣಗಳು ಕೂಡ ಹಣವನ್ನು ಆಕರ್ಷಿಸುತ್ತದೆ.

ಚಿನ್ನದ ಬಣ್ಣ ಅಥವಾ ಅಲಂಕಾರ
ಚಿನ್ನ ಸಂಪತ್ತಿನ ಸಂಕೇತ. ನೀವು ಐಶ್ವರ್ಯವಂತರಾಗಲು ಮನೆಯಲ್ಲಿ ಚಿನ್ನದ ಬಣ್ಣದ ಸಾಧನಗಳು ಅಥವಾ ಡೆಕೋರೇಷನ್ ಬಳಸಿ ಮನೆಯ ಹಾಲ್ ಅಲಂಕರಿಸಿ.

ಸ್ವಚ್ಛವಾದ ಹಾಗೂ ಒಪ್ಪವಾದ ಅಡುಗೆ ಮನೆ
ಅಡುಗೆ ಮನೆ ತುಂಬಾ ಸ್ವಚ್ಛವಾಗಿ ಹಾಗೂ ಒಪ್ಪವಾಗಿ ಇಡುವುದರಿಂದ ಮನೆಗೆ ಐಶ್ವರ್ಯ ಬರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಮನೆಯ ಗಡಿಯಾರ
ನಿಮ್ಮ ಮನೆಯಲ್ಲಿ ಎಷ್ಟು ಗಡಿಯಾರ ಇರುತ್ತದೋ ಆ ಎಲ್ಲಾ ಗಡಿಯಾರ ಸರಿಯಾದ ಸಮಯ ತೋರಿಸುತ್ತಿರಬೇಕು. ನಡೆಯದ ಗಡಿಯಾರ ಬಳಸಬೇಡಿ. ಇನ್ನು ಸರಿಯಾದ ಸಮಯ ತೋರಿಸದಿರುವ ಗಡಿಯಾರ ಮನೆಯಲ್ಲಿದ್ದರೆ ಅದರಿಂದ ಆರ್ಥಿಕ ತೊಂದರೆ ಉಂಟಾಗುವುದು.

ಸ್ಥಳಾವಕಾಶ ಅಧಿಕ ಇರಲಿ
ಮನೆಯಲ್ಲಿ ಸಾಕಷ್ಟು ಅಧಿಕಾರವಿರಲಿ, ಮನೆಯಲ್ಲಿ ಅಗ್ಯತವಿಲ್ಲದ ಮುರಿದ ವಸ್ತುಗಳನ್ನು ಬಿಸಾಡಿ, ಮನೆಯನ್ನು ಒಪ್ಪವಾಗಿ ಇಡಿ. ಇದರಿಂದ ಮನೆಯಲ್ಲಿ ಹಣದ ಬರುವಿಕೆ ಹೆಚ್ಚಾಗುವುದು.

ನೀರನ್ನು ಉಳಿಸಿ
ವಾಸ್ತು ಶಾಸ್ತ್ರದಲ್ಲಿ ನೀರಿಗೆ ತುಂಬಾ ಮಹತ್ವವಿದೆ. ಆದ್ದರಿಂದ ಮನೆಯಲ್ಲಿ ನೀರನ್ನು ಅನಗ್ಯತವಾಗಿ ಪೋಲು ಮಾಡಬೇಡಿ. ಮನೆಯಲ್ಲಿ ಯಾವ ನಲ್ಲಿ ಲೀಕ್ ಇರಬಾರದು. ಅಲ್ಲದೆ ಯಾವುದೇ ಕಲುಷಿತ ನೀರು ನಿಲ್ಲುವಂತಿರಬಾರದು.

ಮನಿ ಪ್ಲ್ಯಾಂಟ್ ನೆಡಿ
ಮನೆಯಲ್ಲಿ ಹಣವನ್ನು ಆಕರ್ಷಿಸುತ್ತೆ ಎಂದು ಹೇಳಲಾಗುವ ಮನಿ ಪ್ಲ್ಯಾಂಟ್ ನೆಡಿ, ಇದರಿಂದ ಶುದ್ಧ ಗಾಳಿಯೂ ಸಿಗುವುದು, ಮನೆಗೆ ಅದೃಷ್ಟವೂ ಬರುವುದು.



Click it and Unblock the Notifications
