Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಝೆನ್ ಕಥೆ: ಎರಡು ಆತ್ಮದ ಹೊಂದಿದ ಸೀಜೋ!

ಒಂದು ದಿನ ಚೋಕನ್ ಸೀಜೋಳ ನಿಶ್ಚಿತಾರ್ಥವನ್ನು ಇನ್ನೊಬ್ಬ ಮನುಷ್ಯನ ಜೊತೆಗೆ ನಿರ್ಧರಿಸಿದ. ಇದರಿಂದ ಬೇಸರಗೊಂಡು, ದುಃಖಿತನಾದ ಓಚು ಒಂದು ಬೋಟ್‌ನಲ್ಲಿ ಆ ಸ್ಥಳದಿಂದ ನಡೆದ. ಪ್ರಯಾಣ ಮಾಡುತ್ತಿರುವಾಗ ಸೀಜೋ ಕೂಡಾ ತಾನಿರುವ ಬೋಟ್‌ನಲ್ಲಿಯೇ ಇರುವುದನ್ನು ಕಂಡು ತುಂಬಾ ಖುಷಿಯಾಯಿತು. ಅವರಿಬ್ಬರು ಮದುವೆಯಾಗಿ ಬೇರೊಂದು ನಗರದಲ್ಲಿ ಸುಖವಾಗಿ ಬಾಳಿದರು. ಅವರಿಗೆ ಎರಡು ಮಕ್ಕಳಾಯಿತು.
ಒಂದು ದಿನ ಸೀಜೋಗೆ ತನ್ನ ತಂದೆಯನ್ನು ಭೇಟಿ ಮಾಡಬೇಕು ಎಂಬ ಆಸೆಯಾಯಿತು. ಓಚು ಕೂಡಾ ಅವಳ ಆಸೆಗೆ ಸಹಮತ ವ್ಯಕ್ತಪಡಿಸಿದ ಮತ್ತು ತಂದೆಯಲ್ಲಿ ಕ್ಷಮಾಪಣೆ ಕೇಳುವುದಕ್ಕೆ ಸಿದ್ಧವಾದರು. ಚೋಕನ್‌ನ ಪ್ರದೇಶಕ್ಕೆ ಬಂದ ತಕ್ಷಣ ತನ್ನ ಹೆಂಡತಿಯನ್ನು ಬೋಟ್‌ನಲ್ಲೇ ಬಿಟ್ಟು ಆಕೆಯ ತಂದೆಯನ್ನು ನೋಡಿ ಬರಲು ಹೋದ. ಚೋಕನ್ ಬಳಿ ಓಚು ಕ್ಷಮಾಪಣೆ ಕೇಳಿದ. ಇವನಿಗೆ ಅತ್ಯಾಶ್ಚರ್ಯವಾಗುವಂತೆ ಚೋಕನ್ ತನ್ನ ಮಗಳು ನೀನು ಹೋದ ಮೇಲೆ ತುಂಬಾ ಬೇಸರ ಪಟ್ಟು ಹಾಸಿಗೆ ಹಿಡಿದಳು. ಈಗ ಹಾಸಿಗೆಯಲ್ಲಿಯೇ ಇದ್ದಾಳೆ ಎಂದು ಹೇಳಿದ. ಆದರೆ ಓಚು ಇಲ್ಲ ಸೀಜೋ ನನ್ನ ಜೊತೆ ಇದ್ದಾಳೆ ಎಂದು ಬೋಟ್‌ನಲ್ಲಿ ಕಾಯುತ್ತಿದ್ದ ಸೀಜೋಳನ್ನು ಕರೆತಂದ. ಆಗ ಹಾಸಿಗೆಯಲ್ಲಿ ಮಲಗಿದ್ದ ಸೀಜೋ ಮತ್ತು ನಿಜವಾದ ಸೀಜೋ ಇಬ್ಬರೂ ಮುಖಾಮುಖಿಯಾದರು.
ಈ ಕಥೆಯನ್ನು ತನ್ನು ಅನುಯಾಯಿಗಳಿಗೆ ಹೇಳಿದ ಝೆನ್ ಗುರು ಗೋಸೋ ಕೇಳಿದ "ಸೀಜೋ ಎರಡು ಆತ್ಮವನ್ನು ಹೊಂದಿದ್ದಾಳೆ. ಒಂದು ಆತ್ಮ ಮನೆಯಲ್ಲಿ ಕೃಶವಾಗಿ ಬಿದ್ದಿದೆ. ಇನ್ನೊಂದು ಮದುವೆಯಾಗಿ ಎರಡು ಮಕ್ಕಳನ್ನು ಪಡೆದಿದೆ. ಈ ಎರಡರಲ್ಲಿ ಯಾವ ಆತ್ಮ ನಿಜವಾದದ್ದು ?"



Click it and Unblock the Notifications
