Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಹಿಂದೂ ಧರ್ಮದ ಪವಿತ್ರ ಗಿಡ, ಮನೆಯಂಗಳದ ತುಳಸಿ
ತುಳಸಿಯು ಮನೆಯ ಒಂದು ಅವಿಭಾಜ್ಯ ಅಂಗವಾಗಿ ಬೆಳೆಯಲ್ಪಡುವ ಗಿಡ. ಹಿಂದೂ ಧರ್ಮದವರು ಇದನ್ನು ದೇವರು ಎಂದು ಮನೆಯ ಮುಂದೆ ಬೆಳೆಸಿದರೆ, ಇತರೆ ಧರ್ಮದವರು ಇದನ್ನು ಔಷಧಿ ಎಂದು ಮನೆಯ ಅಕ್ಕ-ಪಕ್ಕ ಬೆಳೆಸುತ್ತಾರೆ. ತುಳಸಿಯು ಹೀಗೆ ಜನಮಾನಸದಲ್ಲಿ ನೆಲೆನಿಂತಿರುವ ಒಂದು ಅದ್ಭುತ ಸಸ್ಯವಾಗಿ ನಮಗೆ ಪರಿಚಯವಾಗಿದೆ.
ತುಳಸಿಯನ್ನು ಹಿಂದೂಗಳು ಪವಿತ್ರ ಗಿಡವೆಂದು ಭಾವಿಸಿ ಪೂಜಿಸುತ್ತಾರೆ. ಅದಕ್ಕೆ ಅದರದೆ ಆದ ಪಾವಿತ್ರ್ಯತೆ ಇದೆ. ತುಳಸಿಯ ಎಲೆಗಳಲ್ಲಿ, ಹಲವಾರು ಔಷಧೀಯ ಗುಣಗಳು ಇವೆ. ಇದರ ಜೊತೆಗೆ ನಿಮ್ಮ ಮನೆಯ ಮುಂದೆ ಅಕ್ಕ ಪಕ್ಕ ತುಳಸಿ ಗಿಡವನ್ನು ಬೆಳೆಸಿದರೆ ಸೊಳ್ಳೆಗಳ ಸಹಿತ ಸಣ್ಣ ಪುಟ್ಟ ಕ್ರಿಮಿಗಳು ನಿಮ್ಮ ಮನೆಗೆ ಬರುವುದು ತಪ್ಪುತ್ತದೆಯಂತೆ. ಹಾಗಾಗಿ ಮನೆಯ ಸುತ್ತ ಅಲ್ಲಲ್ಲಿ ಒಂದು ಗಿಡವನ್ನು ನೆಡಿ, ಇಲ್ಲವೇ ಕುಂಡದಲ್ಲಿ ಬೆಳೆಸಿ.

ನೀವು ದೆವ್ವ-ಭೂತಗಳನ್ನು ನಂಬುವವರಾಗಿದ್ದಲ್ಲಿ, ತುಳಸಿ ಗಿಡವನ್ನು ಬೆಳೆಸಿ. ತುಳಸಿ ಇಂತಹ ನಕಾರಾತ್ಮಕ ಶಕ್ತಿಗಳನ್ನು ದೂರವಿರಿಸುತ್ತದೆ. ಭಾರತದ ಕೆಲವು ಭಾಗಗಳಲ್ಲಿ ಈ ಗಿಡವನ್ನು ಮನೆಯಲ್ಲಷ್ಟೇ ಅಲ್ಲದೆ, ದೇವಾಲಯಗಳಲ್ಲೂ ಸಹ ಪೂಜಿಸುತ್ತಾರೆ. ಇದನ್ನು ಅಷ್ಟು ಪವಿತ್ರವಾದ ಗಿಡವೆಂದು ಗುರುತಿಸಲಾಗಿದೆ. ಪ್ರತಿದಿನ ತುಳಸಿಯನ್ನು ಸೇವಿಸಿ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಹಾಗು ಇದು ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ನಿರೋಧಕ ಗುಣಗಳು ನಿಮ್ಮ ದೇಹವನ್ನು ರೋಗ ಮುಕ್ತ ಮಾಡುತ್ತವೆ. ಅದೃಷ್ಟಹೀನ ದೇವತೆ ತುಳಸಿ ಪರಮಪಾವನೆಯಾಗಿದ್ದು ಹೇಗೆ?
ತುಳಸಿ ಎಲೆಗಳು ರಕ್ತವನ್ನು ಶುದ್ಧಿಗೊಳಿಸುವುದರ ಜೊತೆಗೆ, ಇವು ನಿಮ್ಮ ತ್ವಚೆ ಮತ್ತು ಕೂದಲನ್ನು ಸಹ ಆರೋಗ್ಯಕರವಾಗಿ ಇರಿಸುತ್ತದೆ. ಇದರಲ್ಲಿ ಆಂಟಿಆಕ್ಸಿಡೆಂಟ್‌ಗಳು ಅಧಿವಾಗಿ ಇರುವುದರಿಂದಾಗಿ, ಇವು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದಕ್ಕಾಗಿ ನೀವು ಪ್ರತಿದಿನ ತುಳಸಿ ಎಲೆಗಳನ್ನು ಸೇವಿಸಿದರೆ ಸಾಕು, ಈ ಪ್ರಯೋಜನ ನಿಮ್ಮದಾಗುತ್ತದೆ.
ಸೂಚನೆ: ಕೆಲವೊಂದು ನಿರ್ದಿಷ್ಟ ದಿನಗಳಂದು, ತುಳಸಿ ಎಲೆಯನ್ನು ಕೀಳಲು ಹೋಗಬೇಡಿ. ಸೂರ್ಯ ಗ್ರಹಣ, ಏಕಾದಶಿ ಮತ್ತು ಭಾನುವಾರಗಳಂದು ಇದನ್ನು ಕೀಳಲು ಹೋಗಬೇಡಿ. ಅಲ್ಲದೆ ರಾತ್ರಿ ಸಮಯದಲ್ಲಿ ಸಹ ಇದನ್ನು ಕೀಳಲು ಹೋಗಬೇಡಿ. ಅದು ಒಳ್ಳೆಯದಲ್ಲ ಎಂದು ಹೇಳುತ್ತಾರೆ. ತುಳಸಿ ಚಹಾದಲ್ಲಿ ಅಡಗಿದೆ ಅದ್ಭುತ ಔಷಧೀಯ ಗುಣಗಳು
ತುಳಸಿಯನ್ನು ಮನೆಯಲ್ಲಿ ಬೆಳೆಯುವುದು ಒಳ್ಳೆಯದು. ಪ್ರತಿದಿನ ಇದರ ಮುಂದೆ ದೀಪವನ್ನು ಬೆಳಗುವುದರಿಂದ ಮನೆಗೆ ಸಂಪತ್ತು ಮತ್ತು ಅದೃಷ್ಟ ದೊರೆಯುತ್ತದೆಯಂತೆ. ತುಳಸಿ ಗಿಡವು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ತೊಲಗಿಸುತ್ತದೆ ಎಂದು ಬಹುತೇಕ ಮಂದಿ ನಂಬುತ್ತಾರೆ.



Click it and Unblock the Notifications



