Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಈ ಕ್ಯಾಲಿಗ್ರಫಿ ಮಾಸ್ಟರ್ ಪೀಸ್ ಆದ ಕಥೆ

ಈ ಬರಹವನ್ನು 200 ವರ್ಷಗಳ ಹಿಂದೆ ಕೊಸೆನ್ ಎಂಬವರು ಬರೆದಿದ್ದು. ಮೊದಲು ಈ ಬರಹವನ್ನು ಪೇಪರ್ ನಲ್ಲಿ ಬರೆಯಲಾಯಿತು. ಅವರಿಗೆ ಒಬ್ಬ ಶಿಷ್ಯ ಇದ್ದ. ಅವನು ಗುರುಗಳು ಬರೆದಿದ್ದು ಇಷ್ಟವಾಗದಿದ್ದರೆ ನೇರವಾಗಿ ಹೇಳಿ ಬಿಡುತ್ತಿದ್ದ. ಆದ್ದರಿಂದ ಗುರುಗಳಿಗೆ ಮತ್ತಷ್ಟು ಉತ್ತಮವಾಗಿ ಬರೆಯಲು ಸಾಧ್ಯವಾಗುತ್ತಿತ್ತು.
ಅದರಂತೆ ಗುರುಗಳು "The First Principle" ಬರೆದು ಅವನಿಗೆ ತೋರಿಸಿದರು. ಆದರೆ ಗುರುಗಳು ಬರೆದ ಸ್ಟೈಲ್ ಅವನಿಗೆ ಇಷ್ಟವಾಗಲಿಲ್ಲ, ನೇರವಾಗಿ ಹೇಳಿಬಿಟ್ಟ. ಅದನ್ನು ಮತ್ತಷ್ಟು ಚೆನ್ನಾಗಿ ಬರೆದು ಇದು ಹೇಗಿದೆ ಎಂದು ಕೇಳಿದರು. ಆಗಲೂ ಆ ಶಿಷ್ಯನಿಗೆ ಇಷ್ಟವಾಗಲಿಲ್ಲ. ನಂತರ ಮತ್ತೊಮ್ಮೆ ಬರೆದು ಇದು ಹೇಗಿದೆ ಎಂದು ಕೇಳಿದರು, ಮೊದಲಿಗಿಂತ ಕೆಟ್ಟದಾಗಿದೆ ಎಂದು ಹೇಳಿದನು.
ಈ ರೀತಿ 84 ಬಾರಿ ಬರೆದರು. ಆದರೆ ಒಂದೂ ಆ ಶಿಷ್ಯನಿಗೆ ಇಷ್ಟವಾಗಲಿಲ್ಲ. ಒಂದು ದಿನ ಶಿಷ್ಯ ಹೊರಗೆ ಹೋಗಿದ್ದ ಸಮಯದಲ್ಲಿ ಗುರುಗಳು ತುಂಬಾ ತುಂಬಾ ಅವಸರ ಅವಸರವಾಗಿ ಬರೆದರು. ಮರಳಿ ಬಂದ ಶಿಷ್ಯ ಅದನ್ನು ನೋಡಿ "ತುಂಬಾ ಚೆನ್ನಾಗಿದೆ, ಮಾಸ್ಟರ್ ಪೀಸ್ ಅಂದರೆ ಇದು" ಎಂದನು. ನಂತರ ಅದೇ ರೀತಿ ಗೇಟ್ ನಲ್ಲಿ ಕೆತ್ತಲಾಯಿತು.



Click it and Unblock the Notifications
