Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಂದು ದೇವಾನು ದೇವತೆಗಳ ಸವಾರಿಗೆ-ಪ್ರಾಣಿ ಪಕ್ಷಿಗಳೇ ವಾಹನ!
ಹಿಂದೂ ಧರ್ಮಗ್ರಂಥಗಳಲ್ಲಿ ಸಂಚಾರಕ್ಕೆ ಬಳಸಲಾಗುತ್ತಿದ್ದ ಪ್ರಾಣಿಗಳ ಮತ್ತು ವಾಹನಗಳ ಬಗ್ಗೆ ಹಲವು ಉಲ್ಲೇಖಗಳಿವೆ. ವಿವಿಧ ದೇವತೆಗಳು ವಿವಿಧ ಪ್ರಾಣಿಗಳ ಮೇಲೆ ಸವಾರಿ ಮಾಡುವಂತೆ ಬಣ್ಣಿಸಲಾಗಿದೆ.
ಉದಾಹರಣೆಗೆ ಗಣೇಶನ ವಾಹನ ಇಲಿ, ಅಯ್ಯಪ್ಪನ ವಾಹನ ಹುಲಿ. ಆದರೆ ಇಲ್ಲಿ ಈ ಪ್ರಾಣಿಯ ಉಲ್ಲೇಖ ಕೇವಲ ದೇವತೆಯನ್ನು ಒಂದೆಡೆಯಿಂದ ಇನ್ನೊಂದೆಡೆ ಸವಾರಿ ಮಾಡುವಲ್ಲಿ ಅಲ್ಲದೇ ಬೇರೆಯೇ ವಿಶೇಷ ಕಾರಣಕ್ಕಾಗಿ ವರ್ಣಿಸಲಾಗಿದೆ.
ದೇವ ದೇವಿಯರನ್ನು ಸದಾ ಪ್ರಾಣಿ ಮತ್ತು ಹೂವುಗಳ ಜೊತೆಗೇ ವರ್ಣಿಸಲಾಗಿದ್ದು ಪ್ರತಿ ಪ್ರಾಣಿಯ ಮನುಷ್ಯರೊಂದಿಗಿನ ಒಡನಾಟ ಅಥವಾ ಸಂಬಂಧವನ್ನು ಗಮನಿಸಿಯೇ ಉಲ್ಲೇಖಿಸಲಾಗಿದೆ. ಕೆಳಗಿನ ಸ್ಲೈಡ್ ಶೋ ಮೂಲಕ ಈ ಪ್ರಾಣಿಗಳನ್ನೇಕೆ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರ ಪಡೆಯಬಹುದು.

ಇಲಿ
ಸಸ್ತನಿಗಳಲ್ಲಿಯೇ ಅತಿ ಪುಕ್ಕಲ ಪ್ರಾಣಿ ಎಂದರೆ ಇಲಿ. ಎಲ್ಲಿ ತೊಂದರೆಯಾದರೂ ಗ್ರಹಿಸಿ ಮನೆ ಬಿಟ್ಟು ಓಡುವುದರಲ್ಲಿ ಇಲಿಗಳೇ ಪ್ರಥಮವಾಗುತ್ತವೆ. ಇತ್ತೀಚಿನ ಭೂಕಂಪದ ಕೆಲ ಗಂಟೆಗಳ ಮುನ್ನ ಇಲಿಗಳು ತಂಡವಾಗಿ ಊರು ಬಿಟ್ಟು ಓಡಿದುದನ್ನು ಗಮನಿಸಲಾಗಿದೆ. ಆದರೆ ಪುಕ್ಕಲತನ ಯಾವುದೇ ವ್ಯಕ್ತಿಯ ಏಳ್ಗೆಗೆ ಅಡ್ಡಗಾಲು ಹಾಕುತ್ತದೆ.

ಇಲಿ
ಏಳ್ಗೆ, ಉನ್ನತಿ ಪಡೆಯಬೇಕಾದರೆ ಪುಕ್ಕಲುತನವನ್ನು ಮೆಟ್ಟಿ ನಿಂತು ಮುನ್ನುಗ್ಗಬೇಕಾಗುತ್ತದೆ. ಗಣೇಶ ಇಲಿಯ ಮೇಲೆ ಸವಾರಿ ಮಾಡಿ ಹೊಸ ಹುರುಪಿನೊಂದಿಗೆ ಮುನ್ನುಗ್ಗಲು ಪ್ರೇರಣೆ ನೀಡುತ್ತಾನೆ. ಪುಕ್ಕಲುತನ ಮುನ್ನುಗ್ಗಲು ಅಡ್ಡಿಯಾಗಿರುವ ವಿಘ್ನವಾಗಿದೆ. ಇಲಿಯನ್ನು ಸವಾರಿ ಮಾಡುವ ಮೂಲಕ ಹೆದರಿಕೆ, ಹಿಂಜರಿಕೆ ಮೊದಲಾದ ವಿಘ್ನಗಳನ್ನು ವಿನಾಯಕನು ನಿವಾರಿಸುತ್ತಾನೆ ಎಂಬುವುದನ್ನು ಇಲಿಯನ್ನು ವಾಹನವಾಗಿಸುವ ಮೂಲಕ ಸೂಚ್ಯವಾಗಿ ತಿಳಿಸಲಾಗಿದೆ.

ನಂದಿ
ಶಿವನ ಯಾವುದೇ ಮಂದಿರದ ಮುಂದೆ ನಂದಿಯ ವಿಗ್ರಹವೂ ಇರುತ್ತದೆ. ನಂದಿ ಎಂದರೆ ಎತ್ತು. ಇದು ಬಲಶಾಲಿಯಾಗಿದ್ದು ಶಕ್ತಿಶಾಲಿಯಾದ ಶಿವನನ್ನೇ ಹೊತ್ತು ನಡೆಯುವ ಮತ್ತು ರಕ್ಷಕನಾಗಿಯೂ ಕಾರ್ಯನಿರ್ವಹಿಸುತ್ತದೆ. ಭಗವಾನ್ ಶಿವನ ಮುಂಭಾಗದಲ್ಲೇ ನ೦ದಿಯು ಕುಳಿತಿರಲು ಕಾರಣವೇನು?

ಹುಲಿ
ಅಯ್ಯಪ್ಪನಂತೆಯೇ ದುರ್ಗಾಮಾತೆಯ ವಾಹನವೂ ಹುಲಿ. ಕೆಲವೊಂದು ಸಂದರ್ಭಗಳಲ್ಲಿ ದುರ್ಗಾಮಾತೆ ಸಿಂಹವನ್ನೂ ಸವಾರಿ ಮಾಡುತ್ತಿರುವಂತೆ ಚಿತ್ರಿಸಲಾಗಿದೆ. ವಾಸ್ತವವಾಗಿ ಕ್ರೂರ ಪ್ರಾಣಿಗಳಾಗಿರುವ ಸಿಂಹ ಹುಲಿಗಳು ನಮ್ಮ ಮನಸ್ಸಿನಲ್ಲಿರುವ ಕ್ರೂರತೆ, ಸಿಟ್ಟು, ದರ್ಪ ಮೊದಲಾದವುಗಳ ಸಂಕೇತವಾಗಿದ್ದು ಇವುಗಳನ್ನು ಮೆಟ್ಟಿ ನಿಲ್ಲುವ ಮೂಲಕ ದೇವರನ್ನು ಅಂದರೆ ಸತ್ಯವನ್ನು ಜಯಿಸಬಹುದು ಎಂಬುದನ್ನು ದುರ್ಗಾಮಾತೆ ತಿಳಿಸುತ್ತಾಳೆ.

ಗೂಬೆ
ಸಾಮಾನ್ಯವಾಗಿ ಯಾವುದೇ ಚಾಲನೆ ತೋರದೇ ಇರುವ ಗೂಬೆ ಧನದ ದೇವತೆ ಲಕ್ಷ್ಮಿಯ ವಾಹನವಾಗಿದೆ. ಗೂಬೆ ಹಗಲಿನಲ್ಲಿ ಕುರುಡಾಗಿದ್ದು ರಾತ್ರಿ ಸಂಚರಿಸುತ್ತದೆ. ಅಂತೆಯೇ ಕಣ್ಣು ಮುಚ್ಚಿ ಕ್ಷಣಿಕ ಧನಕ್ಕಿಂತಲೂ ಶಾಶ್ವತ ಆಧ್ಯಾತ್ಮಿಕ ಶಕ್ತಿಯನ್ನು ಪಡೆಯುವತ್ತ ಚಿತ್ತ ಹರಿಸುವ ಸಂಕೇತವಾಗಿದೆ. ಅಲ್ಲದೇ ವಿಷ್ಣುವಿನ ವಾಹನವಾದ ಗರುಡನನ್ನೂ ಹೋಲುವ ಮೂಲಕ ದಂಪತಿಗಳು ಸಮಾನವಾದ ವಾಹನಗಳನ್ನು ಹೊಂದಿದಂತೆಯೂ ಆಗಿದೆ.

ಹಂಸ
ಬ್ರಹ್ಮದೇವರ ವಾಹನವಾದ ಹಂಸ ನೀರಿನಿಂದ ಹಾಲನ್ನು ಬೇರ್ಪಡಿಸುವ ಶಕ್ತಿ ಹೊಂದಿದೆ ಎಂದು ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇದನ್ನೇ ಹಂಸಕ್ಷೀರನ್ಯಾಯ ಎಂದೂ ಕರೆಯಲಾಗುತ್ತದೆ.

ಹಂಸ
ಸೃಷ್ಟಿಕರ್ತ ಬ್ರಹ್ಮನ ಈ ವಾಹನ ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ಪ್ರತ್ಯೇಕಿಸುವ ಗುಣವನ್ನು ನಾವು ಅಳವಡಿಸಿಕೊಂಡು ಜೀವನದಲ್ಲಿ ಒಳಿತು ಕೆಡಕುಗಳು ಒಟ್ಟಾಗಿ ಎದುರಾದಾಗ ನಾವು ಹಂಸ ಪಕ್ಷಿಯಂತೆ ಒಳಿತನ್ನು ಮಾತ್ರ ಸ್ವೀಕರಿಸಿ ಕೆಡುಕನ್ನು ದೂರ ತಳ್ಳಬೇಕು.

ಆನೆ
ಐರಾವತ ಎಂದೂ ಕರೆಯಲ್ಪಡುವ ಆನೆ ಇಂದ್ರನ ವಾನವಾಗಿದೆ. ಇಂದ್ರ ಗುಡುಗಿನ ದೇವತೆಯಾದರೆ ವರುಣ ಮಳೆಯ ದೇವತೆಯಾಗಿದ್ದಾನೆ. ಇಂದ್ರನ ವಾಹನ ಐರಾವತ ಅತಿ ಬಲಶಾಲಿ ಮತ್ತು ಗಾತ್ರದಲ್ಲಿಯೂ ಅತಿ ದೊಡ್ಡದಾಗಿರುವುದು ವಿಶ್ವಾಸಾರ್ಹತೆ, ಘನತೆ, ಗಾಂಭೀರ್ಯ, ರಾಜತ್ವ ಮತ್ತು ಪ್ರತಿಷ್ಠೆಯನ್ನು ಬಿಂಬಿಸುತ್ತದೆ.

ಮೊಸಳೆ
ನಮ್ಮ ಭೂಮಿಯ ಮೇಲೆ ಮಳೆ ಸುರಿಸಲು ಕಾರಣನಾದ ವರುಣನ ವಾಹನವೇ ಮೊಸಳೆ. ಮೊಸಳೆಗೆ ಸಂಸ್ಕೃತದಲ್ಲಿ ಮಕರ ಎಂದು ಕರೆಯಲಾಗುತ್ತದೆ. ನೆಲದ ಮೇಲೆ ಆನೆ ಹೇಗೆಯೋ ಹಾಗೇಯೇ ನೀರಿನಲ್ಲಿ ಮೊಸಳೆ ಅತಿ ಬಲಿಷ್ಠವಾದ ಪ್ರಾಣಿಯಾಗಿದೆ. ಅಂತೆಯೇ ಮೊಸಳೆಯೂ ಪ್ರತಿಷ್ಠೆ, ಶಕ್ತಿ, ವೇಗ, ಪ್ರಭಾವ, ಕುಟಿಲತೆ ಮತ್ತು ಧೈರ್ಯದ ಸಂಕೇತವಾಗಿದೆ.

ಕುದುರೆ
ನವಗ್ರಹಗಳ ಅಧಿಪತಿಯಾದ ಸೂರ್ಯನ ವಾಹನ ಕುದುರೆ. ಪುರಾಣಗಳ ಪ್ರಕಾರ ಪ್ರತಿದಿನ ಸೂರ್ಯ ರಥವೇರಿ ಬರುತ್ತಾನೆ. ಈ ರಥವನ್ನು ಎಳೆಯಲು ಏಳು ಕುದುರೆಗಳನ್ನು ಬಳಸಲಾಗಿದ್ದು ಏಳು ಕುದುರೆಗಳು ಕಾಮನಬಿಲ್ಲಿನ ಏಳು ಬಣ್ಣಗಳನ್ನು ಪ್ರತಿಬಿಂಬಿಸುತ್ತದೆ. ಅಂದರೆ ಏಳು ಬಣ್ಣ ಸೇರಿ ಬಿಳಿಯಾದಂತೆ ಸೂರ್ಯನ ಬೆಳಕಿನ ಬಣ್ಣವೂ ಬಿಳಿಯಾಗಿದೆ.



Click it and Unblock the Notifications
