Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಭಾದ್ರಪದ ಮಾಸದಲ್ಲಿ ಬರುವ ಹುಣ್ಣಿಮೆಯ ಮಹತ್ವವೇನು?
ಭಾದ್ರಪದ ಮಾಸದಲ್ಲಿ ಬರುವ ಹುಣ್ಣಿಮೆಯ ದಿನವನ್ನು ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಹುಣ್ಣಿಮೆಯೆಂದು ಆಚರಿಸುತ್ತಾರೆ. ಭಾರತದಲ್ಲಿ ಹಿಂದೂಗಳು ಚಂದ್ರಮಾನ ಪದ್ಧತಿಯ ಪಂಚಾಂಗವನ್ನು ಅನುಸರಿಸುತ್ತಾರೆ. ಅವರ ಮಾಸಗಳು ಸೌರಮಾನ ಪದ್ಧತಿಯ ಪಂಚಾಂಗದಿಂದ ವಿಭಿನ್ನವಾಗಿರುತ್ತದೆ. ಭಾದ್ರಪದ ಮಾಸವು ಶ್ರಾವಣ ಮತ್ತು ಕಾರ್ತಿಕ ಮಾಸಗಳ ಮಧ್ಯೆ ಬರುತ್ತದೆ. ಈ ಮಾಸದಲ್ಲಿ ಮುಂಗಾರು ಮಳೆಯು ಕಡಿಮೆಯಾಗುತ್ತಾ ಹೋಗುತ್ತದೆ.
ಹಿಂದೂ ಪಂಚಾಂಗದಲ್ಲಿ ಪ್ರತಿ ಮಾಸದಲ್ಲಿಯೂ ಒಂದು ಹುಣ್ಣಿಮೆ ಮತ್ತು ಒಂದು ಅಮಾವಾಸ್ಯೆ ಇರುತ್ತದೆ. ಹುಣ್ಣಿಮೆ ರಾತ್ರಿಯು ಹಿಂದೂ ಪುರಾಣಗಳಲ್ಲಿ ಸಾಕಷ್ಟು ಮಹತ್ವವನ್ನು ಹೊಂದಿದೆ. ಭಾದ್ರಪದ ಮಾಸದ ಹುಣ್ಣಿಮೆ ‘ಹುಣ್ಣಿಮೆಯ ರಾತ್ರಿ'ಯೆಂದು ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ. ಭಾದ್ರಪದ ಮಾಸದ ಹುಣ್ಣಿಮೆಯು ಇಂತಹ ವಿಶೇಷ ದಿನ ಏಕೆಂಬುದರ ಬಗ್ಗೆ ಈ ಕೆಳಗೆ ಕೆಲವು ವಿಚಾರಗಳನ್ನು ತಿಳಿಸಿದ್ದೇವೆ:
ರಾಮಾಯಣದಲ್ಲಿ ಬಚ್ಚಿಟ್ಟ ಸತ್ಯ; ಸೀತಾದೇವಿ ರಾವಣನ ಪುತ್ರಿ?

ಭಗವಾನ್ ಮಹಾವಿಷ್ಣುವಿನ ಮಾಸ
ಭದ್ರಾ ಮಾಸವು ಭಗವಾನ್ ವಿಷ್ಣುವಿಗೆ ವಿಶೇಷವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದಲೇ ಭಗವಾನ್ ವಿಷ್ಣುವನ್ನು ಭಾದ್ರಪದ ಮಾಸದ ಹುಣ್ಣಿಮೆಯಂದು ಪೂಜಿಸುತ್ತಾರೆ. ವಿಶೇಷವಾಗಿ ವಿಷ್ಣುವಿನ ಮತ್ತೊಂದು ರೂಪವಾದ 'ಸತ್ಯನಾರಾಯಣ' ನ ಪೂಜೆಯನ್ನು ಭಾದ್ರಪದ ಹುಣ್ಣಿಮೆಯಂದು ಮಾಡುತ್ತಾರೆ.
ಸತ್ಯನಾರಾಯಣ
ಅನೇಕ ಜನರು ಭಾದ್ರಪದ ಮಾಸದ ಹುಣ್ಣಿಮೆಯಂದು ಸತ್ಯನಾರಾಯಣನ ಪೂಜೆಯ ವ್ಯವಸ್ಥೆ ಮಾಡುತ್ತಾರೆ. ಗೃಹಪ್ರವೇಶ ಅಥವಾ ಹೊಸಮನೆಗೆ ಪ್ರವೇಶಮಾಡುವುದಕ್ಕೆ ಅಂದಿನ ದಿನ ಒಂದು ಬಹಳ ವಿಶೇಷವಾದ ದಿನವೆಂದು ಪರಿಗಣಿಸುತ್ತಾರೆ. ಭಗವಾನ್ ಸತ್ಯನಾರಾಯಣನಿಗೆ ಹಣ್ಣು, ಹಾಲು, ಜೇನುತುಪ್ಪ ಮತ್ತು ಸಕ್ಕರೆಗಳನ್ನು ನೈವೇದ್ಯ ಮಾಡುತ್ತಾರೆ. ಪೂಜೆಯ ನಂತರ ಅನೇಕ ಮನೆಗಳಲ್ಲಿ 'ಸತ್ಯನಾರಾಯಣ ಕಥೆ' ಪಠಣ ಮಾಡುತ್ತಾರೆ. ನಿಮ್ಮನ್ನು ಯಾರಾದರೂ ಸತ್ಯನಾರಾಯಣನ ಪೂಜೆ ಮತ್ತು ಕಥೆಗೆ ಅಹ್ವಾನಿಸಿದರೆ ನೀವು ಎಷ್ಟೇ ಬಿಡುವಿಲ್ಲದ ಕೆಲಸನಿರತರಾಗಿದ್ದರೂ ಸಹಾ ಅಹ್ವಾನವನ್ನು ನಿರಾಕರಿಸಬಾರದೆಂಬ ಸಾಮಾನ್ಯ ನಂಬಿಕೆಯಿದೆ.
ಪವಿತ್ರ ಸ್ನಾನ
ಭಾದ್ರಪದ ಮಾಸದ ಹುಣ್ಣಿಮೆಯಂದು ಯಾವುದಾದರೂ ಪವಿತ್ರ ನದಿಯಲ್ಲಿ ಸ್ನಾನ ಮಾಡಿದರೆ ಭಗವಾನ್ ವಿಷ್ಣುವಿನ ಅಶೀರ್ವಾದ ಪಡೆಯುತ್ತೀರಿ ಎಂಬ ನಂಬಿಕೆಯಿದೆ. ಹಿಂದೂ ಧರ್ಮದ ಪ್ರಕಾರ ಗಂಗ, ಯಮುನಾ, ನರ್ಮದಾ, ಇತ್ಯಾದಿ ಇವುಗಳು ಕೆಲವು ಪವಿತ್ರ ನದಿಗಳು.
ದಾನಮಾಡುವುದು
ಅಂದಿನ ದಿನ ವಸ್ತುಗಳನ್ನು ಕೊಡುಗೆಯಾಗಿ ಕೊಡಲು ಮತ್ತು ಧನ ಸಹಾಯಮಾಡಲು ಬಹಳ ಒಳ್ಳೆಯ ದಿನ. ನೀವು ಪವಿತ್ರ ಸ್ನಾನ ಮಾಡಿದ ನಂತರ ಬಟ್ಟೆ, ಆಹಾರ ಮತ್ತು ಧನವನ್ನು ಬಡ ಬ್ರಾಹ್ಮಣರಿಗೆ ದಾನಮಾಡಿದರೆ ನಿಮಗೆ ಒಳ್ಳೆಯ 'ಕರ್ಮ' ದೊರೆಯುವುದು ಎಂಬ ನಂಬಿಕೆಯಿದೆ. ನೀವು ಮಾಡಿದ ದಾನಗಳಿಂದ ನೀವು ಭಗವಾನ್ ವಿಷ್ಣುವಿನ ಆಶೀರ್ವಾದವನ್ನು ಪಡೆಯುವಿರಿ.ಇವೇ ಭಾದ್ರಪದ ಮಾಸದ ಹುಣ್ಣಿಮೆಯ ಕೆಲವು ಮುಖ್ಯ ವಿಶೇಷಗಳು. ನಿಮಗೆ ಮುಂದೆ ಒಳ್ಳೆಯದಿನಗಳು ಬರಲೆಂದು ಆಶಿಸಿ ಈ ಕ್ರಿಯಾವಿಧಿಗಳನ್ನು ಅನುಸರಿಸಿ.



Click it and Unblock the Notifications