Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ದುರ್ಗೆ ಆಗಮನ, ನಿರ್ಗಮನದ ವಾಹನವು ಘಟನೆಗಳ ಸಂಕೇತ
ಹಿಂದೂ ದೇವರುಗಳಿಗೆ ಒಂದೊಂದು ವಾಹನವಿರುವುದು ಪುರಾಣಗಳಿಂದ ಮತ್ತು ದೇವಾಲಯಗಳಲ್ಲಿನ ಮೂರ್ತಿಗಳಿಂದ ತಿಳಿದುಬರುತ್ತದೆ. ಪ್ರತಿಯೊಬ್ಬ ದೇವರಿಗೆ ಭಿನ್ನವಾದ ವಾಹನಗಳು ಇವೆ. ದೇವರೊಂದಿಗೆ ಅವರ ವಾಹನಗಳನ್ನು ಪೂಜಿಸಲಾಗುವುದು. ಅದರಲ್ಲೂ ನವರಾತ್ರಿ ವೇಳೆ ಪೂಜಿಸಲ್ಪಡುವ ದುರ್ಗೆಯು ವಿವಿಧ ರೀತಿಯ ವಾಹನಗಳಲ್ಲಿ ಭೂಲೋಕಕ್ಕೆ ಬರುತ್ತಾಳೆ ಮತ್ತು ಮರಳಿ ಹೋಗುತ್ತಾಳೆ ಎನ್ನುವ ನಂಬಿಕೆಯಿದೆ.
ದುರ್ಗೆಯ ಆಗಮನವು ತುಂಬಾ ಪವಿತ್ರವೆಂದು ಭಾವಿಸಲಾಗಿದೆ ಮತ್ತು ಆಕೆ ಬಳಸುವ ವಾಹನವು ತುಂಬಾ ಪ್ರಾಮುಖ್ಯತೆ ಪಡೆದುಕೊಂಡಿದೆ. ವಿಶೇಷ ವಾಹನದಲ್ಲಿ ಬರುವ ದುರ್ಗೆಯು ಮರಳುವಾಗ ಬೇರೆ ರೀತಿಯ ವಾಹನ ಬಳಸುವಳು. ದುರ್ಗೆಯ ಆಗಮನ ಮತ್ತು ನಿರ್ಗಮನಕ್ಕೆ ಬಳಸುವ ವಾಹನವು ಭೂಮಿ ಮೇಲೆ ಭವಿಷ್ಯದಲ್ಲಿ ಆಗುವಂತಹ ಘಟನೆಗಳನ್ನು ಅವಲಂಬಿಸಿದೆ. ಆಗಮ ಹಾಗೂ ನಿರ್ಗಮನಕ್ಕೆ ದುರ್ಗೆಯು ಒಂದೇ ವಾಹನ ಬಳಸಿದರೆ ಅದು ಅಶುಭವೆಂದು ನಂಬಲಾಗಿದೆ....

ಈ ವರ್ಷಕ್ಕೆ ದುರ್ಗೆಯ ವಾಹನ
2017ರಲ್ಲಿ ದುರ್ಗೆಯು ಆನೆಯ ಮೇಲೆ ಸವಾರಿ ಮಾಡಿಕೊಂಡು ಆಗಮಿಸುವಳು ಹಾಗೂ ಕುದುರೆ ಮೇಲೇರಿ ನಿರ್ಗಮಿಸುವಳು. ಆನೆಯು ತುಂಬಾ ಶುಭವೆಂದು ನಂಬಲಾಗಿದೆ ಮತ್ತು ಇದು ಬೆಳೆ ಉತ್ತಮವಾಗುವ ಸೂಚನೆ. ಕುದುರೆಯು ಶುಭ ಸಂಕೇತವಲ್ಲ. ಇದರಿಂದ ಮುಂದಿನ ವರ್ಷ ಬರಗಾಲವಾಗುವ ಸಂಕೇತವಿದು.

ವಾಹನವನ್ನು ಹೇಗೆ ನಿರ್ಧರಿಸಲಾಗುತ್ತದೆ?
ದುರ್ಗೆ ಬರುವ ವಾಹನವನ್ನು ನಿರ್ಧರಿಸುವುದು ಹೇಗೆ ಎಂದು ನಿಮಗೆ ದೊಡ್ಡ ಪ್ರಶ್ನೆಯಾಗಿರಬಹುದು. ವಾರದ ಪ್ರತಿಯೊಂದು ದಿನಕ್ಕೂ ಒಂದೊಂದು ವಾಹನವಿದೆ. ಸಿಂಹವು ದುರ್ಗೆಗೆ ತುಂಬಾ ಪ್ರಿಯವಾದ ವಾಹನ ಮತ್ತು ಆಕೆಗೆ ಇತರ ವಾಹನಗಳು ಇವೆ. ಕುದುರೆ, ಆನೆ, ಪಲ್ಲಕಿ ಮತ್ತು ದೋಣೆ. ವಾರದ ಯಾವ ದಿನ ದುರ್ಗೆಯ ಆಗಮನವಾಗುತ್ತದೆ ಎಂದು ತಿಳಿದು ವಾಹನ ನಿರ್ಧಾರವಾಗುವುದು.
ಉದಾಹರಣೆಗೆ ಈ ವರ್ಷವು ದುರ್ಗೆಯು ಭಾನುವಾರ ಅಥವಾ ಸೋಮವಾರ ಬರುವಳು(ನವರಾತ್ರಿ ಆರಂಭ). ಈ ದಿನಗಳಂದು ಆನೆಯು ವಾಹನವಾಗಿದೆ. ಗುರುವಾರವು ನವರಾತ್ರಿ ಕೊನೆಗೊಳ್ಳುವ ಕಾರಣದಿಂದ ಕುದುರೆಯು ಆ ದಿನದ ವಾಹನವಾಗಿದೆ. ಪ್ರತೀ ವಾಹನದಲ್ಲಿ ದುರ್ಗೆ ಬರುವ ಬಗ್ಗೆ ನಾವು ತಿಳಿದುಕೊಳ್ಳುವ.

ಆನೆ
ಆನೆಯು ಶುಭಸೂಚಕವೆಂದು ನಮಗೆ ತಿಳಿದಿದೆ. ದುರ್ಗೆ ಆನೆ ಮೇಲೆ ಸವಾರಿ ಮಾಡಿಕೊಂಡು ಆಗಮಿಸಿದರೆ ಅಥವಾ ನಿರ್ಗಮಿಸಿದರೆ ಆ ವರ್ಷವು ತುಂಬಾ ಸುಖ-ಸಂತೋಷದಿಂದ ಕೂಡಿರುವುದು ಎಂದು ನಂಬಲಾಗಿದೆ. ಬೆಳೆಯು ಒಳ್ಳೆಯದಾಗಿ ಸಮೃದ್ಧವಾಗಿರುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಅದೃಷ್ಟ ಪರೀಕ್ಷಿಸಲು ಬಯಸುವವರಿಗೆ ಅದು ಅನುಕೂಲಕರವಾಗಿರುವುದು.

ದೋಣಿ
ದೋಣಿ ಕೂಡ ಶುಭಸೂಚಕವಾಗಿದೆ. ಆದರೆ ಇದರ ಫಲಿತಾಂಶ ದೀರ್ಘ ಕಾಲದ ತನಕ ಉಳಿಯದು. ದೋಣೆಯೆಂದರೆ ನೀರಿನ ಸಾರಿಗೆ. ದುರ್ಗೆಯ ಆಗಮನ ಅಥವಾ ನಿರ್ಗಮನವು ದೋಣೆಯಲ್ಲಿ ಆದರೆ ಒಳ್ಳೆಯ ಬೆಳೆ ಮತ್ತು ಪ್ರವಾಹ ಉಂಟಾಗುವುದು. ಪ್ರವಾಹವು ತುಂಬಾ ಹಾನಿ ಉಂಟು ಮಾಡುವುದು. ಅದೇ ವೇಳೆ ಪ್ರವಾಹದ ನೀರಿನಿಂದ ಭೂಮಿಯ ಫಲವತ್ತತೆ ಹೆಚ್ಚಾಗುವುದು. ಇದರಿಂದ ಬೆಳೆ ಸಮೃದ್ಧವಾಗುವುದು.

ಪಲ್ಲಕಿ
ಪಲ್ಲಕಿಯು ತುಂಬಾ ಅಶುಭವೆನ್ನಲಾಗಿದೆ. ದುರ್ಗೆಯು ಪಲ್ಲಕಿಯಲ್ಲಿ ಆಗಮನ ಅಥವಾ ನಿರ್ಗಮನ ಮಾಡಿದರೆ ಅದು ಸಾಂಕ್ರಾಮಿಕ ರೋಗ ಬರುವ ಸೂಚನೆಯಾಗಿರುವುದು. ಕಠಿಣ ಸಮಯವು ಬರಲಿದೆ ಮತ್ತು ಮನುಷ್ಯರು ಕಷ್ಟದ ಸಮಯದಲ್ಲಿ ಒಗ್ಗಟ್ಟಾಗಿರಬೇಕು ಎಂದು ಹೇಳಲಾಗುತ್ತದೆ.

ಕುದುರೆ
ಯುದ್ಧ ಹಾಗೂ ರಣರಂಗದಲ್ಲಿ ಕುದುರೆ ಬಳಸುವ ಕಾರಣದಿಂದ ಇದನ್ನು ಸರ್ವನಾಶದ ಸಂಕೇತವೆಂದು ಭಾವಿಸಲಾಗುತ್ತದೆ. ದುರ್ಗೆಯು ಕುದುರೆಯಲ್ಲಿ ಆಗಮಿಸುವುದು ಅಥವಾ ನಿರ್ಗಮಿಸುವುದು ವಿಶ್ವಕ್ಕೆ ಕೇಡಾಗುವ ಮುನ್ಸೂಚನೆ. ವಿನಾಶ ಹಾಗೂ ಕೇಡನ್ನು ಕಡಿಮೆ ಮಾಡಬೇಕೆಂದು ದುರ್ಗೆಯ ಭಕ್ತರು ನವರಾತ್ರಿ ವೇಳೆ ಪ್ರಾರ್ಥಿಸಿಕೊಳ್ಳುವರು.



Click it and Unblock the Notifications











