Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಶ್ರಾವಣ ಮಾಸದ ಮಹತ್ವವನ್ನು ಅರಿತುಕೊಳ್ಳಿ
ಹಿಂದೂ ಧರ್ಮದಲ್ಲಿ ಶ್ರಾವಣ ಮಾಸ ಎನ್ನುವುದು ಜನಪ್ರಿಯ ವಿಚಾರವಾಗಿದೆ. ಶ್ರಾವಣ ಮಾಸ ಅಥವಾ ಶ್ರಾವಣ ಸೋಮವಾರ ಎಂದರೇನು? ಹೌದು ಹಿಂದೂ ಪಂಚಾಂಗದ ಐದನೇ ತಿಂಗಳನ್ನು ಶ್ರಾವಣ ಮಾಸ ಎಂದು ಕರೆಯುತ್ತಾರೆ.
ಈ ವರ್ಷ ಆಗಸ್ಟ್ 9ರಂದು ಶ್ರಾವಣ ಪ್ರಾರಂಭ.. ಸೆಪ್ಟೆಂಬರ್ 7ಕ್ಕೆ ಮುಕ್ತಾಯ. ಹಿಂದೂಗಳಿಗೆ ಈ ಮಾಸವು ಅತಿ ಪವಿತ್ರವಾಗಿರುತ್ತದೆ ಈ ದಿನದಲ್ಲಿ ಜನರು ಕೆಲವೊಂದು ಹಬ್ಬ ಹರಿದಿನಗಳನ್ನು ಆಚರಿಸುತ್ತಾರೆ. ಹಾಗಿದ್ದರೆ ಈ ಮಾಸದ ಹಿಂದಿರುವ ಕೆಲವೊಂದು ಮಹತ್ವಗಳು ಮತ್ತು ಧಾರ್ಮಿಕ ನೋಟವನ್ನು ತಿಳಿದುಕೊಳ್ಳೋಣ.

ಸಮುದ್ರ ಮಥನದ ಸಂದರ್ಭದಲ್ಲಿ, ದೇವತೆಗಳು ದಾನವರು ಕ್ಷೀರ ಸಾಗರವನ್ನು ಮಣಿಸುವಾಗ ವಿಷ ಉದ್ಭವವಾಗುತ್ತದೆ. ಈ ವಿಷ ಅತ್ಯಂತ ಪ್ರಭಾವಶಾಲಿ ಮತ್ತು ಮೃತ್ಯುಪಾಶವಾಗಿರುತ್ತದೆ. ಆ ಸಮಯದಲ್ಲಿ ಶಿವನು ಲೋಕವನ್ನು ಕಾಪಾಡುವುದಕ್ಕಾಗಿ ಅದನ್ನು ಕುಡಿದು ಗಂಟಲಲ್ಲಿ ಶೇಖರಿಸುತ್ತಾರೆ. ಇದರಿಂದಾಗಿ ಅವರ ಹೆಸರು ನೀಲಕಂಠ ಎಂದಾಗಿಯೂ ಬದಲಾಗುತ್ತದೆ. ಮತ್ತು ಶಿವನು ತಮ್ಮ ಮುಡಿಯಲ್ಲಿ ಚಂದ್ರನನ್ನು ಧರಿಸಿರುವುದು ತಮ್ಮನ್ನು ವಿಷದಿಂದ ಕಾಪಾಡಿಕೊಳ್ಳಲು ಎಂದು ಪುರಾಣಗಳು ಹೇಳುತ್ತವೆ.
ಶ್ರಾವಣ ಮಾಸದ ಮಹತ್ವ ಮತ್ತು 2014ರ ದಿನಾಂಕಗಳ ಬಗ್ಗೆ ಅರಿತುಕೊಳ್ಳೋಣ
2014ರ ವರ್ಷದಲ್ಲಿ ಶ್ರಾವಣ ಮಾಸವು 13 ಜುಲೈರಂದು ಬಂದಿದೆ. ಶ್ರಾವಣ ಸೋಮವಾರದಂದು ಶ್ರಾವಣ ಸೋಮವಾರ ವೃತವನ್ನು ಕೈಗೊಳ್ಳಲಾಗುತ್ತದೆ. ಅಂದರೆ ಸೋಮವಾರಗಳಲ್ಲಿ 14, 21, 28, ಆಗಸ್ಟ್ 4 ರಂದು ಈ ವೃತವನ್ನು ಕೈಗೊಳ್ಳಲಾಗುತ್ತದೆ. ಶ್ರಾವಣ ಮಾಸವು ಆಗಸ್ಟ್ 10 ರಂದು ಆದಿತ್ಯವಾರ ಕೊನೆಗೊಳ್ಳುತ್ತದೆ. ಶ್ರಾವಣ ಮಾಸದ ಸಂದರ್ಭಗಳಲ್ಲಿ, ಅಂದರೆ ಸೋಮವಾರದಂದು ಉಪವಾಸವನ್ನು ಕೈಗೊಳ್ಳಲಾಗುತ್ತದೆ.
ಹಿಂದೂ ದೇವರುಗಳನ್ನು ದಿನದ ಪ್ರಕಾರ ಪೂಜಿಸಿ
ಶ್ರಾವಣ ಸೋಮವಾರದಂದು ಕೈಗೊಳ್ಳುವ ಉಪವಾಸದ ಬಗ್ಗೆ ನೋಡೋಣ
ಶ್ರಾವಣ ಸೋಮವಾರದಂದು ಜನರು ಏಕೆ ಉಪವಾಸ ಮಾಡುತ್ತಾರೆ ಎಂಬುದು ನಮಗೆ ಅರ್ಥವಾಗುತ್ತದೆ. ಶ್ರಾವಣ ಮಾಸದಂದು, ಶಿವ ದೇವರು ಹೆಚ್ಚು ಶಕ್ತಿಶಾಲಿಯಾಗಿರುತ್ತಾರೆ. ಸೋಮವಾರದಂದು ಮಹಿಳೆಯರು ಶ್ರಾವಣ ಸೋಮವಾರದ ಉಪವಾಸವನ್ನು ಕೈಗೊಳ್ಳುತ್ತಾರೆ. ಅವರಿಗೆ ಸರಿಯಾದ ವರ ದೊರೆಯಲಿ ಎಂಬುದು ಇದರ ಹಿಂದಿರುವ ಆಶಯವಾಗಿರುತ್ತದೆ. ಅವರ ಶ್ರದ್ಧೆ ಭಕ್ತಿಯು ಶಿವನನ್ನು ಒಲಿಸಿಕೊಳ್ಳುವಲ್ಲಿ ನೆರವಾಗುತ್ತದೆ ಮತ್ತು ಅವರು ಕೇಳಿದ ವರ ಅವರಿಗೆ ದೊರೆಯುತ್ತದೆ ಎಂಬ ನಂಬಿಕೆ ಇದೆ. ಶ್ರಾವಣ ಸೋಮವಾರದಂದು ಹಿಡಿದ ವೃತವು ಕೈಗೂಡುತ್ತದೆ ಎಂಬ ನಂಬಿಕೆಯ ಆಧಾರದ ಮೇಲೆಯೇ ಜನರು ಈ ದಿನದಂದು ವೃತ ಕೈಗೊಳ್ಳುತ್ತಾರೆ ಮತ್ತು ಇಷ್ಟಾರ್ಥವನ್ನು ನೆರವೇರಿಸಿಕೊಳ್ಳುತ್ತಾರೆ.



Click it and Unblock the Notifications