Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಗಂಗಾ ದಸರಾ: ಗಂಗೆ ಪೂಜೆಯಲ್ಲಿ 10 ಸಂಖ್ಯೆಗಿದೆ ತುಂಬಾ ಮಹತ್ವ
ಭಾರತದಲ್ಲಿ ಹರಿಯುವ ಅನೇಕ ಪುಣ್ಯ ನದಿಗಳಲ್ಲಿ ಗಂಗಾ ನದಿಗೆ ವಿಶೇಷ ಸ್ಥಾನವಿದೆ. ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಸಕಲ ಪಾಪಗಳು ತೊಳೆದು ಹೋಗಿ , ಪುಣ್ಯ ದೊರೆಯುತ್ತದೆ ಎಂಬ ನಂಬಿಕೆಯಿಂದ ಲಕ್ಷಾಂತರ ಭಕ್ತರು ಗಂಗಾ ನದಿಯಲ್ಲಿ ಮಿಂದು ಪೂಜೆ ಸಲ್ಲಿಸುತ್ತಾರೆ.

ಜೇಷ್ಠ್ಯ ಮಾಸದ ಶುಕ್ಲ ಪಕ್ಷದ ಹತ್ತನೇಯ ದಿನದಂದು ಗಂಗಾ ದಸರಾ ಎಂದು ಉತ್ತರ ಭಾರತದಲ್ಲಿ ಗಂಗೆಗೆ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಈ ದಿನ ಗಂಗೆ ಭೂಮಿಗೆ ಬಂದ ದಿನವಾಗಿದೆ, ಇದನ್ನು ನಿರ್ಜಲ ಏಕಾದಶಿಯ ಮುನ್ನ ದಿನ ಆಚರಿಸಲಾಗುವುದು. ಗಂಗಾ ದಸರವನ್ನು ಜೂನ್ 1ರಮದು ಆಚರಿಸಲಗುವುದು.

ಗಂಗೆ ಭೂಮಿಗೆ ಬಂದಪುರಾಣ ಕತೆ
ಭಗೀರಥ ಮಹರ್ಷಿ ಹೇಗಾದರೂ ಮಾಡಿ ದೇವಗಂಗೆಯನ್ನು ಭೂಲೋಕಕ್ಕೆ ತರಬೇಕೆಂದು ಘೋರವಾದ ತಪಸ್ಸು ಮಾಡುತ್ತಾನೆ. ಭಗೀರಥ ತಪಸ್ಸಿಗೆ ಮೆಚ್ಚಿ ಗಂಗೆ ಪ್ರತ್ಯಕ್ಷಳಾಗಿ ಏನು ಬೇಕೆಂದು ಕೇಳುತ್ತಾಳೆ. ಆಗ ಭಗೀರಥ ನೀನು ಭೂಲೋಕಕ್ಕೆ ಬರಬೇಕು ಎಂದು ಹೇಳುತ್ತಾನೆ. 'ತಥಾಸ್ತು' ಎಂದ ಗಂಗೆ "ಭಗೀರಥ ನಾನು ಭೂಮಿಗೆ ಬಂದರೆ ನನ್ನ ರಭಸವನ್ನು ತಡೆಯುವವರು ಯಾರು? ನನ್ನ ರಭಸಕ್ಕೆ ಇಡೀ ಭೂಮಂಡಲವೇ ಕೊಚ್ಚಿ ಹೋದರೇನು ಗತಿಯೇನು? ಭೂ ಲೋಕದ ಪಾಪಗಳೆಲ್ಲಾ ನನ್ನಲ್ಲಿ ತೊಳೆದು ಹೋದರೆ , ಆ ಪಾಪಗಳನ್ನು ನಾನೆಲ್ಲಿ ತೊಳೆದುಕೊಳ್ಳಲಿ ಹೇಳು?"ಎಂದು ಕೇಳುತ್ತಾಳೆ.
ಆಗ ಭಗೀರಥ ಗಂಗಾಳ ರಭಸ ತಡೆಯಲು ಶಿವನನ್ನು ಪ್ರಾರ್ಥಿಸುತ್ತಾನೆ. ಭಗೀರಥ ತಪಸ್ಸಿಗೆ ಮೆಚ್ಚಿದ ಶಿವ ಗಂಗೆಯನ್ನು ತನ್ನ ಮುಡಿಯಲ್ಲಿ ಬಿಗಿಯುತ್ತಾನೆ. ಅವಳು ಶಿವನ ಜಟೆಯಿಂದ ಭೂ ಲೋಕದ ಕಡೆಗೆ ಹರಿಯುತ್ತಾಳೆ, ಈ ರೀತಿ ಭೂ ಲೋಕದ ಜನರ ಪಾಪ ಕಳೆಯಲು ಗಂಗೆ ಭೂ ಲೋಕಕ್ಕೆ ಬಂದಳು ಎಂಬ ಕತೆಯಿದೆ.

ಗಂಗಾ ದಸರಾ ಪೂಜೆ ಸಮಯ
ದಶಮಿ ತಿಥಿ ಪ್ರಾರಂಭ-ಸಂಜೆ05:36, ಮೇ 31, 2020
ದಶಮಿ ತಿಥಿ ಮುಕ್ತಾಯ- ಮಧ್ಯಾಹ್ನ 2:57, ಜೂನ್ 1, 2020
ಹಸ್ತ ನಕ್ಷತ್ರ ಪ್ರಾರಂಭ-ಬೆಳಗ್ಗೆ 3:1 ಜೂನ್ 1, 2020
ಹಸ್ತ ನಕ್ಷತ್ರ ಮುಕ್ತಾಯ- ರಾತ್ರಿ 1:3, ಜೂನ್ 2, 2020
ವ್ಯತಿಪಾತ ಯೋಗ ಪ್ರಾರಂಭ: ಮಧ್ಯಾಹ್ನ01:18 ಜೂನ್ 1, 20202
ವ್ಯತಿಪಾತ ಯೋಗ ಮುಕ್ತಾಯ: ಬೆಳಗ್ಗೆ 9.52, ಜೂನ್ 2, 2020

ಗಂಗಾ ಪೂಜೆಯಲ್ಲಿ 10ರ ಮಹತ್ವ
ಗಂಗಾ ದಸರಾದಲ್ಲಿ ಸಂಖ್ಯೆ 10ಕ್ಕೆ ವಿಶೇಷ ಸ್ಥಾನವಿದೆ
1. ಹತ್ತು ದಿನ ಭಕ್ತರು ಗಂಗೆಗೆ ಪೂಜೆಗೆ ಸಲ್ಲಿಸುತ್ತಾರೆ
2. ಗಂಗೆಯಲ್ಲಿ ಮುಳುಗಿ ಸ್ನಾನ ಮಾಡುವುದರಿಂದ ಮಾಡಿದ ಹತ್ತು ಪಾಪಗಳು ತೊಳೆದು ಹೋಗುವುದು
3. ಬೆಳಗ್ಗೆ 10 ಬಗೆಯ ಪದ್ಧತಿಯಲ್ಲಿ ಗಂಗೆಯನ್ನು ಪೂಜಿಸಿದರೆ ಮೋಕ್ಷ ದೊರೆಯುವುದು
4. ಗಂಗೆಗೆ ಪ್ರಿಯವಾದ ಹತ್ತು ಬಗೆಯ ಹೂ, ಹಣ್ಣುಗಳನ್ನು ಇಟ್ಟು ಪೂಜಿಸಿದರೆ ಗಂಗೆ ಹರಿಸುತ್ತಾಳೆ ಎಂಬ ನಂಬಿಕೆಯಿದೆ.
5. ಗಂಗೆ ಪೂಜೆಯಲ್ಲಿ ಬಡವರಿಗೆ 10 ಬಗೆಯ ತಿನಿಸುವಗಳನ್ನು ದಾನ ಮಾಡಲಾಗುವುದು.
6. ಈ ದಿನ ಹತ್ತು ಗಂಟೆ ನೀರು ಕೂಡ ಕುಡಿಯದೆ ಉಪವಾಸ ಇದ್ದರೆ ಒಳ್ಳೆಯದಾಗುತ್ತದೆ.
7. ಗಂಗಾ ನದಿ ಹಿಮಾಚಲ ಪ್ರದೇಶ, ಉತ್ತರಖಾಂಡ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಚತ್ತೀಸ್‌ಗಢ, ಬಿಹಾರ, ಜಾರ್ಖಂಡ್, ಹರಿಯಾಣ, ರಾಜಸ್ಥಾನ, ಪಶ್ಚಿಮ ಬಂಗಾಳ ಹೀಗೆ 10 ರಾಜ್ಯಗಳಲ್ಲಿ ನಡೆಯುತ್ತದೆ.
8. 10 ಬಿದಿರಿನ ಕಡ್ಡಿಯಿಂದ ಗಂಗೆ ನದಿ ತೀರದಲ್ಲಿ ಗಂಗೆಗೆ ಚಿಕ್ಕ ಮಂದಿರ ಕಟ್ಟಿ ಪೂಜೆ ಸಲ್ಲಿಸುತ್ತಾರೆ.

ಗಂಗೆಗೆ ಆರತಿ
ಗಂಗಾ ದಸರಾದಲ್ಲಿ ಮಡಿ ಸ್ನಾನ ಮಾಡಿ ಗಂಗೆಗೆ ಆರತಿ ಎತ್ತಿ ಪೂಜೆ ಮಾಡಲಾಗುವುದು. ಗಂಗೆ ಪೂಜೆ ಮಾಡುವುದರಿಂದ ನಮ್ಮ ಪಾಪಗಳು ಕಡಿಮೆಯಾಗಿ ಪುಣ್ಯ ದೊರೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.



Click it and Unblock the Notifications











