ನಾವು ದೇವರಿಗೆ ತೆಂಗಿನಕಾಯಿ ಏಕೆ ಸಮರ್ಪಿಸುತ್ತೇವೆ?

By Super Admin

ದೇವ ದೇವಿಯರ ಪ್ರತಿಮೆಗಳೆದುರಿನಲ್ಲಿ ತೆಂಗಿನಕಾಯಿಗಳನ್ನು ಒಡೆಯುವುದು ಭಾರತ ದೇಶದಲ್ಲಿ ಚಾಲ್ತಿಯಲ್ಲಿರುವ ಒಂದು ಸಾಮಾನ್ಯವಾದಂತಹ ಆಚರಣೆಯಾಗಿದೆ. ಹೆಚ್ಚು ಕಡಿಮೆ ಎಲ್ಲಾ ಹಿಂದೂ ಆಚರಣೆಗಳಲ್ಲಿ ತೆಂಗಿನ ಕಾಯಿಯು ಒಂದು ಅತ್ಯಾವಶ್ಯಕವಾದ ಸಮರ್ಪಣೆಯ ವಸ್ತುವಾಗಿರುತ್ತದೆ.

ಪ್ರತಿಯೋರ್ವನ ವಿನೂತನ ಸಾಹಸದ ಶುಭಾರoಭವು ದೇವರ ಪ್ರತಿಮೆಯ ಎದುರು ತೆಂಗಿನಕಾಯಿಯೊಂದನ್ನು ಒಡೆಯುವುದರೊoದಿಗೆ ಆರoಭಗೊಳ್ಳುತ್ತದೆ. ಅದೊಂದು ಮದುವೆಯ ಸಮಾರoಭವಾಗಿರಲಿ, ಹಬ್ಬವಾಗಿರಲಿ, ಅಥವಾ ಇನ್ನಾವುದಾದರೂ ಪ್ರಮುಖವಾದ ಪೂಜೆಯೇ ಆಗಿರಲಿ, ಆಯಾ ಸಮಾರಂಭಗಳಿಗೆ ಬೇಕಾಗುವ ಸಾಮಗ್ರಿಗಳ ಪಟ್ಟಿಯಲ್ಲಿ ತೆಂಗಿನಕಾಯಿಯ ಸೇರ್ಪಡೆಯಾಗದಿರಲು ಸಾಧ್ಯವೇ ಇಲ್ಲ. ಹೀಗೆ ಪ್ರತಿಯೊಂದು ಹಿಂದೂ ಸಂಪ್ರದಾಯ ಧಾರ್ಮಿಕ ವಿಧಿವಿಧಾನಗಳಲ್ಲಿ ತೆಂಗಿನಕಾಯಿ ಅಷ್ಟೇಕೆ ಅಗತ್ಯವಾದದ್ದು ಎಂದು ಯಾವಾಗಲಾದರೂ ಯೋಚಿಸಿದ್ದೀರಾ ? ಹಿಂದೂ ಧರ್ಮ ಪ್ರಪಂಚದಲ್ಲೇ ಶ್ರೇಷ್ಠ ಧರ್ಮವೇಕೆ?

ಇದಕ್ಕೆ ಉತ್ತರವನ್ನು ಕಂಡುಕೊಳ್ಳಲು ಯತ್ನಿಸೋಣ. ತೆಂಗಿನಕಾಯಿಗೆ ಸಂಸ್ಕೃತ ಭಾಷೆಯಲ್ಲಿ "ಶ್ರೀ ಫಲ" ಎಂದು ಕರೆಯುತ್ತಾರೆ. ಶ್ರೀಫಲ ಎಂದರೆ ದೇವಹಣ್ಣು ಅಥವಾ ದೇವರ ಹಣ್ಣು ಎಂದರ್ಥ. ಹೀಗಾಗಿ ತೆಂಗಿನಕಾಯಿಯು ಅಗತ್ಯವಾಗಿ ದೇವತೆಗಳ ಫಲವಾಗಿದೆ. ತೆಂಗಿನಕಾಯಿಯನ್ನು ಒಡೆಯುವುದರ ಭಾವಾರ್ಥವೇನೆoದರೆ ನಮ್ಮ ಅಹಂ ಅನ್ನು ಭೇದಿಸಿ ದೇವರ ಎದುರು ಶರಣಾಗುವುದು ಎಂದರ್ಥ.

ಅಜ್ಞಾನ ಮತ್ತು ಅಹಂ ಗಳ ಪ್ರತೀಕವಾಗಿರುವ, ತೆಂಗಿನಕಾಯಿಯ ಗಟ್ಟಿಯಾದ ಚಿಪ್ಪು ಅಥವಾ ಹೊರಪದರವನ್ನೊಡೆದು ತನ್ಮೂಲಕ ಅoತ:ಶುದ್ಧಿ ಹಾಗೂ ಜ್ಞಾನದ ಹೊoಬೆಳಕಿಗೆ ದಾರಿಮಾಡಿಕೊಡುವುದು ಎಂಬುದೇ ತೆಂಗಿನಕಾಯಿಯನ್ನು ಒಡೆಯುವುದರ ಹಿಂದಿರುವ ತಾತ್ಪರ್ಯ. ಕಾಯಿಯನ್ನು ಒಡೆದು ಒಳಗಿನ ಬಿಳಿಪದರವನ್ನು ಕoಡುಕೊಳ್ಳುವುದೇ ಜ್ಞಾನ ಹಾಗೂ ಆತ್ಮಶುದ್ಧಿಯನ್ನು ಸಾಧಿಸಿದ್ದರ ದ್ಯೋತಕ. ಹಿಂದೂ ಧರ್ಮಶಾಸ್ತ್ರ ಗಳಲ್ಲಿ ತೆಂಗಿನಕಾಯಿಗಿರುವ ಮಹತ್ವತದತ್ತ ಒಂದು ಚುರುಕು ನೋಟವನ್ನು ಬೀರೋಣ.

ದೇವರ ಪೂಜೆಯ ವೇಳೆಯಲ್ಲಿ ತೆಂಗಿನ ಕಾಯಿಯನ್ನು ಏಕೆ ಒಡೆಯುತ್ತಾರೆ ?

ದೇವರ ಪೂಜೆಯ ವೇಳೆಯಲ್ಲಿ ತೆಂಗಿನ ಕಾಯಿಯನ್ನು ಏಕೆ ಒಡೆಯುತ್ತಾರೆ ?

ಒಂದು ಕಾಲದಲ್ಲಿ, ಹಿಂದೂ ಧರ್ಮದಲ್ಲಿ ಪ್ರಾಣಿಬಲಿ ಹಾಗೂ ನರಬಲಿಗಳು ಸರ್ವೇಸಾಮಾನ್ಯವಾಗಿದ್ದವು. ಆದಿಶoಕರಾಚಾರ್ಯರ ರಂಗಪ್ರವೇಶವಾದಾಗ ಅವರು ಪ್ರಾಣಿ ಬಲಿ ಹಾಗೂ ನರ ಬಲಿಗಳoತಹ ಅಮಾನವೀಯ ಆಚರಣೆಗಳನ್ನು ಅಲ್ಲಿಗೇ ತಡೆದು ಅದರ ಬದಲಿಗೆ ದೇವರಿಗೆ ತೆಂಗಿನಕಾಯಿಗಳನ್ನು ಸಮರ್ಪಿಸುವ ಸತ್ಸಂಪ್ರದಾಯವನ್ನು ಜಾರಿಗೆ ತಂದರು. ತೆಂಗಿನ ಕಾಯಿಯು ಮಾನವನ ತಲೆಯನ್ನು ಅನೇಕ ವಿಧಗಳಲ್ಲಿ ಹೋಲುತ್ತದೆ.-ಹೊರಭಾಗದಲ್ಲಿರುವ ನಾರನ್ನು ಮಾನವನ ತಲೆಕೂದಲಿಗೂ, ಅದರ ಗಟ್ಟಿಯಾದ ಹೊರಪದರ ಅಥವಾ ಚಿಪ್ಪನ್ನು ಮಾನವನ ತಲೆಬುರುಡೆಗೂ, ಕಾಯಿಯೊಳಗಿರುವ ನೀರನ್ನು ಮಾನ ದೇಹದಲ್ಲಿ ಪ್ರವಹಿಸುತ್ತಿರುವ ರಕ್ತಕ್ಕೂ, ಹಾಗೂ ಒಳಗಿನ ಬಿಳಿಯ ಪದರವನ್ನು ತಲೆಯೊಳಗಿನ ಅವಕಾಶಕ್ಕೂ ಹೋಲಿಕೆ ಮಾಡಲಾಗುತ್ತದೆ.

ಕೆಟ್ಟ ದೃಷ್ಟಿಯ ನಿವಾರಣೆಗಾಗಿ

ಕೆಟ್ಟ ದೃಷ್ಟಿಯ ನಿವಾರಣೆಗಾಗಿ

ನಿಮ್ಮ ಮೇಲೆ ಯಾರದಾದರೂ ಕೆಟ್ಟ ದೃಷ್ಠಿಯು ಬಿದ್ದಿರಬಹುದೆಂಬ ಅನುಮಾನವುoಟಾದಾಗ, ತೆಂಗಿನಕಾಯಿಗಳನ್ನು ಪ್ರಾರ್ಥಿಸಿ ಅವುಗಳನ್ನು ಒಡೆಯುತ್ತಾರೆ. ಕರಾರುವಕ್ಕಾಗಿ ನಿಮ್ಮ ಎತ್ತರದಷ್ಟು ಉದ್ದವಿರುವ ದಾರವೊ೦ದನ್ನು ಪಡೆದು, ತೆಂಗಿನಕಾಯಿಯೊಂದನ್ನು ತೆಗೆದುಕೊಂಡು ಅದರ ಸುತ್ತಲೂ ಈ ದಾರವನ್ನು ಸುತ್ತಿರಿ. ದಾರವನ್ನು ಹಿಡಿದುಕೊಂಡು ತೆಂಗಿನಕಾಯಿಯನ್ನು ನಿಮ್ಮ ತಲೆಯ ಸುತ್ತಲೂ ಏಳು ಬಾರಿ ತಿರುಗಿಸಿ ಅದನ್ನು ಹರಿಯುವ ನದಿಯೊಂದಕ್ಕೆ ಸಮರ್ಪಿಸಿರಿ.

ರಾಹುವಿನ ವಕ್ರದೃಷ್ಟಿಯನ್ನು ಹತ್ತಿಕ್ಕಲು

ರಾಹುವಿನ ವಕ್ರದೃಷ್ಟಿಯನ್ನು ಹತ್ತಿಕ್ಕಲು

ರಾಹು ಗ್ರಹದ ಪ್ರಭಾವದಿಂದ ನೀವು ಭಾದಿತರಾಗಿದ್ದರೆ, ನೀವು ತೆಂಗಿನಕಾಯಿಯೊಂದನ್ನು, ಬುಧವಾರದಂದು ರಾತ್ರಿಯ ವೇಳೆಯಲ್ಲಿ ತಲೆಯ ಸಮೀಪದಲ್ಲಿಯೇ ಇರಿಸಿಕೊಂಡು ನಿದ್ದೆ ಹೋಗಿರಿ. ಮಾರನೆಯ ದಿವಸ, ಅದನ್ನು ಭವಾನ್ ಗಣೇಶನಿಗೆ ಸಮರ್ಪಿಸಿರಿ.

ಶನಿಪ್ರಭಾವದಿಂದ ಹೊರಬರಲು

ಶನಿಪ್ರಭಾವದಿಂದ ಹೊರಬರಲು

ಶನಿಪ್ರಭಾವದಿಂದ ಹೆಚ್ಚಿನ ಜನರು ಜೀವನದಲ್ಲಿ ನಾನಾ ರೀತಿಯ ಸಮಸ್ಯೆಗಳನ್ನೆದುರಿಸುತ್ತಾರೆ. ಅದ್ದರಿಂದ ಶನಿಗ್ರಹದ ಪ್ರಭಾವದಿಂದ ಹೊರಬರಲು, ನೀವು ಮಾಡಬೇಕಾದುದೇನೆಂದರೆ ಒಂದು ತೆಂಗಿನಕಾಯಿ, ಬಾರ್ಲಿ, ಹಾಗೂ ಕಪ್ಪು ಉದ್ದಿನ ಬೇಳೆ ಇವುಗಳನ್ನು ಒಟ್ಟಿಗೆ ಒಂದು ಕಪ್ಪು ಬಣ್ಣದ ಬಟ್ಟೆಯೊoದರಲ್ಲಿ ಸುತ್ತಿ ಪ್ಯಾಕ್ ಮಾಡಿರಿ. ಈ ಪ್ಯಾಕ್ ಅಥವಾ ಗಂಟನ್ನು ನಿಮ್ಮ ತಲೆಯ ಸುತ್ತಲೂ ಏಳು ಬಾರಿ ತಿರುಗಿಸಿ ಅನಂತರ ಈ ಗಂಟನ್ನು ಹರಿಯುತ್ತಿರುವ ನದಿಯೊಂದಕ್ಕೆ ಸಮರ್ಪಿಸಿರಿ.

ನಿಮ್ಮ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು

ನಿಮ್ಮ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು

ಮಂಗಳವಾರದಂದು ಮಲ್ಲಿಗೆಯ ತೈಲ ಮತ್ತು ಕುಂಕುಮ ಇವುಗಳನ್ನು ಮಿಶ್ರಗೊಳಿಸಿ ಈ ಮಿಶ್ರಣದ ಪೇಸ್ಟ್ ಒಂದನ್ನು ತಯಾರಿಸಿಕೊಳ್ಳಿರಿ. ಈ ಪೇಸ್ಟ್ ನಿಂದ ತೆಂಗಿನಕಾಯಿಯೊಂದರ ಮೇಲೆ ಸ್ವಸ್ತಿಕ್ ಚಿನ್ಹೆಯನ್ನು ಬರೆಯಿರಿ. ನಂತರ ಈ ತೆಂಗಿನಕಾಯಿಯನ್ನು ಭಗವಾನ್ ಶ್ರೀ ಗಣೇಶನಿಗೆ ಸಮರ್ಪಿಸಿರಿ ಹಾಗೂ ಋಣಮೋಚಕ ಸ್ತೋತ್ರವನ್ನು ಪಠಿಸಿರಿ. ಹೀಗೆ ಮಾಡುವುದರಿಂದ ಖಂಡಿತವಾಗಿಯೂ ಕೂಡ ನೀವು ಜೀವನದಲ್ಲಿ ಅಭ್ಯುದಯವನ್ನು ಕಾಣುವಿರಿ.

ಮಾಟ ಮಂತ್ರ

ಮಾಟ ಮಂತ್ರ

ನೀವೇನಾದರೂ ಮಾಟ ಮಂತ್ರದಂತಹ ದುಷ್ಪ್ರಭಾವಕ್ಕೆ ಒಳಗಾಗಿದ್ದರೆ, ಮಂಗಳವಾರ, ಶನಿವಾರ, ಹಾಗೂ ಭಾನುವಾರಗಳಂದು ದುರ್ಗಾದೇವಿಯ ದೇವಸ್ಥಾನವನ್ನು ಸಂದರ್ಶಿಸಿರಿ. ದೇವಸ್ಥಾನವನ್ನು ಸಂದರ್ಶಿಸುವುದಕ್ಕೆ ಮೊದಲು, ಒಂದು ತೆಂಗಿನಕಾಯಿ, ಅಲಂಕಾರದ ಸಾಮಗ್ರಿಗಳು, ಕರ್ಪೂರ, ಹೂಮಾಲೆಗಳು ಇವೇ ಮೊದಲಾದ ವಸ್ತುಗಳನ್ನು ದುರ್ಗಾದೇವಿಗೆ ಅರ್ಪಿಸಿರಿ ಹಾಗೂ 'ಹುo ಫಟ್' ಎಂಬ ಮಂತ್ರವನ್ನು ಪಠಿಸಿರಿ. ಅನಂತರ ಕರ್ಪೂರದಾರತಿಯನ್ನು ನೆರವೇರಿಸಿರಿ. ಹೀಗೆ ಮಾಡುವುದರಿಂದ ಮಾಟ ಮಂತ್ರದ ಎಲ್ಲಾ ಪ್ರಭಾವಗಳೂ ಕೂಡ ಹೇಳಹೆಸರಿಲ್ಲದಂತೆ ನಿಮ್ಮನ್ನು ಬಿಟ್ಟು ಹೋಗುತ್ತವೆ.

X
Desktop Bottom Promotion