Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
Shravana Shanivara : ಶ್ರಾವಣ ಶನಿವಾರ: ಈ ದೇವರುಗಳ ಆರಾಧನೆಯಿಂದ ಸಂಪತ್ತು ವೃದ್ಧಿ
ಶ್ರಾವಣ ಮಾಸದಲ್ಲಿ ಪ್ರತಿಯೊಂದು ದಿನವೂ ವಿಶೇಷವಾದದ್ದೇ. ಸೋಮವಾರ ಶ್ರಾವಣ ಸೋಮವಾರ ಆಚರಿಸಿದರೆ, ಮಂಗಳ ವಾರ ಗೌರಿ ವ್ರತ ಆಚರಿಸಲಾಗುವುದು, ಇನ್ನು ಶುಕ್ರವಾರ, ಶನಿವಾರ ಕೂಡ ಪೂಜೆಗೆ ಶ್ರೇಷ್ಠವಾದ ದಿನವೆಂದು ಹೇಳಲಾಗಿದೆ.

ಶ್ರಾವಣ ಶನಿವಾರ ಹನುಮಂತ, ಶನಿ ದೇವ, ವೆಂಕಟೇಶ್ವರ ಸ್ವಾಮಿಯ ಆರಾಧನೆ ಮಾಡಲಾಗುವುದು. ಈ ವರ್ಷ ಶ್ರಾವಣ ಶನಿವಾರದ ದಿನಾಂಕಗಳು ಹಾಗೂ ಆ ದಿನ ಪಠಿಸಬೇಕಾದ ಮಂತ್ರಗಳ ಬಗ್ಗೆ ಹೇಳಲಾಗಿದೆ ನೋಡಿ:

2021ರಲ್ಲಿ ಶ್ರಾವಣ ಶನಿವಾರದ ದಿನಾಂಕಗಳು
ಆಗಸ್ಟ್ 14
ಆಗಸ್ಟ್ 21
ಆಗಸ್ಟ್ 28
ಸೆಪ್ಟೆಂಬರ್ 4

ಶನಿವಾರ ಅಶ್ವತ್ಥ ಮರಕ್ಕೆ ಪೂಜೆ
ಅಶ್ವತ್ಥ ಮರದಲ್ಲಿ ಲಕ್ಷ್ಮಿ, ವಿಷ್ಣು ವಾಸ ಮಾಡುತ್ತಾರೆ ಎಂದು ಹೇಳಲಾಗುವುದು. ಅಶ್ವತ್ಥ ಮರವನ್ನು ಶ್ರೀ ಕೃಷ್ಣನನ್ನು ತನ್ನದೇ ರೂಪವೆಂದು ವಿವರಿಸಿದ್ದಾನೆ.
ಅಶ್ವತ್ಥ ಮರಕ್ಕೆ ನೀರನ್ನು ಹಾಕಿ ಪ್ರದರ್ಶಣೆ ಬಂದು ಪೂಜೆ ಮಾಡಬೇಕು, ನಂತರ ನೈವೇದ್ಯ ಅರ್ಪಿಸಬೇಕು. ಪೂಜೆ ಸಲ್ಲಿಸುವಾಗ ಲಕ್ಷ್ಮಿ ಹಾಗೂ ವಿಷ್ಣು ಮಂತ್ರ ಪಠಿಸಿ
ಲಕ್ಷ್ಮಿ ಮಂತ್ರ
"ಓಂ ಶ್ರೀಮ್ ಮಹಾ ಲಕ್ಷ್ಮೀಯೇಯ್ ನಮಃ"
"ಓಂ ಹ್ರೀಮ್ ಶ್ರೀಮ್ ಕ್ಲೀಮ್ ಮಹಾಲಕ್ಷ್ಮಿ ನಮಃ"
" ಓಂ ಶ್ರೀಮ್ ಶ್ರೀ-ಆಯ್ ನಮಃ "
" ಓಂ ಮಹಾ ದೇವಿಚ ವಿದ್ಮಾಯ್; ವಿಷ್ಣು ಪ್ರತಿಚಾ ದೇಮಹಿ; ಥನ್ನೋ ಲಕ್ಷ್ಮಿ ಪ್ರಚೋದಯತ್"
ವಿಷ್ಣು ಮೂಲ ಮಂತ್ರ:
ಓಂ ನಮೋ ನಾರಾಯಣಾಯ

ಶನಿ ದೇವನ ಆರಾಧನೆ
ಶನಿ ದೋಷ ನಿವಾರಣೆಗೆ ಶನಿವಾರದಂದು ಶನಿ ದೇವನನ್ನು ಆರಾಧನೆ ಮಾಡಬೇಕು. ಶನಿಗೆ ಎಳ್ಳೆಣ್ಣೆ ಅರ್ಪಿಸಿ, ಶನಿ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಬೇಕು. ಈ ದಿನ ವ್ರತ ನಿಯಮಗಳನ್ನು ಪಾಲಿಸಿ ಪೂಜೆ ಮಾಡುವುದರಿಂದ ಕಷ್ಟಗಳು ದೂರವಾಗುವುದು.
"ಓಂ ಹಿಲ್ಮ್ ಶಾಮ್ ಶನಾಯ ನಮ"
"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ"
"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿವಾರ ವೆಂಕಟೇಶ್ವರ ಸ್ವಾಮಿಯ ಆರಾಧನೆ
ಶನಿವಾರ ವೆಂಕಟೇಶ್ವರ ಸ್ವಾಮಿಯ ಆರಾಧನೆ ಮಾಡಲಾಗುವುದು. ವೆಂಕಟೇಶ್ವರ ಕೃಪೆಯಿಂದ ಸಂಪತ್ತು ವೃದ್ಧಿಯಾಗುವುದು.

ಓಂ ಶ್ರೀ ವೆಂಕಟೇಶ್ವರಾಯ ನಮಃ |
ಓಂ ಲಕ್ಷ್ಮೀಪತಯೇ ನಮಃ |
ಓಂ ವರಪ್ರದಾಯ ನಮಃ |
ಎಂದು ಪಠಿಸುತ್ತಾ ಪೂಜೆ ಸಲ್ಲಿಸಿ.
ಹೀಗೆ ಶ್ರಾವಣ ಶನಿವಾರ ಪೂಜೆಗೆ ತುಂಬಾ ಶ್ರೇಷ್ಠವಾದ ದಿನವಾಗಿದೆ. ಈ ಶ್ರಾವಣ ಮಾಸದಲ್ಲಿ ಸಲ್ಲಿಸುವ ಪೂಜೆಗೆ ವಿಶೇಷ ಫಲವಿದೆ ಎಂದು ಹೇಳಲಾಗುವುದು.



Click it and Unblock the Notifications
