Latest Updates
-
ಬಿಸಿಗಾಳಿ ಕಾಟ: ಮದುವೆ ಡೇಟಿಂಗ್ ಪ್ಲಾನ್ ಹಾಳಾಗದಂತೆ ತಡೆಯುವುದು ಹೇಗೆ? -
ಬಾಲ್ಕನಿ ಅಲಂಕಾರ: ಹಬ್ಬದ ಸಂಭ್ರಮಕ್ಕೆ 10 ನಿಮಿಷದ ಮ್ಯಾಜಿಕ್ -
ಬಿಸಿಲಿನ ಬೇಗೆಗೆ ಈ ಪಾನೀಯಗಳೇ ಮದ್ದು, ತಂಪಾಗಿರಿ ಹೀಗೆ! -
ಬೈಸಾಕಿ ಮತ್ತು ವಿಷು ಹಬ್ಬದ ಲುಕ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ತೆಲಂಗಾಣ ಬಿಸಿಲ ಬೇಗೆ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ -
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ
ಶ್ರಾವಣ ಮಾಸದ ವಿಶೇಷ: ಬೈದ್ಯನಾಥ ಶಿವನ ಕಥೆ
ಈ ವರ್ಷದಲ್ಲಿ ಭಾರತದ ಪೂರ್ವ ದಿಕ್ಕಿನಲ್ಲಿ ಕೇಳಿ ಬರುವ ಒಂದೇ ಒಂದು ಮಂತ್ರ ಎಂದರೆ ಬೋಲ್ ಬಮ್ ಬೋಲ್ ಬಮ್ ಎಂದಾಗಿದೆ! ಶ್ರಾವಣ ಮಾಸದಿಂದಾಗಿ ಈ ಮಂತ್ರ ವ್ರತಧಾರಿಗಳಲ್ಲಿ ಅನುರಣಿಸುತ್ತಿರುತ್ತದೆ. ಹಿಂದೂಗಳ ಪವಿತ್ರ ಮಾಸ ಪ್ರಾರಂಭವಾಗಿದೆ ಮತ್ತು ಬೈದ್ಯನಾಥ ದೇವಸ್ಥಾನಕ್ಕೆ ಜನರು ಹೋಗುವ ಸುಸಂದರ್ಭ ಇದಾಗಿದೆ. ಅಲ್ಲದೆ ಈ ಯಾತ್ರೆಯನ್ನು ಶಿವ ದೇವರಿಗೆ ಅರ್ಪಿಸಲಾಗುತ್ತದೆ.
ಹಿಂದೂ ಜನಾಂಗದವರಿಗೆ ಇದು ಶ್ರಾವಣ ಮಾಸ ಪ್ರಾರಂಭಗೊಂಡಿದೆಯೆಂದು ಮತ್ತು ಶ್ರೀ ಪರಮೇಶ್ವರನಿಗೆ ಸಮರ್ಪಿಸಲಾದ ಬೈದ್ಯನಾಥನ ದೇವಾಸ್ಥಾನಕ್ಕೆ ತೀರ್ಥಯಾತ್ರೆ ಮಾಡಲು ತಕ್ಕ ಸಮಯವೆಂದು ರೂಢಿಯಾಗಿದೆ. ಹಿಂದೂಗಳು ಬೈದ್ಯನಾಥನ ಜ್ಯೋತಿರ್ಲಿಂಗದ ದರ್ಶನಕ್ಕೆ ಪ್ರಸಿದ್ಧ ತಿರ್ಥಯಾತ್ರೆಯನ್ನು ಪವಿತ್ರವಾದ ಶ್ರಾವಣಮಾಸದಲ್ಲಿ ಕೈಕೊಳ್ಳುತ್ತಾರೆ. ಬೈದ್ಯನಾಥ ದೇವಸ್ಥಾನವು ಜಾರ್ಖಂಡ್ ರಾಜ್ಯದಲ್ಲಿದೆ ಮತ್ತು ಪ್ರತಿ ವರ್ಷ ಸಾವಿರಾರು ಯಾತ್ರಾರ್ಥಿಗಳು ಭೇಟಿನೀಡುತ್ತಾರೆ. ಹಿಂದೂ ಧರ್ಮದ ಭಾವೈಕ್ಯತೆಯ ಹಬ್ಬ: ಶ್ರಾವಣ ಮಾಸ
ಬೈದ್ಯನಾಥ ದೇವಸ್ಥಾನದ ಹಿಂದಿರುವ ಕಥೆ ಅತ್ಯಂತ ಆಸಕ್ತಿಕರವಾಗಿದೆ. ಅಸುರ ರಾಜ ರಾವಣ ನೆಲೆಸಿದ ಸ್ಥಾನದಲ್ಲಿ ಬೈದ್ಯನಾಥ ಜ್ಯೋತಿರ್ಲಿಂಗವನ್ನು ಆಕಸ್ಮಿಕವಾಗಿ ಸ್ಥಾಪಿಸಲಾಯಿತು ಎಂದು ಪುರಾಣಗಳು ಹೇಳುತ್ತವೆ. ಈ ದೇವಸ್ಥಾನವನ್ನು ಬಾಬಾ ಧಾಮ ಎಂದೂ ಕರೆಯುತ್ತಾರೆ ಮತ್ತು ಪ್ರತೀ ವರ್ಷ ಜನರು ಕಾಲ್ನಡಿಗೆಯಲ್ಲೇ ಈ ಕ್ಷೇತ್ರಕ್ಕೆ 'ಕಾನ್‌ವಾರ್' ಎಂಬ ಮಡಿಕೆಯನ್ನು ತಮ್ಮ ಭುಜಗಳಲ್ಲಿ ಹೊತ್ತುಕೊಂಡು ಇಲ್ಲಿಗೆ ಬರುತ್ತಾರೆ. ಶ್ರಾವಣ ಮಾಸದ ಸಂದಭದಲ್ಲಿ ಆಚರಣೆಯ ಕೇಂದ್ರಬಿಂದುವಾಗಿರುವ ಬೈದ್ಯನಾಥ ಜ್ಯೋತಿರ್ಲಿಂಗದ ಕಥೆಯನ್ನು ನಾವಿಂದು ಹೇಳಲಿದ್ದೇವೆ. ಇನ್ನು ಮುಂದೆ ಓದಿ.

ರಾವಣ: ಮಹಾನ್ ಶಿವಭಕ್ತ
ರಾಕ್ಷಸ ರಾಜ ರಾವಣನು ಮಹಾನ್ ಶಿವಭಕ್ತ ಎಂಬುದು ಗೊತ್ತೇ ಇದೆ. ದೇವರನ್ನು ಒಲಿಸಿಕೊಳ್ಳಲು ಆತ ಹಲವಾರು ವೃತ ಪೂಜೆ ತಪಗಳನ್ನು ಮಾಡುತ್ತಾನೆ. ಇದರಿಂದ ಪ್ರಸನ್ನನಾದ ಶಿವ ದೇವರು ರಾವಣನಲ್ಲಿ ವರವನ್ನು ಬೇಡಿಕೊಳ್ಳಲು ಹೇಳುತ್ತಾನೆ. ಅತಿ ಬುದ್ಧಿವಂತನಾದ ರಾವಣನು ಶಿವನಲ್ಲಿ ತಾನು ನಿಮ್ಮನ್ನು ನಾನಿರುವ ಲಂಕೆಗೆ ಕೊಂಡೊಯ್ಯುವುದಾಗಿಯೂ ಆದ್ದರಿಂದ ತಾವು ತನ್ನೊಂದಿಗೆ ಲಿಂಗದ ರೂಪದಲ್ಲಿ ಬರಬೇಕೆಂದು ಕೇಳಿಕೊಳ್ಳುತ್ತಾನೆ. ನಂತರ ಶಿವನು ರಾವಣನಿಗೆ ಜ್ಯೋತಿರ್ಲಿಂಗವನ್ನು ಲಂಕೆಗೆ ಒಯ್ಯಲು ಪ್ರಸಾದಿಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಲಿಂಗವನ್ನು ನೆಲದಲ್ಲಿ ಇಡಬಾರದೆಂಬ ಷರತ್ತನ್ನು ಶಿವನು ರಾವಣನಿಗೆ ಹೇಳಿದನು. ಹಾಗೇನಾದರು ಇಟ್ಟಪಕ್ಷದಲ್ಲಿ, ಆ ಲಿಂಗವು ಅದೇ ಸ್ಥಳದಲ್ಲಿ ಶಾಶ್ವತವಾಗಿ ಸ್ಥಾಪಿತವಾಗಿಹೋಗಿಬಿಡುವುದೆಂದು ಎಚ್ಚರಿಕೆ ಕೊಟ್ಟನು. ಹೀಗೆ ರಾವಣನು ತನ್ನ ಪ್ರಯಾಣವನ್ನು ಮುಂದುವರಿಸುತ್ತಾನೆ.

ವಿಷ್ಣುವಿನ ಉಪಾಯ
ರಾವಣನು ಜ್ಯೋತಿರ್ಲಿಂಗವನ್ನು ಲಂಕೆಯಲ್ಲಿ ಪ್ರತಿಷ್ಟಾಪಿಸಿದರೆ ನಂತರ ಆತ ಮಹಾನ್ ಪರಾಕ್ರಮಿಯಾಗುತ್ತಾನೆ ಮತ್ತು ಇವನನ್ನು ಸೋಲಿಸಲು ಯಾರಿಂದಲೂ ಸಾಧ್ಯವಾಗದು ಎಂದು ದೇವತೆಗಳು ಭಯಬೀಳುತ್ತಾರೆ. ಹೀಗೆ ವಿಷ್ಣು ದೇವರು ಒಂದು ಉಪಾಯವನ್ನು ಆಲೋಚಿಸುತ್ತಾರೆ. ಮಳೆಯ ದೇವರು ಎಂದೇ ಪ್ರತೀತರಾದ ವರುಣನು ರಾವಣನ ಹೊಟ್ಟೆಯನ್ನು ಪ್ರವೇಶಿಸುತ್ತಾನೆ. ಹೀಗಾಗಿ ರಾವಣನಿಗೆ ಮೂತ್ರ ಶಂಕೆ ಮಾಡಲು ಆತುರವಾಗುತ್ತದೆ. ರಾವಣನು ಲಿಂಗವನ್ನು ಯಾರಾದರೂ ಹಿಡಿದುಕೊಳ್ಳಬೇಕೆಂಬ ಉದ್ದೇಶದಿಂದ ಸುತ್ತ ಮುತ್ತಲೂ ನೋಡುತ್ತಾನೆ. ವಿಷ್ಣು ದೇವರು ಬ್ರಾಹ್ಮಣನ ರೂಪದಲ್ಲಿ ರಾವಣನ ಎದುರು ಪ್ರತ್ಯಕ್ಷರಾಗಿ ರಾವಣನು ಲಿಂಗವನ್ನು ಕೆಳಗಿಡಬಾರದೆಂಬ ತಾಕೀತನ್ನು ಮಾಡಿ ತಾನು ಇದೀಗ ಬರುವುದಾಗಿ ತಿಳಿಸಿ ಬಹಿರ್ದಿಸೆಗೆ ತೆರಳುತ್ತಾನೆ. ಸೂರ್ಯಾಸ್ತದವರೆಗೆ ಮಾತ್ರವೇ ತನಗೆ ಈ ಲಿಂಗವನ್ನು ಹಿಡಿದುಕೊಳ್ಳಲು ಸಾಧ್ಯ ಅದರ ನಂತರ ಇದನ್ನು ನಾನು ಕೆಳಗಿಡುತ್ತೇನೆ ಎಂದು ತಿಳಿಸಿ ಬ್ರಾಹ್ಮಣ ಲಿಂಗವನ್ನು ಹಿಡಿದುಕೊಳ್ಳುತ್ತಾನೆ.

ರಾವಣನ ಕೋಪ
ರಾವಣ ಬಹಿರ್ದಿಸೆಗೆ ಹೋದ ಸಂದರ್ಭದಲ್ಲಿ, ವರುಣ ತನ್ನ ಆಟವನ್ನು ಪ್ರಾರಂಭಿಸುತ್ತಾನೆ ಮತ್ತು ಸೂರ್ಯಾಸ್ತದವರೆಗೆ ರಾವಣನಿಗೆ ಮೂತ್ರಶಂಕೆ ಮಾಡಲಾಗುವುದಿಲ್ಲ. ಈ ಸಂದರ್ಭದಲ್ಲಿ ಬ್ರಾಹ್ಮಣ ಹೇಳಿದಂತೆ ಲಿಂಗವನ್ನು ಭೂಮಿಯ ಮೇಲೆ ಇಡುತ್ತಾನೆ ಮತ್ತು ಅದು ಅಲ್ಲಿಯೇ ಭದ್ರಗೊಳ್ಳುತ್ತದೆ. ರಾವಣ ಬಂದಾಗ ಲಿಂಗವು ನೆಲದಲ್ಲಿ ಭದ್ರವಾಗಿ ಊರಿರುವುದು ಅರಿವಾಗುತ್ತದೆ. ಲಿಂಗವನ್ನು ನೆಲದಿಂದ ಕೀಳಲು ರಾವಣ ಪ್ರಯತ್ನಿಸುತ್ತಾನೆ ಆದರೆ ರಾವಣನ ಪ್ರಯತ್ನ ವಿಫಲವಾಗುತ್ತದೆ. ರಾವಣನು ಸಿಟ್ಟಿನಲ್ಲಿ, ಲಿಂಗದ ತಲೆಗೆ ಮುಷ್ಟಿಯಿಂದ ರಾವಣ ಒದೆಯುತ್ತಾನೆ. ಬೈದ್ಯನಾಥ ಜ್ಯೋತಿರ್ಲಿಂಗದ ಶಿರದಲ್ಲಿ ಈ ಮುಷ್ಟಿ ಪ್ರಹಾರವನ್ನು ನಮಗೆ ಈಗಲೂ ಕಾಣಬಹುದು.

ಹೃದಯಪೀಠ್
ಶಿವನು ತನ್ನ ಭುಜಗಳಲ್ಲಿ ಸತಿಯನ್ನು ಕೊಂಡೊಯ್ಯುತ್ತಿರುವಾಗ ಆಕೆಯ ಹೃದಯ ಇಲ್ಲಯೇ ಬಿತ್ತೆಂದು ಪುರಾಣ ಹೇಳುತ್ತದೆ ಆದ್ದರಿಂದ ಇಲ್ಲಿಗೆ ಹೃದಯಪೀಠ ಎಂಬ ಹೆಸರೂ ಇದೆ.

ಬೈದ್ಯನಾಥನನ್ನು ಪೂಜಿಸುವುದು
ಈ ಯಾತ್ರ ಸ್ಥಳಕ್ಕೆ ಸಾವಿರಾರು ಭಕ್ತರು ಬಂದು ಲಿಂಗಕ್ಕೆ ನೀರನ್ನು ಅಭಿಷೇಕ ಮಾಡುತ್ತಾರೆ. ಜ್ಯೋತಿರ್ಲಿಂಗದ ಸಮೀಪವಿರುವ ಶಿವಗಂಗೆ ಎಂಬ ಕೊಳದಿಂದ ನೀರನ್ನು ತಮ್ಮ ಕಾನ್ವರ್ ಉಪಯೋಗಿಸಿ ಭಕ್ತರು ತುಂಬಿಕೊಂಡು ನಂತರ ಅದನ್ನು ಲಿಂಗಕ್ಕೆ ಅಭಿಷೇಕ ಮಾಡುತ್ತಾರೆ. ಶ್ರಾವಣ ಮಾಸದ ಸಮಯದಲ್ಲಿ ಭಕ್ತರು ಕಟ್ಟುನಿಟ್ಟಾಗಿ ಸಸ್ಯಾ ಹಾರಿಗಳಾಗಿರಬೇಕು. ಹೀಗಾಗಿ ಬೈದ್ಯನಾಥ ದೇವಾಸ್ಥಾನದಲ್ಲಿ ಶಿವನು ನೆಲೆಸಿದ್ದು ಅವನನ್ನು ತುಂಬು ಹೃದಯದಿಂದ ಪೂಜಿಸಿದವರಿಗೆ ಅವರ ಇಚ್ಚೆಗಳನ್ನೆಲ್ಲ ಪೂರೈಸುತ್ತಾನೆ. ಸತ್ಯ ಹೃದಯದಿಂದ ನಿರ್ಮಲ ಭಕ್ತಿಯಿಂದ ಬೈದ್ಯನಾಥ ದೇವರನ್ನು ಪೂಜಿಸಿದರೆ ಅವರು ಸಕಲ ಇಷ್ಟಾರ್ಥಗಳನ್ನು ನೆರೆವೇರಿಸಿಕೊಡುತ್ತಾರೆ ಎಂಬುದು ನಿಜವಾಗಿದೆ.



Click it and Unblock the Notifications











