Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
Shravan Purnima 2021 : ಶ್ರಾವಣ ಪೂರ್ಣಿಮೆ ತುಂಬಾ ಪವಿತ್ರವಾದ ದಿನ, ಏಕೆ?
ಹಿಂದೂಗಳಿಗೆ ಶ್ರಾವಣ ಪೂರ್ಣಿಮೆ ತುಂಬಾನೇ ವಿಶೇಷ, ಈ ವರ್ಷ ಶ್ರಾವಣ ಪೂರ್ಣಿಮೆಯನ್ನು ಆಗಸ್ಟ್ 22 ಭಾನುವಾರದಂದು ಆಚರಿಸಲಾಗುವುದು. ಇದನ್ನು ರಾಖಿ ಪೂರ್ಣಿಮೆ ಎಂದು ಕೂಡ ಕರೆಯಲಾಗುವುದು. ಈ ಪವಿತ್ರ ದಿನದಂದು ರಕ್ಷಾ ಬಂಧನ ಆಚರಿಸಲಾಗುವುದು.
ಈ ದಿನದಂದು ದೇಶದ ಬೇರೆ-ಬೇರೆ ಕಡೆ ವಿವಿಧ ರೀತಿಯಲ್ಲಿ ಆಚರಿಸಲಾಗುವುದು. ನಾವಿಲ್ಲಿ ಶ್ರಾವಣ ಪೂರ್ಣಿಮೆಯ ಮಹತ್ವ ಹಾಗೂ ಆಚರಣೆಯ ಬಗ್ಗೆ ಹೇಳಿದ್ದೇವೆ ನೋಡಿ:

ಶ್ರಾವಣ ಪೂರ್ಣಿಮೆ ಮಹತ್ವ
ಹಿಂದೂ ಕ್ಯಾಲೆಂಡರ್‌ನಲ್ಲಿ ಶ್ರಾವಣ ಪೂರ್ಣಿಮೆಯನ್ನು ತುಂಬಾ ಮಹತ್ವದ ದಿನವೆಂದು ಪರಿಗಣಿಸಲಾಗಿದೆ. ಉಪನಯನ ಮತ್ತು ಯಜ್ಙೋಪವೀತ ಆಚರಿಸಲಾಗುವುದು. ಬ್ರಾಹ್ಮಣರಾಗಿದ್ದವರಿಗೆ ಅವರ ಅವಿಬಾಜ್ಯ ಅಂಗವೇ ಯಜ್ಙೋಪವೀತ . ಪ್ರತೀ ಹುಣ್ಣಿಮೆ ದಿನ ನೂಲಹುಣ್ಣಿಮೆಯಂದು ಇದನ್ನು ಆಚರಿಸಲಾಗುವುದು. ಬ್ರಾಹ್ಮಣರು ಈ ದಿನ ಶುದ್ಧೀಕರಣ ಸಂಪ್ರದಾಯವನ್ನು ಕೂಡ ಆಚರಿಸುತ್ತಾರೆ. ಇನ್ನು ಶಿವ ಭಕ್ತರು ಈ ದಿನ ವಿಶೇಷ ಪೂಜೆ ಸಲ್ಲಿಸಲಾಗುವುದು, ಹೀಗೆ ಅನೇಕ ಕಾರಣಗಳಿಗೆ ಈ ದಿನ ತುಂಬಾನೇ ಮಹತ್ವದ್ದಾಗಿದೆ.

ಶ್ರಾವಣ ಪೂರ್ಣಿಮೆಯಂದು ಪಾಲಿಸುವ ಆಚರಣೆಗಳು
* ರಕ್ಷಾ ಬಂಧನ: ರಾಖಿ ಹಬ್ಬ
* ಹಯಗ್ರೀವ ಜಯಂತಿ: ಈ ದಿನ ಹಯಗ್ರೀವನ ಪೂಜೆ ಮಾಡಲಾಗುವದುಉ.
* ಉಪಕರ್ಮ: ಜನಿವಾರ ಬದಲಾಯಿಸುವುದು
* ಜಂಧ್ಯಂ ಪೂರ್ಣಿಮೆ: ಉಪಕರ್ಮ ಮಾಡುವುದು
* ನಾರಳಿ ಪೂರ್ಣಿಮೆ : ಈ ದಿನ ಸಮುದ್ರಕ್ಕೆ ತೆಂಗಿನಕಾಯಿ ಒಡೆದು ವರುಣ ದೇವನನ್ನು ಆರಾಧಿಸಲಾಗುವುದು.
* ಅವನಿ ಅವಿಟ್ಟಂ: ಗಾಯತ್ರಿ ಜಪ ಮಾಡುತ್ತಾ ದಕ್ಷಿಣ ಭಾರತದ ಬ್ರಾಹ್ಮಣರು ಜನಿವಾರ ಬದಲಾಯಿಸುವುದು
* ಬಲರಾಮ್ ಜಯಂತಿ: ಬಲರಾಮ ಜನಿಸಿದ ದಿನ
* ಅಮರನಾಥ ಯಾತ್ರೆ ಕೊನೆಯ ದಿನ
* ಪವಿತ್ರೋಪನ: ಈ ದಿನ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು.
* ಕಜರಾಯಿ ಪೂರ್ಣಿಮೆ: ಕೆಲವೊಂದು ಬೆಳೆಯ ಕಟಾವು

ಶ್ರಾವಣ ಪೂರ್ಣಿಮೆ ಆಚರಣೆಯ ಧಾರ್ಮಿಕ ಪ್ರಯೋಜನಗಳು
ಶ್ರಾವಣ ಪೂರ್ಣಿಮೆ ಆಚರಿಸುವುದರಿಂದ ಚಂದ್ರ ದೋಷ ನಿವಾರಣೆಯಾಗುತ್ತದೆ. ಈ ದಿನ ಬ್ರಾಹ್ಮಣರಿಗೆ ದಾನ ಮಾಡುವುದರಿಂದ ವಿಷ್ಣು, ಲಕ್ಷ್ಮಿಯನ್ನು ಪೂಜಿಸುವುದರಿಂದ ಸಂಪತ್ತು ವೃದ್ಧಿಯಾಗುವುದು.
ಈ ದಿನ ಪೂಜೆ ಮಾಡುವಾಗ ನೀವು ಶುಭ ಮುಹೂರ್ತದಲ್ಲಿ ಮಾಡಬೇಕು. ಭದ್ರಾಕಾಲದಲ್ಲಿ ಮಾಡಬೇಡಿ.



Click it and Unblock the Notifications
