Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಶ್ರಾವಣ ಮಾಸ: ಇಷ್ಟಾರ್ಥ ಸಿದ್ಧಿಗಾಗಿ ಈ ತಿಂಗಳಿನಲ್ಲಿ ಪಾಲಿಸಬೇಕಾದ ನಿಯಮಗಳೇನು ನೋಡಿ
ಹಿಂದೂ ಕನ್ನಡ ಪಂಚಾಂಗ ಪ್ರಕಾರ ಶ್ರಾವಣ ಮಾಸವೆಂಬುವುದು 5ನೇ ತಿಂಗಳಾಗಿದ್ದು, ಇದನ್ನು ಅತ್ಯಂತ ಪವಿತ್ರವಾದ ಮಾಸವೆಂದು ಪರಿಗಣಿಸಲಾಗಿದೆ. ಈ ಮಾಸದಲ್ಲಿ ಹೇಗಿರಬೇಕು, ಏನು ಮಾಡಬಾರದು ಎಂಬೆಲ್ಲಾ ನಿಯಮಗಳಿವೆ.
ಶ್ರಾವಣ ಮಾಸದ ನಿಯಮಗಳನ್ನು ಪಾಲಿಸಿದರೆ ಒಳಿತಾಗುವುದು ಎಂಬ ನಂಬಿಕೆ. ಈ ವರ್ಷ ಶ್ರಾವಣ ಮಾಸ ಆಗಸ್ಟ್-ಸೆಪ್ಟೆಂಬರ್ ನಡುವೆ ಬಂದಿದೆ. ಆಗಸ್ಟ್ 9ರಿಂದ ಕರ್ನಾಟಕದಲ್ಲಿ ಶ್ರಾವಣ ಪ್ರಾರಂಭ.
ಈ ಮಾಸದಲ್ಲಿ ಶ್ರಾವಣ ಸೋಮವಾರ ಆಚರಿಸಲಾಗುವುದು. ಒಂದು ಸೋಮವಾರ ಆಚರಿಸಿದರೆ 16 ಸೋಮವಾರ ಆಚರಿಸಬೇಕೆಂಬ ನಿಯಮವಿದೆ. ಏನಾದರೂ ಸಂಕಲ್ಪ ತೆಗೆದುಕೊಂಡು ಶ್ರಾವಣ ಸೋಮವಾರ ಆಚರಿಸಿದರೆ ಅದು ನೆರವೇರುವುದು ಎಂದು ಹೇಳಲಾಗುವುದು. ಶ್ರಾವಣ ಸೋಮವಾರದಂದು ಭಕ್ತರು ಬೆಳಗ್ಗೆ ಎದ್ದು ಸ್ನಾನ ಮಾಡೊ ಶಿವನ ದೇವಾಲಯಕ್ಕೆ ಹೋಗಿ ಪೂಜೆಯನ್ನು ಸಲ್ಲಿಸುತ್ತಾರೆ. ಕೆಲವರು ಮನೆಯಲ್ಲಿ ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಾರೆ.
ಶ್ರಾವಣ ಮಾಸದಲ್ಲಿ ಯಾರು ಶ್ರಾವಣ ಸೋಮವಾರ ಆಚರಿಸುತ್ತಾರೋ ಅವರು ಕೆಲವೊಂದು ಆಚಾರಗಳನ್ನು ಪಾಲಿಸಬೇಕು. ಆ ನಿಯಮ ಇಡೀ ಶ್ರಾವಣ ಮಾಸಕ್ಕೆ ಅನ್ವಯವಾಗುವುದು. ಶ್ರಾವಣ ತಿಂಗಳಿನಲ್ಲಿ ಏನು ಮಾಡಬಾರದು, ಏನು ಮಾಡಬೇಕು ಎಂದು ತಿಳಿಯೋಣ ಬನ್ನಿ:

ಶ್ರಾವಣ ಸೋಮವಾರ 2021: ಏನು ಮಾಡಬೇಕು
* ಉಪವಾಸ: ಶ್ರಾವ ಣ ಸೋಮವಾರದಂದು ಉಪವಾಸವಿರುವುದು ಹಾಗೂ ಇಡೀ ತಿಂಗಳು ಉಪವಾಸ ಮಾಡಿದರೆ (ಅಕ್ಕಿಯ ಅಂಶ ತಿನ್ನುವಂತಿಲ್ಲ, ಹಣ್ಣುಗಳು, ಗೋಧಿಯ ಪದಾರ್ಥ ಸೇವಿಸಬಹುದು) ಒಳ್ಳೆಯದು.
* ಶ್ರಾವಣ ಉಪವಾಸದಲ್ಲಿ ಸಾಕಷ್ಟು ನೀರು ಕುಡಿಯಿರಿ ಹಾಗೂ ಹಣ್ಣುಗಳನ್ನು ಸೇವಿಸಿ.
* ಶಿವನ ದೇವಾಲಯಕ್ಕೆ ಪ್ರತಿನಿತ್ಯ ಭೇಟಿ ನೀಡಿ.
* ಪ್ರತಿದಿನ ಮೃತ್ಯುಂಜಯ ಮಂತ್ರ ಪಠಿಸಿ.
* ಓಂ ನಮಃ ಶಿವಾಯ ಅಂತ ದಿನವಿಡೀ ಪಠಿಸುತ್ತಲೇ ಇರಿ.
* ಶಿವನಿಗೆ ಹಾಲು, ತುಪ್ಪ, ಮೊಸರು, ಗಂಗಾಜಲ, ಹಾಗೂ ಜೇನು ಹಾಕಿ ತಯಾರಿಸಿದ ನೈವೇದ್ಯ ಅರ್ಪಿಸಿ.
* ಈ ತಿಂಗಳಿನಲ್ಲಿ ರುದ್ರಾಕ್ಷಿ ಮಾಲೆ ಧರಿಸಿ.
* ಪ್ರತಿ ಸೋಮವಾರ ಶ್ರಾವಣ ಸೋಮವಾರ ವ್ರತ ಕತೆ ಓದುವುದು ಅಥವಾ ಕೇಳುವುದು ಮಾಡಬೇಕು. ಈ ಕತೆ ಕೇಳುವುದರಿಂದ ಅಥವಾ ಹೇಳುವುದರಿಂದ ಬದುಕನ್ನು ಮೋಕ್ಷದ ಕಡೆಗೆ ಕೊಂಡೊಯ್ಯುವುದು.

ಶ್ರಾವಣ 2021: ಏನು ಮಾಡಬಾರದು?
* ಈ ತಿಂಗಳಿನಲ್ಲಿ ಮದ್ಯವನ್ನು ಸೇವಿಸಬಾರದು.
* ಈ ತಿಂಗಳಿನಲ್ಲಿ ಕೂದಲು ತೆಗೆಯುವುದು, ಗಡ್ಡ ಬೋಳಿಸುವುದು ಮಾಡಬಾರದು.
* ಉಪವಾಸವನ್ನು ಮುರಿಯದಂತೆ ನೋಡಿಕೊಳ್ಳಬೇಕು.
* ಮಾಂಸಾಹಾರ ಸೇವಿಸಬಾರದು
* ಈ ತಿಂಗಳಿನಲ್ಲಿ ಅಡುಗೆಗೆ ಶುಂಠಿ-ಬೆಳ್ಳುಳ್ಳಿ ಕೂಡ ಬಳಸುವಂತಿಲ್ಲ.
* ಪುರಾಣದ ಪ್ರಕಾರ ಬದನೆಕಾಯಿ ಕೂಡ ಈ ತಿಂಗಳು ಬಳಸುವಂತಿಲ್ಲ.

ಶ್ರಾವಣ ಸೋಮವಾರ 2021:
ಆಗಸ್ಟ್ 9 , 2021
ಆಗಸ್ಟ್ 16, 2021
ಆಗಸ್ಟ್ 23, 2021
ಆಗಸ್ಟ್ 30, 2021
ಸೆಪ್ಟೆಂಬರ್ 6, 2021
ಸೆಪ್ಟೆಂಬರ್ 7ಕ್ಕೆ ಶ್ರಾವಣ ತಿಂಗಳು ಮುಕ್ತಾಯವಾಗುವುದು.



Click it and Unblock the Notifications
