Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ಐತಿಹಾಸಿಕ ಜಗನ್ನಾಥ ರಥಯಾತ್ರೆ 2020ರ ವಿಶೇಷಗಳು
ಪ್ರತೀವರ್ಷ ಐತಿಹಾಸಿಕ ಜಗನ್ನಾಥ ರಥಯಾತ್ರೆ ನೋಡುವುದೇ ಕಣ್ಣಿಗೆ ಹಬ್ಬ. ಆದರೆ ಈ ವರ್ಷ ಕೊರೊನಾ ಅಟ್ಟಹಾಸ ನಡುವೆ ಆ ಸೊಬಗು ನೋಡಲು ಸಾಧ್ಯವೇ ಎಂಬುವುದು ಭಕ್ತರ ಚಿಂತೆಯಾಗಿತ್ತು. ಆದರೆ ಸುಪ್ರೀಂ ಕೋರ್ಟ್ ರಥ ಯಾತ್ರೆಗೆ ಅನುಮತಿ ನೀಡಿರುವುದು ಸಮಧಾನಕರವಾದ ವಿಷಯವಾಗಿದೆ.

ರಥ ಯಾತ್ರೆ ಆಯೋಜಿಸುವ ನಿರ್ಧಾರವ್ನು ಒಡಿಶಾ ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು ಪುರಿಯ ಜಗನ್ನಾಥ ಮಂದಿರದಲ್ಲಿ ಮಾತ್ರ ರಥ ಯಾತ್ರೆ ನಡೆಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ವರ್ಷದ ಪುರಿಯ ಜಗನ್ನಾಥನ ರಥಯಾತ್ರೆಯ ಸೊಬಗು ಕರ್ಪ್ಯೂ ನಡುವೆ ನೋಡುವಂತಾಗಿದೆ. ಏಕೆಂದರೆ ರಥವನ್ನು ಎಳೆಯಲು 500 ಜನರಿಗೆ ಮಾತ್ರ ಅವಕಾಶ ನೀಡಿದ್ದು, ರಥ ಎಳೆಯಲು ಬರುವ ಪ್ರತಿಯೊಬ್ಬರಿಗೂ ಕೊರೊನಾ ಪರೀಕ್ಷೆ ಮಾಡಲಾಗುವುದು.
ಏನಾದರೂ ಆಗಲಿ ರಥಯಾತ್ರೆ ನಡೆಯುತ್ತಿದೆ ಅಷ್ಟೇ ಸಾಕು ಎನ್ನುವುದು ಎಂದು ಜಗನ್ನಾಥನ ಭಕ್ತರು ಹರ್ಷ ಪಟ್ಟಿದ್ದಾರೆ. ಐತಿಹಾಸಿಕ ಪುರಿ ಜಗನ್ನಾಥ ರಥಯಾತ್ರೆ ಹಲವು ವೈಶಿಷ್ಟ್ಯಗಳಿಂದಾಗಿ ವಿಶ್ವ ಪ್ರಸಿದ್ಧಿಯಾಗಿದೆ. ಈ ರಥಯಾತ್ರೆಯ ವಿಶೇಷಗಳ ಬಗ್ಗೆ ನೋಡೋಣ:

ಆಷಾಢದಲ್ಲಿ ನಡೆಯುವ ಸಂಭ್ರಮ
ಪ್ರತೀ ವರ್ಷ ಆಷಾಢ ಮಾಸದಲ್ಲಿ ಪುರಿ ಜಗನ್ನಾಥ ರಥಯಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಈ ರಥಯಾತ್ರೆ ನೋಡಲು ಲಕ್ಷಗಟ್ಟಲೆ ಜನ ಸೇರುತ್ತಿದ್ದರು. ಪುರಿ ಜಗನ್ನಾಥ ದೇವಾಲಯದಿಂದ ಪ್ರಾರಂಭವಾಗುವ ರಥಯಾತ್ರೆ ಶ್ರೀ ಗುಂಡಿಚಾ ದೇವವಾಲಯದಲ್ಲಿ ಕೊನೆಯಾಗುತ್ತಿತ್ತು.
ಆದರೆ ಈ ವರ್ಷ ಕೊರೊನಾ ಕಾರಣದಿಂದಾಗಿ ಪುರಿ ಜಗನ್ನಾಥ ಮಂದಿರದಲ್ಲಿ ಆಚರಿಸಲಾಗುತ್ತಿದ್ದು ಅತೀ ಕಡಿಮೆ ಜನರು ಅಂದರೆ ಒಂದು ರಥ ಎಳೆಯಲು 500 ಜನರಷ್ಟೇ ಪಾಲ್ಗೊಳ್ಳಬೇಕು. ರಥಯಾತ್ರೆಯಲ್ಲಿ3 ರಥವನ್ನು ಎಳೆಯಲಾಗುವುದು.

ಪ್ರತೀವರ್ಷ ನಿರ್ಮಿಸಲಾಗುತ್ತದೆ 3 ಹೊಸ ರಥ
ಪುರಿ ಜಗ್ನನಾಥ ರಥಯಾತ್ರೆಯಲ್ಲಿ 3 ರಥಗಳನ್ನು ಎಳೆಯಲಾಗುತ್ತದೆ. ಈ ಮೂರು ರಥವನ್ನು ಹೊಸದಾಗಿ ನಿರ್ಮಿಸಲಾಗಿರುತ್ತದೆ. ಈ ರಥಗಳಿಗೆ ಹಳದಿ, ಕೆಂಪು, ಹಸಿರು ಬಣ್ಣಗಳನ್ನು ಬಳಿಯಲಾಗಿರುತ್ತದೆ. ದೇವ ಜಗನ್ನಾಥನ ರಥ ಹಳದಿ ಬಣ್ಣದಲ್ಲಿ, ಬಲಭದ್ರನ ರಥ ಹಸಿರು ಬಣ್ಣದಲ್ಲಿ, ಸುಭದ್ರ ಮಾತೆಯ ರಥ ಕೆಂಪು ಬಣ್ಣದ್ದಾಗಿರುತ್ತದೆ.

ಮೂರು ಅರ್ಥವನ್ನು ಹೇಳುವ 3 ರಥಗಳು
ಜಗನ್ನಾಥ ಸ್ವಾಮಿಯ ರಥವನ್ನು ಸಂದಿಘೋಷ್ ಅಥವಾ ಚಕ್ರಧ್ವಜ ಎಂದು ಕರೆಯಲಾಗುತ್ತದೆ. ಇದರರ್ಥ ಕೇಳಲು ಇಂಪಾದ ಧ್ವನಿ ಎಂಬುವುದಾಗಿದೆ. ಈ ರಥವು 65 ಟನ್‍ಗಳಷ್ಟು ಭಾರವನ್ನು ಹೊಂದಿರುತ್ತದೆ. ಬಲಭದ್ರ ಸ್ವಾಮಿಯ ರಥವು ತಾಳಧ್ವಜ ಎಂದು ಹೆಸರಾಗಿದೆ. ಇದರರ್ಥ ಶಕ್ತಿಯುತವಾದ ತಾಳ ಎಂದರ್ಥ. ಸುಭದ್ರಳ ರಥವನ್ನು ಪದ್ಮ ಧ್ವಜ ಅಥವಾ ದರ್ಪದಲನ್ ಎಂದು ಕರೆಯುತ್ತಾರೆ. ಇದರರ್ಥ ಗರ್ವದ ನಾಶ ಮಾಡುವುದು ಎಂಬುವುದಾಗಿದೆ.

ರಥಯಾತ್ರೆಗೂ ಸಾಮಾಜಿಕ ಅಂತರ
ಜನ ಜಂಗುಳಿಯ ನಡುವೆ ನಡೆಯುತ್ತಿದ್ದ ರಥೋತ್ಸವಕ್ಕೆ ಈ ಬಾರಿ ಕೆಲವೇ ಕೆಲವು ಜನರು ಮಾತ್ರ ಭಾಗವಹಿಸಲು ಸಾಧ್ಯವಾಗುವುದು. ಜನರು ತುಂಬಿ ತುಳುಕುವ ಅಪಾಯವನ್ನು ತಪ್ಪಿಸಲು ಕರ್ಪ್ಯೂ ಜಾರಿ ಮಾಡಲಾಗಿದ್ದು, ಕರ್ಪ್ಯೂ ನಡುವೆ ಜಗನ್ನಾಥ ರಥಯಾತ್ರೆ ಮಾಡಲಿದ್ದಾನೆ. ಒಂದು ರಥ ಎಳೆದ ಒಂದು ಗಂಟೆಯ ಬಳಿಕ ಮತ್ತೊಂದು ರಥವನ್ನು ಎಳೆಯಲು ಅವಕಾಶ ನೀಡಲಾಗಿದೆ.
ರಥ ಯಾತ್ರೆ ನಡೆಯುವಾಗ ಬಲಭದ್ರ ಸ್ವಾಮಿಯ ವಿಗ್ರಹವನ್ನು ಮೊದಲು ತರಲಾಗುತ್ತದೆ. ಆನಂತರ ದೇವಿ ಸುಭದ್ರ ಮತ್ತು ಕೊನೆಗೆ ಜಗನ್ನಾಥ ಸ್ವಾಮಿಯ ವಿಗ್ರಹವನ್ನು ತರಲಾಗುತ್ತದೆ. ಪುರಿಯ ರಾಜನು ಆ ಊರಿನ ರಸ್ತೆಗಳನ್ನು ಚಿನ್ನದ ಪೊರಕೆಯಿಂದ ಗುಡಿಸಿ, ರಥಗಳು ಮುಂದೆ ಸಾಗಲು ಅನುವು ಮಾಡಿಕೊಡುತ್ತಾನೆ. ಈ ರಥಗಳಿಗೆ ದಪ್ಪದಾದ ಮತ್ತು ಉದ್ದವಾಗಿರುವ ಹಗ್ಗಗಳನ್ನು ಕಟ್ಟಿರಲಾಗುತ್ತದೆ. ಈ ಹಗ್ಗವನ್ನು ಎಳೆಯುತ್ತಾ ಸಾಗಲಾಗುವುದು.

ರಥಯಾತ್ರೆಗೆ ಧಾರ್ಮಿಕ ಮಹತ್ವ
ನಮ್ಮ ದೇಹ ಕೂಡ ರಥದಂತೆ, ಇದರ ಸಾರಥಿ ಭಗವಂತ, ಸುಖ ಬೋಗಗಳ ಕಡೆಯಿಂದ ಆಧ್ಯಾತ್ಮಿಕದ ಕಡೆಗೆ ನಡೆಯಬೇಕು ಎಂಬುವುದು ಈ ರಥಯಾತ್ರೆಯ ಸಾರವಾಗಿದೆ. ಮುಕ್ತಿ ಬೇಕೆಂದರೆ ಭಗವಂತನಿಗೆ ನಮ್ಮನ್ನು ಸಮಪರ್ಪಣೆ ಮಾಡದೆ ಬೇರೆ ಮಾರ್ಗವಿಲ್ಲ.
ಪುರಿ ಜಗನ್ನಾಥ ಈ ಕೊರೊನಾ ಮಹಾಮಾರಿಯಿಂದ ಎಲ್ಲರನ್ನು ರಕ್ಷಿಸಲಿ ಎಂದು ಪ್ರಾರ್ಥಿಸೋಣ...



Click it and Unblock the Notifications











