Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವೈದಿಕ ಶಾಸ್ತ್ರ ಪ್ರಕಾರ ಹಣದ ಸಮಸ್ಯೆ ನಿವಾರಣೆಗೆ ರಕ್ಷಾ ಬಂಧನದಂದು ಹೀಗೆ ಮಾಡಿ
ಆಗಸ್ಟ್ 22ರಂದು ರಕ್ಷಾ ಬಂಧನ. ಈ ಆಚರಣೆ ಹಿಂದೂ ಧರ್ಮದಲ್ಲಿ ಮಹತ್ವವಾದ ಆಚರಣೆಯಾಗಿದೆ. ಅಣ್ಣ-ತಂಗಿಯ ಬಂಧವನ್ನು ಸಾರುವ ಈ ಹಬ್ಬ ಸಹೋದರ-ಸಹೋದರಿ ಬಂಧವನ್ನು ಗಟ್ಟಿಯಾಗಿಸುವುದು ಮಾತ್ರವಲ್ಲ ರಕ್ಷೆಯ ಅಭಯವನ್ನೂ ನೀಡುತ್ತದೆ.
ವೈದಿಕ ಶಾಸ್ತ್ರದ ಪ್ರಕಾರ ರಕ್ಷಾವನ್ನು ಕಟ್ಟುವುದರಿಂದ ದುಷ್ಟ ಶಕ್ತಿಗಳನ್ನು ದೂರವಿಡಬಹುದು, ಯಾರ ಕೆಟ್ಟ ದೃಷ್ಟಿಗೂ ತಾಗುವುದಿಲ್ಲ, ತೊಂದರೆಗಳು ದೂರವಾಗುವುದು. ರಕ್ಷಾ ಬಂಧನವನ್ನು ಶ್ರಾವಣ ಮಾಸದ ಪೌರ್ಣಿಮೆಯಂದು ಆಚರಿಸಲಾಗುವುದು. ರಕ್ಷಾ ಬಂಧನವನ್ನು ಈ ದಿನ ಭದ್ರಾ ಕಾಲ ಹಾಗೂ ರಾಹುಕಾಲದಲ್ಲಿ ಆಚರಿಸಬಾರದು. ಆ ಸಮಯದಲ್ಲಿ ಆಚರಿಸುವುದರಿಂದ ಶುಭ ಫಲಿತಾಂಶ ಉಂಟಾಗುವುದಿಲ್ಲ. ರಕ್ಷಾ ಎಂದರೆ ಎಲ್ಲಾ ರೀತಿಯ ತೊಂದರೆಗಳಿಂದ ರಕ್ಷೆ ಸಿಗುವುದು ಎಂದರ್ಥ. ಈ ರಕ್ಷಾವನ್ನು ಹೇಗೆ ಕಟ್ಟಬೇಕು ಎಂಬುವುದಕ್ಕೆ ಕೆಲವು ಶಾಸ್ತ್ರಗಳಿವೆ. ಜೊತೆಗೆ ಆರ್ಥಿಕ ಕಷ್ಟ ನಿವಾರಣೆಗೆ, ಸಹೋದರ ಆರೋಗ್ಯ ವೃದ್ಧಿಗೆ, ಚಂದ್ರ ದೋಷ ನಿವಾರಣೆಗೆ ಹೀಗೆ ಪರಿಹಾರವೇನು ಎಂದು ವೈದಿಕ ಶಾಸ್ತ್ರದಲ್ಲಿ ಹೇಳಲಾಗಿದ್ದು, ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ:

ಮನೆಯಲ್ಲಿ ಸಂಪತ್ತು, ಸಮೃದ್ಧಿ ವೃದ್ಧಿಗೆ
ರಕ್ಷಾ ಬಂಧನದ ದಿನದಂದು ನಿಮ್ಮ ಸಹೋದರಿಯ ಕೈಯಿಂದ ಗುಲಾಬಿ ಬಟ್ಟೆಯಲ್ಲಿ ವೀಳ್ಯದಲೆ, ಅಡಿಕೆ ಹಾಗೂ ಬೆಳ್ಳಿ ನಾಣ್ಯವನ್ನು ತೆಗೆದುಕೊಂಡು ಅದನ್ನು ಮನೆಯ ಸುರಕ್ಷಿತ ಸ್ಥಳದಲ್ಲಿ ಅಥವಾ ಪೂಜಾ ಸ್ಥಳದಲ್ಲಿ ಇರಿಸಿ. ಇದು ಲಕ್ಷ್ಮಿಯ ಅಪಾರ ಅನುಗ್ರಹವನ್ನು ನೀಡುತ್ತದೆ. ಇದರಿಂದ ಹಣದ ತೊಂದರೆಗಳಿದ್ದರೆ ಅದು ನೀಗಿ ಮನೆಯಲ್ಲಿ ಸಂತೋಷ, ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.

ಸಹೋದರನ ಹಣದ ತೊಂದರೆ ನಿವಾರಣೆಗೆ
ರಕ್ಷಾ ಬಂಧನದ ದಿನದಂದು ಸಹೋದರಿಯರು ರಾಖಿಯನ್ನು ಪೂಜಸಿಇ ಮೊದಲು ತಾಯಿಯ ಪಾದದಲ್ಲಿ ಗುಲಾಬಿ ಬಣ್ಣದ ರಾಖಿಯನ್ನು ಅರ್ಪಿಸಬೇಕು. ನಂತರ ಅದನ್ನು ಸಹೋದರನ ಮಣಿಕಟ್ಟಿನ ಮೇಲೆ ಕಟ್ಟಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಸಹೋದರನ ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

ಬಿಳಿ ಬಣ್ಣದ ಸಿಹಿ ತಿಂಡಿಗಳನ್ನು ದಾನ ಮಾಡಿ
ರಕ್ಷಾ ಬಂಧನವನ್ನು ಶ್ರಾವಣ ಹುಣ್ಣಿಮೆಯಂದು ಆಚರಿಸಲಾಗುವುದು. ಹುಣ್ಣಿಮೆ ಅಂದ್ರೆ ಬಿಳಿ. ಈ ದಿನ ಖೀರ್ ಪಾಯಸ ಹಾಗೂ ಬಿಳಿ ಬಣ್ಣದ ಸಿಹಿ ಪದಾರ್ಥಗಳನ್ನು ಮಾಡಿ ಹಂಚುವುದರಿಂದ ಆರ್ಥಿಕ ಸ್ಥಿತಿ ಬಲವಾಗುವುದು ಎಂಬ ಬಲವಾದ ನಂಬಿಕೆ ಜನರಲ್ಲಿದೆ.

ಚಂದ್ರ ದೋಷ ನಿವಾರಣೆಗೆ
ಚಂದ್ರ ದೋಷವಿದ್ದರೆ ಅನೇಕ ತೊಂದರೆ, ತೊಡಕುಗಳು ಎದುರಾಗುವುದು. ಇದರ ನಿವಾರಣೆಗೆ ರಕ್ಷಾ ಬಂಧನ ದಿನ ಸೂಕ್ತವಾಗಿದೆ. ರಕ್ಷಾ ಬಂಧನದ ದಿನದಂದು ಅಂದರೆ ' ಓಂ ಸೋಮೇಶ್ವರಾಯ ನಮಃ 'ಮಂತ್ರವನ್ನು ಜಪಿಸುವ ಮೂಲಕ ಹಾಲನ್ನು ದಾನ ಮಾಡಿ, ಇದರಿಂದ ಜಾತಕದಲ್ಲಿರುವ ಚಂದ್ರನ ದೋಷವು ಕೊನೆಗೊಳ್ಳುತ್ತದೆ.

ಸಹೋದರ-ಸಹೋದರಿ ನಡುವಿನ ಮುನಿಸು ದೂರವಾಗಲು
ಒಂದು ವೇಳೆ ನಿಮ್ಮ ಸಹೋದರ ಜೊತೆಗೆ ಏನಾದರೂ ವೈಮನಸ್ಸು ಇದ್ದರೆ, ನಿಮ್ಮಿಬ್ಬರ ನಡುವೆ ಜಗಳವಾಗಿದ್ದರೆ ಅವೆಲ್ಲಾ ದೂರವಾಗಿ ಮೊದಲಿನಂತೆ ಸಂತೋಷವಾಗಿ ಇರಲು ಬಯಸುವುದಾದರೆ ರಕ್ಷಾಬಂಧನದ ದಿನ ಗಣೇಶನಿಗೆ ರಾಖಿ ಕಟ್ಟುವುದರಿಂದ ನಿಮ್ಮಿಬ್ಬರ ನಡುವೆ ಇರುವ ಭಿನ್ನಾಭಿಪ್ರಾಯ ಕೊನೆಯಾಗುವುದು ಹಾಗೂ ನಡುವೆ ಪರಸ್ಪರ ಪ್ರೀತಿ ಮತ್ತು ಸಾಮರಸ್ಯ ಹೆಚ್ಚಾಗುತ್ತದೆ.

ಹನುಮಂತನಿಗೆ ರಾಖಿ ಕಟ್ಟುವುದು
ಇನ್ನು ಸಹೋದರ-ಸಹೋದರಿ ನಡುವೆ ಇರುವ ಎಲ್ಲಾ ತೊಂದರೆಗಳು, ಅಡೆತಡೆಗಳು ದೂರವಾಗಲು ರಕ್ಷಾ ಬಂಧನ ದಿನದಂದು ಹನುಮಂತನಿಗೆ ರಾಖಿ ಕಟ್ಟುತ್ತಾರೆ. ಇದರಿಂದ ಎಲ್ಲವೂ ಸರಿಯಾಗುವುದು, ಹನುಮಂತನ ಶ್ರೀರಕ್ಷೆಯಿಂದ ತೊಂದರೆಗಳೆಲ್ಲವೂ ನೀಗುವುದು ಎಂಬುವುದು ಬಲವಾದ ನಂಬಿಕೆ.



Click it and Unblock the Notifications