Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ನವರಾತ್ರಿ 9ನೇ ದಿನ: ತನ್ನ ಉಪಾಸನೆ ಮಾಡುವವರಿಗೆ ಸಕಲ ಸಿದ್ಧಿ ನೀಡುವ ಸಿದ್ಧಿದಾತ್ರಿ
ನವರಾತ್ರಿ ಒಂಭತ್ತನೇ ದಿನ ಅಂದರೆ ನವಮಿಯೆಂದು ದುರ್ಗಾದೇವಿಯ ಸಿದ್ಧಿದಾತ್ರಿ ರೂಪವನ್ನು ಆರಾಧಿಸಲಾಗುವುದು. ಸಿದ್ಧಿ ದೇವತೆ ಭಕ್ತರಿಗೆ ಎಲ್ಲಾ ಪ್ರಕಾರದ ಸಿದ್ಧಿಗಳನ್ನು ನೀಡುತ್ತಾಳೆ ಎಂಬ ನಂಬಿಕೆ ಇದೆ. ಮಾರ್ಕಡೇಯ ಪುರಾಣದ ಪ್ರಕಾರ ಅಣಿಮಾ, ಮಾಹಿಮಾ, ಗರಿಮಾ, ಲಘಮಾ, ಪ್ರಾಪ್ತಿ, ಪ್ರಾಕಮ್ಯ, ಈಶಿತ್ವ ಮತ್ತು ವಶಿತ್ವ ಹೀಗೆ ಎಂಟು ಸಿದ್ಧಿಗಳು ಇವೆ. ಸಿದ್ಧಿದಾತ್ರಿಯನ್ನು ಪೂಜಿಸುವುದರಿಂದ ಎಲ್ಲಾ ಸಿದ್ಧಿಯು ದೊರೆಯುವುದು.
ಆಶ್ವಯುಜ ಮಾಸದ ಮಹಾನವಮಿಯ ಈ ದಿನದಂದು ಆಯುಧಗಳು, ಯಂತ್ರಗಳು, ವಾಹನಗಳು, ಕೃಷಿ ಉಪಕರಣಗಳಿಗೆ ಪೂಜೆ ಮಾಡಬೇಕೆಂಬ ಸಂಪ್ರದಾಯವಿದೆ. ದೇವಿಯು ಮಹಿಷಾಸುರನ್ನು ಸಂಹರಿಸಿದ ಆಯುಧಗಳನ್ನು ಭೂಮಿಯಲ್ಲಿಯೇ ಎಸೆದು ಹೋಗುತ್ತಾಳೆ, ಈ ಆಯುಧಗಳನ್ನು ತಂದು ಪೂಜಿಸಲಾಗಿತ್ತು, ಹೀಗೆ ಆಯುಧ ಪೂಜೆ ಸಂಪ್ರದಾಯ ಪಾಲಿಸಿಕೊಂಡು ಬರಲಾಗಿದೆ ಎಂಬ ಪೌರಾಣಿಕ ಕತೆಯ ಹಿನ್ನೆಲೆಯಿದೆ. ಅಕ್ಟೋಬರ್ 23ರಂದು ಆಯುಧ ಪೂಜೆಯನ್ನು ಆಚರಿಸಲಾಗುವುದು.

ಸಿದ್ಧಿದಾತ್ರಿ ಉಪಾಸನೆ
ನವಮಿಯೆಂದು ಸಿದ್ಧಿದಾತ್ರಿಯ ಉಪಾಸನೆ ಮಾಡಲಾಗುತ್ತದೆ. ಎಂಟು ದೇವಿಯ ಪೂಜೆಯನ್ನು ಮಾಡಿ, ಒಂಭತ್ತನೇ ದಿನ ಇವಳ ಪೂಜೆಯನ್ನು ಮಾಡಲಾಗುವುದು. ಈ ದಿನ ಯಾರು ಶ್ರಾಸ್ತ್ರೀಯ ವಿಧಿ-ವಿಧಾನಗಳನ್ನು ಪಾಲಿಸಿ, ಪೂರ್ಣ ಭಕ್ತಿಯಿಂದ ಪೂಜೆಯನ್ನು ಸಲ್ಲಿಸಿದರೆ ಸಿದ್ಧಿ ಲಭಿಸುವುದು. ಮಾಡುವ ಕಾರ್ಯದಲ್ಲಿ ವಿಜಯ ಸಿಗುವುದು. ವಿಶ್ವವನ್ನೇ ಗೆಲ್ಲುವ ಸಾಮಾರ್ಥ್ಯ ಲಭಿಸುವುದು. ಈಕೆಯ ಕೃಪೆಯಿದ್ದರೆ ಸಂಸಾರದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುವುದು.

ಸಿದ್ಧಿದಾತ್ರಿ ಕೃಪೆಯಿಂದ ಸಿದ್ಧಿ ಪಡೆದ ಶಿವ
ಪೌರಾಣಿಕ ಕತೆಯ ಪ್ರಕಾರ ಭಗವಾನ್ ಶಿವನು ಇವಳ ಕೃಪೆಯಿಂದ ಇವೆಲ್ಲ ಸಿದ್ಧಿಗಳನ್ನು ಪಡೆದುಕೊಂಡಿದ್ದನು. ಇವಳ ಅನುಕಂಪದಿಂದಲೇ ಭಗವಾನ್ ಶಿವನ ಅರ್ಧ ಶರೀರವು ದೇವಿಯಾಗಿದೆ. ಇದೇ ಕಾರಣದಿಂದಲೇ ಶಿವನು ‘ಅರ್ಧನಾರೀಶ್ವರ' ಹೆಸರಿನಿಂದ ಪ್ರಸಿದ್ಧನಾದನು.

ಸಿದ್ಧಿದಾತ್ರಿ ರೂಪ
ಸಿದ್ಧಿದಾತ್ರಿ ದೇವಿ ನಾಲ್ಕು ಭುಜಗಳನ್ನು ಹೊಂದಿದ್ದಾಳೆ, ಇವಳ ಚಿತ್ರವನ್ನು ನೋಡಿದಾಗ ಫಲಪುಷ್ಪದ ಮೇಲೆ ವಿರಾಜಮಾನವಾಗಿ ಕುಳಿತುಕೊಂಡಿರುವುದನ್ನು ನೋಡಬಹುದುದು. ಇವಳ ವಾಹನ ಸಿಂಹವಾಗಿದೆ. ಇಇವಳ ಕೆಳಗಿನ ಬಲಕೈಯಲ್ಲಿ ಚಕ್ರ, ಮೇಲಿನ ಕೈಯಲ್ಲಿ ಗದೆ ಇದೆ. ಎಡಗಡೆ ಕೆಳಗಿನ ಕೈಯಲ್ಲಿ ಶಂಖ ಮತ್ತು ಮೇಲಿನ ಕೈಯಲ್ಲಿ ಕಮಲವಿದೆ.

ಕರ್ನಾಟಕದಲ್ಲಿ ಆಯುಧ ಪೂಜೆಯ ವಿಜೃಂಭಣೆಯ ಆಚರಣೆ
ಅಕ್ಟೋಬರ್ 25ರಂದು ಭಾನುವಾರ ಸಿದ್ಧಿಧಾತ್ರಿಯನ್ನು ಪೂಜಿಸಲಾಗುತ್ತದೆ. ಆಯುಧ ಪೂಜಾ ಕೂಡ ಈ ದಿನವೇ ಇರುವುದರಿಂದ ಕರ್ನಾಟಕದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಪಾಂಡವರು ತಮ್ಮ ವನವಾಸದ ಸಂದರ್ಭ ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನಿ ಮರದಲ್ಲಿ ಬಚ್ಚಿಟ್ಟ ನಂತರ ಆಶ್ವಯುಜ ನವಮಿಯಂದು ಶಸ್ತ್ರಾಸ್ತ್ರಗಳನ್ನು ತೆಗೆದು ಪೂಜಿಸಿ, ವಿಜಯ ದಶಮಿಯಂದು ವಿರಾಟರಾಜನ ಶತ್ರುಗಳಾದ ಕೌರವರ ಮೇಲೆ ವಿಜಯವನ್ನು ಸಾಧಿಸಿದರು ಎಂದು ಮಹಾಭಾರತ ಕತೆ ಹೇಳುತ್ತದೆ.
ನಮ್ಮೆಲ್ಲಾ ಓದುಗರಿಗೆ ಆಯುಧ ಪೂಜೆಯ ಶುಭಾಶಯಗಳು



Click it and Unblock the Notifications
