Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನವರಾತ್ರಿಯಲ್ಲಿಈ ಕಾರ್ಯಗಳನ್ನು ಮಾಡಲೇಬಾರದು
ನವರಾತ್ರಿ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಒಂಭತ್ತು ದಿನ ನಡೆಯುವ ಈ ಆಚರಣೆಯಲ್ಲಿ ಪ್ರತಿಯೊಂದು ದಿನ ದೇವಿಯ ಒಂದೊಂದು ಸ್ವರೂಪವನ್ನು ಪೂಜಿಸ ಆರಾಧಿಸಲಾಗುವುದು.

ಈ ಹಬ್ಬದಲ್ಲಿ ಪೂಜೆ ಜೊತೆ ವ್ರತವನ್ನು ಮಾಡಲಾಗುವುದು. ಐಶ್ವರ್ಯ, ಸಂಪತ್ತು, ಆರೋಗ್ಯಕ್ಕಾಗಿ ದೇವಿಯನ್ನು ಆರಾಧಿಸಲಾಗುವುದು. ಈ ಒಂಭತ್ತು ದಿನಗಳಲ್ಲಿ ಕೆಲವೊಂದು ಕಾರ್ಯಗಳನ್ನು ಮಾಡಬಾರದು ಅಂತಾರೆ. ನವರಾತ್ರಿಯಲ್ಲಿ ಯಾವ ಕಾರ್ಯಗಳನ್ನು ಮಾಡಬಾರದು ನೋಡೋಣ ಬನ್ನಿ:

ಉಗುರು ಮತ್ತು ಕೂದಲನ್ನು ಕತ್ತರಿಸಬಾರದು
ನವರಾತ್ರಿಯಲ್ಲಿ ಉಗುರು ಮತ್ತು ಕೂದಲನ್ನು ಕತ್ತರಿಸುವುದರಿಂದ ದೇವಿಯ ಕೋಪಕ್ಕೆ ತುತ್ತಾಗುವರು ಎಂಬ ನಂಬಿಕೆ ಇದೆ. ಶೇವಿಂಗ್ ಮಾಡಬಹುದು ಆದರೆ ಕೂದಲನ್ನು ಕತ್ತರಿಸುವುದು ಒಳ್ಳೆಯದಲ್ಲ ಎಂದು ಹೇಳಲಾಗುವುದು.

ಮಾಂಸಾಹಾರ ಸೇವನೆ
ನವರಾತ್ರಿಯಲ್ಲಿ ಸಾತ್ವಿಕ ಆಹಾರ ಸೇವನೆ ಮಾಡಬೇಕು. ಮಾಂಸಾಹಾರ, ಈರುಳ್ಳಿ, ಬೆಳ್ಳುಳ್ಳಿ ಬಳಸುವುದು, ಮದ್ಯಪಾನ ಇವೆಲ್ಲಾ ನವರಾತ್ರಿ ಸಮಯದಲ್ಲಿ ವರ್ಜಿತ.

ನಿಂಬೆಹಣ್ಣನ್ನು ಕತ್ತರಿಸುವುದು
ನವರಾತ್ರಿ ಸಮಯದಲ್ಲಿ ನಿಂಬೆಹಣ್ಣು ಕತ್ತರಿಸಬಾರದು ಅಂತಾರೆ. ನಿಂಬೆರಸ ಬೇಕಿದ್ದರೆ ಹೊರಗಿನಿಂದ ಕೊಂಡು ಬಳಸಬಹುದು ಆದರೆ ಕತ್ತರಿಸಬಾರದು ಎಂಬ ನಂಬಿಕೆ ಇದೆ.

ಕರಿದ ಪದಾರ್ಥಗಳನ್ನು ಸೇವಿಸಬಾರದು
ನವರಾತ್ರಿಯ ಮುಖ್ಯ ಉದ್ದೇಶ ದೇಹದಲ್ಲಿರುವ ಕಶ್ಮಲಗಳನನ್ಉ ಹೊರಹಾಕುವುದು, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ನವರಾತ್ರಿ ಸಮಯದಲ್ಲಿ ಬಳಸಬಾರದು.

ಹಸಿದ ಹೊಟ್ಟೆಯಲ್ಲಿ ಇರಬಾರದು
ನವರಾತ್ರಿಯಲ್ಲಿ ಉಪವಾಸ ಮಾಡಲಾಗುವುದು, ಆದರೆ ಹಸಿದ ಹೊಟ್ಟೆಯಲ್ಲಿ ಇರಬಾರದು. ಸ್ವಲ್ಪ ಹಣ್ಣು-ಹಂಪಲು ಇವುಗಳನ್ನು ತಿನ್ನಬೇಕು. ಹೊಟ್ಟೆ ಹಸಿದು ಇದ್ದರೆ ಅದು ದೇವಿಗ ಇಷ್ಟವಾಗುವುದಿಲ್ಲ ಎನ್ನಲಾಗುವುದು.

ಮಧ್ಯಾಹ್ನ ಹೊತ್ತು ಮಲಗುವುದು
ಮಧ್ಯಾಹ್ನದ ಹೊತ್ತು ಮಲಗುವುದು ಶುಭಕರವಲ್ಲ ಎಂದು ಹೇಳಲಾಗುವುದು. ಮಧ್ಯಾಹ್ನ ಮಲಗುವುದರಿಂದ ವ್ರತದಿಂದ ಗಳಿಸಿದ ಪುಣ್ಯ ಇಲ್ಲವಾಗುವುದು.

ದೀಪ ಕೆಡಬಾರದು
ನವರಾತ್ರಿ ಸಮಯದಲ್ಲಿ ರಾತ್ರಿ-ಹಗಲು ಹಚ್ಚಿದ ದೀಪ ಬೆಳಗುತ್ತಲೇ ಇರಬೇಕು. ದೀಪದಲ್ಲಿ ಎಣ್ಣೆ, ಬತ್ತಿ ಇದೆಯೇ ಆಗಾಗ ನೋಡುತ್ತಾ ದೀಪವನ್ನು ಆರದಂತೆ ನೋಡಿಕೊಳ್ಳಬೇಕು. ಹೀಗೆ ಮಾಡಿದ್ದೇ ಆದರೆ ಮನೆಗೆ ಅದೃಷ್ಟಲಕ್ಷ್ಮಿ ಒಲಿಯುವಳು.

ಜಗಳ ಆಡಬಾರದು
ನವರಾತ್ರಿಯಲ್ಲಿ ಯಾರ ಜೊತೆ ಜಗಳ ಆಡಬಾರದು, ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣಬೇಕು ಎಂದು ಹೇಳಲಾಗುವುದು. ಬೇರೆಯವರ ಬಗ್ಗೆ ಕೆಟ್ಟದಾಗಿ ಹೇಳಿದರೆ ಇದರಿಂದ ನಮಗೇ ದೋಷ ಉಂಟಾಗುವುದು ಎಂದು ಹೇಳಲಾಗುವುದು.



Click it and Unblock the Notifications
