Latest Updates
-
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು!
ನರಕ ಚತುರ್ದಶಿ 2021: ದಿನಾಂಕ, ಪೂಜಾವಿಧಿ ಹಾಗೂ ಮಹತ್ವ
ಸನಾತನ ಧರ್ಮದಲ್ಲಿ ನರಕ ಚತುರ್ದಶಿಗೆ ವಿಶೇಷ ಮಹತ್ವವಿದೆ. ಇದನ್ನು ರೂಪ ಚತುರ್ದಶಿ, ನರಕ ಚೌದಾಸ್ ಮತ್ತು ಕಾಳಿ ಚೌದಾಸ್ ಎಂದೂ ಕರೆಯುತ್ತಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಭಗವಂತ ವಿಷ್ಣುವನ್ನು ಪೂಜಿಸುವುದರಿಂದ ಸೌಂದರ್ಯವು ಪ್ರಾಪ್ತಿಯಾಗುತ್ತದೆ.

ನರಕ ಚತುರ್ದಶಿಯಂದು ಸಂಜೆ ಯಮರಾಜನನ್ನು ಪೂಜಿಸುವುದರಿಂದ ನರಕ ಭಯ ಮತ್ತು ಅಕಾಲಿಕ ಮರಣದ ಭಯವು ಕೊನೆಗೊಳ್ಳುತ್ತದೆ. ಅಲ್ಲದೆ ಈ ದಿನ ಕಾಳಿ ಮಾತೆಯನ್ನು ಪೂಜಿಸುವುದರಿಂದ ಶತ್ರುಗಳನ್ನುಸೋಲಿಸಿ ಜಯ ನಮ್ಮ ಪಾಲಾಗುತ್ತದೆ ಎಂದು ಹೇಳಲಾಗುವುದು.
ನರಕ ಚತುರ್ದಶಿಯನ್ನು ಧನತ್ರಯೋದಶಿಯ ಮರುದಿನ ಆಚರಿಸಲಾಗುವುದು. ಈ ವರ್ಷ ನವೆಂಬರ್ 2ರಂದು ಧನೋತ್ರಯೋದಶಿ ಆಚರಿಸಲಾಗುವುದು, ಅದಾದ ಮಾರನೇಯ ದಿನ ಅಂದ್ರೆ ನವೆಂಬರ್ 3ರಂದು ನರಕ ಚತುರ್ದಶಿ ಆಚರಿಸಲಾಗುವುದು. ಇದನ್ನು ಛೋಟಿ ದೀಪಾವಳಿ ಎಂದು ಕೂಡ ಕರೆಯಲಾಗುವುದು.
ಈ ವರ್ಷ ನರಕ ಚತುರ್ದಶಿಯ ಶುಭ ಮುಹೂರ್ತ, ಪೂಜಾ ವಿಧಾನ ಹಾಗೂ ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ:

ನರಕ ಚತುರ್ದಶಿ 2021 ರ ದಿನಾಂಕ, ಶುಭ ಸಮಯ
ಶುಭ ಸಮಯ ಪ್ರಾರಂಭ: ನವೆಂಬರ್ 3, ಬೆಳಗ್ಗೆ 09:02 ರಿಂದ ಪ್ರಾರಂಭವಾಗುವುದು
ನರಕ ಚತುರ್ದಶಿ ಮುಕ್ತಾಯ: ನವೆಂಬರ್ 4 ಗುರುವಾರ ಬೆಳಗ್ಗೆ 06.3ಕ್ಕೆ ಮುಕ್ತಾಯ.
ವಿಜಯ್ ಮುಹೂರ್ತ ಮಧ್ಯಾಹ್ನ 01.33 ರಿಂದ 02.17 ರವರೆಗೆ ಇದೆ.

ನರಕ ಚತುರ್ದಶಿ ಅಥವಾ ಕಾಳಿ ಮಾತೆಯ ಆರಾಧನೆಯ ಪೂಜಾ ವಿಧಿ
ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡಿ ಮತ್ತು ಮಡಿ ಬಟ್ಟೆಗಳನ್ನು ಧರಿಸಿ. ಈ ದಿನದಂದು ಯಮರಾಜ, ಶ್ರೀ ಕೃಷ್ಣ, ಕಾಳಿ ಮಾತೆ, ಶಿವ, ಹನುಮಾನ್ ಮತ್ತು ವಾಮನ ಎಂಬ ಆರು ದೇವತೆಗಳನ್ನು ಪೂಜಿಸಲಾಗುವುದು. ಇಂತಹ ಪರಿಸ್ಥಿತಿಯಲ್ಲಿ ಈ ಎಲ್ಲಾ ದೇವತೆಗಳ ಮೂರ್ತಿಗಳನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡಬೇಕು. ಎಲ್ಲಾ ದೇವತೆಗಳ ಮುಂದೆ ದೀಪ ಬೆಳಗಿ, ಧೂಪ ಹಚ್ಚಿ , ಅರಿಶಿಣ-ಕುಂಕುಮ ಇಟ್ಟು ಮಂತ್ರಗಳನ್ನು ಪಠಿಸಿ ಪೂಜಿಸಬೇಕು. . ಈ ದಿನದಂದು ಯಮದೇವನನ್ನು ಪೂಜಿಸುವುದರಿಂದ ಅಕಾಲಿಕ ಮರಣದ ಭಯವು ಕೊನೆಗೊಳ್ಳುತ್ತದೆ ಮತ್ತು ಎಲ್ಲಾ ಪಾಪಗಳಿಂ ದ ಮೋಕ್ಷ ಸಿಗುತ್ತದೆ ಎಂದು ಹೇಳಲಾಗುವುದು. ಈ ದಿನ ಸಂಜೆ ಯಮದೇವನನ್ನು ಪೂಜಿಸಿ ಮತ್ತು ಬಾಗಿಲಿನ ಚೌಕಟ್ಟಿನ ಎರಡೂ ಬದಿಗಳಲ್ಲಿ ದೀಪಗಳನ್ನು ಇರಿಸಲಾಗುವುದು.

ನರಕ ಚತುರ್ದಶಿಯ ಪ್ರಾಮುಖ್ಯತೆ
ಈ ದಿನ ಸೂರ್ಯೋದಯದ ಸಮಯದಲ್ಲಿ ಮಾಡುವ ಅಭ್ಯಂಗನಕ್ಕೆ ತುಂಬಾನೇ ಮಹತ್ವವಿದೆ. ಈ ಎಣ್ಣೆ ಸ್ನಾನದಿಂದ ಶಾಪ ವಿಮೋಚನೆಯಾಗುವುದು ಎಂದು ನಂಬಲಾಗಿದೆ. ಈ ರೀತಿಯ ಎಣ್ಣೆ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ವಿಜ್ಞಾನ ಕೂಡ ಹೇಳುತ್ತದೆ.

ನರಕ ಚತುರ್ದಶಿ ಪೌರಾಣಿಕ ಕತೆ
ನರಕಾಸುರ ಎಂಬ ಅಸುರ ದುಷ್ಟ ಹಾಗೂ ಕಾಮುಕನಾಗಿದ್ದ. ಆತ 16 ಸಾವಿರ ಹೆಣ್ಣು ಮಕ್ಕಳನ್ನು ತಂದು ಕೂಡಿ ಹಾಕಿ ಅವರಿಗೆ ಶಿಕ್ಷೆ ನೀಡುತ್ತಾ ಕಾಮ ಪಿಶಾಚಿಯಂತೆ ವರ್ತಿಸುತ್ತಿದ್ದ. ಹೀಗಿರುವಾಗ ಹೆಣ್ಮಕ್ಕಳು ಅವನು ನೀಡುವ ಶಿಕ್ಷೆ ಸಹಿಸಲಾಗದೆ ಶ್ರೀಕೃಷ್ಣ ಪ್ರಾರ್ಥಿಸುತ್ತಾರೆ. ಶ್ರೀಕೃಷ್ಣ ಅಷ್ಟೂ ಹೆಣ್ಮಕ್ಕಳನ್ನು ರಕ್ಷಣೆ ಮಾಡುತ್ತಾನೆ. ಆದರೆ ಇಷ್ಟು ದಿನ ಅವರು ನರಕಾಸುರನ ಕಾಮಕ್ಕೆ ಬಳಕೆಯಾಗಿದ್ದರಿಂದ ಅವರಿಗೆ ಸಮಾಜ ತಪ್ಪಾಗಿ ಕಾಣುತ್ತೆ ಎಂಬ ಆತಂಕವಾಗುತ್ತದೆ, ನಮ್ಮ ಕಳಂಕ ಕಳೆಯುವಂತೆ ಭಗವಾನ್‌ನಲ್ಲಿ ಕೇಳಿಕೊಳ್ಳುತ್ತಾರೆ. ಆಗ ಭಗವಾನ್ ಅಷ್ಟೂ ಜನರನ್ನು ಮದುವೆಯಾಗಿ ಅವರ ಪಾಪ ಕಳೆಯುತ್ತಾನೆ. ಅವರ ಜೊತೆ ಸಂಸಾರ ಮಾಡದಿದ್ದರೂ ಅವರಿಗೆ ಒಂದು ಸ್ಥಾನ ಮಾನ ಒದಗಿಸಿಕೊಡುತ್ತಾನೆ. ಹೀಗೆ ಅವರೆಲ್ಲಾ ನರಕವನ್ನು ಕಳೆದ ಎಂಬ ಪೌರಾಣಿಕ ಕತೆಯಿದೆ.



Click it and Unblock the Notifications