Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ನಾಗರ ಪಂಚಮಿ 2021: ಈ ದಿನ ಹುತ್ತಕ್ಕೆ ಹಾಲೆರೆಯುವುದು ಏಕೆ?
ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ. ಆಟಿ ಅಮವಾಸ್ಯೆಯಾಗಿ ಐದನೇ ದಿನಕ್ಕೆ ಈ ಹಬ್ಬ ಆಚರಿಸಲಾಗುವುದು. ನಾಡಿನ ದೊಡ್ಡ ಹಬ್ಬವೆಂದೇ ಕರೆಯಲ್ಪಡುವ ನಾಗರ ಪಂಚಮಿ ಈ ವರ್ಷದಲ್ಲಿ ಬರುವ ಉಳಿದೆಲ್ಲಾ ಹಬ್ಬಗಳಿಗೆ ಮುನ್ನುಡಿಯಾಗಿ ಬರುವ ಹಬ್ಬವಾಗಿದೆ. ಈ ಹಬ್ಬದಂದು ಹುತ್ತಕ್ಕೆ ಹಾಲೆರೆಯುವ ಸಂಪ್ರದಾಯವಿದೆ.
ಜನರು ಹುತ್ತಕ್ಕೆ ಹಾಲೆರೆಯುವುದರ ಹಿಂದಿರುವ ಧಾರ್ಮಿಕ ಮಹತ್ವವೇನು, ಪೌರಾಣಿಕ ಕತೆಗಳು ಏನು ಹೇಳುತ್ತವೆ ಎಂದು ನೋಡೋಣ ಬನ್ನಿ:

ಶ್ರಾವಣ ಮಾಸದ ಮೊದಲ ಹಬ್ಬ
ಶ್ರಾವಣ ಮಾಸವೆಂದರೆ ಅದು ಸಂಪೂರ್ಣವಾಗಿ ಶಿವನಿಗೆ ಮೀಸಲಾಗಿರುವ ಮಾಸ. ಶಿವನ ಕೊರಳಿನಲ್ಲಿ ನಾಗ ಇರುತ್ತಾನೆ. ನಾಗರ ಪಂಚಮಿಯಂದು ನಾಗನಿಗೆ ಪೂಜೆಯನ್ನು ಸಲ್ಲಿಸಿ ಆಶೀರ್ವದಿಸುವಂತೆ ಪ್ರಾರ್ಥಿಸಲಾಗುವುದು. ಇನ್ನು ನಾವು ಆಚರಿಸುವ ಎಲ್ಲಾ ಹಬ್ಬಗಳು ರೈತನ ಜೀವನದೊಂದಿಗೆ ಸಂಬಂಧ ಹೊಂದಿದೆ. ಹಾವುಗಳು ರೈತನ ಸ್ನೇಹಿಯಾಗಿವೆ. ಹೊಲದಲ್ಲಿರುವ ಹುಳ-ಹುಪ್ಪಟೆಗಳನ್ನು ಹಾವುಗಳು ತಿನ್ನುತ್ತವೆ, ಇದರಿಂದ ಬೆಳೆ ನಾಶವಾಗುವುದನ್ನು ತಡೆಗಟ್ಟುತ್ತೆ. ನಾಗರ ಪಂಚಮಿಯಲ್ಲಿ ಅವುಗಳನ್ನು ಅವುಗಳನ್ನು ಪೂಜಿಸಿ ಕೃತಜ್ಞತೆ ಸಲ್ಲಿಸುವ ಒಂದು ವಿಧಾನ ಕೂಡ ಆಗಿದೆ.

ಪೌರಾಣಿಕ ಕತೆ
ನಾಗರ ಪಂಚಮಿಯಲ್ಲಿ ಇರುವ ಒಂದು ಪ್ರಮುಖವಾದ ಸಂಪ್ರದಾಯವೆಂದರೆ ಹುತ್ತಕ್ಕೆ ಹಾಲೆರೆಯುವುದು. ಹುತ್ತಕ್ಕೆ ಹಾಲೆರೆಯುವುದರ ಹಿಂದೆ ಪೌರಾಣಿಕ ಕತೆಗಳಿವೆ.
ಒಂದು ಕತೆಯಲ್ಲಿ ಶ್ರೀಕೃಷ್ಣನು ನಾಗ ಕಾಳಿಂಗನನ್ನು ಸೋಲಿಸಿದ ಬಳಿಕ ನಿನಗೆ ನಾಗರ ಪಂಚಮಿಗೆ ಜನರು ಹಾಲೆರೆದು ಪೂಜಿಸುವಂತಾಗಲಿ ಎಂದು ಆಶೀರ್ವದಿಸುತ್ತಾನೆ. ಈ ದಿನ ಯಾರು ಹಾವಿಗೆ ಹಾಲೆರೆಯುತ್ತಾರೋ ಅವರಿಗೆ ಪಾಪಗಳಿಂದ ಮೋಕ್ಷ ಸಿಗುವುದು ಎಂದು ಹೇಳಲಾಗಿದೆ.

ಮತ್ತೊಂದು ಪೌರಾಣಿಕ ಕತೆಯ ಪ್ರಕಾರ
ಮತ್ತೊಂದು ಕತೆಯ ಪ್ರಕಾರ ದೇವತೆಗಳು-ದಾನವರು ಸಮುದ್ರ ಮಂಥನ ಮಾಡುತ್ತಿರುವಾಗ ಕ್ಷೀರ ಸಾಗರದಲ್ಲಿ ಹಾಲಾಹಲ ವಿಷ ಉತ್ಪತ್ತಿಯಾಗಿತ್ತದೆ, ಆ ವಿಷ ಜಗತ್ತನ್ನೇ ಸುಡಲಾರಂಭಿಸಿದಾಗ ಎಲ್ಲರೂ ಶಿವನ ಮೊರೆ ಹೋಗುತ್ತಾರೆ, ಆಗ ಶಿವ ಆ ವಿಷವನ್ನು ಗಟ-ಗಟನೆ ಕುಡಿಯುತ್ತಾನೆ, ಅದರಲ್ಲಿ ಸ್ವಲ್ಪ ಹನಿ ಭೂ ಲೋಕಕ್ಕೆ ಬೀಳುತ್ತೆ, ಅದನ್ನು ಹಾವುಗಳು ಕುಡಿಯುತ್ತವೆ. ಹಾಲಾಹಲ ಕುಡಿದ ಶಿವನ ದೇಹದ ಉರಿ ಕಡಿಮೆ ಮಾಡಲು ಇಂದ್ರನು ಮಳೆ ಸರಿಸುತ್ತಾನೆ, ದೇವತೆಗಳು ಅವನಿಗೆ ರುದ್ರಾಭಿಷೇಕ ಮಾಡುತ್ತಾರೆ. ಭೂಮಿಯಲ್ಲಿರುವ ಹಾವುಗಳಿಗೆ ಹಾಲೆರೆಯಲಾಗುವುದು, ಆ ಶುಭ ದಿನವೇ ನಾಗರ ಪಂಚಮಿ ಎಂದು ಹೇಳಲಾಗುವುದು.

ಜನರು ಹುತ್ತಕ್ಕೆ ಹಾಲೆರೆಯುವುದರ ಹಿಂದಿರುವ ಧಾರ್ಮಿಕ ಮಹತ್ವ
* ನಾಗರ ಪಂಚಮಿಗೆ ಹುತ್ತಕ್ಕೆ ಹಾಲೆರೆದರೆ ನಾಗ ದೇವತೆಯು ಕುಟುಂಬವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ ಎಂಬ ನಂಬಿಕೆಯಿದೆ.
* ರಾಹು ಹಾಗೂ ಕೇತುವಿನ ಸ್ಥಾನದಿಂದ ಉಂಟಾದ ಕಾಳಸರ್ಪ ದೋಷ ನಿವಾರಣೆಗಾಗಿ ನಾಗರ ಪಂಚಮಿಯೆಂದು ಹುತ್ತಕ್ಕೆ ಹಾಲೆರೆಯುತ್ತಾರೆ.
* ಶಿವ ಹಾವನ್ನು ಕೊರಳಿಗೆ ಸುತ್ತಿದರೆ, ವಿಷ್ಣು ಹಾವಿನ ಮೇಲೆಯೇ ಮಲಗುತ್ತಾನೆ, ಇನ್ನು ಶ್ರೀ ಕೃಷ್ಣ ಮಗುವಾಗಿದ್ದಾಗ ಹಾವು ಎಡೆ ಬಿಡಿಸಿ ಮಗುವಿಗೆ ಮಳೆಯಿಂದ ರಕ್ಷಣೆ ನೀಡಿದ ಕತೆಯಿದೆ.. ಹೀಗೆ ನಮ್ಮ ಎಲ್ಲಾ ಪೌರಾಣಿಕ ಕತೆಯಲ್ಲಿ ಹಾವು ದೇವತೆಗಳ ಸಹಾಯಕನಾಗಿದೆ.
ನಾಗನಿಗೆ ಹಾಲೆರೆಯುವುದರಿಂದ ನಾಗ ದೇವತೆಯ ಆಶೀರ್ವಾದ ನಮ್ಮ ಮೇಲಿರುತ್ತದೆ, ಇದರಿಂದ ಬದುಕಿನಲ್ಲಿ ಸಂತೋಷ, ಸಡಗರ ತುಂಬಿರುತ್ತದೆ ಎಂಬ ನಂಬಿಕೆಯಿಂದ ಜನರು ನಾಗರ ಪಂಚಮಿ ಹಬ್ಬದಂದು ಹುತ್ತಕ್ಕೆ ಹಾಲೆರೆಯುತ್ತಾರೆ.



Click it and Unblock the Notifications
