Latest Updates
-
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ! -
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ! -
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು!
ನೆನಪಿಡಿ ಇಂತಹ ತಪ್ಪುಗಳನ್ನು ಎಂದೂ ಮಾಡಬೇಡಿ- 'ಪಿತೃ ದೋಷ' ಬರಬಹುದು!

ಪಿತೃ ದೋಷವೆಂಬುದು ಮನುಷ್ಯನ ಜೀವನದಲ್ಲಿ ಹಲವಾರು ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆ ಇದೆ. ಪೂರ್ವಿಕರು ಸ್ವರ್ಗವನ್ನು ಸೇರದೇ ಇಲ್ಲದಿದ್ದರೆ ಅವರ ಆತ್ಮಕ್ಕೆ ತೃಪ್ತಿ ದೊರಕಿಲ್ಲ ಎಂದಾದಲ್ಲಿ ಪಿತೃವನ್ನು ಆಹ್ವಾನಿಸಿ ಅವರಿಗೆ ಸದ್ಗತಿಯನ್ನು ಅರ್ಪಿಸುವ ಕಾರ್ಯವನ್ನು ಮಾಡಬೇಕು. ಮರಣದ ನಂತರ ಹಿರಿಯರು ಪಿತೃ ಲೋಕವನ್ನು ಸೇರುತ್ತಾರೆ ಎಂದು ನಂಬಲಾಗಿದೆ. ಅಂತೆಯೇ ಭೂಮಿಯಲ್ಲಿರುವ ಅವರ ವಂಶಸ್ಥರು ಪಿತೃವಿಗೆ ಸದ್ಗತಿಯನ್ನು ನೀಡುವ ಕೆಲಸವನ್ನು ಮಾಡಬೇಕು. ಈ ಸಂದರ್ಭದಲ್ಲಿ ನೀವು ಯಾವುದೇ ತಪ್ಪು ಕೆಲಸಗಳನ್ನು ಮಾಡಬಾರದು ಇದರಿಂದ ಅವರು ಕೋಪಗೊಳ್ಳುವ ಸಾಧ್ಯತೆ ಇದೆ.
ಸಪ್ಟೆಂಬರ್ ತಿಂಗಳಿನಲ್ಲಿ ಪಿತೃವಿನ ಸದ್ಗತಿಗಾಗಿ ಪಿಂಡ ಪ್ರಧಾನದಂತಹ ಕಾರ್ಯವನ್ನು ಮಾಡಲಾಗುತ್ತದೆ. ಅನ್ನದ ಉಂಡೆಯನ್ನು ಮಾಡಿ ಅದರ ಮೇಲೆ ಎಳ್ಳು, ಬಾರ್ಲಿಯನ್ನಿರಿಸಿ ಬಾಳೆಯ ಎಲೆಯ ಮೇಲೆ ಈ ಉಂಡೆಯನ್ನು ಇರಿಸಿ ಅವರಿಗೆ ಅರ್ಪಿಸಲಾಗುತ್ತದೆ. ಮೃತರಾದ ಹಿರಿಯರು ಭೋಝವನ್ನು ಮಾಡಲಾರರು. ಆದ್ದರಿಂದ ಈ ಮೂಲಕ ಅವರ ಕುಟುಂಬಸ್ಥರು ಅವರಿಗೆ ಆಹಾರದ ವ್ಯವಸ್ಥೆಯನ್ನು ಮಾಡಬೇಕು. ಇನ್ನು ಕೆಲವರು ಅವರಿಗೆ ಇಷ್ಟವಾದ ಭಕ್ಷ್ಯಗಳನ್ನು ಮಾಡಿ ಅವರಿಗೆ ತೃಪ್ತಿಯುಂಟಾಗುವ ಕಾರ್ಯವನ್ನು ಮಾಡುತ್ತಾರೆ.

ಅದಾಗ್ಯೂ ಪಿತೃ ಕಾರ್ಯಗಳನ್ನು ಮಾಡುವಾಗ ನೀವು ಯಾವುದೇ ರೀತಿಯ ತಪ್ಪುಗಳನ್ನು ಮಾಡಬಾರದು. ಹಿರಿಯರು ಕೋಪಕ್ಕೆ ತುತ್ತಾಗುವ ಯಾವುದೇ ಕೆಲಸಗಳನ್ನು ನೀವು ಮಾಡಬಾರದು. ಈ ರೀತಿ ದೋಷಗಳು ಕಾಣಿಸಿಕೊಂಡಾಗ ಮನೆಯಲ್ಲಿರುವ ಮಕ್ಕಳು ಬೇರೆ ಬೇರೆ ಅರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಬಡತನ ಕಾಡಬಹುದು.

ಹಾವುಗಳನ್ನು ಕೊಲ್ಲುವುದು
ಹಾವುಗಳು ಕಾಲುಗಳನ್ನು ಹೊಂದಿಲ್ಲ ಮತ್ತು ಅವುಗಳು ತೆವಳುತ್ತವೆ. ಅವುಗಳನ್ನು ಕೊಲ್ಲುವುದು ಮಹಾಪಾಪವಾಗಿದೆ. ವಿಷ್ಣುವಿಗೆ ಆಪ್ತರಾಗಿರುವವರು ಎಂದು ಪರಿಗಣಿಸಲಾಗಿದೆ. ಅವುಗಳನ್ನು ಕೊಲ್ಲುವುದು ತಪ್ಪಾಗಿದೆ ಮತ್ತು ಇದು ಪಿತೃ ದೋಷಕ್ಕೆ ಕಾರಣವಾಗುತ್ತದೆ. ಕಾಳಸರ್ಪ ದೋಷ ಉಂಟಾಗುತ್ತದೆ.

ಗೋಹತ್ಯೆ
ದನಗಳನ್ನು ಕೊಲ್ಲುವುದು ಕೂಡ ಹಿಂದೂ ಧರ್ಮದಲ್ಲಿ ಅತಿ ದೊಡ್ಡ ತಪ್ಪಾಗಿದೆ. ಎಲ್ಲಾ ಹಿಂದೂ ದೇವತೆಗಳು ಹಸುವಿನ ದೇಹದಲ್ಲಿ ಇವೆ ಎಂದು ನಂಬಲಾಗಿದೆ. ಗೋವಿಗೆ ಹಿಂದೂಗಳು ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಹಸುವನ್ನು ಸಾಯಿಸುವುದರಿಂದ ಕುಟುಂಬದಲ್ಲಿ ಪಿತೃ ದೋಷ ಉಂಟಾಗುತ್ತದೆ. ಕೇವಲ ಕೊಲ್ಲುವುದು ಮಾತ್ರವಲ್ಲ ದನವನ್ನು ಹೊಡೆಯುವುದೂ ಕೂಡ ದೋಷವಾಗಿದೆ.

ಕುಲ ದೇವರಿಗೆ ಅಗೌರವ
ಪ್ರತಿಯೊಂದು ಕಲ್ಲಿನಲ್ಲೂ ದೇವರಿದ್ದಾರೆ ಎಂಬುದಾಗಿ ಹೇಳಲಾಗುತ್ತದೆ. ಅಂತೆಯೇ ದೇವರಿಗೆ ಪ್ರತಿನಿತ್ಯ ಪೂಜೆಯನ್ನು ಅರ್ಪಿಸಬೇಕಾಗುತ್ತದೆ. ಕುಲ ದೇವತೆಗೆ ಪೂಜೆಯನ್ನು ಸಲ್ಲಿಸದೇ ಇರುವುದು ಅವರಿಗೆ ಅಗೌರವ ತೋರಿದಂತೆ. ಇದರಿಂದ ಪಿತೃಗಳು ಅಸಾಮಧಾನಗೊಳ್ಳುತ್ತಾರೆ ಮತ್ತು ಪಿತೃ ದೋಷಕ್ಕೆ ಕಾರಣವಾಗುತ್ತದೆ.

ಶ್ರಾದ್ಧವನ್ನು ಮಾಡದೇ ಇರುವುದು
ಶ್ರಾದ್ಧವನ್ನು ಮಾಡುವುದು ಕಡ್ಡಾಯವಾಗಿದ್ದು ಇದು ಮೃತರಾದ ವ್ಯಕ್ತಿಗೆ ನಾವು ತೋರುವ ಗೌರವವಾಗಿದೆ. ಇದನ್ನು ಮಾಡದೇ ಇದ್ದಲ್ಲಿ ಪಿತೃ ದೋಷ ಉಂಟಾಗುತ್ತದೆ. ಶ್ರಾದ್ಧವನ್ನು ಮಾಡದೇ ಇದ್ದಲ್ಲಿ ಪಿತೃಗಳಿಗೆ ಮೋಕ್ಷ ದೊರೆಯುವುದಿಲ್ಲ ಎಂದು ಹೇಳಲಾಗುತ್ತದೆ. ಆದ್ದರಿಂದ ಪಿತೃ ಪಕ್ಷದ ಸಂದರ್ಭದಲ್ಲಿ ಮೃತ ವ್ಯಕ್ತಿಗಳಿಗೆ ಶ್ರಾದ್ಧವನ್ನು ಮಾಡಬೇಕು.

ಆಲದ ಮರವನ್ನು ಕಡಿಯುವುದು
ಆಲದ ಮರವನ್ನು ಪವಿತ್ರವಾದುದು ಎಂದು ಪರಿಗಣಿಸಲಾಗಿದೆ. ಇದನ್ನು ದೇವರುಗಳಂತೆಯೇ ಪೂಜಿಸಲಾಗುತ್ತದೆ ಮತ್ತು ದಿನವೂ ಈ ಮರಕ್ಕೆ ಪೂಜೆಯನ್ನು ಮಾಡಿ ಅರ್ಪಣೆಗಳನ್ನು ನೀಡಲಾಗುತ್ತದೆ. ಹೂವುಗಳಿರುವ ಮರವನ್ನು ಕಡಿಯುವುದು ದೋಷವಾಗಿದೆ.

ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸುವುದು
ಪವಿತ್ರ ಸ್ಥಳದಲ್ಲಿ ಅನುಪಯುಕ್ತ ವಸ್ತುಗಳನ್ನು ಎಸೆಯುವುದು, ಕೊಳೆ ಬಟ್ಟೆ ಒಗೆಯುವುದು ಅಥವಾ ಇದರ ಬಳಿ ಇನ್ನಿತರ ಕೆಟ್ಟ ಕೆಲಸಗಳನ್ನು ಮಾಡುವುದರಿಂದ ದೋಷ ಉಂಟಾಗುತ್ತದೆ. ಪಿತೃಗಳು ಇದರಿಂದ ಕೋಪಗೊಳ್ಳುತ್ತಾರೆ.

ಇನ್ನೊಬ್ಬರ ಹೆಂಡತಿಯನ್ನು ಮೋಸಗೊಳಿಸುವುದು
ಇನ್ನೊಬ್ಬರ ಪತ್ನಿಯನ್ನು ಮೋಸಗೊಳಿಸುವುದು ಅತ್ಯಂತ ದೊಡ್ಡ ಪಾಪವಾಗಿದೆ. ತನ್ನ ಪತ್ನಿಯಲ್ಲದೆ ಇನ್ನೊಬ್ಬರೊಂದಿಗೆ ಅನೈತಿಕ ಸಂಬಂಧವನ್ನು ಇರಿಸಿಕೊಳ್ಳುವುದು ಅತ್ಯಂತ ದೊಡ್ಡ ಪಾಪವಾಗಿದೆ. ಇದರಿಂದ ಪಿತೃ ದೋಷ ಉಂಟಾಗುತ್ತದೆ. ಗರ್ಭಪಾತ ಮಾಡುವುದು ಮತ್ತು ಮುಗ್ಧರನ್ನು ಸಾಯಿಸುವುದು ಕೂಡ ಪಾಪವಾಗಿದೆ. ಪುರ್ಣಿಮೆ, ಅಮವಾಸ್ಯೆಯಂದು ದೈಹಿಕ ಕಾಮನೆಗಳನ್ನು ತೀರಿಸಿಕೊಳ್ಳುವುದು ಕೂಡ ಪಾಪವಾಗಿದೆ.

ಪಿತೃ ಪಕ್ಷದಲ್ಲಿ ತಿಥಿಯನ್ನು ಮಾಡುವುದರ ಅರ್ಥ
ಶ್ರಾದ್ಧ ಅಥವಾ ಪಿತೃ ಪಕ್ಷದಲ್ಲಿ ತಿಥಿಯನ್ನು ಮಾಡುವುದು ನಮ್ಮ ಪೂರ್ವಿಕರಿಗೆ ಸಮಧಾನವನ್ನುಂಟು ಮಾಡುವ ಪ್ರಕ್ರಿಯೆಯಾಗಿದೆ. ಅವರು ಅತೃಪ್ತಿಯಿಂದ ಮರಣ ಹೊಂದಿದ್ದಲ್ಲಿ ಅವರ ಹೆಸರಿನಲ್ಲಿ ತಿಥಿಯನ್ನು ಮಾಡಿ ಇಷ್ಟದ ಖಾದ್ಯವನ್ನು ತಯಾರಿಸಿ ಅದನ್ನು ಬಾಳೆ ಎಲೆಯಲ್ಲಿಟ್ಟು ಕಾಗೆಗೆ ಉಣಬಡಿಸಲಾಗುತ್ತದೆ. ಕಾಗೆ ಬಂದು ಆಹಾರ ತಿಂದಲ್ಲಿ ಅವರಿಗೆ ನಾವು ಮಾಡಿರುವುದು ತೃಪ್ತಿಯಾಗಿದೆ ಎಂದಾಗಿದೆ. ಈ ಸಂದರ್ಭದಲ್ಲಿ ಪೂಜೆಯನ್ನು ಮಾಡಿ ಅವರ ಆತ್ಮಕ್ಕೆ ಶಾಂತಿಯನ್ನು ನೀಡುವ ಕಾರ್ಯವನ್ನು ಮಾಡಲಾಗುತ್ತದೆ. ಹಿಂದೂಗಳು ಪಿತೃ ಪಕ್ಷದಂದು ತಿಥಿ ಮಾಡುವುದು ಸರ್ವೇ ಸಾಮಾನ್ಯವಾಗಿದ್ದು ಮನೆಯಲ್ಲಿ ಇಲ್ಲವೇ ಕೆಲವೊಂದು ಧಾರ್ಮಿಕ ಸ್ಥಾನಗಳಲ್ಲಿ ಇದನ್ನು ನೆರವೇರಿಸಲಾಗುತ್ತದೆ.



Click it and Unblock the Notifications