Latest Updates
-
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ! -
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ -
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ
ಅಚ್ಚರಿಯ ಕೂಪಕ್ಕೆ ತಳ್ಳುವ ಸಾಯಿ ಬಾಬಾರವರ ಪವಾಡಗಳು
ಶಿರ್ಡಿಯ ಸಾಯಿಬಾಬಾರನ್ನು ಆರಾಧಿಸುವವರ ಸಂಖ್ಯೆ ಇಡಿಯ ಭಾರತದಲ್ಲಿ ಬಹಳಷ್ಟಿದೆ. ಇವರ ಭಕ್ತರು ವಿವಿಧ ಧರ್ಮಗಳಿಗೆ ಸೇರಿದವರಾಗಿದ್ದು ದೇವರ ಸಮಾನರಾಗಿ ಕಾಣುತ್ತಾರೆ. ಸಾಯಿಬಾಬಾರವರು ಏಕದೇವನನ್ನು ಪ್ರತಿಪಾದಿಸುವ ಸಂತರಾಗಿದ್ದು ಇವರ ಪ್ರವಚನಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಅಂಶಗಳು ಬೆರೆತಿವೆ. ಇದೇ ಕಾರಣಕ್ಕೆ ಸಾಯಿಬಾಬಾರು ಮುಸ್ಲಿಂ ಹಾಗೂ ಹಿಂದೂ ಧರ್ಮೀಯರಲ್ಲಿ ಸಮಾನರಾಗಿ ಜನಪ್ರಿಯರಾಗಿದ್ದಾರೆ. ಇವರು ಕೇವಲ ತಮ್ಮ ಪ್ರವಚನಗಳಿಂದ ಮಾತ್ರವಲ್ಲ, ಪವಾಡಗಳಿಂದಲೂ ಜನಪ್ರಿಯತೆ ಪಡೆದಿದ್ದಾರೆ.
ಶಿರ್ಡಿ ಸಾಯಿ ಬಾಬಾರ ಕುರಿತು ಹಲವಾರು ಕಥೆಗಳು ಪ್ರಚಲಿತದಲ್ಲಿವೆ. ಇವರ ಪವಾಡಗಳಲ್ಲಿ ಪ್ರಮುಖವಾದವು ಎಂದರೆ ಗಾಳಿಯಲ್ಲಿ ತೇಲುವುದು, ಎದುರಿನವರ ಮನವನ್ನು ಓದುವುದು, ಭೂತೋಚ್ಛಾಟನೆ, ನೀರಿನಿಂದ ದೀಪವನ್ನು ಬೆಳಗಿಸುವುದು, ರಾಮ, ಕೃಷ್ಣ ಅಥವಾ ವಿಠೋಬನ ರೂಪದಲ್ಲಿ ತನ್ನ ಭಕ್ತರಿಗೆ ದರ್ಶನ ನೀಡುವುದು ಇತ್ಯಾದಿಗಳು ಪ್ರಮುಖವಾಗಿದೆ. ಈ ಪವಾಡಗಳು ಸಂಭವಿಸಿದ ಬಗ್ಗೆ ತಲೆತಲಾಂತರದಿಂದ ಹೇಳಿಬಂದ ವಿಷಯಗಳೇ ಹೆಚ್ಚಾಗಿದ್ದರೂ ಸಾಯಿಬಾಬಾರ ಭಕ್ತರಿಗೆ ಮಾತ್ರ ಇವು ಒಂದು ಶಕ್ತಿಯಾಗಿವೆ. ಬನ್ನಿ ಸಾಯಿಬಾಬಾರವರು ನಡೆಸಿದ ಪವಾಡಗಳಲ್ಲಿ ಪ್ರಮುಖವಾದವುಗಳನ್ನು ನೋಡೋಣ....

ನೀರಿನಿಂದ ದೀಪ ಬೆಳಗಿಸುವುದು
ಸಂತರೆಂದು ಗುರುತಿಸಲ್ಪಡುವ ಮುನ್ನ ಸಾಯಿ ಬಾಬಾರಿಗೆ ಜನರ ಮನಃಸ್ಥಿತಿಯನ್ನು ಅರಿಯಲು ಬಹಳ ಕಷ್ಟಪಡಬೇಕಾಗಿ ಬಂದಿತ್ತು. ಇದಕ್ಕೊಂದು ಉದಾಹರಣೆ ಎಂದರೆ ನೀರಿನಿಂದ ದೀಪ ಬೆಳಗಿಸುವ ಪವಾಡ. ಅಂದು ಫಕೀರ (ಧರ್ಮ ಪ್ರಚಾರಕ) ರಾಗಿದ್ದ ಸಾಯಿಬಾಬಾರಿಗೆ ಮಸೀದಿಯಲ್ಲಿ ಹಚ್ಚುವ ದೀಪಕ್ಕೆ ಎಣ್ಣೆ ಕೊಳ್ಳಲು ಹಣವಿಲ್ಲದೇ ಇದ್ದ ಕಾರಣ ವರ್ತಕರಿಂದ ಎಣ್ಣೆಯನ್ನು ದಾನ ಪಡೆದುಕೊಳ್ಳಬೇಕಾಗಿ ಬರುತ್ತಿತ್ತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನೀರಿನಿಂದ ದೀಪ ಬೆಳಗಿಸುವುದು
ಆದರೆ ಪ್ರತಿಬಾರಿ ಎಣ್ಣೆಯನ್ನು ದಾನ ನೀಡಿ ಬೇಸರಿಸಿದ ವರ್ತಕರು ಒಂದು ದಿನ ತಮ್ಮಲ್ಲಿ ಎಣ್ಣೆ ಇಲ್ಲ ಎಂದು ಸುಳ್ಳೇ ಹೇಳಿದರು. ಇವರ ಮಾತಿಗೆ ಯಾವುದೇ ಎದುರುತ್ತರ ನೀಡದ ಸಾಯಿಬಾಬಾ ದೀಪಗಳನ್ನು ನೀರಿನಿಂದ ತುಂಬಿಸಿ ಬೆಳಗಿಸಿದರು. ಈ ದೀಪಗಳು ಸೂರ್ಯಾಸ್ತದ ಸಮಯದಿಂದ ಮಧ್ಯರಾತ್ರಿಯವರೆಗೆ ಎಣ್ಣೆ ಉರಿದಂತೆಯೇ ಉರಿದವು.

ಬೆಳೆಗೆ ಹತ್ತುವ ಬೆಂಕಿಯ ಮುನ್ಸೂಚನೆ
ಒಮ್ಮೆ ಶಿರ್ಡಿಯಲ್ಲಿ ಬೆಳೆಯ ಕಟಾವು ಮುಗಿದ ಬಳಿಕ ಒಂದು ಮೈದಾನದಲ್ಲಿ ಇಡಿಯ ಗ್ರಾಮದವರ ಬೆಳೆಯನ್ನು ಒಂದೆಡೆ ಸಂಗ್ರಹಿಸಲಾಗಿತ್ತು. ಅದು ಬೇಸಿಗೆಯ ದಿನವಾಗಿದ್ದು ಬಿಸಿಲು ಪ್ರಖರವಾಗಿತ್ತು. ಎಲ್ಲರ ಮೈಯಿಂದ ಬೆವರು ಸುರಿಯುತ್ತಿತ್ತು. ಒಂದು ದಿನ ನಡುಮಧ್ಯಾಹ್ನ ಎಲ್ಲರೂ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಮನೆಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಮಯದಲ್ಲಿ ಗ್ರಾಮಸ್ಥರೊಬ್ಬರಿಗೆ ಬೆಳೆಗೆ ಬೆಂಕಿ ಹತ್ತಿದೆ ಎಂದು ತಿಳಿಸಿದರು.

ಬೆಳೆಗೆ ಹತ್ತುವ ಬೆಂಕಿಯ ಮುನ್ಸೂಚನೆ
ಕೂಡಲೇ ಬೆಳೆ ಇದ್ದ ಕಡೆ ಓಡಿದ ಆ ಗ್ರಾಮಸ್ಥ ದೂರದಿಂದ ಕಂಡಾಗ ಯಾವುದೇ ಬೆಂಕಿ ಕಾಣಿಸದ ಕಾರಣ ಹಿಂದಿರುಗಿ ಅಲ್ಲಿ ಯಾವುದೇ ಬೆಂಕಿ ಇಲ್ಲವೆಂದು ತಿಳಿಸಿದ. ಆದರೆ ತಮ್ಮ ಮಾತಿನಿಂದ ಹಿಂದೆ ಬರದ ಸಾಯಿಬಾಬಾ ಮತ್ತೊಮ್ಮೆ ಹೋಗಿ ನೋಡು, ಬೆಂಕಿ ಇದೆ, ಎಂದು ತಿಳಿಸಿದರು. ಯಾವುದಕ್ಕೂ ಹೋಗಿ ನೋಡೋಣ ಎಂದು ಪರಿಶೀಲಿಸಲು ಬಂದ ಗ್ರಾಮಸ್ಥರಿಗೆ ನಿಜವಾಗಿಯೂ ಬೆಳೆಯ ಗುಂಪಿನ ಹತ್ತಿರವೇ ಇದ್ದ ಹುಲ್ಲಿನ ಕಟ್ಟೊಂದಕ್ಕೆ ಬೆಂಕಿ ಹತ್ತಿದ್ದು ಇನ್ನು ಕೊಂಚ ಹೊತ್ತು ಕಳೆದಿದ್ದರೆ ಇಡಿಯ ಬವಣೆಗೆ ಬೆಂಕಿ ಹತ್ತುವ ಸಂಭವವಿತ್ತು. Image courtesy

ಮಹಿಳೆಯ ಅಂಧತ್ವ ನಿವಾರಿಸಿದ ಸಾಯಿ ಬಾಬಾ
ಸಾಯಿ ಬಾಬಾರ ಭಕ್ತೆಯೊಬ್ಬರು ಯಾವುದೋ ಕಾರಣದಿಂದ ತಮ್ಮ ದೃಷ್ಟಿಯನ್ನು ಕಳೆದುಕೊಂಡರು. ಹಲವು ನೇತ್ರವೈದ್ಯರಲ್ಲಿ ತೋರಿಸಿದ ಬಳಿಕವೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅಷ್ಟೇ ಅಲ್ಲ, ವಿದೇಶಕ್ಕೂ ಕರೆದುಕೊಂಡು ಹೋಗಿ ತಜ್ಞರಿಗೆ ತೋರಿಸಲಾಯಿತು. ಎಲ್ಲೂ ಇವರ ಅಂಧತ್ವಕ್ಕೆ ಪರಿಹಾರವೇ ಇರಲಿಲ್ಲ. ಇವರ ದುಃಖವನ್ನು ನೋಡಲಾರದೇ ಆಕೆಯ ಪತಿ ಆಕೆ ಆರಾಧಿಸುತ್ತಿದ್ದ ಸಾಯಿಬಾಬಾರ ಸಮಾಧಿಯನ್ನು ಸಂದರ್ಶಿಸುವ ಮೂಲಕ ಕೊಂಚ ಮನಸ್ಸಿಗೆ ಶಾಂತಿ ಸಿಗಬಹುದು ಎಂದು ಶಿರ್ಡಿಗೆ ಕರೆದುಕೊಂಡು ಬಂದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಹಿಳೆಯ ಅಂಧತ್ವ ನಿವಾರಿಸಿದ ಸಾಯಿ ಬಾಬಾ
ಸಾಯಿಬಾಬಾರ ಸಮಾಧಿಯ ಬಳಿ ಆಕೆ ತನಗೆ ದೃಷ್ಟಿ ಬಂದರೆ ತಾವು ಬಾಬಾರಿಗೆ ಕಸೂತಿ ಇರುವ ಶಾಲ್ ಒಂದನ್ನು ದೇಣಿಗೆ ನೀಡುವುದಾಗಿ ಹರಕೆ ಹೊತ್ತರು. ಅಂದಿನಿಂದ ನಿಧಾನವಾಗಿ ಅವರ ದೃಷ್ಟಿ ಮರುಕಳಿಸತೊಡಗಿತು. ಒಂದೇ ವರ್ಷದಲ್ಲಿ ಅವರು ಪೂರ್ಣ ದೃಷ್ಟಿಯನ್ನು ಪಡೆದರು. ಬಳಿಕ ಅವರು ತಮ್ಮ ಮಾತಿನಂತೆ ದೇಣಿಗೆಯನ್ನು ಒಪ್ಪಿಸಿ ಹರಕೆಯನ್ನು ಪೂರೈಸಿದರು.

ಎಲ್ಲರನ್ನೂ ಪ್ರೀತಿಸುತ್ತಿದ್ದ ಬಾಬಾ
ಬಾಬಾರ ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಿದ್ದು ಅವರು ಯಾರನ್ನೂ ಜಾತಿ ಮತ ಆರ್ಥಿಕ ಸ್ಥಿತಿಗಳಿಗೆ ಅನುಗುಣವಾಗಿ ಪರಿಗಣಿಸುತ್ತಲೇ ಇರಲಿಲ್ಲ. ಬರೆಯ ಮನುಷ್ಯರು ಮಾತ್ರವಲ್ಲ, ಪ್ರಾಣಿಗಳನ್ನೂ ಅವರು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಎಷ್ಟೋ ಸಲ ತಮ್ಮ ಭಕ್ತರ ಮನೆಗಳಲ್ಲಿ ಅವರು ಪ್ರಾಣಿಗಳ ರೂಪದಲ್ಲಿ ಬಂದು ಅವರ ಮನೆಯ ಪ್ರಸಾದ ಸ್ವೀಕರಿಸುತ್ತಿದ್ದರು. ಒಮ್ಮೆ ಅವರ ಭಕ್ತರಾದ ದಾಮಿಯಾ ಎಂಬುವರು ಬಾಬಾರನ್ನು ತಮ್ಮ ವಠಾರಕ್ಕೆ ಊಟಕ್ಕೆ ಆಹ್ವಾನಿಸಿದರು. ಆದರೆ ಬಾಬಾ ತಮ್ಮ ಬದಲಿಗೆ ತಮ್ಮ ಇನ್ನೊಬ್ಬ ಭಕ್ತ ಬಾಲಾ ಪಟೇಲ್ ಎಂಬುವರು ಬರುತ್ತಾರೆ ಎಂದು ತಿಳಿಸಿದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಎಲ್ಲರನ್ನೂ ಪ್ರೀತಿಸುತ್ತಿದ್ದ ಬಾಬಾ
ಬಾಲಾ ಪಟೇಲ್ ದಲಿತರಾಗಿದ್ದ ಕಾರಣ ದಾಮಿಯಾ ಅಥವ ಅವರ ಪಂಗಡದ ಯಾರೂ ಬಾಲಾಪಟೇಲರನ್ನು ಅವಮಾನ ಮಾಡುವುದಾಗಲೀ ಮೂದಲಿಸುವುದಾಗಲೀ ಮಾಡಬಾರದು, ತಮ್ಮಿಂದ ದೂರವಾಗಿ ಕುಳ್ಳರಿಸಬಾರದು ಎಂದು ಸ್ಪಷ್ಟವಾಗಿ ತಿಳಿಸಿದರು. ಅಂತೆಯೇ ಬಾಬಾ ಹಾಗೂ ಉಳಿದವರಿಗಾಗಿ ಅನ್ನದ ತಟ್ಟೆಗಳನ್ನು ಸಿದ್ಧಪಡಿಸಿದ ದಾಮಿಯಾ "ಸಾಯಿ, ಬನ್ನಿ" ಎಂದು ಕರೆದ ತಕ್ಷಣ ಎಲ್ಲಿಂದಲೂ ಒಂದು ಕಪ್ಪು ನಾಯಿ ಓಡೋಡಿ ಬಂದು ಬಾಬಾರಿಗಾಗಿ ಇಟ್ಟಿದ ತಟ್ಟೆಯಿಂದ ತಿಂದು ಬಂದಷ್ಟೇ ವೇಗವಾಗಿ ಹಿಂದಿರುಗಿತು. ಬಳಿಕ ದಾಮಿಯಾ ಹಾಗೂ ಬಾಲಾ ಪಟೇಲ್ ಜೊತೆಯಾಗಿ ಕುಳಿತು ಊಟ ಮಾಡಿದರು.

ಎಲ್ಲರನ್ನೂ ಪ್ರೀತಿಸುತ್ತಿದ್ದ ಬಾಬಾ
ಬಾಬಾರಿಗೆ ಕಟ್ಟಾಚಾರ ಮತ್ತು ಧರ್ಮದ ಅಂಧಾನುಕರಣೆ ಬೇಕಿರಲಿಲ್ಲ. ಅವರ ಅನುಗ್ರಹ ಪಡೆಯಲು ಭಕ್ತಿ ಮತ್ತು ನಂಬಿಕೆಯೇ ಸಾಕು ಎಂದು ಅವರ ಭಕ್ತರು ಇಂದಿಗೂ ನಂಬುತ್ತಾರೆ. ಸಾಯಿಬಾಬಾರ ಕುರಿತಾದ ಇನ್ನಾವುದೇ ಪವಾಡಗಳ ಬಗ್ಗೆ ತಮಗೆ ತಿಳಿದಿದ್ದಲ್ಲಿ ಅಥವಾ ತಮ್ಮ ಅನುಭವಕ್ಕೆ ಬಂದಿದ್ದರೆ ನಮಗೆ ಖಂಡಿತಾ ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿಕೊಳ್ಳಿ.



Click it and Unblock the Notifications











