Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆರೋಗ್ಯ, ಐಶ್ವರ್ಯಕ್ಕಾಗಿ ದೀಪಾವಳಿಯಂದು ಪಠಿಸಬೇಕಾದ ಮಂತ್ರಗಳು
ನಮ್ಮ ಕಷ್ಟಗಳೆಲ್ಲಾ ದೂರವಾಗಿ ಬದುಕಿನಲ್ಲಿ ಒಳಿತಾಗಲಿ, ಜೀವನದಲ್ಲಿ ಖುಷಿ ನೆಲೆಸುವಂತಾಗಲಿ, ಅದೃಷ್ಟ ಲಕ್ಷ್ಮಿ ಮನೆ ತುಂಬಿಕೊಳ್ಳಲಿ ಎಂಬ ಆಶಯದೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸುತ್ತೇವೆ.
ದೀಪಾವಳಿಗೆ ಮನೆಯನ್ನೆಲ್ಲಾ ಒರೆಸಿ ಸ್ವಚ್ಛ ಮಾಡಿ, ಲಕ್ಷ್ಮಿಯನ್ನು ಪೂಜಿಸುತ್ತೇವೆ, ದೇವರಿಗೆ ದೀಪಗಳನ್ನು ಬೆಳಗೆ ಪೂಜಿಸುವುದರಿಂದ ಮನೆಗೆ ಒಳಿತಾಗುತ್ತದೆ ಎಂಬುವುದು ನಮ್ಮೆಲ್ಲರ ನಂಬಿಕೆ. ಈ ಶುಭ ದಿನದಂದು ಪೂಜೆಯ ವೇಳೆ ಕೆಲವೊಂದು ಮಂತ್ರಗಳನ್ನು ಹೇಳುವುದು ಒಳ್ಳೆಯದು.

ಮಂತ್ರವನ್ನು ಪಠಿಸುವುದರಿಂದ ಧನಾತ್ಮಕ ಶಕ್ತಿ ನಮ್ಮನ್ನು, ನಮ್ಮ ಮನೆಯನ್ನು ಆವರಿಸುತ್ತದೆ, ಮಂತ್ರದಿಂದ ನಮ್ಮ ಕಷ್ಟಗಳೆಲ್ಲಾ ದೂರವಾಗುವುದು. ಅದರಲ್ಲೂ ಈ ಮಂತ್ರಗಳನ್ನು ಹೇಳುವುದರಿಂದ ಅದೃಷ್ಟ ಲಕ್ಷ್ಮಿ ಒಲಿಯುತ್ತಾಳೆ ಎಂಬುವುದು ಅವಳ ಭಕ್ತರ ಅಚಲ ನಂಬಿಕೆಯಾಗಿದೆ.
ದೀಪಾವಳಿಗೆ ಆರೋಗ್ಯ, ಐಶ್ವರ್ಯಕ್ಕಾಗಿ ಯಾವ ಮಂತ್ರ ಪಠಿಸಬೇಕೆಂದು ನೋಡೋಣ:

ಸಾಧನಾ ಮಂತ್ರ
ಓಂ ಹಾಂ ಹ್ರೀಂ ಧನ್ ಕುರು ಕುರು ಸ್ವಾಹಃ
ದೀಪಾವಳಿ ರಾತ್ರಿಯಂದು ಈ ಮಂತ್ರವನ್ನು 1000 ಬಾರಿ ಪಠಿಸಬೇಕು, ಹೀಗೆ ಪಠಿಸುವಾಗ ಯಾವುದೇ ವಿರಾಮ ತೆಗೆದುಕೊಳ್ಳದೇ ಪಠಿಸಬೇಕು, ಯಾರು ಇದನ್ನು ಯಶಸ್ವಿಯಾಗಿ ಪೂರೈಸುತ್ತಾರೋ ಲಕ್ಷ್ಮಿಯೂ ಅನಗ್ರಹಿಸುತ್ತಾಳೆ.

ಲಕ್ಷ್ಮಿ ಮಂತ್ರ
ಓಂ ಗಂ ಶ್ರೀಂ ಸರ್ವ ಸಿದ್ಧಿ ಲಕ್ಷ್ಮಿಯೇ ನಮಃ
ಇದು ಅದೃಷ್ಟ ಲಕ್ಷ್ಮಿಯನ್ನು ಒಲಿಸಿಕೊಳ್ಳುವ ಮಂತ್ರ ಆಗಿದೆ. ಈ ಮಂತ್ರ ಪಠಣೆ ಮಾಡುವುದರಿಂದ ಬದುಕಿನಲ್ಲಿರುವ ಅಡತಡೆಗಳು ನೀಗಿ ಐಶ್ವರ್ಯವಂತರಾಗುವಿರಿ.

ಮಹಾ ಲಕ್ಷ್ಮಿ ಮಂತ್ರ
ಓಂ ಶ್ರಿಂಗ್ ಹ್ರಿಂಗ್ ಕ್ಲಿಂಗ್ ಏಂಗ್ ಸಾಂಗ್ ಓಂ ಹ್ರಿಂಗ್ ಕಾ ಏ ಆ ಹ್ರಿಂಗ್ ಹಾ ಸಾ ಕಾ ಹಾ ಲಾ ಹ್ರಿಂಗ್ ಸಕಲ್ ಹ್ರಿಂಗ್ ಸಾಂಗ್ ಕ್ಲಿಂಗ್ ಹ್ರಿಂಗ್ ಶ್ರಿಂಗ್ ಓಂ
ಈ ಮಂತ್ರವನ್ನು 108 ಬಾರಿ ಪಠಿಸಬೇಕು.

ಸರಸ್ವತಿ ಮಂತ್ರ
ಓಂ ಈಮ್ ಸ್ವರಸ್ವತಿಯೇ ನಮಃ
ಸರಸ್ವತಿ ಜ್ಞಾನದ ದೇವತೆ. ಯಾರು ಜ್ಞಾನಾರ್ಜನೆ ಬಯಸುತ್ತಾರೋ ಅವರು ಈ ಮಂತ್ರವನ್ನು ಪಠಿಸುವುದರಿಂದ ಬುದ್ಧಿಶಕ್ತಿ ಹೆಚ್ಚುವುದು. ತುಪ್ಪದ ದೀಪ ಹಚ್ಚಿ ಈ ಮಂತ್ರವನ್ನು 108 ಬಾರಿ ಪಠಿಸಬೇಕು. ವಿದ್ಯಾರ್ಥಿಗಳು ಈ ಮಂತ್ರ ಪಠಿಸಿದರೆ ತುಂಬಾ ಒಳ್ಳೆಯದು.

ಸಂತೋಷದ ಮಂತ್ರ
ಓಂ ಶ್ರೀಂ ಶ್ರೀ ಯೇ ನಮಃ
ಲಕ್ಷ್ಮಿ ಮಂತ್ರವನ್ನು ಜೀವನದಲ್ಲಿ ಖುಷಿ, ನೆಮ್ಮದಿ ನೀಡು ಎಂದು ಬೇಡಿ ಪಠಿಸಲಾಗುವುದು. ಈ ಮಂತ್ರವನ್ನು ಪಠಿಸುವುದರಿಂದ ಕುಟುಂಬದಲ್ಲಿರುವ ತೊಂದರೆಗಳು ನೀಗಿ ಖುಷಿಯಾಗಿ ಖುಷಿಯಾಗಿ ಇರುವಿರಿ.

ಇಚ್ಛಾ ಶಕ್ತಿ ನೆರವೇರಲು ಮಂತ್ರ
ಓಂ ಹೀಂ ಹ್ರೀಂ ಕ್ಲೀಂ ಚಾಮುಂಡಿಯೇ ವಿಚ್ಚಿ ನಮಃ
ಇಚ್ಚಾ ಶಕ್ತಿ ನೆರವೇರಲು ಈ ಮಂತ್ರ ಪಠಣೆ ಮಾಡುವುದು ಒಳ್ಳೆಯದು. ಈ ಮಂತ್ರವನ್ನು ದೀಪಾವಳಿ ರಾತ್ರಿಯಂದು ಪ್ರಾರಂಭಿಸಿ 40 ದಿನದವರೆಗೆ ಪ್ರತಿದಿನ 108 ಪಠಿಸಬೇಕು.

ಕುಬೇರ ಮಂತ್ರ
"ಓಂ ಹ್ರೀಂ ಶ್ರೀಂ ಕ್ರೀಂ ಶ್ರೀಂ ಕುಬೇರಾಯ, ಅಷ್ಟ ಲಕ್ಷ್ಮಿ ಮಮ ಗೃಹೆ ಧನಂ ಪುರಾಯ ಪುರಾಯ ನಮಃ"
ಐಶ್ವರ್ಯದ ದೇವ ಕುಬೇರ. ಈ ಕುಬೇರನ ಮಂತ್ರ ಪಠಿಸುವುದರಿಂದ ಐಶ್ವರ್ಯ ಹೆಚ್ಚಾಗುವುದು.
ದೀಪಾವಳಿಯ ದಿನ ಬೆಳಗ್ಗೆ ಕುಬೇರನ ವಿಗ್ರಹ ಅಥವಾ ಫೋಟೋ ಮುಂದೆ ನಿಂತು ಈ ಮಂತ್ರ ಪಠಿಸಬೇಕು.

ಗಣೇಶ ಮಂತ್ರ
ಓಂ ಗಂ ಗಣಪತಿಯೇ ನಮಃ
ವಿಘ್ನ ನಿವಾರಕ ಗಣೇಶನ ಮಂತ್ರವನ್ನು 10,000 ಸಾವಿರ ಬಾರಿ ಪಠಿಸುವುದರಿಂದ ಬದುಕಿನಲ್ಲಿರುವ ಎಲ್ಲಾ ವಿಘ್ನಗಳು ನಿವಾರಣೆಯಾಗುವುದು.

ರಾಮ ಮಂತ್ರ
" ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ,
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ."
ಇದು ಕೂಡ ತುಂಬಾ ಶಕ್ತಿಶಾಲಿಯಾದ ಮಂತ್ರವಾಗಿದೆ. ಈ ಮಂತ್ರವನ್ನು ಪಠಿಸುವುದರಿಂದ ಎಲ್ಲಾ ಮಾನಸಿಕ ಸಂಘರ್ಷ ದೂರವಾಗುವುದು.

ಶಾಂತಿ ಮಂತ್ರ
ಓಂ ಶಾಂತಿ ಓಂ
ಈ ಮಂತ್ರವನ್ನು ಹೆಚ್ಚಾಗಿ ಬಳಸಲಾಗುವುದು. ಈ ಮಂತ್ರವನ್ನು ಬಳಸುವುದರಿಂದ ಶಾಂತಿ ನೆಲೆಸುವುದು.



Click it and Unblock the Notifications
