Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
ಡಿ. 27ಕ್ಕೆ ಮಂಡಲ ಪೂಜೆ ಮುಕ್ತಾಯ: ಅಯ್ಯಪ್ಪ ಭಕ್ತರಿಗೆ ಮಂಡಲ ಪೂಜೆ ವ್ರತ ತುಂಬಾ ಮಹತ್ವವಾದದ್ದು, ಏಕೆ?
ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಲ್ಲಿ ಆಚರಿಸುವ ಪ್ರಮುಖ ಆಚಣೆಗಳಲ್ಲೊಂದು ಮಂಡಲ ಪೂಜೆ. ಮಂಡಲ ಪೂಜೆಗೆ ಅಯ್ಯಪ್ಪ ಭಕ್ತರ 41 ದಿನಗಳ ಉಪವಾಸ ವ್ರತ ಮುಕ್ತಾಯವಾಗುವುದು.
ಈ ಉಪವಾಸ ವ್ರತ ವೃಶ್ಚಿಕ ಮಾಸದ ಮೊದಲ ದಿನದಿಂದ ಅಂದರೆ ನವೆಂಬರ್ 17, 2022ರಿಂದ ಪ್ರಾರಂಭವಾಗಿ ಡಿಸೆಂಬರ್ 27, 2022ಕ್ಕೆ ಮುಕ್ತಾಯವಾಗುವುದು.
ಮಂಡಲಕಾಲ ಪೂಜೆ 2022 ದಿನಾಂಕ ಮತ್ತು ಸಮಯ
ಮಂಡಲ ಪೂಜೆ ಪ್ರಾರಂಭವಾಗಿದ್ದು: ಗುರುವಾರ, ನವೆಂಬರ್ 17, 2022
ಮಂಡಲ ಪೂಜೆ ಮುಕ್ತಾಯ: ಮಂಗಳವಾರ, ಡಿಸೆಂಬರ್ 27, 2022

ಮಂಡಲ ಪೂಜೆಯ ಮಹತ್ವ
ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಮಂಡಲ ಪೂಜೆ ಹಾಗೂ ಮಕರ ಜ್ಯೋತಿ ಎರಡು ಪ್ರಮುಖವಾದ ಆಚರಣೆಗಳಾಗಿವೆ. ಈ ಸಮಯದಲ್ಲಿ ಲಕ್ಷಾಂತರ ಭಕ್ತರು ಅಯ್ಯಪ್ಪನ ಸನ್ನಿಧಿಗೆ ಭೇಟಿ ನೀಡಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುತ್ತಾರೆ.
ಮಂಡಲ ಪೂಜೆಯ ಮಹತ್ವದ ಬಗ್ಗೆ ಪುರಾಣದ ಕತೆಗಳಲ್ಲಿ ಹೇಳಲಾಗಿದೆ. ಯಾರು ಮಂಡಲ ಪೂಜೆ ಮಾಡುತ್ತಾರೋ ಅವರ ಜೀವನದಲ್ಲಿ ಹಲವಾರು ಧನಾತ್ಮಕ ಬದಲಾವಣೆಗಳಾಗುತ್ತವೆ ಎಂದು ಹೇಳಲಾಗುವುದು. ಮಂಡಲ ಪೂಜೆಯನ್ನು ಜಾತಿ, ಲಿಂಗ ಬೇಧವಿಲ್ಲದೆ ಯಾರು ಬೇಕಾದರೂ ಮಾಡಬಹುದು.
ಮಂಡಲ ಪೂಜೆಯನ್ನು ಯಾರು ಮಾಡುತ್ತಾರೋ ಅವರು ಬಯಸಿದ್ದೆಲ್ಲಾ ನೆರವೇರುವುದು ಎಂದು ಹೇಳಲಾಗುವುದು. ಈ ಅವಧಿಯಲ್ಲಿ ಭಕ್ತರು 41 ದಿನಗಳ ಕಟ್ಟುನಿಟ್ಟಿನ ಉಪವಾಸ ನಿಯಮಗಳನ್ನು ಅನುಸರಿಸಬೇಕು.
41 ದಿನಗಳ ವ್ರತವನ್ನು ಮಾಡಿ ಅಯ್ಯಪ್ಪಸ್ವಾಮಿಯ ಆಶೀರ್ವಾದ ಪಡೆಯುವುದು ಮಂಡಲ ಪೂಜೆಯ ಮಹತ್ವವಾಗಿದೆ. ಈ ಪೂಜೆಯಲ್ಲಿ 1-9 ವರ್ಷದ ಒಳಗಿನ ಹೆಣ್ಣು ಮಕ್ಕಳು ಹಾಗೂ 50 ವರ್ಷದ ನಂತರದ ಮಹಿಳೆಯರು ಅಯ್ಯಪ್ಪಸ್ವಾಮಿ ವ್ರತವನ್ನು ಪಾಲಿಸಬಹುದು.
ಮಂಡಲ ಪೂಜೆಯ ವ್ರತ ನಿಯಮಗಳು
* ಮಂಡಲ ಪೂಜೆಗೆ ಕಟ್ಟುನಿಟ್ಟಿನ ಉಪವಾಸ ನಿಯಮಗಳನ್ನು ಅನುಸರಿಸಬೇಕು. ದಕ್ಷಿಣ ಭಾರತದಲ್ಲಿ ಮಂಡಲ ಪೂಜೆಯನ್ನು ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುವುದು.
* ಮಂಡಲ ಪೂಜೆಯ ಸಮಯದಲ್ಲಿ ಭಕ್ತರು ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
* ಮಂಡಲ ಪೂಜೆಯ ಸಮಯದಲ್ಲಿ ಭಕ್ತಾದಿಗಳು ಸರಳ ಜೀವನ ನಡೆಸಬೇಕು.
* ಈ ಸಮಯದಲ್ಲಿ ಅಯ್ಯಪ್ಪಭಕ್ತರು ರುದ್ರಾಕ್ಷ ಮಾಲೆ ಧರಿಸಿ ಖಾಲಿ ಅಥವಾ ಕಪ್ಪು ಬಟ್ಟೆ ಧರಿಸಿ ತುಂಬಾ ಸರಳ ಜೀವನ ನಡೆಸುವುದರ ಮುಖಾಂತರ ಅಯ್ಯಪ್ಪಸ್ವಾಮಿಯ ಧ್ಯಾನದಲ್ಲಿಯೇ ಇರುತ್ತಾರೆ.
* ಈ ಸಮಯದಲ್ಲಿ ವ್ರತ ನಿಯಮ ಪಾಲಿಸುವವರು ದೇಹ ಹಾಗೂ ಮನಸ್ಸು ಶುದ್ಧವಾಗಿಟ್ಟುಕೊಳ್ಳಬೇಕು.
* ಈ ಸಮಯದಲ್ಲಿ ಸಾತ್ವಿಕ ಆಹಾರವನ್ನಷ್ಟೇ ಸೇವಿಸಬೇಕು
* ಮದ್ಯಪಾನ, ಧೂಮಪಾನ ಮಾಡಬಾರದು.
* ಬೆಳಗ್ಗೆ ಹಾಗೂ ಸಂಜೆ ಸ್ನಾನ ಮಾಡಿ ಅಯ್ಯಪ್ಪಸ್ವಾಮಿಯನ್ನು ಆರಾಧಿಸಬೇಕು.
* ಅಯ್ಯಪ್ಪ ಭಕ್ತರು ನೆಲದ ಮೇಲೆ ಮಲಗಿ ನಿದ್ರಿಸುತ್ತಾರೆ, ಹಾಸಿಗೆ, ಬೆಡ್ ಕೂಡ ಬಳಸುವುದಿಲ್ಲ.
ಆತ್ಮಶುದ್ಧಿ ಮಾಡಿಕೊಳ್ಳಬೇಕು
ಅಯ್ಯಪ್ಪವ್ರತ ಮಾಡುವವರು ದೇಹದ ಜೊತೆಗೆ ಮನಸ್ಸನ್ನು ಕೂಡ ಶುದ್ಧವಾಗಿಟ್ಟುಕೊಳ್ಳಬೇಕು. ಯಾವುದೇ ಕೆಟ್ಟ ಆಲೋಚನೆ ಮಾಡುವಂತಿಲ್ಲ, ಕೆಟ್ಟ ಪದಗಳನ್ನು ಬಳಸುವಂತಿಲ್ಲ. ಸದಾ ಅಯ್ಯಪ್ಪಸ್ವಾಮಿಯ ಧ್ಯಾನವನ್ನು ಮಾಡುತ್ತಾ ಪ್ರತಿಕ್ಷಣ ಜೀವಿಸುತ್ತಾರೆ. ಈ ವ್ರತ ಮಾಡುವುದರಿಂದ ನಮ್ಮ ಮನಸ್ಸನ್ನು ನಿಗ್ರಹಿಸುವ ಶಕ್ತಿ ಬರುತ್ತದೆ.
ಮಕರ ಸಂಕ್ರಾಂತಿಯ ಶುಭ ದಿನ
ಮಂಡಲ ಪೂಜೆಯ ನಂತರ ಮಕರ ಸಂಕ್ರಾಂತಿ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನಡೆಯುವ ಪ್ರಮುಖ ಆಚರಣೆಯಾಗಿದೆ. ಮಕರ ಸಂಕ್ರಾಂತಿಯು ಸಾಮಾನ್ಯವಾಗಿ ಪ್ರತಿ ವರ್ಷ ಜನವರಿ 14 ಅಥವಾ 15 ರಂದು ಬರುತ್ತದೆ. ಈ ದಿನ ಭಗವಂತನ ಆಭರಣಗಳನ್ನು ಶಬರಿ ಮಲೆಯಿಂದ ಮಂಡಲಂ ಅರಮನೆಗೆ ಕೊಂಡೊಯ್ಯುವ ಸಂಪ್ರದಾಯವಿದೆ. ಹೀಗೆ ದೇವರ ಆಭರಣ ಕೊಂಡೊಯ್ಯುವಾಗ ಹದ್ದುಗಳ ಆಭರಣ ಹೊತ್ತಿರುವ ಪೆಟ್ಟಿಗೆಗಳ ಮೇಲೆ ಹಾರಾಡುವುದು, ಬೆಟ್ಟದಲ್ಲಿ ಗೋಚರಿಸುವ ಜ್ಯೋತಿ ಭಕ್ತರಿಗೆ ದೈವಿಕ ಅನುಭವ ನೀಡುವುದು.
ಮಕರ ಜ್ಯೋತಿ
ಮಕರ ಸಂಕ್ರಾಂತಿಯಂದು ಪರಮಾತ್ಮನು ಜ್ಯೋತಿಯ ರೂಪದಲ್ಲಿ ಕಾಣಿಸುತ್ತಾನೆ ಎಂಬುವುದು ಅಯ್ಯಪ್ಪ ಭಕ್ತರ ಬಲವಾದ ನಂಬಿಕೆ. ಇದನ್ನು ಮಕರವಿಳಕ್ಕು ಎಂದು ಕರೆಯಲಾಗುವುದು.
ಅಯ್ಯಪ್ಪ ಮೂಲ ಮಂತ್ರ
ಓಂ ಶ್ರೀ ಹರಿಹರ ಪುತ್ರಾಯ
ಪುತ್ರ ಲಾಭಾಯ
ಚತ್ರು ನಾಶಯ
ಮದ-ಗಜ ವಾಹನಾಯ
ಓಂ ಶ್ರೀ ಮಹಾ ಶಾಸ್ತ್ರೀ ನಮಃ



Click it and Unblock the Notifications













